Official Circular: 2025-26ನೇ ಸಾಲಿನ ಪ್ರಥಮ ಮತ್ತು ದ್ವಿತೀಯ D.EL.Ed, D.P.Ed & D.P.S.E ಶೈಕ್ಷಣಿಕ ವೇಳಾಪಟ್ಟಿ ಪ್ರಕಟ.
Official Circular: 2025-26ನೇ ಸಾಲಿನ ಪ್ರಥಮ ಮತ್ತು ದ್ವಿತೀಯ D.EL.Ed, D.P.Ed & D.P.S.E ಶೈಕ್ಷಣಿಕ ವೇಳಾಪಟ್ಟಿ ಪ್ರಕಟ.
ಮೇಲ್ಕಂಡ ವಿಷಯ & ಉಲ್ಲೇಖಗಳಿಗೆ ಸಂಬಂಧ ಪಟ್ಟಂತೆ 2025-26 ನೇ ಸಾಲಿನ D.El.Ed, D.P.Ed & D.P.S.E ಕೋರ್ಸ್ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಕ್ರಮ ವಹಿಸಲು ಪ್ರಾಂಶುಪಾಲರು ಡಯಟ್ ರವರಿಗೆ ತಿಳಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಎಲ್ಲಾ ಶಿಕ್ಷಕ ತರಬೇತಿ ಸಂಸ್ಥೆಗಳ (D.EL.Ed, D.P.Ed & D.P.S.E ಕಾಲೇಜುಗಳು) ಕುರಿತಂತೆ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಡಯಟ್ ಪ್ರಾಂಶುಪಾಲರುಗಳು ಸಕ್ಷಮ ಪ್ರಾಧಿಕಾರಿಗಳಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಶಿಕ್ಷಕ ತರಬೇತಿ ಸಂಸ್ಥೆಗಳ ಕುರಿತಂತೆ ಎಲ್ಲಾ ರೀತಿಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಡಯಟ್ ಪ್ರಾಂಶುಪಾಲರೇ ಕೈಗೊಳ್ಳತಕ್ಕದ್ದು ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದೆ. ಡಯಟ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿ ನಡೆಸಲಾಗಿರುವ D.EL.Ed, D.P.Ed & D.P.S.E ಕೋರ್ಸ್ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಕೆಳಕಂಡ ಸೂಚನೆಗಳನ್ನು ಪಾಲಿಸುವುದು.
2025-26ನೇ ಸಾಲಿನ ಪ್ರಥಮ ಮತ್ತು ದ್ವಿತೀಯ D.EL.Ed, D.P.Ed & D.P.S.E ಶೈಕ್ಷಣಿಕ ವೇಳಾಪಟ್ಟಿ ಪ್ರಕಟ.

ಮೇಲ್ಕಂಡ ವಿಷಯ & ಉಲ್ಲೇಖಗಳಿಗೆ ಸಂಬಂಧ ಪಟ್ಟಂತೆ 2025-26 ನೇ ಸಾಲಿನ D.El.Ed, D.P.Ed & D.P.S.E ಕೋರ್ಸ್ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಕ್ರಮ ವಹಿಸಲು ಪ್ರಾಂಶುಪಾಲರು ಡಯಟ್ ರವರಿಗೆ ತಿಳಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಎಲ್ಲಾ ಶಿಕ್ಷಕ ತರಬೇತಿ ಸಂಸ್ಥೆಗಳ (D.EL.Ed, D.P.Ed & D.P.S.E ಕಾಲೇಜುಗಳು) ಕುರಿತಂತೆ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಡಯಟ್ ಪ್ರಾಂಶುಪಾಲರುಗಳು ಸಕ್ಷಮ ಪ್ರಾಧಿಕಾರಿಗಳಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಶಿಕ್ಷಕ ತರಬೇತಿ ಸಂಸ್ಥೆಗಳ ಕುರಿತಂತೆ ಎಲ್ಲಾ ರೀತಿಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಡಯಟ್ ಪ್ರಾಂಶುಪಾಲರೇ ಕೈಗೊಳ್ಳತಕ್ಕದ್ದು ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದೆ. ಡಯಟ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿ ನಡೆಸಲಾಗಿರುವ D.EL.Ed, D.P.Ed & D.P.S.E ಕೋರ್ಸ್ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಕೆಳಕಂಡ ಸೂಚನೆಗಳನ್ನು ಪಾಲಿಸುವುದು.
2025-26ನೇ ಸಾಲಿನ ಪ್ರಥಮ ಮತ್ತು ದ್ವಿತೀಯ D.EL.Ed, D.P.Ed & D.P.S.E ಶೈಕ್ಷಣಿಕ ವೇಳಾಪಟ್ಟಿ ಪ್ರಕಟ.
ವಿಶೇಷ ಸೂಚನೆ:
ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2025-26ನೇ ಶೈಕ್ಷಣಿಕ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
ಸದರಿ ವೇಳಾಪಟ್ಟಿಯು 2025-26ಸಾಲಿಗೆ ಚಾಲ್ತಿಗೆ ಬರಲಿದ್ದು ಇಲಾಖಾ ಸೂಚನೆಗಳಂತೆ ಬದಲಾವಣೆಗೆ ಒಳಪಟ್ಟಿದೆ.
ಸದರಿ ವೇಳಾಪಟ್ಟಿಯಲ್ಲಿ ಸರ್ಕಾರಿ ರಜಾದಿನಗಳನ್ನು ಭಾನುವಾರಗಳನ್ನು ಮತ್ತು ಸಂಸ್ಥೆಯಲ್ಲಿ ಆಚರಿಸುವ ಸರ್ಕಾರಿ ಕಾರ್ಯಕ್ರಮಗಳನ್ನು ಹೊರತುಪಡಿಸಲಾಗಿದೆ.
ಕಡ್ಡಾಯವಾಗಿ 230 ಶೈಕ್ಷಣಿಕ ಕಾರ್ಯದಿನಗಳಿರಬೇಕು. ಉಳಿದ 10 ದಿನಗಳನ್ನು ಸಮನ್ವಯ ಸಮಿತಿಯ ಭೇಟಿ, ಕಿರುಪರೀಕ್ಷೆಗಳು ಮತ್ತು ಸ್ಥಳೀಯ ರಜೆಗಳು, ಇತ್ಯಾದಿ ಒಳಗೊಂಡಿರುವುದು.
1. ಆಡಳಿತಾತ್ಮಕ ಹಾಗೂ ದಾಖಲಾತಿ ನಿಯಮಗಳನ್ನು ಕುರಿತಂತೆ ಸೂಚನೆಗಳು:
1) ಪ್ರತಿ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ NCTE ಮಾನ್ಯತೆ ಪಡೆದಿರುವ/ಮಾನ್ಯತೆ ಹಿಂಪಡೆದಿರುವ ಮತ್ತು ವಿದ್ಯಾರ್ಥಿಗಳ ದಾಖಲಾತಿ ಇಲ್ಲದೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕ ತರಬೇತಿ ಸಂಸ್ಥೆಗಳ ವಿವರಗಳು, ವಿದ್ಯಾರ್ಥಿಗಳ ವಿವರಗಳು, ಮಾಧ್ಯಮ, NCTE ಯಿಂದ ನಿಗದಿಪಡಿಸಿರುವ ದಾಖಲಾತಿ ಮಿತಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ವಿವರಗಳನ್ನು ಕಾಲಕಾಲಕ್ಕೆ DSERT ಕಛೇರಿಗೆ ಸಲ್ಲಿಸುವುದು.
2) NCTE ಪ್ರಾಧಿಕಾರವು ರಾಜ್ಯದ ಎಲ್ಲಾ ಶಿಕ್ಷಕ ತರಬೇತಿ ಸಂಸ್ಥೆಗಳ ಮಾನ್ಯತೆ ನೀಡುವ ಪ್ರಾಧಿಕಾರವಾಗಿದ್ದು, ಪ್ರಾಂಶುಪಾಲರು ಡಯಟ್ ರವರು ತಮ್ಮ ವ್ಯಾಪ್ತಿಯ ಎಲ್ಲಾ D.El.Ed, D.P.Ed & D.P.S.E ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷಕ್ಕೆ ಕಡ್ಡಾಯವಾಗಿ NCTE ಯಿಂದ ಮಾನ್ಯತೆ ಪಡೆದಿರುವ ಆದೇಶವನ್ನು ಪಡೆದ ನಂತರವೇ ಆಯಾ ವರ್ಷದ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿ ನೀಡುವುದು ಹಾಗೂ NCTE ಪ್ರಾಧಿಕಾರವು ಮಾನ್ಯತೆ ನೀಡುವಾಗ ವಿಧಿಸಿರುವ ಎಲ್ಲಾ ಷರತ್ತುಗಳನ್ನು ಸಂಸ್ಥೆಯವರು ಪಾಲನೆ ಮಾಡಿರುವುದನ್ನು ಡಯಟ್ ಪ್ರಾಂಶುಪಾಲರು ಖಾತ್ರಿಪಡಿಸಿಕೊಳ್ಳುವುದು ಮಾಡುವುದು. ಹಾಗೂ ಉಸ್ತುವಾರಿ
3) D.El.Ed, D.P.Ed & D.P.S.E ಸಂಸ್ಥೆಗಳಿಗೆ NCTE ನಿಗದಿಪಡಿಸಿರುವ ದಾಖಲಾತಿ ಮಿತಿಗಿಂತ ಹೆಚ್ಚಿನ ದಾಖಲಾತಿ ಮಾಡಿಕೊಳ್ಳಬಾರದು. ಈ ಬಗ್ಗೆ ಪ್ರಾಂಶುಪಾಲರು ಖಾತ್ರಿ ಪಡಿಸಿಕೊಳ್ಳುವುದು.
4) ನಿಗದಿಗೊಳಿಸಲಾಗಿರುವ ದಾಖಲಾತಿ ಮಿತಿಯಲ್ಲಿ ಸರ್ಕಾರಿ ಕೋಟಾದ ಮಿತಿ ಮತ್ತು ಆಡಳಿತ ಮಂಡಳಿ ಮಿತಿಯನ್ನು ಗಮನಿಸಲು ಸೂಚಿಸಿದೆ. ಆಯಾ ಶೈಕ್ಷಣಿಕ ಸಾಲಿಗೆ ನಿಗದಿಯಾಗಿರುವ ಕೋಟಾದ ಮಿತಿಯೊಳಗೆ ದಾಖಲಾತಿ ಮಾಡಿಕೊಳ್ಳತಕ್ಕದ್ದು. ಅಲ್ಪಸಂಖ್ಯಾತ ಸಂಸ್ಥೆಗಳಾಗಿದ್ದಲ್ಲಿ ಚಾಲ್ತಿಯಲ್ಲಿರುವ ನಿಯಮಗಳನ್ನು ಪಾಲಿಸುವುದು.
ವಿವಿಧ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿನ ದಾಖಲಾತಿ ಅನುಪಾತದ ವಿವರಗಳು ಈ ಕೆಳಗಿನಂತಿರುತ್ತದೆ.

5) ಆಡಳಿತ ಮಂಡಳಿ ಕೂಟಾದಡಿಯಯಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಮಾಡಿಕೊಳ್ಳುವಾಗ ಜಾರಿಯಲ್ಲಿರುವ ದಾಖಲಾತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು.
6) ದಾಖಲಾತಿ ನಿಯಮಗಳ ಬಗ್ಗೆ, ಕಾಲಕಾಲಕ್ಕೆ ಹೊರಡಿಸಲಾಗಿರುವ ಸರ್ಕಾರಿ ಆದೇಶ ಮತ್ತು ಇಲಾಖಾ ಆದೇಶಗಳನ್ನು ಪಾಲಿಸುವುದು ದಾಖಲಾತಿ ಅನುಮೋದನೆಗೆ ವಿದ್ಯಾರ್ಥಿಗಳ ಪಟ್ಟಿಯನ್ನು ಸಂಬಂಧಿಸಿದ ಡಯಟ್ ಪ್ರಾಂತುನಾಲರಿಗೆ ಸಲ್ಲಿಸುವ ಸಂದರ್ಭದಲ್ಲಿ ಸಂಸ್ಥೆಯವರು ದಾಖಲಾತಿಯ ಎಲ್ಲಾ ವಿಯಮಗಳನ್ನು ಪಾಲಿಸಿರುವ ಬಗ್ಗೆ ದೃಢೀಕರಿಸಿಕೊಂಡು ಸಲ್ಲಿಸುವುದು.
7) ಮೀಸಲಾತಿ ಸೌಲಭ್ಯ ಪಡೆಯುವ ಆಯಾ ಸಂಸ್ಥೆಗಳ ಆಡಳಿತ ಮಂಡಳಿ ಅಭ್ಯರ್ಥಿಗಳ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಜಾತಿ ಪ್ರಮಾಣ ಪತ್ರ/ಆದಾಯ ಪ್ರಮಾಣ ವತ್ರಗಳ ದೃಢೀಕೃತ ಪ್ರತಿಗಳನ್ನು ಅಭ್ಯರ್ಥಿಯಿಂದ ನಡೆದು ಸಲ್ಲಿಸುವುದು.
8) ಅಂಗವಿಕಲತೆ ಬಗ್ಗೆ, ಅಭ್ಯರ್ಥಿಗಳು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಬೇಕಾಗುತ್ತದೆ ಇದನ್ನು ಪರಿಶೀಲಿಸಿದ ನಂತರವೇ ಅಂಗವಿಕಲತೆ ಮೀಸಲಾತಿಯನ್ನು ವರಿಗಣಿಸುವುದು.
9 DEE DPEd & DP.S.E ಪ್ರವೇಶ ನಿಯಮಾವಳಿಗಳಂತೆ ಕರ್ನಾಟಕದ ಅಭ್ಯರ್ಥಿಗಳು ನಿಯಮಾನುಸಾರ ವ್ಯಾಸಂಗ ಪ್ರಮಾಣ ಪತ್ರ ದಾಖಲೆಗಳನ್ನು ಒದಗಿಸಬೇಕು. ಕರ್ನಾಟಕೇಶರ ಅಭ್ಯರ್ಥಿಗಳು ಸೂಕ್ತ ಪ್ರಾಧಿಕಾರದಿಂದ ಮೇಲು ಸಹಿ ಹೊಂದಿದ ದಾಖಲೆಯನ್ನು ಒದಗಿಸಬೇಕು.
10) ಪ್ರತಿ ದಾಖಲಾತಿಯಲ್ಲಿಯೂ ಯಾವ ಮಾಧ್ಯಮಕ್ಕೆ ದಾಖಲಾತಿಯನ್ನು ಕಲ್ಪಿಸಲಾಗಿದೆಯೋ,ಆ ಮಾಧ್ಯಮಕ್ಕೆ ಅಭ್ಯರ್ಥಿಯು ಅರ್ಹವೇ ಎಂಬುದನ್ನು ದೃಢೀಕರಿಸಿಕೊಳ್ಳತಕ್ಕದ್ದು, ಪ್ರಸ್ತುತ ಜಾರಿಯಲ್ಲಿರುವ ನಿಯಮದಂತೆ ಎಸ್.ಎಸ್.ಎಲ್.ಸಿ.ಯಲ್ಲಿ ಯಾವ ಮಾಧ್ಯಮದಲ್ಲಿ ಅಥವಾ ಪ್ರಥಮ/ದ್ವಿತೀಯ ಭಾಷೆಯನ್ನು ಆಯ್ದುಕೊಂಡು ವ್ಯಾಸಂಗ ಪೂರ್ಣಗೊಳಿಸಿರುತ್ತಾರೋ ಅದೇ ಮಾಧ್ಯಮದಲ್ಲಿ D.EL.Ed, D.P.Ed & DPSE ವ್ಯಾಸಂಗ ಮಾಡಲು ಅರ್ಹತೆ ಹೊಂದಿರುತ್ತಾರೆ. ಇದು ಬಹುಮುಖ್ಯವಾದ ಅಂಶವಾಗಿದ್ದು ಬಹುಪಾಲಿನ ನ್ಯಾಯಾಲಯ ಪ್ರಕರಣಗಳು ಈ ನಿಯಮಗಳ ಉಲ್ಲಂಘನೆಯಿಂದ ಉದ್ಭವಿಸುವುದರಿಂದ ಈ ಬಗ್ಗೆ ಎಚ್ಚರ ವಹಿಸುವುದು.
11) ಅಭ್ಯರ್ಥಿಯು ವ್ಯಾಸಂಗ ಮಾಡಿದ ಮಾಧ್ಯಮದ ಬಗ್ಗೆ, ಕರ್ನಾಟಕದ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ SSLC ತೇರ್ಗಡೆ ಪ್ರಮಾಣ ಪತ್ರದಲ್ಲಿ ನಮೂದಿಸಲಾಗಿರುತ್ತದೆ ಪ್ರಮಾಣ ವತ್ರದಲ್ಲಿ ಮಾಧ್ಯಮದ ಬಗ್ಗೆ, ಉಲ್ಲೇಖವಿರದಿದ್ದ ಪ್ರಕರಣಗಳಲ್ಲಿ ವ್ಯಾಸಂಗ ಮಾಡಿದ ಮಾಧ್ಯಮದ ಬಗ್ಗೆ, ಸೂಕ್ತ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆದಿರತಕ್ಕದ್ದು ಆ ಪ್ರಮಾಣ ಪತ್ರಗಳಿಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಮೇಲು ಸಹಿ ಅಥವಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಧ್ಯಮದ ವಿವರ ಇರುವ ವ್ಯಾಸಂಗ ಪ್ರಮಾಣ ಪತ್ರಕ್ಕೆ ಮೇಲು ಸಹಿಯಾಗಿರಬೇಕು.
12) ಸರ್ಕಾರ / NCTE ಯಿಂದ ಹೊರಡಿಸಿರುವ ನಿಯಮಗಳನ್ನು ಉಲ್ಲಂಘಿಸಿದ ಸಂಸ್ಥೆಗಳಿಗೆ ತಕ್ಷಣ ನೋಟೀಸ್ ಜಾರಿ ಮಾಡಿ ವಿವರಣೆ ಪಡೆದು ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿರುತ್ತದೆ. ಜಿಲ್ಲಾ ಡಯಟ್ ಪ್ರಾಂಶುಪಾಲರುಗಳು ಯಾವುದೇ ಕಾರಣಕ್ಕೆ ತಿರಸ್ಕೃತಗೊಳಿಸಿರುವ ದಾಖಲಾತಿಗಳ ಬಗ್ಗೆ, ಸಂಬಂಧಿತ ಅಭ್ಯರ್ಥಿಗಳಿಗೆ ತಕ್ಷಣ ಅದೇಶವನ್ನು ಜಾರಿ ಮಾಡುವುದು. ತಿರಸ್ಕೃತಗೊಂಡ ಅಭ್ಯರ್ಥಿಯನ್ನು ಬಿಡುಗಡೆಗೊಳಿಸಿ ಈ ಕಛೇರಿಗೆ ವರದಿ ಮಾಡುವುದು.
13) ಕೇಂದ್ರಿಕೃತ ದಾಖಲಾತಿ ಘಟಕದಿಂದ ಅರ್ಜಿ ಆವ್ಹಾನಿ ಸುವ ಮಾಹೆಯಲ್ಲಿ ಆಡಳಿತ ಮಂಡಳಿಗಳು ಮೇಲಿನ ಸೂಚನೆಗಳನ್ನು ಅಳವಡಿಸಿಕೊಂಡು ಸಿದ್ಧವಡಿಸಿದ್ದ ಅರ್ಜಿ ನಮೂನೆಯಲ್ಲಿ ಪ್ರವೇಶಾವಕಾಶದ ಅರ್ಜಿಯನ್ನು ಕರೆಯಬಹುದಾಗಿರುತ್ತದೆ. ಎರಡನೆಯ ಸುತ್ತಿನ ಕೇಂದ್ರಿಕೃತ ದಾಖಲಾತಿ ಘಟಕದ ದಾಖಲಾತಿಗಳು ಪೂರ್ಣಗೊಳ್ಳುವ ವೇಳೆಗೆ ಆಡಳಿತ ಮಂಡಳಿಗಳು, ತಮ್ಮ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅನುಮೋದನೆಗಾಗಿ ವಿದ್ಯಾರ್ಥಿಗಳ ಮೊದಲ ಪಟ್ಟಿಯನ್ನು ಡಯಟ್ ಪ್ರಾಂಶುಪಾಲರಿಗೆ ಸಲ್ಲಿಸಬೇಕು.
24) ಆಡಳಿತ ಮಂಡಳಿಗಳ ಉಳಿಕ ಸೀಟುಗಳಿದ್ದಲ್ಲಿ ನೀಡಲಾಗಿರುವ ಶೈಕ್ಷಣಿಕ ವೇಳಾಪಟ್ಟಿಯಂತೆ ಅನುಮೋದನೆಗೆ ಉಳಿಕೆ ಸೀಟುಗಳ ವಿವರಗಳನ್ನು ಸಲ್ಲಿಸಲು ಕ್ರಮ ಕೈಗೊಳ್ಳತಕ್ಕದ್ದು ಅಭ್ಯರ್ಥಿಗಳ ಪಟ್ಟಿಗಳೊಂದಿಗೆ ಅಗತ್ಯ ದಾಖಲೆಗಳನ್ನು ದ್ವಿಪ್ರತಿಯಲ್ಲಿ ತಯಾರಿಸಿ ಅನುಮೋದನಾ ಪ್ರಸ್ತಾವನೆಯೊಂದಿಗೆ ಡಯಟ್ ಪ್ರಾಂಶುಪಾಲರಿಗೆ ಸಲ್ಲಿಸುವುದು. ಡಯಟ್ ಪ್ರಾಂಶುವಾಲರಿಂದ ಅನುಮೋದಿತ ಪ್ರತಿಯನ್ನು ಕಾಯ್ದಿರಿಸುವುದು.
15) ಸಲ್ಲಿಕೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾವುದಾದರೂ ನಿಯಮಗಳ ಉಲ್ಲಂಘನೆ ಆಗಿದೆಯೇ ಎಂಬ ಬಗ್ಗೆ ಪೂರ್ವಭಾವಿ ಪರಿಶೀಲನೆ ನಡೆಸಿ, ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಡಯಟ್ಪ್ರಾಂಶುಪಾಲರು ಅಂತಹ ಅಭ್ಯರ್ಥಿಗಳ ದಾಖಲಾತಿಯನ್ನು ತಿರಸ್ಕರಿಸಿ ಆದೇಶ ನೀಡುವುದು. ಸದರಿ ತಿರಸ್ಕೃತ ವಿದ್ಯಾರ್ಥಿಯನ್ನು ಸಂಸ್ಥೆಯಿಂದ ಬಿಡುಗಡೆ ಮಾಡಿ ಈ ಕಛೇರಿಗೆ ವರದಿ ಮಾಡತಕ್ಕದ್ದು. ಸರ್ಕಾರಿ ಕೋಟಾದ ವಿದ್ಯಾರ್ಥಿಗಳ ಹಂಚಿಕೆಯ ಪ್ರಕ್ರಿಯೆಯು ಅಂತಿಮವಾಗಿ ಮುಗಿದ ನಂತರ ಕೇಂದ್ರೀಕೃತ ದಾಖಲಾತಿ ಘಟಕದಿಂದ ಅಧಿಕೃತವಾಗಿ ಸುತ್ತೋಲೆಯನ್ನು ಹೊರಡಿಸುವ ಮುಂಚೆ ಆಡಳಿತ ಮಂಡಳಿಯು ಖಾಲಿ ಉಳಿದ ಸರ್ಕಾರಿ ಕೋಟಾದ ಸೀಟುಗಳನ್ನು ಭರ್ತಿ ಮಾಡತಕ್ಕದ್ದಲ್ಲ.
16) ವಿದ್ಯಾರ್ಥಿಗಳ ದಾಖಲಾತಿ ಅನುಮೋದನ ಪ್ರಕ್ರಿಯೆಗೆ ನಿಗದಿಗೊಳಿಸಿದ ದಿನಾಂಕದ ನಂತರ ಸಲ್ಲಿಕೆಯಾಗುವ ಯಾವುದೇ ಪ್ರಸ್ತಾವನೆಗಳನ್ನು ಡಯಟ್ ಹಂತದಲ್ಲಿಯೇ ತಿರಸ್ಕರಿಸತಕ್ಕದ್ದು.
17) ಸಂಸ್ಥೆಗಳು ಅನಧಿಕೃತ ದಾಖಲಾತಿಗಳನ್ನು ಅಥವಾ ಹೆಚ್ಚುವರಿ ದಾಖಲಾತಿಗಳನ್ನು ಮಾಡಿಕೊಂಡಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ಮತ್ತು ಅನಧಿಕೃತವಾಗಿ D.EL.Ed, D.P.Ed & D.P.S.E ವಿಭಾಗ ತೆರೆದಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ಕರ್ನಾಟಕ ಮಾನ್ಯತೆ ಪಡೆಯದ ಮತ್ತು ಸಂಯೋಜಿತವಾಗಿಲ್ಲದ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ನಿಷೇಧ ಅಧಿನಿಯಮ 92 ರಡಿಯಲ್ಲಿ ಪ್ರಸ್ತಾಪಿತ ಕ್ರಮಗಳನ್ನು ಕೋರಿ ವಿಳಂಬವಿಲ್ಲದಂತೆ ಸೂಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಡಯಟ್ ಪ್ರಾಂಶುಪಾಲರು ಸಕ್ಷಮ ಪ್ರಾಧಿಕಾರಿಗಳಾಗಿದ್ದು ಅದರಂತೆ ಕ್ರಮ ಜರುಗಿಸುವುದು. ಡಯಟ್ ಪ್ರಾಂಶುಪಾಲರು ಈ ಬಗ್ಗೆ ವಿವರಗಳನ್ನು ಈ ಕಛೇರಿಗೆ ಒದಗಿಸಲು ಸೂಚಿಸಿದೆ.
18) ಸಂಸ್ಥೆಗಳು ಸರ್ಕಾರವು ನಿಗದಿಪಡಿಸಿರುವ ಶುಲ್ಕಗಳನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆಯತಕ್ಕದ್ದು. ಹೆಚ್ಚುವರಿ ಶುಲ್ಕ ವಸೂಲಾತಿ ನಿಯಮಬಾಹಿರವಾಗಿದ್ದು ಇಂತಹ ಸಂಸ್ಥೆಗಳ ಬಗ್ಗೆ ಡಯಟ್ ಪ್ರಾಂಶುಪಾಲರು ನಿಯಮಾನುಸಾರ ಸೂಕ್ತ ಕ್ರಮವನ್ನು ಕೈಗೊಳ್ಳಲು ತಿಳಿಸಿದೆ.
19) ಸಂಸ್ಥೆಯಲ್ಲಿ ವಸೂಲಾತಿಯಾಗುವ ಶುಲ್ಕಗಳ ಕುರಿತಂತೆ ಲೆಕ್ಕ ಪುಸ್ತಕ ನಿರ್ವಹಣೆ, ನಗದು ವಹಿ, ರಶೀದಿ ನಿರ್ವಹಣೆ, ದಾಖಲಾತಿ ನಿರ್ವಹಣೆ ಹಾಗೂ ನಿಯಮಾನುಸಾರ ನಿರ್ವಹಿಸಬೇಕಾದ ಎಲ್ಲಾ ವಹಿಗಳನ್ನು ನಿರ್ವಹಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಹಾಗೂ ಸೂಕ್ತ ಮಾರ್ಗದರ್ಶನ ನೀಡುವುದು.
20) ಪ್ರತಿ ಸಂಸ್ಥೆಯು ಚಾಲ್ತಿಯಲ್ಲಿರುವ ಕರ್ನಾಟಕ ಸರ್ಕಾರದ ಆದೇಶಗಳಂತೆ ದಾಖಲಾತಿ ಶುಲ್ಕ, ಮತ್ತು ಬೋಧನಾ ಶುಲ್ಕಗಳನ್ನು ಸರ್ಕಾರಕ್ಕೆ ಜಮಾ ಮಾಡಿರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಂಡ ನಂತರ ವಿದ್ಯಾರ್ಥಿಗಳ ದಾಖಲಾತಿ ಅನುಮೋದನೆ ಮಾಡುವುದು. ಇದರ ಬಗ್ಗೆ ಕ್ರೋಢೀಕೃತ ವರದಿಯನ್ನು ಈ ಕಛೇರಿಗೆ ಸಲ್ಲಿಸುವುದು.
21) ಪ್ರಾಂಶುಪಾಲರು, D.EL.Ed, D.P.Ed & D.P.S.E ಸಂಸ್ಥೆ ರವರಿಂದ ವಿದ್ಯಾರ್ಥಿಗಳ ದಾಖಲಾತಿ ಅನುಮೋದನೆ ಸೇರಿದಂತೆ ಎಲ್ಲಾ ಆಡಳಿತಾತ್ಮಕ ಮತ್ತು ಶೈಕ್ಷಣಿಕ ವಿಷಯಗಳ ಬಗ್ಗೆ, ಮನವಿ ಹಾಗೂ ಪ್ರಸ್ತಾವನೆಗಳನ್ನು ಸಂಬಂಧಿಸಿದ ಡಯಟ್ ಕಾರ್ಯಾಲಯಗಳಿಗೆ ಸಲ್ಲಿಸಬೇಕಾಗಿರುತ್ತದೆ. ಯಾವ ಕಾರಣಕ್ಕೂ ನೇರವಾಗಿ ಸಲ್ಲಿಸಿದಂತಹ ಮನವಿಗಳನ್ನು ಈ ಕಛೇರಿಯಲ್ಲಿ ಪರಿಗಣಿಸಲಾಗುವುದಿಲ್ಲ.
22) ಸಂಸ್ಥೆಗಳು NCTE ಸೂಚನೆಯನುಸಾರ PAR (Performance Appraisel Report) ವರದಿಯನ್ನು ವೆಬ್ ಸೈಟ್ಗೆ ಅಪ್ಲೋಡ್ ಮಾಡಿ ಸಂಬಂಧಿಸಿದ ಡಯಟ್ ಪ್ರಾಂಶುಪಾಲರಿಗೆ ಸಲ್ಲಿಸುವುದು. ಡಯಟ್ ಪ್ರಾಂಶುಪಾಲರು ಈ ಕುರಿತಂತೆ ವೆಬ್ ಸೈಟ್ನಲ್ಲಿ PAR ಸಲ್ಲಿಕೆಯಾಗಿರುವ ಕುರಿತು ಪರಿಶೀಲಿಸಿ ಕ್ರೋಢೀಕೃತ ವರದಿಯನ್ನು ಈ ಕಛೇರಿಗೆ ಸಲ್ಲಿಸುವುದು. PAR ವರದಿಗಳು ಸರಿಯಾಗಿ ಸಲ್ಲಿಕೆಯಾಗದಿದ್ದಲ್ಲಿ ಅಥವಾ NCTE ಯಿಂದ ಉದ್ಭವಿಸುವ ಆಕ್ಷೇಪಣೆಗಳಿಗೆ ಆಯಾ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರುಗಳೇ ನೇರ ಹೊಣೆಗಾರರಾಗಿರುತ್ತಾರೆ. ಈ ಬಗ್ಗೆ, ಕಾಲಕಾಲಕ್ಕೆ ಡಯಟ್ ಪ್ರಾಂಶುಪಾಲರುಗಳು ಪರಿಶೀಲನೆಯನ್ನು ಮಾಡಿ ದೃಢೀಕರಿಸಿಕೊಳ್ಳುವುದು ಸಂಬಂಧಿಸಿದ ಡಯಟ್ ಪ್ರಾಂಶುಪಾಲರ ಜವಾಬ್ದಾರಿಯಾಗುತ್ತದೆ ಮತ್ತು ತಮ್ಮ ಜಿಲ್ಲೆಯಲ್ಲಿ ಅನಧಿಕೃತ D.EL.Ed, D.P.Ed & D.P.S.E ಕಾಲೇಜುಗಳು ನಡೆಯುತ್ತಿರುವ ಬಗ್ಗೆ, ದೂರುಗಳು ಬಂದಲ್ಲಿ ಸಕ್ಷಮ ಪ್ರಾಧಿಕಾರಿಗಳಾದ ಸಂಬಂಧಿಸಿದ ಡಯಟ್ ಪ್ರಾಂಶುಪಾಲರೇ ಹೊಣೆಗಾರರಾಗುತ್ತಾರೆ.
3. ದ್ವಿತೀಯ D.EL.Ed. ವಿದ್ಯಾರ್ಥಿಗಳ ವರ್ಗಾವಣೆ/ಪುನರ್ ದಾಖಲಾತಿ:
2025-26 ನೇ ಸಾಲಿನಲ್ಲಿ ದ್ವಿತೀಯ D.El.Ed, D.P.Ed & D.P.S.E ವಿದ್ಯಾರ್ಥಿಗಳ ವರ್ಗಾವಣೆ/ಪುನರ್ ದಾಖಲಾತಿ ಕುರಿತಾದ ಮನವಿಯನ್ನು ದ್ವಿತೀಯ D.EL.Ed, D.P.Ed & D.P.S.E ತರಗತಿಗಳು ಪ್ರಾರಂಭವಾಗುವ ಮುಂಚಿತವಾಗಿ ಸಲ್ಲಿಸುವುದು. ಅಂತಹ ಪ್ರಕರಣಗಳಲ್ಲಿ, ಜಿಲ್ಲಾ ವ್ಯಾಪ್ತಿಯಲ್ಲಿನ ವರ್ಗಾವಣೆಗೆ ಮನವಿಗಳನ್ನು ನಿಯಮಾನುಸಾರ ಪರಿಶೀಲಿಸಿ ಡಯಟ್ ಹಂತದಲ್ಲಿಯೇ ಅನುಮತಿಯನ್ನು ನೀಡಲು ಕ್ರಮವನ್ನು ಕೈಗೊಳ್ಳುವುದು.
ಅಂತರ್ ಜಿಲ್ಲಾ ವರ್ಗಾವಣೆಗೆ ಸಂಬಂಧಿಸಿದ ಮನವಿಗಳನ್ನು, ಕೆಳಕಂಡ ಅಂಶಗಳನ್ನು ಪರಿಶೀಲಿಸಿ ವರ್ಗಾವಣೆ ಕೋರಿರುವ ಜಿಲ್ಲೆಯ ಡಯಟ್ ಪ್ರಾಂಶುಪಾಲರ ಮೂಲಕ ಅವರ ಸ್ಪಷ್ಟ ಅಭಿಪ್ರಾಯದೊಂದಿಗೆ ಈ ಕಛೇರಿಗೆ ಸಲ್ಲಿಸುವುದು. ಶೈಕ್ಷಣಿಕ ವೇಳಾಪಟ್ಟಿಯಂತೆ ದ್ವಿತೀಯ D.EL.Ed, D.P.Ed & D.P.S.E ತರಗತಿಗಳು ಪ್ರಾರಂಭವಾದ ನಂತರ ವರ್ಗಾವಣೆ/ಪುನರ್ ದಾಖಲಾತಿಗೆ ಅನುಮತಿ ನೀಡಬಾರದೆಂದು ತಿಳಿಸಿದೆ. ಅನುಮತಿ ನೀಡುವಾಗ ಕೆಳಕಂಡ ಅಂಶಗಳನ್ನು ಪರಿಶೀಲಿಸಿ ಪೂರಕ ದಾಖಲೆಗಳನ್ನು ಪಡೆಯುವುದು.
ವರ್ಗಾವಣೆ ಕೋರಲಾದ ಸಂಸ್ಥೆಯಲ್ಲಿ ದಾಖಲಾತಿ ಮಿತಿಗೊಳಪಟ್ಟು ಸರ್ಕಾರಿ / ಆಡಳಿತ ಮಂಡಳಿ ಕೋಟಾದ ಖಾಲಿ ಇರುವ ಸೀಟುಗಳ ಮಾಹಿತಿಯನ್ನು ಪಡೆಯುವುದು.
ವರ್ಗಾವಣೆ /ಪುನರ್ ದಾಖಲಾತಿ ಕೋರಿರುವ ಕಾಲೇಜಿಗೆ ನಿಗದಿಪಡಿಸಲಾಗಿರುವ ಸರ್ಕಾರಿ/ಆಡಳಿತ ಮಂಡಳಿ ಕೋಟಾದ ದಾಖಲಾತಿಯ ಮಿತಿಯನ್ನು ಮೀರಬಾರದು.
ವಿದ್ಯಾರ್ಥಿಯು ದ್ವಿತೀಯ D.EL.Ed, ಪರೀಕ್ಷೆಯನ್ನು ಪೂರ್ಣಗೊಳಿಸಬೇಕಾದ ವರ್ಷದಿಂದ 3 ವರ್ಷದ ಅವಧಿಯೊಳಗಿರಬೇಕು.
4. ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿನ ಮಾಧ್ಯಮ ನಿಗದಿ ಮತ್ತು ವಿಳಾಸಗಳ ಬಗ್ಗೆ:
ಸರ್ಕಾರದ ಆದೇಶವಿಲ್ಲದೇ ಈಗ ಇರುವ ಮಾಧ್ಯಮದಿಂದ ಬೇರೆ ಯಾವುದೇ ಮಾಧ್ಯಮ ಬದಲಾವಣೆಗೆ ಅವಕಾಶವಿರುವುದಿಲ್ಲ. ಇದನ್ನು ಎಲ್ಲಾ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸುವುದು. ಈ ಬಗ್ಗೆ, ಡಯಟ್ ಪ್ರಾಂಶುಪಾಲರು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಲು ತಿಳಿಸಿದೆ. ಡಯಟ್ ಪ್ರಾಂಶುಪಾಲರುಗಳು ಮಾಧ್ಯಮ ಬದಲಾವಣೆ ಕುರಿತಾದ ಪ್ರಸ್ತಾವನೆಯನ್ನು ಈ ಕಛೇರಿಗೆ ಸಲ್ಲಿಸುವ ಮೊದಲು ವಿದ್ಯಾರ್ಥಿಗಳಿಗೆ ಬೋಧನಾಭ್ಯಾಸ ಮತ್ತು ನಿಕಟ ಸೇವಾ ಪೂರ್ವ ತರಬೇತಿಯನ್ನು ಕೈಗೊಳ್ಳಲು NCTE ನಿಯಮದಂತೆ ಸದರಿ ಮಾಧ್ಯಮದಲ್ಲಿ ನಿಗದಿತ ಸಂಖ್ಯೆಯ ಪ್ರಾಥಮಿಕ ಶಾಲೆಗಳು ನಿಮ್ಮ ಜಿಲ್ಲೆಯಲ್ಲಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.
ಮಾಧ್ಯಮ ಬದಲಾವಣೆಗೆ ಸಂಬಂಧಪಟ್ಟಂತೆ, ಬದಲಾವಣೆ ಅಪೇಕ್ಷಿಸುವ D.EL.Ed, D.P.Ed & D.P.S.E ಸಂಸ್ಥೆಗಳು ಪ್ರಸ್ತಾವನೆಗಳನ್ನು ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲೇ ಸಂಬಂಧಿಸಿದ ಡಯಟ್ ಗಳ ಮೂಲಕ DSERT ಕಛೇರಿಗೆ ಸಲ್ಲಿಸುವುದು. ಶೈಕ್ಷಣಿಕ ವರ್ಷ ಆರಂಭಗೊಂಡ ನಂತರ ಅಥವಾ ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಸಲ್ಲಿಸಲಾಗುವ ಅಂತಹ ಪ್ರಸ್ತಾವನೆ ಡಯಟ್ ಹಂತದಲ್ಲಿಯೇ ತಿರಸ್ಕರಿಸುವುದು. ಸದರಿ ವಿಷಯದ ಸಂಬಂಧ ನ್ಯಾಯಾಲಯ ಪ್ರಕರಣ ಹೆಚ್ಚಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಲು ಸೂಚಿಸಿದೆ.
ಪ್ರಸ್ತಾವನೆ/ನಿರಾಕ್ಷೇಪಣಾ ಪತ್ರ ಮತ್ತು NCTE ಪ್ರಾಧಿಕಾರದಿಂದ ನೀಡಲಾಗಿರುವ ಮಾನ್ಯತೆ ವತ್ರದಲ್ಲಿ ನಮೂದಿಸಿರುವ ವಿಳಾಸದಲ್ಲಿಯೇ ಸಂಸ್ಥೆಯನ್ನು ನಡೆಸತಕ್ಕದ್ದು. ಆದೇಶ/ಮಾನ್ಯತೆ ನೀಡುವ ಪ್ರಾಧಿಕಾರ ಇವರಿಂದ ಆದೇಶವಿಲ್ಲದೆಯೇ ಸಂಸ್ಥೆಗಳ ವಿಳಾಸಗಳನ್ನು ಬದಲಾಯಿಸಿದಲ್ಲಿ ನಿಯಮಾನುಸಾರ ಕ್ರಮವನ್ನು ಕೈಗೊಳ್ಳಲಾಗುವುದು.
ಈ ಅಂಶಗಳನ್ನು ಡಯಟ್ ಪ್ರಾಂಶುಪಾಲರು ಖಚಿತ ಪಡಿಸಿಕೊಂಡು ಶೈಕ್ಷಣಿಕ ಚಟುವಟಿಕೆಗಳ ಪರಿಶೀಲನಾ ಕ್ರಮಗಳನ್ನು ಕೈಗೊಳ್ಳುವುದು. ಈ ಬಗ್ಗೆ, ಪ್ರತಿಯೊಂದು ಸಂಸ್ಥೆಯ ಮಾಧ್ಯಮ, ಅನುಮತಿ ಪಡೆದಿರುವ ವಿಳಾಸ/ಬದಲಾವಣೆ ಹೊಂದಿದ ವಿಳಾಸ ಹಾಗೂ ಸಂಪರ್ಕ ದೂರವಾಣಿ ಸಂಖ್ಯೆಗಳ ಮಾಹಿತಿಯನ್ನು ಈ ಕಛೇರಿಗೆ ವರದಿ ಮಾಡುವುದು. ಕಾಲಕಾಲಕ್ಕೆ ಹೊರಡಿಸುವ ಸರ್ಕಾರಿ ಹಾಗೂ ಇಲಾಖೆಯ ಸೂಚನೆಗಳ ಜೊತೆಗೆ ಮೇಲಿನಂತೆ ನೀಡಿರುವ ಸೂಚನೆಗಳನ್ನು ನಿಮ್ಮ ಸಂಸ್ಥೆಗಳಲ್ಲಿ ಪಾಲಿಸುವುದು.
ಯಾವುದೇ ನಿಯಮಗಳ ಉಲ್ಲಂಘನೆಗಳನ್ನು ಮಾಡಿದ್ದಲ್ಲಿ ಈಗಾಗಲೇ ತಿಳಿಸಿರುವಂತೆ ತೀವ್ರವಾಗಿ ಪರಿಗಣಿಸಲಾಗುವುದು ಹಾಗೂ ಈ ಕುರಿತು ಡಯಟ್ ಪ್ರಾಂಶುಪಾಲರುಗಳು ಸದರಿ ಶಿಕ್ಷಕ ತರಬೇತಿ ಸಂಸ್ಥೆಗಳ ಮಾನ್ಯತೆ ರದ್ದತಿಗೂ ಸಹ ಶಿಫಾರಸ್ಸು ಮಾಡುವುದು. ಶೈಕ್ಷಣಿಕ ಸಂಸ್ಥೆಗಳು ತಮ್ಮ ಮೇಲಿರುವ ಜವಾಬ್ದಾರಿಯನ್ನು ಅರಿತು ಇಲಾಖೆಯೊಂದಿಗೆ ಸಹಕರಿಸಿ ಅಭ್ಯರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಹಾಗೂ ಶೈಕ್ಷಣಿಕ ವ್ಯವಸ್ಥೆಯನ್ನು ಕಾಪಾಡಲು ತಿಳಿಸಿದೆ.
ಉಲ್ಲೇಖ-1ರ ಸರ್ಕಾರದ ಆದೇಶದಲ್ಲಿ ಸೂಚಿಸಿರುವ ಎಲ್ಲಾ ಅಂಶಗಳನ್ನು ಡಯಟ್ ಪ್ರಾಂಶುಪಾಲರು ವಿದ್ಯಾರ್ಥಿಗಳ ಅನುಮೋದನೆ ಮಾಡುವಾಗ ಕಡ್ಡಾಯವಾಗಿ ಅನುಸರಿಸುವುದು ಹಾಗೂ ನಿಮ್ಮ ವ್ಯಾಪ್ತಿಗೆ ಬರುವ ಶಿಕ್ಷಕ ತರಬೇತಿ ಸಂಸ್ಥೆಗಳವರೂ ಸಹ ಎಲ್ಲಾ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ಕ್ರಮ ವಹಿಸುವುದು. ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು.
ಇಲಾಖೆಯಿಂದ ಹೊರಡಿಸಲಾಗಿರುವ ಶೈಕ್ಷಣಿಕ ವೇಳಾಪಟ್ಟಿ ಹಾಗೂ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದು.
ಜಿಲ್ಲೆಯ D.EL.Ed, D.P.Ed & D.P.S.E. ಕಾಲೇಜುಗಳಿಗೆ ಬೋಧನಾಭ್ಯಾಸ ಮತ್ತು ನಿಕಟ ಸೇವಾಪೂರ್ವ ತರಬೇತಿಗಳಿಗಾಗಿ ಸಂಬಂಧಿಸಿದ ಮಾಧ್ಯಮದ ಅಂಗೀಕೃತ ಶಾಲೆಗಳನ್ನು ನಿಗದಿಪಡಿಸುವುದು. ಈಮಾಹೆಯ ಅಂತ್ಯಕ್ಕೆ ಸಂಬಂಧಿಸಿದ D.EL.Ed, D.P.Ed & D.P.S.E ಕಾಲೇಜು ಮತ್ತು ಶಾಲೆಗಳಿಗೆ ಕಡ್ಡಾಯವಾಗಿ ಜ್ಞಾಪನವನ್ನು ನೀಡಬೇಕು.
ಪಠ್ಯಕ್ರಮದಲ್ಲಿ ನಿಗದಿಪಡಿಸಿದ ದಿನಗಳಿಗೆ ವಿದ್ಯಾರ್ಥಿಗಳನ್ನು ಬೋಧನಾಭ್ಯಾಸ ಮತ್ತು ನಿಕಟ ಸೇವಾ ಪೂರ್ವ ತರಬೇತಿಗೆ ನಿಯೋಜಿಸುವುದು ಹಾಗೂ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಭಾಷೆ/ಮಾಧ್ಯಮಕ್ಕೆ ಅನುಗುಣವಾಗಿ ಶಾಲೆಗಳನ್ನು ಆಯ್ಕೆ ಮಾಡಿ, ಸದರಿ ಶಾಲಾ ಪಟ್ಟಿಯನ್ನು ಸಂಬಂಧಿತ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ದೃಢೀಕರಿಸುವುದು. ದೃಢೀಕರಿಸಿದ ಶಾಲಾ ಪಟ್ಟಿಯನ್ನು ಕಡ್ಡಾಯವಾಗಿ ಡಯಟ್ ಅಧಿಕಾರಿಗಳು ಪರಿಶೀಲಿಸಬೇಕು.
ಬೋಧನಾಭ್ಯಾಸ, ನಿಕಟ ಸೇವಾ ಪೂರ್ವ ತರಬೇತಿ, ಆಂತರಿಕ ಮೌಲ್ಯಾಂಕನ ಮತ್ತು ಸಮನ್ವಯ ಸಮಿತಿ ಮೊದಲಾದ ಶೈಕ್ಷಣಿಕ ಚಟುವಟಿಕೆಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿಗದಿಯಂತೆ ನಡೆಯಲು ಕ್ರಮ ಕೈಗೊಳ್ಳುವುದು ಡಯಟ್ ಪ್ರಾಂಶುಪಾಲರುಗಳ ಜವಾಬ್ದಾರಿಯಾಗಿರುತ್ತದೆ. ಒಂದು ವೇಳೆ ಇದನ್ನು ಅನುಸರಿಸದಿದ್ದಲ್ಲಿ ಸಂಬಂಧಿತ ಡಯಟ್ ಪ್ರಾಂಶುಪಾಲರ ಮೇಲೆ ಕ್ರಮ ಜರುಗಿಸಲಾಗುವುದು.
ವಿದ್ಯಾರ್ಥಿಗಳ ಹಾಜರಾತಿ, ಕಿರು ಪರೀಕ್ಷೆ, ಅಂತಿಮ ಪರೀಕ್ಷೆಗಳು ಹಾಗೂ ಇತ್ಯಾದಿಗಳ ಬಗ್ಗೆ, D.EL.Ed, D.P.Ed & D.P.S.E ಪಠ್ಯಕ್ರಮದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು.
ಆಂತರಿಕ ಪರೀಕ್ಷೆಯ ನಿರ್ವಹಣೆ ಬಗ್ಗೆ ಜಿಲ್ಲಾ ಹಂತ ಸಮನ್ವಯ ಮಂಡಳಿಗಳು, ಸಮನ್ವಯ ಹಾಗೂ ಮೌಲ್ಯಮಾಪನ ಕಾರ್ಯನಿರ್ವಹಿಸಲಿದ್ದು, ಈ ಬಗ್ಗೆ ಡಯಟ್ ಸಂಸ್ಥೆಯಿಂದ ವಿವರಗಳನ್ನು ಪಡೆಯುವುದು. ಇದರ ಬಗ್ಗೆ, D.EL.Ed, D.P.Ed & D.P.S.E ಪಠ್ಯಕ್ರಮದಲ್ಲಿನ ಮಾರ್ಗಸೂಚಿಗಳನ್ನು ಕಡಾಯವಾಗಿ ಪಾಲಿಸುವುದು.
ನಿಗದಿಪಡಿಸಲಾಗಿರುವ ಶೈಕ್ಷಣಿಕ ವೇಳಾ ಪಟ್ಟಿಯಂತೆ ಕರ್ತವ್ಯಯದ ದಿನಗಳಲ್ಲಿ ಕಡ್ಡಾಯವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವುದು. ಸಾರ್ವತ್ರಿಕ ರಜೆಗಳನ್ನು ಹೊರತುಪಡಿಸಿ ಸ್ಥಳೀಯ ಹಬ್ಬಗಳ ಆಚರಣೆಗಾಗಿ ಕರ್ತವ್ಯಯದ ದಿನಗಳಲ್ಲಿ ರಜೆಯನ್ನು ನೀಡಬೇಕಾದಲ್ಲಿ ವರ್ಷದ ಪ್ರಾರಂಭದಲ್ಲಿಯೇ ದಿನಾಂಕಗಳನ್ನು ಗುರುತಿಸಿ (ಗರಿಷ್ಠ 4 ದಿನಗಳು) ಸಂಬಂಧಿಸಿದ ಡಯಟ್ ಪ್ರಾಂಶುಪಾಲರಿಂದ ಪೂರ್ವಾನುಮತಿಯನ್ನು ಪಡೆಯುವುದು.
ಆಯಾ ಡಯಟ್ ವ್ಯಾಪ್ತಿಗೆ ಒಳಪಡುವ D.El.Ed, D.P.Ed & D.P.S.E ಸಂಸ್ಥೆಗಳಿಗೆ ಡಯಟ್ ನ ಹಿರಿಯ ಉಪನ್ಯಾಸಕರು/ಉಪನ್ಯಾಸಕರು ಪ್ರತಿ ಮಾಹೆಯು ಭೇಟಿ ನೀಡಿ ವಿದ್ಯಾರ್ಥಿಗಳ ದಾಖಲಾತಿ/ಹಾಜರಾತಿ, ಉಪನ್ಯಾಸಕರ ಮಾಹಿತಿ, ಶೈಕ್ಷಣಿಕವಾಗಿ ಮತ್ತು ಆಡಳಿತಾತ್ಮಕವಾಗಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಈ ಕಛೇರಿಗೆ ವರದಿ ಸಲ್ಲಿಸುವುದು.
ಡಯಟ್ ಪ್ರಾಂಶುಪಾಲರುಗಳು ತಮ್ಮ ವ್ಯಾಪ್ತಿಯ ಎಲ್ಲಾ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿ ಈ ಕಛೇರಿಯಿಂದ ನೀಡಲಾಗಿರುವ ನಿರ್ದೇಶನಗಳನ್ನು ಮತ್ತು ಸೂಚನೆಗಳನ್ನು ಪಾಲಿಸುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಅವಶ್ಯಕತೆಯನುಸಾರ ಈ ಕಛೇರಿಗೆ ವರದಿ ನೀಡುವುದು.
ಅನುದಾನಿತ D.EL.Ed, D.P.Ed & D.P.S.E ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ನಿಯಮಾನುಸಾರ ಕಡಿಮೆ ಇದ್ದಲ್ಲಿ ಅಂತಹ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಚಾಲ್ತಿಯಲ್ಲಿರುವ ನಿಯಮಗಳಂತೆ ಕಾರ್ಯಭಾರ ಹಂಚಿಕೆ ಮಾಡಿ ತಮ್ಮ ಹಂತದಲ್ಲಿ ಅಗತ್ಯ ಕ್ರಮ ವಹಿಸುವುದು.
ಪ್ರಾಂಶುಪಾಲರು ಡಯಟ್ ರವರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ D.El.Ed / DPEd / DPE ಕಾಲೇಜುಗಳ ಪ್ರಾಂಶುಪಾಲರ ಸಭೆಯನ್ನು ಮೇ 20 ರೊಳಗೆ ನಡೆಸಿ ಸುತ್ತೋಲೆಯಲ್ಲಿ ತಿಳಿಸಿರುವ ಎಲ್ಲಾ ಅಂಶಗಳು ಹಾಗೂ ಸರ್ಕಾರ ಮತ್ತು NCTE ವತಿಯಿಂದ ಕಾಲಕಾಲಕ್ಕೆ ನೀಡಿರುವ ನಿರ್ದೇಶನಗಳ ಬಗ್ಗೆ ಸವಿವರವಾಗಿ ವಿವರಿಸಿ ಮಾರ್ಗದರ್ಶನ ನೀಡುವುದು ಹಾಗೂ ಈ ಬಗ್ಗೆ ತಮ್ಮ ಹಂತದಲ್ಲಿ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವುದು.
CLICK HERE TO DOWNLOAD CIRCULAR