Master Mitra

UGC NET Exam-2024: Application Invitation, Direct Link for Application Submission is Here Apply Soon

Opening of the online portal for submission of Online Application Form for UGC-NET December 2024.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (NTA) ಯುಜಿಸಿ ನೆಟ್ ಡಿಸೆಂಬರ್- 2024 ಪರೀಕ್ಷೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದೆ. ನೆಟ್ ಪರೀಕ್ಷೆ ಬರೆಯಲು ಉದ್ದೇಶಿಸಿರುವವರು ugcnet.nta.ac.in ವೆಬ್‌ಸೈಟ್ ನೋಡಿ.ಯುಜಿಸಿ ನೆಟ್ 2024 ಡಿಸೆಂಬರ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವವರು ಅಧೀಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಒಬ್ಬರು ಒಂದು ಅರ್ಜಿ ನಮೂನೆ ಭರ್ತಿ ಮಾಡಲು ಮಾತ್ರ ಅವಕಾಶವಿರುತ್ತದೆ.

ಏನಿದು UGC ಪರೀಕ್ಷೆ:

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (UGC) ಯುಜಿಸಿ ನೆಟ್ ಪರೀಕ್ಷೆ ನಡೆಸುತ್ತದೆ. ‘ಸಹಾಯಕ ಪ್ರೊಫೆಸರ್’ ಮತ್ತು ‘ಜೂನಿಯರ್ ರಿಸರ್ಚ್ ಫೆಲೋಶಿಪ್’ಗಾಗಿ ಅರ್ಹತೆ ಪರೀಕ್ಷೆ ನಡೆಸುತ್ತಿದೆ. 2018ರ ವರೆಗೆ ಯುಜಿಸಿ ಪರೀಕ್ಷೆಯಲ್ಲಿ ಮೂರು ಪೇಪರ್‌ಗಳಿದ್ದವು. 2019ರಲ್ಲಿ ಇದನ್ನು ಎರಡು ಪೇಪರ್ ಮಾಡಲಾಯಿತು. UGC ನೆಟ್ ಪರೀಕ್ಷೆಯು ವರ್ಷದಲ್ಲಿ ಎರಡು ಬಾರಿ ನಡೆಸಲಾಗುತ್ತದೆ.

ಶುಲ್ಕ ಎಷ್ಟು ನಿಗದಿ ಮಾಡಲಾಗಿದೆ.?

ಜನರಲ್ / ಅನ್‌ರಿಸರ್ವ್ ವಿಭಾಗ: 1,150 ರೂ, ಜನರಲ್, ಇಡಬ್ಲ್ಯುಎಸ್, ಒಬಿಸಿ, ಎನ್‌ಸಿಎಲ್‌ಗೆ 600 ರೂ. ಮತ್ತು ಎಸ್‌ಸಿ, ಎಸ್‌ಟಿ, ಪಿಡಬ್ಲ್ಯುಡಿ, ತೃತೀಯ ಲಿಂಗ ಅಭ್ಯರ್ಥಿಗಳಿಗೆ 325 ರೂಪಾಯಿ.

ಅರ್ಜಿ ಹಾಕಲು ಅರ್ಹತೆಗಳು ಏನಿರಬೇಕು?

ಜೆನರಲ್ ಕೆಟಗರಿ/ ಮೀಸಲಾತಿಗೆ ಒಳಪಡದ ಅಭ್ಯರ್ಥಿಗಳು ಯಾವುದೇ ಸ್ನಾತಕೋತ್ತರ ಪದವಿಯಲ್ಲಿ ಶೇ.55 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಎಸ್‌ಸಿ/ಎಸ್‌ಟಿ, ಪಿಡಬ್ಲ್ಯುಡಿ ಅಭ್ಯರ್ಥಿಗಳು ಯಾವುದೇ ಸ್ನಾತಕೋತ್ತರ ಪದವಿಯಲ್ಲಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

UGC NET ಪರೀಕ್ಷೆ ಮಾದರಿ ಹೇಗಿರುತ್ತದೆ?

*NET ಪರೀಕ್ಷೆಯನ್ನು 300 ಅಂಕಗಳಿಗೆ ನಡೆಸಲಾಗುತ್ತದೆ.

*ಸಾಮಾನ್ಯ ಪತ್ರಿಕೆ ಪೇಪರ್ 1 ಎಲ್ಲ ವಿಷಯದ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿದ್ದು, 100 ಅಂಕಗಳ 50 ಪ್ರಶ್ನೆಗಳನ್ನು ಹೊಂದಿರುತ್ತದೆ.

*ಪತ್ರಿಕೆ 2 ವಿಷಯ ಪತ್ರಿಕೆ ಆಗಿದ್ದು 200 ಅಂಕಗಳ 100 ಪ್ರಶ್ನೆಗಳನ್ನು ಹೊಂದಿರುತ್ತದೆ. ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಬೇಕು.

ಒಟ್ಟು 3 ಗಂಟೆ ಸಮಯ ಸಿಬಿಟಿ ಪರೀಕ್ಷೆ ಇರುತ್ತದೆ. 3 ಗಂಟೆ ಅವಧಿಯಲ್ಲಿ ಅಭ್ಯರ್ಥಿಯು ಎರಡು ಪತ್ರಿಕೆಗಳಲ್ಲಿ ಯಾವ ಪ್ರಶ್ನೆ ಪತ್ರಿಕೆಯನ್ನು ಬೇಕಾದರೂ ಮೊದಲು ಅಟೆಂಡ್ ಮಾಡಬಹುದು.

NET ಪರೀಕ್ಷೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಇದ್ದು, ಒಂದು ಭಾಷೆಯನ್ನು ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳಬಹುದು (ಭಾಷಾ ವಿಷಯ ಹೊರತುಪಡಿಸಿ).

ಡಿಸೆಂಬರ್ 11, 2024, ರಾತ್ರಿ 11:50 ಗಂಟೆ

ಕರೆಕ್ಷನ್ ವಿಂಡೋ ಸಮಯ: ಡಿಸೆಂಬರ್ 12-13, 2024,ರಾತ್ರಿ 11:50 ಗಂಟೆ

ಪರೀಕ್ಷೆ ದಿನಾಂಕ: ಜನವರಿ 1-19, 2025.

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ಮಾಹಿತಿಗಳು:

ಜನ್ಮ ದಿನಾಂಕ, ಫೋಟೋ, ಸಹಿಯ ಸ್ಕ್ಯಾನ್ ಕಾಪಿ, ಸ್ನಾತಕೋತ್ತರ ಪದವಿಗೆ ಸಂಬಂಧಿಸಿದ ಮಾಹಿತಿ, ಆಧಾರ್ ಕಾರ್ಡ್.

ಪ್ರಮುಖ ದಿನಾಂಕಗಳು ಮಾಹಿತಿ ಇಲ್ಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಡಿಸೆಂಬರ್,10, 2024, ರಾತ್ರಿ 11:50 ಗಂಟೆ

ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ:

11 ಡಿಸೆಂಬರ್ 2024 (up to 11:50 P.M)

ಅಧೀಕೃತ ಅಧಿಸೂಚನೆ ಡೌನ್‌ಲೋಡ್ ಮಾಡಲು: CLICK HERE

ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು- CLICK HERE

 

Exit mobile version