ಕೌಶಲ, ವೃತ್ತಿಪರ ನೆಟ್ವರ್ಕ್ ರಚನೆಗೆ ಸಹಾಯ.
ಪಿಎಂ ಇಂಟರ್ನ್ಶಿಪ್ಗೆ ಬೇಗನೆ ನೋಂದಾಯಿಸಿಕೊಳ್ಳಿ..
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಪ್ರಧಾನಿ ಪ್ರಶಿಕ್ಷಣ’ಕ್ಕೆ (ಪಿಎಂ ಇಂಟರ್ನ್ ಶಿಪ್) ಚಾಲನೆ ದೊರೆತಿದೆ. ವೃತ್ತಿ ಕೌಶಲವನ್ನು ಹೆಚ್ಚಿಸಿಕೊಳ್ಳಲು ಹಾಗೂ ಉದ್ಯೋಗ ಕ್ಷಮತೆಯನ್ನು ವೃದ್ಧಿಸಿಕೊಳ್ಳುವ ಜತೆಗೆ, ಆರ್ಥಿಕ ನೆರವನ್ನೂ ನೀಡುವ ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಪೋರ್ಟಲ್ ಇದೀಗ ಸಕ್ರಿಯಗೊಂಡಿದೆ.
ಈ ಯೋಜನೆಯು ಯುವ ವೃತ್ತಿಪರರಿಗೆ ಪ್ರಾಯೋಗಿಕ ಅನುಭವವನ್ನು ನೀಡಲು ಮತ್ತು ಉನ್ನತ ಭಾರತೀಯ ಕಂಪನಿಗಳೊಂದಿಗೆ ಇಂಟರ್ನ್ ಶಿಪ್ಗಳ ಮೂಲಕ ಉದ್ಯೋಗಾವಕಾಶವನ್ನು ಹೆಚ್ಚಿಸಲು ಅವಕಾಶವನ್ನು ನೀಡುತ್ತಿದೆ. ಅ.3ರಿಂದ ವಿವಿಧ ಕಂಪನಿಗಳು ತಮ್ಮಲ್ಲಿರುವ ಅವಕಾಶಗಳ ಬಗ್ಗೆ ವೆಬ್ಸೈಟ್ನಲ್ಲಿ ಮಾಹಿತಿ ಪ್ರಕಟಿಸಿವೆ.
ಯಾವುದರಲ್ಲಿ ಇಂಟರ್ನ್ಶಿಪ್?
ಅರ್ಹ ಅಭ್ಯರ್ಥಿಗಳು ಐಟಿ ಮತ್ತು ಸಾಫ್ಟ್ವೇರ್ ಅಭಿವೃದ್ಧಿ, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು, ತೈಲ, ಅನಿಲ ಮತ್ತು ಶಕ್ತಿ, ಲೋಹಗಳು ಮತ್ತು ಗಣಿಗಾರಿಕೆ,
ಎಫ್ಎಂಸಿಜಿ (ವೇಗವಾಗಿ ಚಲಿಸುವ ಗ್ರಾಹಕ ಸರಕುಗಳು), ಚಿಲ್ಲರೆ ವ್ಯಾಪಾರ, ಸಿಮೆಂಟ್ ಮತ್ತು ಕಟ್ಟಡ ಸಾಮಗ್ರಿಗಳು, ಆಟೋಮೋಟಿವ್, ಮೆಡಿಸಿನ್, ವಾಯುಯಾನ ಮತ್ತು ರಕ್ಷಣೆ, ರಾಸಾಯನಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇಂಟರ್ನ್ಶಿಪ್ ಪಡೆದುಕೊಳ್ಳಬಹುದಾಗಿದೆ.
ಯಾವೆಲ್ಲ ಕಂಪನಿಯಲ್ಲಿ ಇಂಟರ್ನ್ಶಿಪ್ ಮಾಡಬಹುದು?
ಆಯ್ಕೆಯಾದ ಅಭ್ಯರ್ಥಿಗಳು ದೇಶದ ಟಾಪ್ ಕಂಪನಿಗಳಾದ ಟಾಟಾ, ರಿಲಯನ್ಸ್, ಬಿರ್ಲಾ, ಅದಾನಿ, ಇನ್ಫೋಸಿಸ್, ಮೈಕ್ರೋಸಾಫ್ಟ್, ಐಬಿಎಂ ಮೊದಲಾದ 500 ಕಂಪನಿಗಳೊಂದಿಗೆ ಇಂಟರ್ನ್ಶಿಪ್ ಮಾಡಬಹುದು.
ಯಾರಿಗೆ ಅವಕಾಶವಿದೆ?
21-24 ವಯಸ್ಸಿನ ಪೂರ್ಣ ಪ್ರಮಾಣದ ವ್ಯಾಸಂಗ ಅಥವಾ ಉದ್ಯೋಗದಲ್ಲಿ ತೊಡಗದೆ ಇರುವ ಅಭ್ಯರ್ಥಿಗಳು ಈ ಯೋಜನೆಗೆ ಅರ್ಹರಾಗಿದ್ದಾರೆ. ಆರಂಭದಲ್ಲಿ ಎರಡು ವರ್ಷಗಳ ಯೋಜನೆ ಇದಾಗಿದ್ದು, ಎರಡನೇ ಹಂತದಲ್ಲಿ 3 ವರ್ಷಗಳ ಅವಧಿಗೆ ವಿಸ್ತರಣೆ ಮಾಡಲಾಗುತ್ತದೆ.
ಶೈಕ್ಷಣಿಕ ಅರ್ಹತೆ ಏನು?
ಅಭ್ಯರ್ಥಿಗಳು ಹೈಸ್ಕೂಲ್, ಹೈಯರ್ ಸೆಕೆಂಡರಿ ಹಂತದ ವ್ಯಾಸಂಗವನ್ನು ಪೂರ್ಣಗೊಳಿಸಿರಬೇಕು, ITI ನಿಂದ ಪ್ರಮಾಣಪತ್ರಗಳನ್ನು ಹೊಂದಿರಬೇಕು, ಪಾಲಿಟೆಕ್ನಿಕ್ ಸಂಸ್ಥೆಗಳಿಂದ ಡಿಪ್ಲೊಮಾಗಳನ್ನು ಹೊಂದಿರಬೇಕು ಅಥವಾ ಬಿಎ, ಬಿಕಾಮ್, ಬಿಸಿಎ, ಬಿಬಿಎ, ಅಥವಾ ಬಿ.ಫಾರ್ಮ್ ಇತ್ಯಾದಿ. ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಶಾರ್ಟ್ಲಿಸ್ಟಿಂಗ್ ಪ್ರಕ್ರಿಯೆಯು ಅಭ್ಯರ್ಥಿಗಳ ಆದ್ಯತೆಗಳು ಮತ್ತು ಕಂಪನಿಗಳು ಪೋಸ್ಟ್ ಮಾಡಿದ ಅವಶ್ಯಕತೆಗಳನ್ನು ಆಧರಿಸಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಪಿಎಂ ಇಂಟರ್ನ್ಶಿಪ್ ಯೋಜನೆಯ ವೆಬ್ಸೈಟ್ pminternship.mca.gov.in ಗೆ ಭೇಟಿ ನೀಡಿ.
- ರಿಜಿಸ್ಟರ್ ಲಿಂಕ್ ಕ್ಲಿಕ್ ಮಾಡಿ ಮತ್ತು ಹೊಸ ಪುಟ ತೆರೆಯುತ್ತದೆ.
- ನೋಂದಣಿ ವಿವರಗಳನ್ನು ಭರ್ತಿ ಮಾಡಿ, ಸಬ್ಸಿಟ್ ಬಟನ್ ಕ್ಲಿಕ್ ಮಾಡಿ.
- ಅಭ್ಯರ್ಥಿಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ, ಪೋರ್ಟಲ್ ಮೂಲಕ ರೆಸ್ಯೂಮ್ ಅನ್ನು ರಚಿಸಲಾಗುತ್ತದೆ.
- ಆದ್ಯತೆಗಳ ಆಧಾರದ ಮೇಲೆ 5 ಇಂಟರ್ನ್ ಶಿಪ್ ಅವಕಾಶಗಳಿಗಾಗಿ ಅರ್ಜಿ ಸಲ್ಲಿಸಿ- ಸ್ಥಳ, ವಲಯ ಮತ್ತು ಅರ್ಹತೆಗಳು ನಮೂದಿಸಿ.
- ದಾಖಲೆಗಳನ್ನು ಸಲ್ಲಿಸಿದ ನಂತರ, ಸಬ್ಬಿಟ್ ಕ್ಲಿಕ್ ಮಾಡಿ ಮತ್ತು ದೃಢೀಕರಣ ಪುಟವನ್ನು ಡೌನ್ ಲೋಡ್ ಮಾಡಿ.
- ಮುಂದಿನ ಅಗತ್ಯಕ್ಕಾಗಿ ಮುದ್ರಿತ ಪ್ರತಿಯನ್ನು ತೆಗೆದಿಟ್ಟುಕೊಳ್ಳಿ.
ಸಹಾಯವಾಣಿ: 1800116090
ಇಮೇಲ್:pminternship@mca.gov.in
_____