Recruitment for various posts in Indian Navy
Recruitment for various posts in Indian Navy
ಭಾರತೀಯ ನೌಕಾಪಡೆಯು ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಕಾರ್ಯನಿರ್ವಾಹಕ ಶಾಖೆ, ಶಿಕ್ಷಣ ಶಾಖೆ, ತಾಂತ್ರಿಕ ಶಾಖೆಗಳಲ್ಲಿ ಜನರಲ್ ಸರ್ವಿಸ್, ಏರ್‌ಕ್ರಾಫ್ಟ್ ಕಂಟ್ರೋಲರ್, ಪೈಲಟ್, ಎಜುಕೇಷನ್, ಇಂಜಿನಿಯರಿಂಗ್ ವಿಭಾಗಗಳಲ್ಲಿ ಖಾಲಿ ಇರುವ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಈ ಹುದ್ದೆಗಳನ್ನು ಸೀನಿಯರ್ ಸೆಕೆಂಡರಿ ರಿಕ್ರೂಟ್ (ಎಸ್‌ಎಸ್‌ಆರ್) ಮೂಲಕ ಭರ್ತಿ ಮಾಡಿಕೊಳ್ಳುತ್ತಿದೆ. ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರು ಪದವಿ, ಸ್ನಾತಕೋತ್ತರ ಪದವಿ ಅಥವಾ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಕನಿಷ್ಠ ಶೇಕಡ 66 ಅಂಕ ಗಳಿಸಿರಬೇಕು ಅಥವಾ ಇಂಜಿನಿಯರಿಂಗ್‌ನಲ್ಲಿ ಶೇಕಡ 60 ಅಂಕ ಗಳಿಸಿರಬೇಕು. ಎನ್‌ಸಿಸಿ (ಆರ್ಮಿ/ನೇವಿ/ಏರ್‌ವಿಂಗ್) ‘ಸಿ’ ಸರ್ಟಿಫಿಕೆಟ್ ಹೊಂದಿದವರಿಗೆ ಶೇ.5 ವಿನಾಯ್ತಿ ನೀಡಲಾಗಿದೆ.
ಒಟ್ಟು ಹುದ್ದೆಗಳು: 250
ವಿದ್ಯಾರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ ಬಿಇ ಅಥವಾ ಬಿಟೆಕ್, ಬಿಎಸ್ಸಿಯಲ್ಲಿ ಮೆಕಾನಿಕಲ್/ ಆಟೋಮೇಷನ್/ ಸಿವಿಲ್/ ಏರೋನಾಟಿಕಲ್/ ಏರೋ ಸ್ಪೇಸ್ / ಮೆಟಲರ್ಜಿ / ನೇವಲ್ ಆರ್ಕಿಟೆಕ್ಟರ್/ ಓಷನ್ ಇಂಜಿನಿಯರಿಂಗ್/ ಮರೈನ್ ಇಂಜಿನಿಯರಿಂಗ್/ ಶಿಪ್ ಟೆಕ್ನಾಲಜಿ/ ಶಿಪ್ ಬಿಲ್ಡಿಂಗ್/ ಶಿಪ್ ಡಿಸೈನ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‌ಸ್ಟ್ರುಮೆಂಟೇಷನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್ಸ್/ ಎಲೆಕ್ಟಿಕಲ್, ಆಟೋಮೇಷನ್/ ಇನ್‌ಸ್ಟ್ರುಮೆಂಟೇಷನ್/ ಪ್ರೊಡಕ್ಷನ್/ ಏರೋನಾಟಿಕಲ್/ ಇಂಡಸ್ಟ್ರಿಯಲ್ ಇಂಜಿನಿಯ ರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್/ ಕಂಟ್ರೋಲ್ ಇಂಜಿನಿಯರಿಂಗ್/ ಆಟೋಮೊಬೈಲ್ / ಮೆಟಲರ್ಜಿ/ ಮೆಕಟ್ರಾನಿಕ್ಸ್/ ಇನ್‌ಸ್ಟ್ರುಮೆಂಟೇಷನ್ ಆ್ಯಂಡ್ ಕಂಟ್ರೋಲ್ ವಿಷಯಗಳಲ್ಲಿ ಅಧ್ಯಯನ ಮಾಡಿದವರು, ಬಿಕಾಮ್, ಎಂಸಿಎ, ಎಂಎಸ್ಸಿ, ಎಂಬಿಎ, ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ
ಕಾರ್ಯನಿರ್ವಾಹಕ ಶಾಖೆಯಲ್ಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜು.2-2000 ರಿಂದ ಜು.1-2006ರ ನಡುವೆ ಜನಿಸಿರಬೇಕು.
ಶಿಕ್ಷಣ ಶಾಖೆಯಲ್ಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜು.2-1998 ರಿಂದ ಜು.1-2004ರ ನಡುವೆ ಜನಿಸಿರಬೇಕು. ತಾಂತ್ರಿಕ ಶಾಖೆಯಲ್ಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜು.2-2000 ರಿಂದ ಜ.1-2006 ರ ನಡುವೆ ಜನಿಸಿರಬೇಕು.
ಹುದ್ದೆಗಳ ವಿವರ ಮಾಹಿತಿ:
- ಜನರಲ್ ಸರ್ವಿಸ್ (ಜಿಎಸ್-(ಎಕ್ಸ್)-56
- ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ)-20
- ನೇವಲ್ ಏರ್ ಆಪರೇಷನ್ಸ್
ಆಫೀಸರ್ (ಏರ್ ಕ್ರೂ)-21 - ಪೈಲಟ್-24
- ಲಾಜಿಸ್ಟಿಕ್ಸ್ -20
- ನೆವಲ್ ಆರ್ಮಮೆಂಟ್ ಇನ್‌ಸ್ಪೆಕ್ಟರ್ ಕೇಡರ್ (ಎನ್ ಐಎಸಿ)-16
- ಶಿಕ್ಷಣ ಶಾಖೆ-15
- ಇಂಜಿನಿಯರಿಂಗ್ ಬ್ರಾಂಚ್ ಜನರಲ್ ಸರ್ವಿಸ್ (ಜಿಎಸ್)-36
- ಎಲೆಕ್ಟಿಕಲ್ ಬ್ರಾಂಚ್ ಜನರಲ್ ಸರ್ವಿಸ್ (ಜಿಎಸ್) – 42
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಅಭ್ಯರ್ಥಿಗಳು ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್‌ನಲ್ಲಿ ಗಳಿಸಿದ ಅಂಕವನ್ನು ಆಧರಿಸಿ ಶಾರ್ಟ್‌ಲಿಸ್ಟ್ ಮಾಡಲಾಗುವುದು ನಂತರ ಈ ಲಿಸ್ಟ್‌ನ ಆಧಾರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರನ್ನು ಸಂದರ್ಶನಕ್ಕೆ ಒಳಪಡಿಸಲಾಗುವುದು. ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಎಸ್‌ಎಂಎಸ್ ಅಥವಾ ಇ-ಮೇಲ್ ಮಾಡುವ ಮೂಲಕ ತಿಳಿಸಲಾಗುವುದು.
ವೇತನ ಮಾಹಿತಿ:
56,100 ರೂ. ವೇತನವನ್ನು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಕೆ ಕುರಿತು:
ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು joinindiannavy.gov.in ಗೆ ಭೇಟಿ ನೀಡಿ ವಿವರಗಳನ್ನು ದಾಖಲಿಸಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ:29-09-2024
ಅಧಿಸೂಚನೆ ಡೌನ್‌ಲೋಡ್ ಮಾಡಲು- CLICK HERE
Sir I am dimlomo complete, tool and dui maker , Please give me job , Because I am poor family 😔
10th pass I have a cdc pass port
10th pass