ODU KARNATAKA: ಓದು ಕರ್ನಾಟಕ ಕಾರ್ಯಕ್ರಮವನ್ನು ಎಲ್ಲಾ ಸರಕಾರಿ ಶಾಲೆಗಳಲ್ಲಿ 4 ಮತ್ತು 5 ನೇ ತರಗತಿಯ ವಿದ್ಯಾರ್ಥಿಗಳಿಗೆ 2024-25 ನೇ ಸಾಲಿನಲ್ಲಿ ಅನುಷ್ಠಾನಗೊಳಿಸುವ ಕುರಿತು.

ODU KARNATAKA:’ಓದು ಕರ್ನಾಟಕ’ ಕಾರ್ಯಕ್ರಮವನ್ನು ಎಲ್ಲಾ ಸರಕಾರಿ ಶಾಲೆಗಳಲ್ಲಿ 4 ಮತ್ತು 5 ನೇ ತರಗತಿಯ ವಿದ್ಯಾರ್ಥಿಗಳಿಗೆ 2024-25 ನೇ ಸಾಲಿನಲ್ಲಿ ಅನುಷ್ಠಾನಗೊಳಿಸುವ ಕುರಿತು

ODU KARNATAKA:2024-25 ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಹಾಗೂ ಪ್ರಥಮ್ ಶಿಕ್ಷಣ ಪ್ರತಿಷ್ಠಾನ, ಇವರ ಸಹಭಾಗಿತ್ವದಲ್ಲಿ 4 ಮತ್ತು 5 ನೇ ತರಗತಿಯ ವಿದ್ಯಾರ್ಥಿಗಳಿಗೆ ‘ಓದು ಕರ್ನಾಟಕ’ ಕಾರ್ಯಕ್ರಮವನ್ನು ಎಲ್ಲಾ ಸರಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶಗಳು ಈ ಕೆಳಗಿನಂತಿವೆ.

1.4 ಮತ್ತು 5 ನೇ ತರಗತಿಯ ಮಕ್ಕಳಲ್ಲಿ ಬುನಾದಿ ಭಾಷಾ ಮತ್ತು ಗಣಿತ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು

2.ಸರ್ಕಾರಿ ಶಾಲಾ ಮೇಲ್ವಿಚಾರಣಾ ಪದ್ಧತಿಯಲ್ಲಿ ವ್ಯವಸ್ಥಿತ ಸುಧಾರಣೆ ತರುವುದು

3.ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ತರಗತಿಯ ಬೋಧನಾ ಕ್ರಮವನ್ನು ಉತ್ತಮಗೊಳಿಸುವಲ್ಲಿ ಶಿಕ್ಷಕರ ಸಾಮರ್ಥ್ಯವನ್ನು ಹೆಚ್ಚಿಸುವುದು.

ಓದು ಕರ್ನಾಟಕ’ ಕಾರ್ಯಕ್ರಮವು “ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಬೋಧನೆ – Teaching at the Right Level (TARL)” ಎಂಬ ಬೋಧನಾ ವಿಧಾನವನ್ನು ಒಳಗೊಂಡಿದ್ದು, ಇದರ ಅನ್ವಯ ಮೊದಲು ಮಕ್ಕಳ ಕಲಿಕಾ ಮಟ್ಟಗಳನ್ನು ಸರಳ ಮೌಲ್ಯಮಾಪನದ ಮೂಲಕ ಗುರುತಿಸಿಕೊಂಡು ನಂತರ ಕಲಿಕಾ ಮಟ್ಟಗಳಿಗೆ ಅನುಗುಣವಾಗಿ ಮಕ್ಕಳ ಗುಂಪುಗಳನ್ನು ಮಾಡಿ, ಪ್ರತಿ ಗುಂಪಿಗೂ ಸೂಕ್ತವಾದ ಕಲಿಕಾಸಾಮಗ್ರಿಗಳನ್ನು ನೀಡಿ ನಂತರ ಚಟುವಟಿಕೆ ಆಧಾರಿತವಾಗಿ ಕಲಿಸುವ ಒಂದು ಅತ್ಯಂತ ಪರಿಣಾಮಕಾರಿ ಕಲಿಕಾ ಕ್ರಮವಾಗಿದೆ. ವಿವಿಧ ಹಂತದಲ್ಲಿನ ಮೌಲ್ಯಮಾಪನದ ದತ್ತಾಂಶವನ್ನು ಶಾಲಾ ಹಂತದಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್‌ ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಮೌಲ್ಯಮಾಪನ ದತ್ತಾಂಶದ ವಿಶ್ಲೇಷಣೆಯನ್ನು ವಿವಿಧ ಹಂತಗಳಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಗಳಲ್ಲಿ ಹಂಚಿಕೊಳ್ಳಲಾಗುತ್ತದೆ.

60 ದಿನಗಳ ಕಾರ್ಯಕ್ರಮ:

‘ಓದು ಕರ್ನಾಟಕ’ ಕಾರ್ಯಕ್ರಮವು 60 ದಿನಗಳ ಕಾರ್ಯಕ್ರಮವಾಗಿದ್ದು, ಒಮ್ಮೆ ತರಬೇತಿ ಪಡೆದ ಶಿಕ್ಷಕರು ತರಗತಿಯ ಮಕ್ಕಳೊಂದಿಗೆ ಭಾಷೆ ಮತ್ತು ಗಣಿತದ ಚಟುವಟಿಕೆಗಳನ್ನು ಪ್ರತಿದಿನ 120 ನಿಮಿಷಗಳ ಕಾಲ (ಭಾಷೆಗೆ 1 ಗಂಟೆ ಮತ್ತು ಗಣಿತಕ್ಕೆ 1 ಗಂಟೆ) ನಡೆಸುತ್ತಾರೆ. ಈ ಕಾರ್ಯಕ್ರಮವು ಕಡಿಮೆ ಅವಧಿಯಲ್ಲಿ ಮಕ್ಕಳ ಬುನಾದಿ ಭಾಷಾ ಮತ್ತುವಿಷಯಗಳ ಕಲಿಕಾ ಗಣಿತ ಮಟ್ಟವನ್ನು ಹೆಚ್ಚಿಸುವಲ್ಲಿ ಗಮನಾರ್ಹ ಫಲಿತಾಂಶಗಳನ್ನು ನೀಡಿದೆ.

Teaching at Right Level (TaRL) ವಿಧಾನದ ಮೇಲೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳ (CRPs) ಕೇಡರ್ ಅನ್ನು ಸಿದ್ಧಪಡಿಸುವ ಮೂಲಕ ಫೆಬ್ರವರಿ 2025 ರಲ್ಲಿ ‘ಓದು ಕರ್ನಾಟಕ’ ಕಾರ್ಯಕ್ರಮವನ್ನು ಪ್ರಾರಂಭಿಸಲು ಯೋಜಿಸಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಸಿಆರ್‌ಪಿಗಳಿಗೆ ತರಬೇತಿ ನೀಡಿದ ನಂತರ 4 ಮತ್ತು 5 ನೇ ತರಗತಿಯ ಮಕ್ಕಳಿಗೆ ಬುನಾದಿ ಸಾಕ್ಷರತೆ ಮತ್ತು ಗಣಿತಶಾಸ್ತ್ರದಲ್ಲಿ ಕೌಶಲ್ಯಗಳನ್ನು ಸುಧಾರಿಸಲು ವಿವಿಧ ಚಟುವಟಿಕೆಗಳನ್ನು ನಡೆಸುವ ಅನುಭವವನ್ನು ಪಡೆಯಲು ಫೆಬ್ರವರಿ 2025 ರಿಂದ 3 ವಾರಗಳವರೆಗೆ (21 ದಿನಗಳು) ತಮ್ಮ ಕ್ಲಸ್ಟರ್ ವ್ಯಾಪ್ತಿಯ ಶಾಲೆಯೊಂದರಲ್ಲಿ ಅಭ್ಯಾಸ ತರಗತಿಗಳನ್ನು (Practice Class) ಗಳನ್ನು ನಡೆಸಬೇಕಾಗುತ್ತದೆ. ಈ ತರಗತಿಗಳನ್ನು ಇಲಾಖೆಯ ಅನುಷ್ಠಾನ ಅಧಿಕಾರಿಗಳು ಮತ್ತು ಪ್ರಥಮ್ ಜಿಲ್ಲಾ ತಂಡಗಳು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಶೀಲನಾ ಸಭೆಗಳಲ್ಲಿ ಅವಲೋಕನಗಳನ್ನು ಹಂಚಿಕೊಳ್ಳಲಾಗುತ್ತದೆ.

ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಹಂತದ ಆಡಳಿತ ಮತ್ತು ಅಭಿವೃದ್ಧಿ ಉಪನಿರ್ದೇಶಕರುಗಳಿಗೆ ಸೂಚಿಸಲಾಗಿದೆ –

ಜಿಲ್ಲಾ (ಡಯಟ್) ಮತ್ತು ಪ್ರತಿ ಬ್ಲಾಕ್ ಹಂತದಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ಈ ಕಾರ್ಯಕ್ರಮಕ್ಕೆ ನೇಮಿಸುವುದು, ತರಬೇತಿಗಳನ್ನು ನಿಗದಿಪಡಿಸಿದಂತೆ ಆಯೋಜಿಸುವುದು, ಕಾರ್ಯಕ್ರಮದ ಪ್ರಗತಿಯ ಪರಿಶೀಲನೆಯನ್ನು ನಡೆಸುವುದು, ಮೇಲ್ವಿಚಾರಣೆ ಮಾಡುವಲ್ಲಿ ಕಾರ್ಯಕ್ರಮಕ್ಕೆ ಒಳಪಡುವ ಎಲ್ಲಾ ಅಧಿಕಾರಿಗಳ ಸಭೆ ನಡೆಸಿ ಅನುಪಾಲನೆ ಮಾಡುವುದು ಮತ್ತು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸೂಚಿಸಲಾಗುವ ಇತರೆ ಜವಾಬ್ದಾರಿಗಳನ್ನು ನಿರ್ವಹಿಸುವುದು ಇವರ ಜವಾಬ್ದಾರಿಯಾಗಿರುತ್ತದೆ.

CRP ಗಳಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ – ಮೊದಲನೇ ಹಂತದಲ್ಲಿ ಎಲ್ಲಾ Cluster Resource Persons (CRPs) ಗಳಿಗೆ ಜಿಲ್ಲಾ ಮಟ್ಟದಲ್ಲಿ (ಒಂದು / ಎರಡು ಬ್ಯಾಚ್ಯಳಲ್ಲಿ) ಒಂದು ದಿನದ ‘ಓದು ಕರ್ನಾಟಕ’ ಕಾರ್ಯಕ್ರಮದ ಪ್ರಕ್ರಿಯೆ ಕುರಿತು ಪ್ರಥಮ್ ತಂಡದಿಂದ ತರಬೇತಿ ನೀಡಲಾಗುತ್ತದೆ.

ಮುಂದಿನ ಹಂತದಲ್ಲಿನ ತರಬೇತಿಗಳನ್ನು (Master Resource Persons ಗಳಿಗೆ ಮತ್ತು ಶಿಕ್ಷಕರಿಗೆ) 2025-26ನೇ ಸಾಲಿನ ಪ್ರಾರಂಭದಲ್ಲಿ ಮಾಡಲಾಗುವುದು. ಇದಕ್ಕೆ ಸಂಬಂಧಪಟ್ಟ ಸೂಚನೆಗಳು ಮುಂದಿನ ದಿನಗಳಲ್ಲಿ ನೀಡಲಾಗುವುದು.

ಯೋಜಿತ ಚಟುವಟಿಕೆಗಳ ಅವಲೋಕನ

ಶಾಲೆಗಳಲ್ಲಿ ಅನುಷ್ಠಾನ / ತರಬೇತಿಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು:

▪️CRP ಗಳಿಗೆ ಬೇಕಾದ ಕಾರ್ಯಕ್ರಮದ ಮಾರ್ಗದರ್ಶಿ/ಸೂಚನಾ ಕೈಪಿಡಿ ಮತ್ತು ಮೌಲ್ಯಮಾಪನದ ಟೂಲ್/ಫಾರ್ಮ್ಯಾಟ್ ಗಳನ್ನು ತರಬೇತಿಯ ವೇಳೆಯಲ್ಲಿ ಕೊಡಲು ಕ್ರಮವಹಿಸುವುದು.

▪️ಅಭ್ಯಾಸ ತರಗತಿಗಳನ್ನು ಶಾಲೆಯ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಎರಡು ಅವಧಿಯನ್ನು ಭಾಷೆ ಹಾಗೂ ಗಣಿತಕ್ಕೆ ನಿಗದಿಪಡಿಸುವುದು.

▪️ಓದು ಕರ್ನಾಟಕ ಕಾರ್ಯಕ್ರಮದ ಬ್ಲಾಕ್ ಹಂತದ CRP/BRP ಗಳ ವಾಟ್ಸ್ ಅಪ್ ಗುಂಪನ್ನು ರಚಿಸಿ ಅದರಲ್ಲಿ ಬರುವ ದಿನದ ಚಟುವಟಿಕೆಗಳನ್ನು ಅನುಸರಿಸಬೇಕಾಗುತ್ತದೆ. ಇದರ ಜೊತೆಗೆ ಆಯಾ ತರಗತಿಯಲ್ಲಿ ನಡೆಯುವ ಫೋಟೋಸ್ ಗಳನ್ನು ಹಂಚಿಕೊಳ್ಳಲು ತಿಳಿಸಲಾಗುತ್ತದೆ.

▪️ಪ್ರಥಮ್ ಸಹಭಾಗಿತ್ವದ ಕಾರ್ಯಕ್ರಮವಾಗಿದ್ದು ಪ್ರಥಮ್ ಸಂಸ್ಥೆಯ ಕೋಆರ್ಡಿನೇಟರ್ಗಳು ಮಾರ್ಗದರ್ಶನಕ್ಕಾಗಿ/ಮಾಹಿತಿಗಾಗಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಕರಿಸಿ ಮಾಹಿತಿಯನ್ನು ನೀಡುವುದು ಮತ್ತು ಅನುಷ್ಠಾನಕ್ಕೆ ಪೂರಕವಾದ ಸಲಹೆಗಳನ್ನು ಅಳವಡಿಸಿಕೊಳ್ಳುವುದು.

▪️ಉರ್ದು ತರಬೇತಿಯನ್ನು ಎರಡು ದಿನಗಳ ಕಾಲ ಕಲಬುರಗಿಯಲ್ಲಿ ಆಯೋಜಿಸಲು ಯೋಜಿಸಲಾಗಿದ್ದು MRP ಗಳಿಗೆ ಪ್ರಥಮ್ ಹೈದರಾಬಾದ್ ತಂಡದಿಂದ ನೇರವಾಗಿ ತರಬೇತಿ ನೀಡಲಾಗುತ್ತದೆ.

ಒಟ್ಟಾರೆ ‘ಓದು ಕರ್ನಾಟಕ’ ಕಾರ್ಯಕ್ರಮವು ಮಕ್ಕಳ ಬುನಾದಿ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸುವ ಉದ್ದೇಶ ಹೊಂದಿದ್ದು ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ಶಿಕ್ಷಕರು, ಶಾಲಾ ಮುಖ್ಯಸ್ಥರು ಹಾಗೂ ಕ್ಲಸ್ಟರ್ / ಬ್ಲಾಕ್ / ಜಿಲ್ಲಾ ಮಟ್ಟದ ಅಧಿಕಾರಿಗಳು ಜವಾಬ್ದಾರಿಯುತ ಪಾತ್ರ ಹೊಂದಿರುತ್ತಾರೆ. ಮೇಲ್ಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬದ್ಧತೆಯಿಂದ ಕಾರ್ಯನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಈ ಮೂಲಕ ತಿಳಿಸಲಾಗಿದೆ. ಹಾಗೂ ತರಬೇತಿಯ ವೇಳಾಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ.

 

CLICK HERE TO DOWNLOAD

ಇದನ್ನೂ ನೋಡಿ……SSLC ಪರೀಕ್ಷಾ ಮಾರ್ಗದರ್ಶಿ 2024-25

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!