NPS VS UPS ಯಾವುದು ಹಿತವಯ್ಯ ನಮಗೆ? ಲೇಖನ-01
NPS VS UPS: ಜಗತ್ತಿನ ಹಲವು ದೇಶಗಳಲ್ಲಿ ಪೆನ್ಷನ್, ಆರೋಗ್ಯ, ಶಿಕ್ಷಣ ಇತ್ಯಾದಿಗಳ ಹೊಣೆಯನ್ನು ಸರಕಾರ ಹೊತ್ತಿದೆ. ಭಾರತದಲ್ಲೂ ಒಂದಲ್ಲ ಹಲವು ಸಾಮಾಜಿಕ ಭದ್ರತೆ ಒದಗಿಸುವ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನ್ಯಾಷನಲ್ ಪೆನ್ಷನ್ ಸ್ಟೀಮ್ (NPS) ಅಂತಹ ಯೋಜನೆಗಳಲ್ಲಿ ಒಂದು. 2009ರಲ್ಲಿ ಇದನ್ನು ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರರಿಗೆ ಎಂದು ಜಾರಿಗೆ ತರಲಾಯಿತು. ಇದಕ್ಕೂ ಮೊದಲು ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರರಿಗೆ ಸರಕಾರ ನಿವೃತ್ತಿ ವೇತನ ನೀಡುತ್ತಿತ್ತು. 2009ರ ನಂತರ ಎಲ್ಲ ಸರಕಾರಿ ನೌಕರರು ಕಡ್ಡಾಯವಾಗಿ ಇಲ್ಲಿ ಖಾತೆ ತೆರೆಯಬೇಕು. 2014ರಿಂದ ಇವನ್ನು ಜನಸಾಮಾನ್ಯರಿಗೆ ಕೂಡ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಬಹುತೇಕ ಯೋಜನೆಗಳು ಎನ್‌ಆರ್ ಐಗಳನ್ನು ದೂರವಿಡುತ್ತವೆ. ಆದ್ರೆ ಇಲ್ಲಿ ಎನ್‌ಆರ್ ಐಗಳು ಕೂಡ ಉಳಿಸಲು ಅವಕಾಶ ಮಾಡಿಕೊಡಲಾಗಿದೆ.
▪️NPS ಬದಲು UPS ಆಯ್ಕೆಗೆ ಸೆ.30ರ ಗಡುವು
▪️ಎರಡು ಯೋಜನೆಗಳ ಹೋಲಿಕೆ, ಲಾಭ-ನಷ್ಟಗಳ ವಿವರಣೆ ಇಲ್ಲಿದೆ…
NPSನ ಎಲ್ಲ ಖಾತೆಗಳನ್ನು ಪೆನ್ಷನ್ ಫಂಡ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ ಮೆಂಟ್ ಆಥಾರಿಟಿ ನಿಯಂತ್ರಿಸುತ್ತದೆ. ಇದೆ ರೀತಿ ಹಲವು ಪೆನ್ನನ್ ಫಂಡ್‌ಗಳಿವೆ. ಆದರೆ ಎಲ್ಲವನ್ನೂ ನಿಯಂತ್ರಿಸುವ ಒಂದು ರೆಗ್ಗುಲೇಟರಿ ಸಂಸ್ಥೆ ಭಾರತದಲ್ಲಿ ಇಲ್ಲ, ಆಯಾ ಫಂಡ್ ಗಳನ್ನು ಅಲ್ಲಿಗೆ ಸಂಬಂಧಿಸಿದ ಸಂಸ್ಥೆಗಳು ನಿಯಂತ್ರಿಸುತ್ತವೆ.
ನ್ಯಾಷನಲ್ ಪೆನ್ಷನ್ ಯೋಜನೆಯಲ್ಲಿ ತಿಂಗಳಿಗೆ ಇಷ್ಟು ನಿವೃತ್ತಿ ವೇತನವನ್ನು ನೀಡುತ್ತೇವೆ ಎನ್ನುವ ಯಾವುದೇ ಭರವಸೆ ನೀಡುವುದಿಲ್ಲ. ಬದಲಿಗೆ ಉಳಿಸಿದ ಹಣವನ್ನು ಎಲ್ಲಿ ಹೂಡಿಕೆ ಮಾಡಲಾಗಿದೆ ಮತ್ತು ಆ ಹೂಡಿಕೆ ಯಾವ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ ಎನ್ನುವುದರ ಮೇಲೆ ಇದು ನಿರ್ಧಾರವಾಗುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ವಿವರವಾಗಿ ನೋಡೋಣ.
ಎನ್‌ಪಿಎಸ್‌ನಲ್ಲಿ ಎರಡು ವಿಧದ ಖಾತೆ ತೆರೆಯಲು ಅವಕಾಶ
1. ಟಯರ್ – 1 ಖಾತೆ:
ಈ ಖಾತೆಯಲ್ಲಿ ನಿವೃತ್ತಿಗಾಗಿ ಹಣ ಸಂಗ್ರಹಿಸಲಾಗುತ್ತದೆ. ಈ ಕಾರಣದಿಂದ ಇಲ್ಲಿನ ಹಣವನ್ನು ಸಾಮಾನ್ಯವಾಗಿ ನಿವೃತ್ತಿತನಕ ಮುಟ್ಟಲು ಆಗದು. ಆದರೆ ಕೆಲವೊಂದು ತುರ್ತು ಸಮಯದಲ್ಲಿ ಇಲ್ಲಿನ ಹಣವನ್ನು ಹೊರತೆಗೆಯಬಹುದು. ಕೆಲಸದ ಪೂರ್ಣ ವರ್ಷಗಳು ಇಲ್ಲಿ ಹಣವನ್ನು ಉಳಿಸುತ್ತ ಬಂದು ನಿವೃತ್ತಿಯ ಸಮಯದಲ್ಲಿ ಎಷ್ಟು ಹಣ ಸಂಗ್ರಹವಾಗಿರುತ್ತದೆಯೋ ಅದರಲ್ಲಿ 40 ಪ್ರತಿಶತ ಹಣವು ಅನ್ಯೂಟಿ ಆಗಿ ಬದಲಾಗುತ್ತದೆ. ಅದರಲ್ಲಿ ಬರುವ ಬಡ್ಡಿಯನ್ನು ಪೆನ್ಷನ್ ರೀತಿಯಲ್ಲಿ ನೀಡಲಾಗುತ್ತದೆ. ಉಳಿದ 60 ಪ್ರತಿಶತ ಹಣವನ್ನು ಖಾತೆದಾರರು ವಿತ್ ಡ್ರಾ ಮಾಡಿಕೊಂಡು ಬೇಕಾದ ಕಡೆಯಲ್ಲಿ ಹೂಡಿಕೆ ಮಾಡಬಹುದು ಅಥವಾ ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಈ 60 ಪ್ರತಿಶತ ಹಣದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ, 40 ಪ್ರತಿಶತ ಹಣ ಅನ್ಯೂಟಿಯಾಗಲಿದ್ದು ಇದನ್ನೇ ಪೆನ್ಷನ್ ರೂಪದಲ್ಲಿ ನೀಡಲಾಗುತ್ತದೆ.
2.ಟಯರ್ – 2 ಖಾತೆ:
ಇಲ್ಲಿ ಯಾವುದೇ ನಿಬಂಧನೆ ಇಲ್ಲ. ಯಾವಾಗ ಬೇಕಾದರೂ ಹಣವನ್ನು ಮರಳಿ ಪಡೆದುಕೊಳ್ಳಬಹುದು. ಆದರೆ ಈ ಖಾತೆಯನ್ನು ಟಯರ್-1 ಖಾತೆ ತೆರೆದ ನಂತರ ಮಾತ್ರ ತೆರೆಯಲು ಅವಕಾಶವಿದೆ. ಹೀಗಾಗಿ ಇಲ್ಲಿ ಸಂಗ್ರಹವಾದ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಪೂರ್ಣ ನಿರ್ಧಾರ ಖಾತೆದಾರನ ಕೈಯಲ್ಲಿರುತ್ತದೆ.
ಮೇಲೆ ಹೇಳಿದ ಎರಡೂ ಖಾತೆಗಳನ್ನು ಪೆನ್ಷನ್ ಫಂಡ್ ಮ್ಯಾನೇಜರ್ ಗಳ ಮೂಲಕ ತೆರೆಯಬಹುದು. ಇಂತಹ ಫಂಡ್ ಮ್ಯಾನೇಜರಗಳನ್ನು ಪೆನ್ಷನ್ ಫಂಡ್ ಇನ್ವೆಸ್ಟ್ಮೆಂಟ್ ಆಪ್ಸನ್, ಎರಡು ಆಟೋ ಇನ್ವೆಸ್ಟ್ ಮೆಂಟ್ ಆಪ್ಸನ್, ಷೇರು ಮಾರುಕಟ್ಟೆ ಹೇಗೆ ವರ್ತಿಸುತ್ತದೆ? ಅಸೆಟ್ ಕಾಸ್ ಎಂದರೇನು? ಹೂಡಿಕೆಯ ಅಪಾಯಗಳೇನು? ಹೀಗೆ ಹೂಡಿಕೆಯ ಬಗ್ಗೆ ತಿಳಿವಳಿಕೆ ಇದ್ದವರು ಆಕ್ಟಿವ್ ಇನ್ವೆಸ್ಟ್ಮೆಂಟ್ ಬಳಸಬಹುದು. ಅಂದರೆ ಎಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎನ್ನುವುದನ್ನು ನಿರ್ಧರಿಸಬಹುದು.
ಎರಡನೇ ಆಪ್ಸನ್ ಅನ್ನು ಮಾರುಕಟ್ಟೆ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲದವರು ಬಳಸಬಹುದು. ಇಲ್ಲಿ ಫಂಡ್ ಮ್ಯಾನೇಜರ್‌ಗಳು ಎಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳುತ್ತಾರೆ.
▪️ಏನಿದು ಯುಪಿಎಸ್?
▪️ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು (ಯುಪಿಎಸ್) 2025ರ ಏಪ್ರಿಲ್ ನಿಂದ ಜಾರಿಗೆ ತರಲಾಗಿದೆ. ಇದು ಕೇಂದ್ರ ಸರಕಾರದ ನೌಕರರಿಗೆ ಮಾತ್ರ ಅನ್ವಯ ರಾಜ್ಯ ಸರಕಾರಗಳು ಬೇಕಿದ್ದಲ್ಲಿ ಅದನ್ನು ಜಾರಿಗೆ ತರಬಹುದು. ಇಲ್ಲಿ ಕನಿಷ್ಠ 25 ವರ್ಷ ಕೆಲಸ ಮಾಡಿ ನಿವೃತ್ತಿ ಪಡೆದವರಿಗೆ, ಕೊನೆಯ 12 ತಿಂಗಳ ಬೇಸಿಕ್ ವೇತನದ ಸರಾಸರಿ 501 ಪ್ರತಿಶತವನ್ನು ನಿವೃತ್ತಿ ವೇತನ ಎಂದು ನೀಡಲಾಗುತ್ತದೆ. ನೆನಪಿರಲಿ ಇದು ಕನಿಷ್ಠ, ಇದು ಹೆಚ್ಚು ಕೂಡ ಆಗಬಹುದು. ಹೀಗೆ ಕನಿಷ್ಠ 10 ವರ್ಷ ಕೆಲಸ ಮಾಡಿದವರಿಗೆ ಕೂಡ ಕನಿಷ್ಠ 10,000 ರೂಪಾಯಿಯ ಮಾಸಿಕ ನಿವೃತ್ತಿ ವೇತನ ನೀಡಲಾಗುತ್ತದೆ. ಗಮನಿಸಿ NPS ನಲ್ಲಿ ಎಲ್ಲರೂ ಹೂಡಿಕೆ ಮಾಡಬಹುದಿತ್ತು. ಇಲ್ಲಿ ನಿವೃತ್ತಿ ವೇತನ ಇಷ್ಟು ಕನಿಷ್ಠ ಸಿಗುತ್ತದೆ ಎನ್ನುವ ಗ್ಯಾರಂಟಿ ಇರಲಿಲ್ಲ.
▪️ಯುಪಿಎಸ್ ಅನ್ನುವುದು ಕೇವಲ ಕೇಂದ್ರ ಸರಕಾರಿ ನೌಕರರಿಗೆ ಮತ್ತು ಇಲ್ಲಿ ಕನಿಷ್ಠ ನಿವೃತ್ತಿ ವೇತನದ ಗ್ಯಾರಂಟಿ ಇದೆ. ಈ ರೀತಿ ವೇತನ ಪಡೆದುಕೊಳ್ಳಲು ನೌಕರರು ಬೇಸಿಕ್ ಮತ್ತು ತುಟ್ಟಿಭತ್ಯೆಯ (ಡಿಎ) 10 ಪ್ರತಿಶತವನ್ನು ಈ ಸ್ಕೀಮ್ ನಲ್ಲಿ ಪ್ರತಿ ತಿಂಗಳೂ ಹಣ ತೊಡಗಿಸಬೇಕು. ಸರಕಾರ 18.5 ಪ್ರತಿಶತದಷ್ಟು ಹಣವನ್ನು ನೌಕರರ ಪರವಾಗಿ ಹೂಡಿಕೆ ಮಾಡುತ್ತದೆ. ಕೇವಲ ಕೇಂದ್ರ ಸರಕಾರಿ ನೌಕರರು ಮಾತ್ರ ಇಲ್ಲಿಗೆ ತಮ್ಮ ಖಾತೆಯನ್ನು NPS ನಿಂದ ವರ್ಗಾವಣೆ ಮಾಡಿಕೊಳ್ಳಬಹುದು. ಅದು ಕೂಡ ಕಡ್ಡಾಯವಲ್ಲ, ಬೇಕಿದ್ದಲ್ಲಿ ವರ್ಗಾವಣೆ ಮಾಡಿಕೊಳ್ಳಬಹುದು. ಇಲ್ಲವೇ NPS ನಲ್ಲಿ ಹೂಡಿಕೆ ಮುಂದುವರಿಸಬಹುದು. ಇದು ಬೇರೆ NPS ಹೂಡಿಕೆದಾರರಿಗೆ ಯಾವ ರೀತಿಯಲ್ಲೂ ಅನ್ವಯವಾಗುವುದಿಲ್ಲ, ಹೀಗಾಗಿ ಅವರು ಅಲ್ಲಿನ ಹೂಡಿಕೆಯನ್ನು ಮುಂದುವರಿಸಬಹುದು. ವರ್ಗಾವಣೆ ಮಾಡಿಕೊಳ್ಳಲು ಬಯಸುವವರು ಮೊದಲು ಇದರ ಬಗ್ಗೆ 2025ರ ಏಪ್ರಿಲ್ 1ರೊಳಗೆ ನಿಖರ ನಿರ್ಧಾರ ಮಾಡಬೇಕು. ಏಕೆಂದರೆ ಒಮ್ಮೆ ಈ ಸ್ಕೀಮ್ ಆಯ್ದು ಕೊಂಡ ನಂತರ ಮರಳಿ NPS ಸ್ಕೀಮ್ ಗೆ ಹೋಗಲು ಸಾಧ್ಯವಿಲ್ಲ.
ಯಾರಿಗೆ ಯಾವುದು ಸೂಕ್ತ?
ಮಾರುಕಟ್ಟೆಯ ರಿಸ್ಕ್ ಎದುರಿಸಿ ಹೆಚ್ಚಿನ ಆದಾಯ ಪಡೆಯಲು ಬಯಸುವವರು NPS ನಲ್ಲಿ ಮುಂದುವರಿಯಬಹುದು.
▪️ಗ್ಯಾರಂಟಿ ಮೊತ್ತವನ್ನು ಬಯಸುವವರು ಯುಪಿಎಸ್ ಸ್ಕೀಮ್ ಆಯ್ದು ಕೊಳ್ಳಬಹುದು. ಸರಳವಾಗಿ ಹೇಳಬೇಕೆಂದರೆ ಇದು ಸರಕಾರಿ ನೌಕರರಿಗೆ ವರದಾನ. ಹೀಗಾಗಿ ಸರಕಾರಿ ನೌಕರರು ಇಲ್ಲಿಗೆ ಸ್ವಿಚ್ ಮಾಡಿಕೊಳ್ಳಬಹುದು. ಇಲ್ಲಿ ಇಂತಿಷ್ಟು ಹಣ ಕನಿಷ್ಠ ಸಿಗುತ್ತದೆ ಎನ್ನುವ ನಿಖರತೆ ಇರುವ ಕಾರಣ ಮತ್ತು ಜಗತ್ತು ವೇಗವಾಗಿ ಬದಲಾಗುತ್ತಿರುವ ಕಾರಣ ಬಡ್ಡಿದರಗಳು ಕಡಿಮೆಯಾಗುವ ಸಾಧ್ಯತೆಗಳು ಕೂಡ ಇರುವ ಕಾರಣಕ್ಕೆ ಸರಕಾರಿ ನೌಕರರು ಇಲ್ಲಿಗೆ ವರ್ಗಾವಣೆ ಮಾಡಿಕೊಳ್ಳುವುದು ಉತ್ತಮ. ಇದಕ್ಕೂ ಮೊದಲು ಸೂಚಿಸಿದ ಸಂಖ್ಯೆ ಕನಿಷ್ಠ, ಅದು ಹೆಚ್ಚಾಗುವ ಸಾಧ್ಯತೆ ಇದ್ದೇ ಇರುತ್ತದೆ. ಹೀಗಾಗಿ ಇದು ಮುಕ್ಕಾಲು ಪಾಲು ಕೇಂದ್ರ ಸರಕಾರದ ನೌಕರರಿಗೆ ಲಾಭದಾಯಕವಾಗುತ್ತದೆ.
▪️ ಕೇಂದ್ರ ಸರಕಾರದ ನೌಕರರು ಅಲ್ಲದವರಿಗೆ UPS ಲಾಗೂ ಆಗುವುದಿಲ್ಲ. ಹೀಗಾಗಿ ಇದರ ಬಗ್ಗೆ ಹೆಚ್ಚು ಚಿಂತಿಸದೆ NPS ನಲ್ಲಿ ಹೂಡಿಕೆ ಮುಂದುವರಿಸುವುದು ಉತ್ತಮ.

ಇದನ್ನೂ ನೋಡಿ….ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಸಂಪೂರ್ಣ ಮಾಹಿತಿ