PM POSHAN: ಬಿಸಿಯೂಟದ ಸಾಮಗ್ರಿ ವೆಚ್ಚ ಹೆಚ್ಚಳ, ‘ಪಿಎಂ ಪೋಷಣ್’ ಮೊತ್ತ ಪರಿಷ್ಕರಣೆ,ಕೇಂದ್ರದಿಂದ ಹೆಚ್ಚುವರಿ ₹954 ಕೋಟಿ ಖರ್ಚು

PM POSHAN: ಬಿಸಿಯೂಟದ ಸಾಮಗ್ರಿ ವೆಚ್ಚ ಹೆಚ್ಚಳ

PM POSHAN: ಬಿಸಿಯೂಟದ ಸಾಮಗ್ರಿ ವೆಚ್ಚ ಹೆಚ್ಚಳ: ದೇಶಾದ್ಯಂತ ಪಿಎಂ ಪೋಷಣ್ ಯೋಜನೆಯಡಿಯಲ್ಲಿ 11.20 ಕೋಟಿಗೂ ಹೆಚ್ಚು ಮಕ್ಕಳಿಗೆ ನೀಡಲಾಗುವ ಮಧ್ಯಾಹ್ನದ ಬಿಸಿಯೂಟಕ್ಕೆ ಕೇಂದ್ರ ಸರ್ಕಾರವು ತನ್ನ ಪಾಲಿನ ‘ಸಾಮಗ್ರಿ ವೆಚ್ಚ’ವನ್ನು ಹೆಚ್ಚಳ ಮಾಡಿದೆ.

ಊಟಕ್ಕೆ ಬಳಸಲಾಗುವ ಬೇಳೆ, ತರಕಾರಿ, ಎಣ್ಣೆ, ಮಸಾಲೆ ಹಾಗೂ ಇತರ ಪದಾರ್ಥ, ಇಂಧನ ಖರೀದಿ ಮೊತ್ತ ಪರಿಷ್ಕರಿಸಿದೆ. ಕಾರ್ಮಿಕ ಇಲಾಖೆ ನೀಡಿರುವ ಹಣದುಬ್ಬರ ಅಂಕಿ-ಅಂಶಗಳನ್ನು ಆಧರಿಸಿ ಸಾಮಗ್ರಿಗಳ ವೆಚ್ಚದಲ್ಲಿ ಶೇ.9.50 ಈ ಹೆಚ್ಚಳ ಮಾಡಲಾಗಿದೆ. ಈ ಏರಿಕೆಯು ಏ.1ರಿಂದಲೇ ಅನ್ವಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಹೆಚ್ಚಳ ಅನ್ವಯಿಸಲಿದೆ. ಆದರೆ, ರಾಜ್ಯಗಳು ಇದರ ಹೊರತಾಗಿಯೂ ಹೆಚ್ಚುವರಿ ಮೊತ್ತವನ್ನು ಭರಿಸಲು ಅವಕಾಶವಿದೆ. ಮಕ್ಕಳಿಗೆ ಪೌಷ್ಟಿಕಾಂಶಭರಿತ ಊಟವನ್ನು ನೀಡಲು ಕರ್ನಾಟಕವು ಸೇರಿ ಹಲವು ರಾಜ್ಯಗಳು ಈಗಾಗಲೇ ಇಂಥ ಕ್ರಮಗಳನ್ನು ಕೈಗೊಂಡಿವೆ.

ಶಿಶುವಿಹಾರ, ಒಂದರಿಂದ 8ನೇ ತರಗತಿಯವರೆಗಿನ ಸರ್ಕಾರಿ, ಅನುದಾನಿತ 10.36 ಲಕ್ಷ ಶಾಲೆಗಳಲ್ಲಿ ಶಾಲೆಯ ಎಲ್ಲ ದಿನಗಳಂದು ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತದೆ. ಶಿಶುವಿಹಾರ ಹಾಗೂ ಪ್ರಾಥಮಿಕ ಶಾಲಾ ಮಕ್ಕಳ ಊಟದ ಸಾಮಗ್ರಿಗಳ ವೆಚ್ಚವನ್ನು 6.19 ರೂ. ಗಳಿಂದ 6.78 ರೂ.ಗೆ. ಹೆಚ್ಚಿಸಲಾಗಿದ್ದು, 59 ಪೈಸೆ ಏರಿಕೆ ಮಾಡಲಾಗಿದೆ. ಇನ್ನು, ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ 9.29 ರೂ.ಗಳಿಂದ 10.17 ರೂ.ಗೆ ಹೆಚ್ಚಿಸಲಾಗಿದ್ದು, 88 ಪೈಸೆ ಏರಿಕೆ ಮಾಡಿದಂತಾಗಿದೆ. ಈ ಹೆಚ್ಚಳಕ್ಕಾಗಿ ಕೇಂದ್ರವು ಒಟ್ಟಾರೆ 954 ಕೋಟಿ ರೂ.ಗಳ ಹೆಚ್ಚುವರಿ ಮೊತ್ತವನ್ನು ಭರಿಸಲಿದೆ ಎಂದು ತಿಳಿಸಿದೆ.

ಆಹಾರ ಧಾನ್ಯ:

ಸಾಮಗ್ರಿ ವೆಚ್ಚ ಮಾತ್ರವಲ್ಲದೆ, ಭಾರತೀಯ ಆಹಾರ ನಿಗಮದಿಂದ ಬಿಸಿಯೂಟಕ್ಕಾಗಿ 26 ಲಕ್ಷ ಮೆಟ್ರಿಕ್ ಟನ್‌ ಆಹಾರ ಧಾನ್ಯವನ್ನು ನೀಡಲಾಗುತ್ತದೆ. ಇದರ ಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸುತ್ತಿದ್ದು, ಈ ಉದ್ದೇಶಕ್ಕಾಗಿ ವಾರ್ಷಿಕ 9,000 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಜತೆಗೆ, ಭಾರತೀಯ ಆಹಾರ ನಿಗಮದ ಗೋದಾಮುಗಳಿಂದ ಶಾಲೆವರೆಗೆ ಸಂಪೂರ್ಣ ಸಾಗಾಟ ವೆಚ್ಚವನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಹೇಳಿದೆ.

ರಾಜ್ಯಗಳಿಂದಲೂ ಹೆಚ್ಚುವರಿ ವ್ಯವಸ್ಥೆ:

ಕೇಂದ್ರ ಸರ್ಕಾರ ಈ ಯೋಜನೆಯನ್ನು 8ನೇ ತರಗತಿ ಮಕ್ಕಳವರೆಗೆ ಮಾತ್ರ ಸೀಮಿತಗೊಳಿಸಿದ್ದರೂ, ರಾಜ್ಯ ಸರ್ಕಾರವು ಇದನ್ನು 10ನೇ ತರಗತಿ ಮಕ್ಕಳಿಗೂ ವಿಸ್ತರಣೆ ಮಾಡಿದೆ. ಬಿಸಿಯೂಟದ ಜತೆಗೆ ಮೊಟ್ಟೆ, ಬಾಳೆಹಣ್ಣು ಹಾಗೂ ಹಾಲನ್ನು ನೀಡುತ್ತಿದೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!