NMMS EXAM-2024-25
2024-25ನೇ ಸಾಲಿನ NMMS ಪರೀಕ್ಷೆಗೆ ಸಂಬಂಧಿಸಿದಂತೆ ಶುಲ್ಕವನ್ನು ಪಾವತಿಸಲು ದಿನಾಂಕ ವಿಸ್ತರಿಸಿರುವ ಬಗ್ಗೆ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2024-25 ಸಾಲಿನ NMMS ಪರೀಕ್ಷೆಯನ್ನು ದಿನಾಂಕ:08.12.2024 ರಂದು ನಡೆಸಲಾಗುತ್ತಿದ್ದು, ಉಲ್ಲೇಖಿತ ಸುತ್ತೋಲೆಯಲ್ಲಿ ದಿನಾಂಕ:19.08.2024 ರಿಂದ 05.10.2024 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ನೀಡಲಾಗಿತ್ತು. ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ವಿದ್ಯಾಥಿಗಳ ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಲು ದಿನಾಂಕ:30.10.2024 ರವರೆಗೆ ಅವಕಾಶವನ್ನು ಕಲ್ಪಿಸಲಾಗಿತ್ತು.
ಮುಂದುವರೆದು ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಲು ದಿನಾಂಕ: 05.11.2024 ರವರೆಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ನಿಗದಿತ ದಿನಾಂಕದೊಳಗೆ ಶುಲ್ಕವನ್ನು ಪಾವತಿಸುವಂತೆ ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಹಾಗೂ ಪ್ರಾಂಶುಪಾಲರಿಗೆ ಮಾಹಿತಿ ನೀಡುವಂತೆ ಉಪನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ) ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ ಬಗ್ಗೆ ಜ್ಞಾಪನ.
ಪ್ರಸಕ್ತ ಸಾಲಿನಲ್ಲಿ NMMS ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ವಿದ್ಯಾಥಿಗಳ ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಲು ದಿನಾಂಕ:05.11.2024 ರವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ಸಂಬಂಧ USER Manual & FLOW Chart ಲಭ್ಯಮಾಡಲಾಗಿದೆ.
ಶಾಲಾ ಮುಖ್ಯ ಶಿಕ್ಷಕರು/ ಪ್ರಾಂಶುಪಾಲರು ವಿದ್ಯಾರ್ಥಿಗಳ ಶುಲ್ಕವನ್ನು ಪಾವತಿಸಲು ಅನುಸರಿಸಬೇಕಾದ ಕ್ರಮಗಳು.
1.NMMS ಆನ್ ಲೈನ್ ಅರ್ಜಿ ಸಲ್ಲಿಸಲು ಲಾಗಿನ್ ಮಾಡುವ ವಿಧಾನವನ್ನು ಅನುಸರಿಸುವುದು.
2.Make Payment option ಅನ್ನು Click ಮಾಡಿದಾಗ ನಿಮ್ಮ ಶಾಲೆಯ ಶುಲ್ಕದ ಮಾಹಿತಿ ವಿವರ ಕಾಣುತ್ತದೆ.
3.ನಿಮ್ಮ ಶಾಲೆಯಿಂದ ಅರ್ಜಿ ಸಲ್ಲಿಸಿದ ಪ್ರತಿ ವಿದ್ಯಾರ್ಥಿಗಳಿಗೆ ತಲಾ 5/- ರೂ ಗಳ ನಿರ್ವಹಣಾ ವೆಚ್ಚ ಕಟಾವಣೆಯಾಗಿ ಪಾವತಿಸಬೇಕಾದ ನಿವ್ವಳ ಮೊತ್ತವನ್ನು ತೋರಿಸುತ್ತದೆ.
4.ಸದರಿ ಮೊತ್ತವನ್ನು ಪಾವತಿಸಲು Online payment Button ಅನ್ನು Click ಮಾಡುವ ಮೂಲಕ net banking/ UPI/ Debit Card/ NEFT/RTGS ಯಾವುದೇ ವಿಧಾನವನ್ನು ಅನುಸರಿಸಿ ಮೊತ್ತ ಪಾವತಿಸಬಹುದು.
5.ಮೊತ್ತವನ್ನು ಪಾವತಿಸುವಾಗ Reference Number, Bank Transaction ID, Transaction Amount ಎಂಬ ಮಾಹಿತಿಯನ್ನೊಳಗೊಂಡ Screen ಕಾಣಿಸುತ್ತದೆ. ನಂತರ Success Button ಅನ್ನು Click ಮಾಡಿ Click to complete transaction ಅನ್ನು Click ಮಾಡುವುದು.
6.ನಂತರ Online payment Status Screen ಲಭ್ಯವಾಗಲಿದ್ದು, ಸದರಿ Screen ನ ಮೂಲಕ Acknowledgement e Download (Download Acknowledgement) Button Click ಮಾಡುವ ಮೂಲಕ online payment Acknowledgement ಪ್ರತಿಯನ್ನು ಪಡೆದು ಶಾಲೆಯಲ್ಲಿ ಪ್ರತಿಯನ್ನು ಇಟ್ಟುಕೊಳ್ಳುವುದು.
7.E- ಚಲನ್ ಮೂಲಕ ಹಣ ಪಾವತಿ ಮಾಡ ಬಯಸಿದಲ್ಲಿ NEFT/RTGS Click ಮಾಡಿದಾಗ NEFT/RTGS ಚಲನ್ ಜನರೇಟ್ ಆಗುತ್ತದೆ. ಇದರ Printout ಪಡೆದು ಬ್ಯಾಂಕಿನಲ್ಲಿ ಹಣ ಪಾವತಿಸಬೇಕು.
ಮುಂದುವರೆದು 2024-25ನೇ ಸಾಲಿನ NMMS ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕ ಅಥವಾ ಲಾಗಿನ್‌ಲ್ಲಿ ಪಡೆಯಲಾದ RTGS/NEFT ಮೂಲಕ ಪಾವತಿಸಬೇಕು. ನಗದು ಪಾವತಿ/DD ಗಳನ್ನು ಪರಿಗಣಿಸುವುದಿಲ್ಲ. ಹಾಗಾಗಿ ನಿಗದಿತ ದಿನಾಂಕದೊಳಗೆ ಶುಲ್ಕವನ್ನು ಪಾವತಿಸುವಂತೆ ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಹಾಗೂ ಪ್ರಾಂಶುಪಾಲರಿಗೆ ಮಾಹಿತಿ ನೀಡುವಂತೆ ಉಪನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ) ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಈ ಮೂಲಕ ಸೂಚಿಸಿದೆ.
CLICK HERE TO DOWNLOAD MEMORANDUM
CLICK HERE TO DOWNLOAD CIRCULAR