Police jobs:Application Invitation for the post of Constable [Driver]. Here is the direct link to apply.

ITBP invites applications for the post of Constable Driver

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್‌ (ಐಟಿಬಿಪಿ) ತನ್ನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಪ್ರಸ್ತುತ ಭಾರತದಾದ್ಯಂತ ಖಾಲಿ ಇರುವ ಗ್ರೂಪ್ ಸಿ ನಾನ್‌-ಗೆಜೆಟೆಡ್ ಹುದ್ದೆಯಾದ ಕಾನ್‌ಸ್ಟೆಬಲ್ (ಚಾಲಕ) ಹುದ್ದೆಯನ್ನು ತಾತ್ಕಾಲಿಕ ಅವಧಿಗಾಗಿ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಐಟಿಬಿಪಿ ಪೇ ಸ್ಕೆಲ್ 3ರ ಪ್ರಕಾರ 21,700- 69,100ರೂ. ವೇತನವನ್ನು ನಿಗದಿಪಡಿಸಲಾಗಿದೆ. ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಪುರುಷ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹು. ಹುದ್ದೆಯ ಸಂಖ್ಯೆ ತಾತ್ಕಾಲಿಕವಾಗಿದ್ದು ಸಂಸ್ಥೆಯ ನಿಯಮಗಳಿಗೆ ಅನುಗುಣವಾಗಿ ಹೆಚ್ಚು, ಕಡಿಮೆಯಾಗಬಹುದಾಗಿದೆ.

ವಿದ್ಯಾರ್ಹತೆ ಏನು?

ಐಟಿಬಿಪಿ ನಿಯಮಾನುಸಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯೂಲೇಷನ್, 10ನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರ ಬೇಕು. ಮುಖ್ಯವಾಗಿ ಚಾಲನಾ ಪರವಾನಗಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ವಯೋಮಿತಿ ವಿವರ:

ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21- ಗರಿಷ್ಠ 27 ವರ್ಷದೊಳ ಗಿರಬೇಕು.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೀಗಿರಲಿದೆ

  • ದೈಹಿಕ ಸಹಿಷ್ಣುತಾ ಪರೀಕ್ಷೆ
  • ದೈಹಿಕ ಗುಣಮಟ್ಟದ ಪರೀಕ್ಷೆ (ಪಿಎಸ್‌ಟಿ)
  • ಲಿಖಿತ ಪರೀಕ್ಷೆ
  • ದಾಖಲೆ ಪರಿಶೀಲನೆ
  • ಕೌಶಲ ಪರೀಕ್ಷೆ
  • ವಿವರವಾದ ವೈದ್ಯಕೀಯ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆಯ ಪರಿಶೀಲನೆ

ವೇತನ ಶ್ರೇಣಿ ವಿವರ:

ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ 3ರ ಪ್ರಕಾರ 21,700-69,100. ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ ಎಷ್ಟು?

ಎಸ್ಸಿ/ಎಸ್ಟಿ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವನ್ನು ವಿಧಿಸಿಲ್ಲ. ಇತರ ಎಲ್ಲ ವರ್ಗದ ಅಭ್ಯರ್ಥಿಗಳು 100ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು. ಆನ್‌ಲೈನ್‌ನಲ್ಲಿ ಮಾತ್ರ ಶುಲ್ಕ ಪಾವತಿಸಲು ಅವಕಾಶವಿರುತ್ತದೆ.

ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ recruitment.itbpolice.nic.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಬೇರೆ ಯಾವುದೇ ಹಂತದಲ್ಲಿ ಸಲ್ಲಿಸಿದ ಅರ್ಜಿಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅರ್ಜಿ ಸಲ್ಲಿಸುವ ಮುನ್ನ ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಇತ್ತೀಚಿನ ಛಾಯಾಚಿತ್ರ ಜತೆಗೆ ಅಗತ್ಯ ಪ್ರಮಾಣ ಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳು ಇತ್ಯಾದಿ ದಾಖಲೆ ಸಲ್ಲಿಸಬೇಕು. ನಂತರ ನೇಮಕಾತಿ 2024 ಪ್ರಕ್ರಿಯೆ ಪೂರ್ಣ ಗೊಳಿಸಲು ಸಬ್ಮಿಟ್ ಬಟನ್ ಕ್ಲಿಕ್ ಮಾಡಬೇಕು.

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08-10-2024

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:06-11-2024

ಮತ್ತಷ್ಟು ಮಾಹಿತಿಗಾಗಿ: recruitment.itbpolice.nic.in ವೆಬ್ಸೈಟ್ ಗೆ ಭೇಟಿ ಮಾಡಿ.

1 thought on “Police jobs:Application Invitation for the post of Constable [Driver]. Here is the direct link to apply.”

Leave a Comment