Pratibha Puraskar-2025: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ- SSLC & PUC
Pratibha Puraskar-2025: ಆತ್ಮೀಯ ನೌಕರ ಬಾಂಧವರೇ……2025ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ.90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:
▪️ವಿದ್ಯಾರ್ಥಿಯು 2025ರ SSLC/PUC ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾಗಿರಬೇಕು.
▪️ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.
▪️ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮಕವಾಗಿರುವ ನೌಕರರು ಅರ್ಜಿ ಸಲ್ಲಿಸುವಂತಿಲ್ಲ.
Online ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು
▪️ವಿದ್ಯಾರ್ಥಿಯ ಪಾಸ್‌ಪೋರ್ಟ್ ಭಾವಚಿತ್ರ ಮತ್ತು ದೃಢೀಕೃತ ಅಂಕಪಟ್ಟಿ
▪️ಇಲಾಖೆಯ ಸೇವಾ ದೃಢೀಕರಣ ಪತ್ರ
▪️ಸಂಘದ ಜಿಲ್ಲಾ/ತಾಲ್ಲೂಕು/ಯೋಜನಾ ಶಾಖೆ ಅಧ್ಯಕ್ಷರು/ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರಿಂದ ಪಡೆದ ದೃಢೀಕರಣ ಪತ್ರ. (KSGEA NEWS Blog PDF File ដួឯដ).
▪️ಈ ಮೇಲ್ಕಂಡ ಲಗತ್ತುಗಳನ್ನು ನಿಗದಿತ JPG Formatನಲ್ಲಿ (1 MBಮೀರದಂತೆ) ಅಪ್ಲೋಡ್ ಮಾಡುವುದು.
▪️ಅರ್ಜಿ ಸಲ್ಲಿಕೆ ಯಶಸ್ವಿಗೊಂಡ ನಂತರ ನೊಂದಾಯಿತ ಇ-ಮೇಲ್‌ಗೆ ಸ್ವೀಕೃತಿ ರವಾನೆಯಾಗಲಿದೆ.
▪️ಶೇಕಡಾವಾರು ಅಂಕಗಳನ್ನು ನಿರ್ಧರಿಸಿ ಅರ್ಜಿಯನ್ನು ಪರಿಗಣಿಸುವ ನಿರ್ಧಾರ ಸಂಘದ್ದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ – ಬೆಳಿಗ್ಗೆ 10.30 ರಿಂದ ಸಂಜೆ 6.00ವರೆಗೆ ಫೋನ್ ನಂಬರ್ 080-22354784/83
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-05-2025

ಇಲಾಖೆಯ ಸೇವಾ ಇಲಾಖೆಯ ಸೇವಾ ದೃಢೀಕರಣ ಪತ್ರ- CLICK HERE
ಸಂಘದ ಜಿಲ್ಲಾ/ ತಾಲ್ಲೂಕು/ ಯೋಜನಾ ಶಾಖೆ ಅಧ್ಯಕ್ಷರು / ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರಿಂದ ಪಡೆದ ದೃಢೀಕರಣ ಪತ್ರ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು – CLICK HERE
Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ