NICL Recuritment-2025 ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ನಲ್ಲಿ ವಿಮಾ ಆಡಳಿತಾಧಿಕಾರಿಳ ನೇಮಕಾತಿಗೆ ಅರ್ಜಿ ಆಹ್ವಾನ.
NICL Recuritment-2025: ಕೇಂದ್ರ ಹಣಕಾಸು ಸಚಿವಾಲಯದ ಅಧೀನದಲ್ಲಿರುವ ‘ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್’ ಆಡಳಿತಾಧಿ ಕಾರಿಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಗುರುವಾರದಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜುಲೈ 3ರ ತನಕ ಅವಕಾಶವಿದೆ.
ಒಟ್ಟು ಹುದ್ದೆಗಳು : 266
ಹುದ್ದೆಗಳ ವಿವರ:
ವಿವಿಧ ವಿಭಾಗಗಳಲ್ಲಿ ಒಟ್ಟು 266 ಹುದ್ದೆಗಳು ಖಾಲಿ ಇವೆ. ಡಾಕ್ಟರ್ಸ್, ಲೀಗಲ್, ಫೈನಾನ್ಸ್, ಇನ್ಫಾರ್ಮೆಶನ್ ಟೆಕ್ನಾಲಜಿ, ಅಟೊಮೊಬೈಲ್ ಎಂಜಿನಿಯರಿಂಗ್ ವಿಭಾಗದಲ್ಲಿ 84 ಹುದ್ದೆಗಳಿಗೆ ನೇಮಕ ನಡೆದರೆ, 170 ಜನರಲಿಸ್ಟ್ ಹುದ್ದೆಗಳನ್ನೂ ಭರ್ತಿ ಮಾಡ ಲಾಗುತ್ತಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಹತೆಗಳೇನು?
ಎಂಬಿಬಿಎಸ್/ಎಂಡಿ/ಎಂಎಸ್ ಅಥವಾ ಸ್ನಾತಕೋತ್ತರ -ವೈದ್ಯಕೀಯ ಪದವಿಗಳನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ವೈದ್ಯರ ಹುದ್ದೆಗಳಿಗೆ ಪ್ರಯತ್ನಿಸ ಬಹುದು. ಕಾನೂನು ಪದವೀಧರರು ಅದೇ ವಿಭಾಗದ ಹುದ್ದೆಗಳಿಗೂ, ಬಿಕಾಂ/ಎಂಕಾಂ ಪಡೆದವರು ಫೈನಾನ್ಸ್ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಸಂಬಂಧಿಸಿದ ವಿಷಯಗಳಲ್ಲಿ ಬಿಇ/ಬಿಟೆಕ್ ಅಥವಾ ಎಂಇ/ಎಂಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು -ಐಟಿ/ಅಟೊಮೊಬೈಲ್ ಎಂಜಿನಿಯರಿಂಗ್ ವಿಭಾಗದ ಹುದ್ದೆಗಳಿಗೂ ಪ್ರಯತ್ನಿಸಬಹುದು.
ಜನರಲಿಸ್ಟ್ ಹುದ್ದೆಯ ಅಭ್ಯರ್ಥಿಗಳು ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು. ಎಂಜಿನಿಯರಿಂಗ್, ಜನರಲಿಸ್ಟ್ ಮತ್ತು ಕಾನೂನು ವಿಭಾಗದ ಹುದ್ದೆಗಳಿಗೆ ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ. 60 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದು ತೇರ್ಗಡೆ ಯಾಗುವುದು ಕಡ್ಡಾಯ.
ವಯೋಮಿತಿ ವಿವರ:
21ರಿಂದ 30 ವರ್ಷ ದೊಳಗಿನ ಅಭ್ಯರ್ಥಿಗಳಿಗೆ ಅವಕಾಶ ನೀಡಲಾ ಗಿದೆ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ:
ಎಸ್ಸಿ/ಎಸ್ಟಿ/ ವಿಶೇಷಚೇತನ ಅಭ್ಯರ್ಥಿಗಳಿಗೆ 250 ರೂ. ಹಾಗೂ ಉಳಿದೆಲ್ಲಾ ವರ್ಗದವರಿಗೆ 1,000 ರೂ.ಶುಲ್ಕ ನಿಗದಿಪಡಿಸಲಾಗಿದೆ.
ರಾಜ್ಯದಲ್ಲಿ ಎಲ್ಲಿ ನಡೆಯಲಿದೆ ಪರೀಕ್ಷೆ?
ಮೊದಲನೇ ಹಂತದ ಪರೀಕ್ಷೆಯು ಬೆಂಗಳೂರು, ಹುಬ್ಬಳ್ಳಿ- ಧಾರವಾಡ, ಮಂಗಳೂರು ಮತ್ತು ಮೈಸೂರು ಕೇಂದ್ರಗಳಲ್ಲಿ ನಡೆಯಲಿದ್ದು, ಎರಡನೇ ಹಂತದ ಪರೀಕ್ಷೆಗೆ ಬೆಂಗಳೂರಿನಲ್ಲಿ ಮಾತ್ರ ಪರೀಕ್ಷಾ ಕೇಂದ್ರ ಇರಲಿದೆ.
ಪರೀಕ್ಷಾ ಪೂರ್ವ ತರಬೇತಿ:
ಎಸ್ಸಿ/ಎಸ್ಟಿ/ವಿಶೇಷಚೇತನ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ಸಂಸ್ಥೆಯ ವತಿಯಿಂದ ಪರೀಕ್ಷಾ ಪೂರ್ವ ತರಬೇತಿ ಇರುತ್ತದೆ. ಅಗತ್ಯವಿದ್ದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ಅರ್ಜಿಯಲ್ಲಿ ಈ ಕುರಿತು ನಮೂದಿಸಬೇಕು.
ಆಯ್ಕೆ ವಿಧಾನ ಹೇಗಿರಲಿದೆ?
ಅಭ್ಯರ್ಥಿಗಳ ನೇಮಕಾತಿಗೆ ಎರಡು ಹಂತದ ಪರೀಕ್ಷೆ ನಡೆಯಲಿದೆ.
▪️ಮೊದಲನೇ ಹಂತದಲ್ಲಿ ಇಂಗ್ಲಿಷ್ ಲಾಂಗ್ಜ್, ರೀಸನಿಂಗ್ ಎಬಿಲಿಟಿ ಮತ್ತು ಕ್ವಾಂಟಿಟೇಟಿವ್ ಆಪ್ಟಿ ಟ್ಯೂಡ್ಗೆ ಸಂಬಂಧಿಸಿದ 100 ಅಂಕಗಳ 100 ಪ್ರಶ್ನೆಗಳಿರಲಿವೆ.
▪️ಎರಡನೇ ಹಂತದ ಪರೀಕ್ಷೆಯಲ್ಲಿ ಜನರಲಿಸ್ಟ್ ಮತ್ತು ಸ್ಪೆಷಲಿಸ್ಟ್ಗಳಿಗೆ ಬೇರೆ ಬೇರೆ ಪತ್ರಿಕೆಗಳಿರುತ್ತವೆ. ಜನರಲಿಸ್ಟ್ ಹುದ್ದೆಗಳಿಗೆ ರೀಸನಿಂಗ್, ಇಂಗ್ಲಿಷ್ ಲಾಂಗೇಜ್, ಜನರಲ್ ಅವೇರ್ನೆಸ್, ಕಂಪ್ಯೂಟರ್ ಮತ್ತು ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಪ್ರಶ್ನೆಗಳಿದ್ದರೆ, ಸ್ಪೆಷಲಿಸ್ಟ್ ಹುದ್ದೆಗಳಿಗೆ ನಡೆಯುವ ಪರೀಕ್ಷೆಯಲ್ಲಿ ರೀಸನಿಂಗ್, ಇಂಗ್ಲಿಷ್ ಲಾಂಗ್ವಜ್, ಜನರಲ್ ಅವೇರ್ನೆಸ್, ಕಂಪ್ಯೂಟರ್ ನಾಲೆಜ್, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಮತ್ತು ಸ್ಪೆಷಲಿಸ್ಟ್ ಸ್ಟೀಮ್ಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.
▪️ಜನರಲಿಸ್ಟ್ ಮತ್ತು ಸ್ಪೆಷಲಿಸ್ಟ್ ಎರಡೂ ಹುದ್ದೆಗಳಿಗೂ ತಲಾ 250 ಅಂಕಗಳ ಪ್ರಶ್ನೆಗಳಿರುತ್ತವೆ. ಇವುಗಳು ವಸ್ತುನಿಷ್ಠ ಮಾದರಿಯ ಪ್ರಶ್ನೆಗಳಾಗಿದ್ದು, ಇವುಗಳ ಜೊತೆಗೆ 30 ಅಂಕಗಳಿಗೆ ವಿವರಣಾತ್ಮಕ ಮಾದರಿಯಲ್ಲಿ ಉತ್ತರಿಸಲು ಪ್ರಶ್ನೆಗಳಿರುತ್ತವೆ. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಸಂದರ್ಶನ ನಿಗದಿಪಡಿಸಲಾಗಿರುತ್ತದೆ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಕೊನೆಯ ದಿನ: 03-07-2025
- ಮೊದಲ ಹಂತದ ಆನ್ಲೈನ್ ಪರೀಕ್ಷೆ ದಿನಾಂಕ: 20-07-2025
- ಎರಡನೇ ಹಂತದ ಪರೀಕ್ಷೆ ದಿನಾಂಕ: 31-08-2025
ಹೆಚ್ಚಿನ ಮಾಹಿತಿಗೆ: ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
I want a job in NICL