Post Office Scheme: ಮಹಿಳೆಯರ ಹಣ ಉಳಿತಾಯಕ್ಕೆ 5 ಅಂಚೆ ಕಚೇರಿ ಯೋಜನೆಗಳು
Post Office Scheme: ಮಹಿಳೆಯರ ಹಣ ಉಳಿತಾಯಕ್ಕೆ 5 ಉಪಯುಕ್ತವಾದ ಅಂಚೆ ಕಚೇರಿ ಯೋಜನೆಗಳ ಮಾಹಿತಿ ಒದಗಿಸಲಾಗಿದೆ.
ಯೋಜನೆ -01: ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ:
ನೀವು 60 ವರ್ಷ ವಯಸ್ಸಿನವರಾಗಿದ್ದರೆ ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಸೇರಬಹುದು. ಈ ಯೋಜನೆಯಲ್ಲಿ ತ್ರೈಮಾಸಿಕ ಬಡ್ಡಿದರ ಶೇ.8.2 ದೊರಕುತ್ತದೆ. ಕನಿಷ್ಠ 1 ಸಾವಿರ ಹೂಡಿಕೆ ಮೂಲಕ ಈ ಯೋಜನೆಗೆ ಸೇರಬಹುದು. ಗರಿಷ್ಠ 30 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಈ ಯೋಜನೆ ಮೆಚ್ಯುರಿಟಿ ಆಗಲು 5 ವರ್ಷ ಬೇಕಿರುತ್ತದೆ. ಇದನ್ನು 3 ವರ್ಷ ವಿಸ್ತರಿಸಬಹುದು.
ಯೋಜನೆ -02: ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ
ನಿಯಮಿತ ಆದಾಯ ಬಯಸುವ ಮಹಿಳೆಯರಿಗೆ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಪಿಒಎಂಐಎಸ್ ಸೂಕ್ತವಾಗಿದೆ. ಈ ಯೋಜನೆಯಲ್ಲಿ ಗರಿಷ್ಠ 9 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ತಿಂಗಳ ಆದಾಯವನ್ನು ಪೋಸ್ಟ್ ಡೇಟೆಡ್ ಚೆಕ್‌ಗಳು ಅಥವಾ ಎಲೆಕ್ಟ್ರಾನಿಕ್ ಕ್ಲಿಯರೆನ್ಸ್ ಸರ್ವೀಸ್ ಮೂಲಕ ಪ್ರತಿತಿಂಗಳು ಹಣ ಪಡೆಯಬಹುದು. ಹಣಕಾಸು ಸಚಿವಾಲಯ ಅಂಗೀಕರಿಸಿದ ಈ ಯೋಜನೆಯ ಮೂಲಕ ಹೂಡಿಕೆ ಮಾಡಿದರೆ ಶೇ. 7.4 ಬಡ್ಡಿದರ ದೊರಕುತ್ತದೆ.
ಯೋಜನೆ -03 ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್(NSC)
ದೀರ್ಘಕಾಲದ ಹೂಡಿಕೆ ಮೂಲಕ ಉತ್ತಮ ರಿಟರ್ನ್ ಪಡೆಯಲು ಬಯಸುವವರಿಗೆ ಎನ್‌ಎಸ್ ಸಿ ಸೂಕ್ತವಾಗಿದೆ. ಕಡಿಮೆ ಅಪಾಯದ ಹೂಡಿಕೆ ಯೋಜನೆಯು ಎಲ್ಲಾ ಹೂಡಿಕೆದಾರರಿಗೆ ಸೂಕ್ತವಾಗಿದೆ. ಕನಿಷ್ಠ 1 ಸಾವಿರ ರೂ.ಯಿಂದ ಈ ಯೋಜನೆಗೆ ಸೇರಬಹುದು. 5 ವರ್ಷ ಮೆಚ್ಯುರಿಟಿ ಅವಧಿ ಇರುತ್ತದೆ. 80ಸಿ ಯಡಿ ತೆರಿಗೆ ಪ್ರಯೋಜನಗಳನ್ನೂ ಪಡೆಯಬಹುದು.
ಯೋಜನೆ-04: ಸುಕನ್ಯಾ ಸಮೃದ್ಧಿ ಯೋಜನೆ
ಹೆಣ್ಣು ಮಗುವಿಗೆ 10 ವರ್ಷ ತುಂಬುವವರೆಗೆ ಯಾವುದೇ ಸಮಯದಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು. ಸುಕನ್ಯಾ ಸಮೃದ್ಧಿ ಖಾತೆಗೆ ಕನಿಷ್ಠ 250 ರೂ. & ಗರಿಷ್ಠ 1.5 ಲಕ್ಷ ರೂ. ಠೇವಣಿ ಇಡಬೇಕಾಗುತ್ತದೆ. ಮಗುವಿನ ಉನ್ನತ ಶಿಕ್ಷಣಕ್ಕೆ ಶೇ 50 ರಷ್ಟು, ಆಕೆ 18 ವರ್ಷಕ್ಕೆ ತಲುಪಿದ ನಂತರ ಉಳಿದ ಶೇ 50 ರಷ್ಟು ಹಣ ಪಡೆಯಬಹುದು.
ಯೋಜನೆ-05 : ಕಿಶಾನ್ ವಿಕಾಸ್ ಪತ್ರ (ಕೆವಿಪಿ)
ಸ್ಥಿರ ಠೇವಣಿ ಮೂಲಕ ತಮ್ಮ ಆದಾಯ ದ್ವಿಗುಣಗೊಳಿಸಲು ಬಯಸುವ ಮಹಿಳೆಯರಿಗೆ ಇದು ಸೂಕ್ತ ಜನವರಿ 1 2024ರಿಂದ ಬಡ್ಡಿದರ ಶೇಕಡ 7.5 ದೊರಕುತ್ತದೆ. ಸುಮಾರು 10 ವರ್ಷದಲ್ಲಿ ಹಣ ಡಬಲ್ ಆಗಬಹುದು.