MOULYANKANA 2025-2026:1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ನಡೆಸುವ ಬಗ್ಗೆ ಆದೇಶ
MOULYANKANA 2025-2026: 2025-26ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ 1 ರಿಂದ 10ನೇ ತರಗತಿ ಶಾಲೆಗಳಿಗೆ 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕ್ರಿಯಾಯೋಜನೆ ಹಾಗೂ ಉಲ್ಲೇಖಗಳನ್ವಯ ಸದರಿ ಸುತ್ತೋಲೆಯನ್ನು ಹೊರಡಿಸಲಾಗಿದೆ. ಇದನ್ನು ಆಧರಿಸಿ ಶಾಲೆಗಳಲ್ಲಿ ಪಠ್ಯ ಬೋಧನ ಹಾಗೂ ಮೌಲ್ಯಾಂಕನ ಕುರಿತು ಈ ಕೆಳಕಂಡಂತೆ ಕ್ರಮವಹಿಸಲು ತಿಳಿಸಿದೆ.
1. ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದಿನಾಂಕ:29-05-2025 ರಿಂದ ಶೈಕ್ಷಣಿಕ ವರ್ಷವು ಪ್ರಾರಂಭವಾಗಿದೆ. ‘ಕಲಿಕಾ ಚೇತರಿಕೆ’ ಉಪಕ್ರಮ ಮತ್ತು ‘ಕಲಿಕಾ ಬಲವರ್ಧನೆ’ ಕಾರ್ಯಕ್ರಮದಡಿ ಕಲಿವಿನ ಫಲಾಧಾರಿತ ವಿದ್ಯಾರ್ಥಿಗಳ ಚಟುವಟಿಕೆ ಪುಸ್ತಕ ಹಾಗೂ ಶಿಕ್ಷಕರ ಚಟುವಟಿಕೆ ಕೋಶಗಳನ್ನು ಸಿದ್ಧಪಡಿಸಿ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಅಳವಡಿಸಿ ಕಲಿಕಾ ಅಂತರವನ್ನು ಬೆಸೆಯಲು ನಿರಂತರವಾಗಿ ಉಪಕ್ರಮಗಳನ್ನು ಅನುಷ್ಠಾನಿಸಲಾಗುತ್ತಿದೆ. ಅಲ್ಲದೇ ಮೌಲ್ಯಾಂಕನಕ್ಕೆ ಪೂರಕವಾಗಿ ಕಲಿಕಾ ಫಲ ಆಧಾರಿತ ಪ್ರಶ್ನೆಕೋಠಿಯನ್ನು ಸಿದ್ಧಪಡಿಸಿ ಅನುಷ್ಠಾನ ಸಂಬಂಧ ಮಾರ್ಗದರ್ಶನ ನೀಡಲಾಗಿದೆ.
2. ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಸಜ್ಜುಗೊಳಿಸಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ‘ಸೇತುಬಂಧ’ ಕಾರ್ಯಕ್ರಮವನ್ನು ಜೂನ್ ತಿಂಗಳಿನಲ್ಲಿ ನಡೆಸುವುದು. 1 ರಿಂದ 10ನೇ ತರಗತಿಗಳಿಗೆ ಸೇತುಬಂಧ ಸಾಹಿತ್ಯವನ್ನು ಸಿದ್ಧಪಡಿಸಿ DSERT website ನಲ್ಲಿ ಅಳವಡಿಸಲಾಗಿದೆ. ಕಾರ್ಯಕ್ರಮ ಅನುಷ್ಠಾನಿಸುವ ಕುರಿತು ಸೇತುಬಂಧ ಸುತ್ತೋಲೆಯ ಮೂಲಕ ಮಾರ್ಗದರ್ಶನ ನೀಡಲಾಗಿದೆ.
3. ಉಲ್ಲೇಖ 1 ಮತ್ತು 3 ರನ್ನು ಆಧರಿಸಿ, ವಾರ್ಷಿಕ ಪಾಠ ಹಂಚಿಕೆ ಮಾಡಿಕೊಂಡು, ಕಲಿಕೆಯನ್ನು ಅನುಕೂಲಿಸುವುದು.
4. 2025-26ನೇ ಸಾಲಿನಿಂದ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ತರಗತಿ ಪುಕ್ರಿಯೆಯಲ್ಲಿ ನಿರಂತರವಾಗಿ ಅಳವಡಿಸಲು ಅನುಕೂಲವಾಗುವಂತೆ ಹಾಗೂ ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿಯನ್ನು ಸಿದ್ಧಪಡಿಸಿ DSERT Website ನಲ್ಲಿ ಅಳವಡಿಸಿದೆ.
5. ಪಾಠ ಆಧಾರಿತ ಮೌಲ್ಯಾಂಕನಕ್ಕೆ (LBA) ಸಂಬಂಧಿಸಿದಂತೆ, ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಿಕೊಳ್ಳಲು ಪಾಠ ಆಧಾರಿತ ಮೌಲ್ಯಾಂಕನವನ್ನು (Unit Test) ಮಾಡುವುದು.
6. ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಪ್ರತಿ ಘಟಕದ ನಂತರ LBA ಪ್ರಶ್ನೆಕೋಠಿಯಿಂದ 20 ಅಂಕಗಳಿಗೆ ಹಾಗೂ ಮರುಸಿಂಚನದಿಂದ (6 ರಿಂದ 10ನೇ ತರಗತಿ) 05 ಅಂಕಗಳಿಗೆ ಪುಶ್ನೆಪತ್ರಿಕೆ ಸಿದ್ಧಪಡಿಸಿ ಒಟ್ಟು 25 ಅಂಕಗಳಿಗೆ ಮೌಲ್ಯಾಂಕನ ಮಾಡುವುದು.
7. ಉಳಿದ ತರಗತಿಗಳು ಮತ್ತು ಮಾಧ್ಯಮಗಳಿಗೆ 25 ಅಂಕಗಳಿಗೆ LBA ಪ್ರಶ್ನೆಕೋಠಿಯಲ್ಲಿರುವ ಪ್ರಶ್ನೆಗಳನ್ನಾಧರಿಸಿ ಪ್ರಶ್ನೆಪತ್ರಿಕೆ ಸಿದ್ದಪಡಿಸಿ ಮೌಲ್ಯಾಂಕನ ಮಾಡಲು ಕ್ರಮವಹಿಸುವುದು.
8. ಪಾಠ ಆಧಾರಿತ ಮೌಲ್ಯಾಂಕನ, ರೂಪಣಾತ್ಮಕ (FA) ಹಾಗೂ ಸಂಕಲನಾತ್ಮಕ (SA) ಮೌಲ್ಯಾಂಕನ ಕೈಗೊಂಡು, ಮಕ್ಕಳ ಕಲಿಕೆಯ ಪ್ರಗತಿಯನ್ನು SATS ನಲ್ಲಿ ಕಡ್ಡಾಯವಾಗಿ ದಾಖಲಿಸುವುದು
9. SATS ನ ಪ್ರತಿ ಮೌಲ್ಯಾಂಕನದ ವಿಶ್ಲೇಷಣಾ ವರದಿಯನ್ನು ಆಧರಿಸಿ ಮಗುವಿನ ಶೈಕ್ಷಣಿಕ ಅಭಿವೃದ್ಧಿಗೆ ಕ್ರಮವಹಿಸುವುದು.
10. 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸೇತುಬಂಧ ಕಾರ್ಯಕ್ರಮ, ಪಾಠ ಆಧಾರಿತ ಮೌಲ್ಯಾಂಕನ, ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಾಂಕನ ನಿರ್ವಹಿಸಲು ಅನುವಾಗುವಂತೆ ಸದರಿ ಸುತ್ತೋಲೆಯಲ್ಲಿ ಮಾಹಿತಿಯನ್ನು ನೀಡಲಾಗಿದೆ. ಅದರಂತೆ, ಮೇಲುಸ್ತುವಾರಿ ಅಧಿಕಾರಿಗಳು ಭೇಟಿ ಸಮಯದಲ್ಲಿ ನಿರಂತರವಾಗಿ ಶಾಲಾ ಹಂತದಲ್ಲಿ ಕ್ರಮವಹಿಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಂಡು ಅನುಪಾಲನೆ ಮಾಡುವುದು.
ಸೇತುಬಂಧ ಶಿಕ್ಷಣ:
▪️ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ವಿದ್ಯಾರ್ಥಿಗಳು ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ‘ಮಳೆಬಿಲ್ಲು’ ಸಾಹಿತ್ಯದಲ್ಲಿನ ಚಟುವಟಿಕೆಗಳನ್ನು ನಿರ್ವಹಿಸುವುದು. ಸದರಿ ಸಾಹಿತ್ಯವು DSERT website ನಲ್ಲಿ ಲಭ್ಯವಿದೆ.
▪️ಆಯಾ ತರಗತಿಯ ಕಲಿಕಾ ಫಲಗಳ ಸಾಧನೆಗೆ ವಿದ್ಯಾರ್ಥಿಗಳು ಸಾಧಿಸಿರಲೇಬೇಕಾದ ಹಿಂದಿನ ತರಗತಿಯ ಕಲಿಕಾ ಫಲಗಳನ್ನು ಆಧರಿಸಿ ಸೇತುಬಂಧ ಚಟುವಟಿಕೆಗಳನ್ನು ನಿರ್ವಹಿಸುವುದು.
▪️1ನೇ ತರಗತಿಗೆ 40 ದಿವಸಗಳ ವಿದ್ಯಾಪ್ರವೇಶ, 2 ರಿಂದ 10ನೇ ತರಗತಿಗಳಿಗೆ ಜೂನ್ ಮಾಹೆಯ ಪ್ರಾರಂಭದಲ್ಲಿ ಪೂರ್ವ / ನೈದಾನಿಕ ಪರೀಕ್ಷೆಯೊಂದಿಗೆ (Diagnostic Test) 15 ದಿವಸಗಳ ಸೇತುಬಂಧ ಕಾರ್ಯಕ್ರಮ ನಡೆಸಿ, ಸಾಫಲ್ಯ ಪರೀಕ್ಷೆಯ ಫಲಿತಗಳ ಆಧಾರದ ಮೇಲೆ ಶೈಕ್ಷಣಿಕ ಯೋಜನೆಯನ್ನು ರೂಪಿಸಿ (SAP), ಪ್ರತಿ ವಿದ್ಯಾರ್ಥಿಯ ವಿಷಯವಾರು ಕಲಿಕಾ ಫಲಗಳ ಹಾಗೂ FLN ಕಲಿಕಾ ಫಲಗಳ ಸಾಧನೆಗೆ ಕ್ರಮವಹಿಸುವುದು.
▪️ಸೇತುಬಂಧ ಕಾರ್ಯಕ್ರಮದ ಅನುಷ್ಠಾನ ಸಂಬಂಧ ಈ ಕಛೇರಿಯಿಂದ ಪ್ರತ್ಯೇಕ ಸುತ್ತೋಲೆಯನ್ನು ನೀಡಲಾಗಿದೆ.
ಸೂಚನೆಗಳು:
1. DSERT website ನಲ್ಲಿ https://dsert.karnataka.gov.in ನಲ್ಲಿ ಅಳವಡಿಸಲಾಗಿರುವ ತರಗತಿವಾರು/ವಿಷಯವಾರು ಸೇತುಬಂಧ ಸಾಹಿತ್ಯವನ್ನು ಬಳಸಿ ಸೇತುಬಂಧ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವುದು.
2. ಮೌಲ್ಯಾಂಕನ ಕಾರ್ಯವನ್ನು ನಿರ್ವಹಿಸಿ, ಸಾಂದರ್ಭಿಕವಾಗಿ ಸೃಜನೆಯಾಗುವ ವಿದ್ಯಾರ್ಥಿಗಳ ಉತ್ತಮ ಪ್ರಗತಿಯ ದಾಖಲೆಗಳನ್ನು ಮಕ್ಕಳ ಕೃತಿ ಸಂಪುಟದಲ್ಲಿ ಸಂಗ್ರಹಿಸಿಡುವುದು ಹಾಗೂ ಪೋಷಕರೊಂದಿಗೆ ಹಂಚಿಕೊಳ್ಳುವುದು.
3. ನಿಗದಿಪಡಿಸಿದ ಸಮಯದಲ್ಲಿ ಮೌಲ್ಯಾಂಕನ ಚಟುವಟಿಕೆಗಳನ್ನು ಕೈಗೊಳ್ಳುವುದು. ಯಾವುದೇ ಕಾರಣದಿಂದ ಮಗು ಆ ಸಮಯಕ್ಕೆ ಅಲಭ್ಯವಾದಲ್ಲಿ ಸಾಂದರ್ಭಿಕವಾಗಿ ಕ್ರಮವಹಿಸಿ, ಮಕ್ಕಳ ಕೃತಿ ಸಂಪುಟದಲ್ಲಿ ದಾಖಲಿಸಿರುವ ಚಟುವಟಿಕೆಗಳೊಂದಿಗೆ ಸಂಯೋಜನೆ ಮಾಡಿಕೊಂಡು ಆ ಮಗುವನ್ನು ಮೌಲ್ಯಾಂಕನಕ್ಕೆ ಒಳಪಡಿಸುವುದು.
4. ಪಾಠ ಆಧಾರಿತ ಮೌಲ್ಯಾಂಕನ (Unit Test) ಪೂರ್ಣಗೊಂಡ 2 ದಿನಗಳಲ್ಲಿ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಾಂಕನಗಳು ಪೂರ್ಣಗೊಂಡ 7 ದಿನಗಳೊಳಗೆ ವಿದ್ಯಾರ್ಥಿಗಳ ಪ್ರಗತಿಯನ್ನು SATS ತಂತ್ರಾಂಶದಲ್ಲಿ ಕಡ್ಡಾಯವಾಗಿ ನಮೂದಿಸುವುದು.
5. ಕ್ಲಸ್ಟರ್ ಹಂತದ CRP ಹಾಗೂ ಬ್ಲಾಕ್ ಹಂತದ ಅಧಿಕಾರಿಗಳು SATS ತಂತ್ರಾಂಶದಲ್ಲಿ ಪ್ರತಿ ಶಾಲೆಯು ಮೌಲ್ಯಾಂಕನ ದಾಖಲಿಸಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದು ಹಾಗೂ ಅವಶ್ಯ ಮಾರ್ಗದರ್ಶನ ನೀಡುವುದು.
6. SATS ತಂತ್ರಾಂಶದಲ್ಲಿ ಲಭ್ಯವಿರುವ ವಿಶ್ಲೇಷಣಾ ವರದಿಯನ್ನು ಆಧರಿಸಿ ವಿದ್ಯಾರ್ಥಿಗಳು ಕಲಿಕೆಯನ್ನು ಸಾಧಿಸಲು ಜಿಲ್ಲೆಯ ಉಪನಿರ್ದೇಶಕರು, ಆಡಳಿತ ಹಾಗೂ ಅಭಿವೃದ್ಧಿ ರವರ ವ್ಯಾಪ್ತಿಗೆ ಒಳಪಡುವ ಎಲ್ಲಾ ಮೇಲ್ವಿಚಾರಣಾ ಅಧಿಕಾರಿಗಳು, ಜಿಲ್ಲೆ, ಬ್ಲಾಕ್ ಮತ್ತು ಕ್ಲಸ್ಟರ್ ಹಂತದ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಶೈಕ್ಷಣಿಕವಾಗಿ ಅಗತ್ಯ ಮಾರ್ಗದರ್ಶನ ನೀಡುವುದು.
7. 1 ರಿಂದ 3ನೇ ತರಗತಿಗಳ ನಲಿ-ಕಲಿ ಘಟಕಗಳಲ್ಲಿ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ ಸಮಗ್ರ ಶಿಕ್ಷಣ ಕರ್ನಾಟಕದ ನಲಿ-ಕಲಿ ಕೋಶದ ವತಿಯಿಂದ ನೀಡಿರುವ ಸುತ್ತೋಲೆಯಂತೆ (ಉಲ್ಲೇಖ-2) ಕ್ರಮವಹಿಸುವುದು.
8. ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ ಆಗಿಂದಾಗೆ ಇಲಾಖೆಯಿಂದ ಹೊರಡಿಸುವ ಜ್ಞಾಪನ / ಸುತ್ತೋಲೆಗಳನ್ನು ಅನುಸರಿಸುವುದು.