NICL Insurance Company invites applications for various posts-2024,Here is the direct link to apply here

NICL Insurance Company invites applications for various posts,Here is the direct link to apply here

NICL ವಿಮಾ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. ಪದವೀಧರರಿಗೆ ಉತ್ತಮ ಅವಕಾಶ.

ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ (ಎನ್‌ಐಸಿಎಲ್‌) ಕೇಂದ್ರ ಸರ್ಕಾರದ ಒಡೆತನದ ಮತ್ತು ಹಣಕಾಸು ಸಚಿವಾಲಯದಿಂದ ನಿರ್ವಹಿಸಲ್ಪಡುವ ಸಾರ್ವಜನಿಕ ವಲಯದ ವಿಮಾ ಕಂಪನಿಯಾಗಿದೆ. ಪ್ರಸ್ತುತ ಈ ಸಂಸ್ಥೆಯು ಕೇಡರ್ 3 ವೃಂದಲ್ಲಿ ಅಸಿಸ್ಟೆಂಟ್‌ಗಳ 500 ಹುದ್ದೆಗಳನ್ನು ದೇಶದಾದ್ಯಂತ ಭರ್ತಿ ಮಾಡಿಕೊಳ್ಳುತ್ತಿದೆ. ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕದಲ್ಲಿ 40 ಹುದ್ದೆಗಳಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನ.11ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.

ಒಟ್ಟು ಹುದ್ದೆಗಳು: 500
ಕರ್ನಾಟಕದಲ್ಲಿ: 40 ಹುದ್ದೆಗಳು

ವಿದ್ಯಾರ್ಹತೆ:

ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಯು ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳಿಗೆ ಪ್ರಾದೇಶಿಕ ಭಾಷೆಯಲ್ಲಿ ಬರೆಯಲು, ಓದಲು, ಮಾತನಾಡಲು ಬರಬೇಕು.

ವೇತನ ಮಾಹಿತಿ:

ಆಯ್ಕೆಯಾದ ಅಭ್ಯರ್ಥಿಗಳಿಗೆ 22,405- 62,265. ವರೆಗಿನ ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿದೆ.

ಅರ್ಜಿ ಶುಲ್ಕ:

ಎಸ್ಸಿ/ಎಸ್ಟಿ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳು 100ರೂ., ಎಲ್ಲ ಇತರ ವರ್ಗದ ಅಭ್ಯರ್ಥಿಗಳು 850ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

ವಯೋಮಿತಿ:

ಅಭ್ಯರ್ಥಿಗಳು ಅ.1, 2024ಕ್ಕೆ ಅನ್ವಯವಾಗುವಂತೆ ಕನಿಷ್ಠ ವಯಸ್ಸು 21 ರಿಂದ ಗರಿಷ್ಠ ವಯಸ್ಸು 30 ವರ್ಷದೊಳಗಿರಬೇಕು.

ವಯೋಮಿತಿ ಸಡಿಲಿಕೆ:

ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ.

ಪರೀಕ್ಷಾ ಕೇಂದ್ರ:

ಬೆಂಗಳೂರು, ಹುಬ್ಬಳ್ಳಿ/ಧಾರವಾಡ, ಮಂಗಳೂರು, ಮೈಸೂರು.

ಅರ್ಜಿ ಸಲ್ಲಿಕೆ:

ಆಸಕ್ತ ಅಭ್ಯರ್ಥಿಗಳು Nationalinsurance.nic.co.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕು.

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?

ಆನ್‌ಲೈನ್ ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ ಪ್ರಾದೇಶಿಕ ಭಾಷಾ ಪರೀಕ್ಷೆ ನಡೆಸಲಾಗುತ್ತದೆ.

  • ಪೂರ್ವಭಾವಿ ಪರೀಕ್ಷೆ ಇಂಗ್ಲಿಷ್ ಲ್ಯಾಂಗ್ವೇಜ್ (30)
  • ರಿಜನಲ್ ಲ್ಯಾಂಗ್ವೇಜ್ (35)
  • ಕ್ವಾಂಟಿಟೀವ್ ಆಪ್ಟಿಟ್ಯೂಡ್ (35) ಒಟ್ಟು 100 ಅಂಕಕ್ಕೆ ನಡೆಸಲಾಗುತ್ತದೆ.
  • ಮುಖ್ಯ ಪರೀಕ್ಷೆಯನ್ನು ರೀಸನಿಂಗ್ (40)
    ಇಂಗ್ಲಿಷ್ (40),
  • ನ್ಯೂಮರಿಕಲ್ ಎಬಿಲಿಟಿ (40),
  • ಜನರಲ್ ಅವೆರ್‌ನೇಸ್ (40),
  • ಕಂಪ್ಯೂಟರ್ ಜ್ಞಾನದ 40 ಸೇರಿ ಒಟ್ಟು 200 ಅಂಕಕ್ಕೆ ಪರೀಕ್ಷೆ ನಡೆಯಲಿದೆ.

ಪ್ರಮುಖ ದಿನಾಂಕಗಳು:

ಆನ್‌ಲೈನ್ ಅರ್ಜಿ ಮತ್ತು ಶುಲ್ಕ ಪಾವತಿಸಲು ಕೊನೇ ದಿನ : 11-11-2024

ಆನ್‌ಲೈನ್ ಪರೀಕ್ಷೆಯ ದಿನಾಂಕ ಹಂತ-1: 30-11-2024

ಆನ್‌ಲೈನ್ ಪರೀಕ್ಷೆಯ ದಿನಾಂಕ ಹಂತ-2: 28-12-2024

ಅಧಿಸೂಚನೆ ಡೌನ್‌ಲೋಡ್ ಮಾಡಲು – CLICK HERE

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು- CLICK HERE

Leave a Comment