“ಶಿಕ್ಷಣ ಅದಾಲತ್” ಕಾರ್ಯಕ್ರಮ
2024-25ನೇ ಸಾಲಿನ ಅಕ್ಟೋಬರ್ ಮಾಹೆಯಲ್ಲಿ “ಶಿಕ್ಷಣ ಅದಾಲತ್” ಕಾರ್ಯಕ್ರಮವನ್ನು ಕಲಬುರಗಿ ವಿಭಾಗದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳಲ್ಲಿ ಹಾಗೂ ತಾಲೂಕುಗಳಲ್ಲಿ ಹಮ್ಮಿಕೊಳ್ಳಲು ಉತ್ಸುಕರಾಗಿದ್ದೇವೆ. ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ಶಿಕ್ಷಕರ/ಮುಖ್ಯ ಶಿಕ್ಷಕರ ಇಲಾಖಾ ಶಿಸ್ತು ಪ್ರಕರಣಗಳಲಿನ ವಿಳಂಬ/ಕುಂದುಕೊರತೆಗಳನ್ನು ನಿವಾರಿಸಲು ಶಿಕ್ಷಣ ಅದಾಲತ್ ನಡೆಸಿ ಶಿಕ್ಷಕರ ಶಿಸ್ತು ಪ್ರಕರಣಗಳು ಹಾಗೂ ಇತರೆ ಕುಂದುಕೊರತೆಗಳ ನಿವಾರಣೆಗೆ ಆಗತ್ಯ ಕ್ರಮ ಕೈಗೊಳ್ಳಲು ಶಾಲಾ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮ ಪ್ರಯುಕ್ತ ಆಯಾ ಜಿಲ್ಲಾ ಉಪನಿರ್ದೇಶಕರು ತಮ್ಮ ಜಿಲ್ಲೆಯ ವ್ಯಾಪ್ತಿಗೆ ಬರುವ ಉಪನಿರ್ದೇಶಕರ ಕಛೇರಿ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಬಾಕಿ ಇರುವ ಶಿಸ್ತು ಪ್ರಕರಣದ ಕಡತಗಳನ್ನು ನಿಯಮಾನುಸಾರ ಪರಿಶೀಲಿಸಿ ತ್ವರಿತವಾಗಿ ಕ್ರಮ ತೆಗೆದುಕೊಳ್ಳಲು ತಿಳಿಸಿದೆ. ಈ ಶಿಕ್ಷಣ ಅದಾಲತ್‌ನಲ್ಲಿ ಅಪರ ಆಯುಕ್ತರು ಖುದ್ದಾಗಿ ಹಾಜರಿದ್ದು, ಕಡತಗಳನ್ನು ವಿಲೇವಾರಿ ಮಾಡುವುದಲ್ಲದೆ ಶಿಕ್ಷಕರ/ಮುಖ್ಯ ಶಿಕ್ಷಕರ ಶಿಸ್ತು ಪ್ರಕರಣಗಳ ಬಗ್ಗೆ, ಸ್ಥಳದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ತಮ್ಮ ಕಛೇರಿಯಲ್ಲಿ ಸವರಿ “ಶಿಕ್ಷಣ ಅದಾಲತ್” ಕಾರ್ಯಕ್ರಮವನ್ನು ಈ ಕೆಳಕಂಡ ಅವಧಿಯಲ್ಲಿ ಜಿಲ್ಲೆ ಮತ್ತು ತಾಲೂಕು ಹಂತದಲ್ಲಿ ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ.
ಈ ಮೇಲೆ ತಿಳಿಸಿದ ಅವಧಿಯಂತೆ ಆಯಾ ತಾಲೂಕಿನ ಹಾಗೂ ಜಿಲ್ಲಾ ಮಟ್ಟದ ಕಛೇರಿಗಳಲ್ಲಿ ಯಾವ ದಿನಾಂಕದಂದು ‘ಶಿಕ್ಷಣ ಅದಾಲತ್’ ನ್ನು ಹಮ್ಮಿಕೊಳ್ಳಲಾಗುವುದು ಎಂಬ ನಿರ್ದಿಷ್ಟ ವೇಳಾ ಪಟ್ಟಿಯನ್ನು ತಯಾರಿಸುವುದು. ತಮ್ಮ ಹಂತದಲ್ಲಿ ‘ಶಿಕ್ಷಣ ಅದಾಲತ್’ ನಡೆಸಲು ಅವಶ್ಯಕ ಪೂರಕ ಮಾಹಿತಿಯೊಂದಿಗೆ ಸಿದ್ಧತೆ ಮಾಡಿಕೊಳ್ಳುವುದು ಹಾಗೂ ಶಿಕ್ಷಣ ಅದಾಲತ್ ಕಾರ್ಯಕ್ರಮದ ಬಗ್ಗೆ ತಮ್ಮ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಕಛೇರಿಯಲ್ಲಿ ಬಾಕಿ ಇರುವ ಕಡತಗಳ ಬಗ್ಗೆ ತಖ್ಯೆಯನ್ನು ತಯಾರಿಸಿ ವೇಳಾ ಪಟ್ಟಿಯ ಸಮೇತ ದಿನಾಂಕ: 27.09.2024ರೊಳಗಾಗಿ ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ. (ಅನುಬಂಧ-1 ಹಾಗೂ 2 ಲಗತ್ತಿಸಿದೆ).
Next sekshna Adalat date