PST Teacher Promotion: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು (PST), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ(GPT) ಹುದ್ದೆಗೆ ಮುಂಬಡ್ತಿ ನೀಡುವ/ವಿಲೀನಗೊಳಿಸುವ ಕುರಿತು-2025

PST,GPT Teacher Promotion: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು (PST), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ(GPT) ಹುದ್ದೆಗೆ ಮುಂಬಡ್ತಿ ನೀಡುವ/ವಿಲೀನಗೊಳಿಸುವ ಕುರಿತು-2025

 

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು (PST), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ(GPT) ಹುದ್ದೆಗೆ ಮುಂಬಡ್ತಿ ನೀಡುವ/ವಿಲೀನಗೊಳಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿಭಾಗದಲ್ಲಿ ಒಟ್ಟಾರ 4083 ಜಿಪಿಟಿ ಹುದ್ದೆಗಳು ಮುಂಬಡ್ತಿ ಕೋಟಾದಡಿ ಖಾಲಿ ಇರುತ್ತವೆ. ಇವುಗಳಲ್ಲಿ ಸ್ಥಳೀಯ ವೃಂದದ 3300 ಹಾಗೂ ಉಳಿದ ಮೂಲ ವೃಂದದ 783 ಹುದ್ದೆಗಳಿರುತ್ತವೆ. ಉಲ್ಲೇಖ (1)ರ ಸರ್ಕಾರದ ಅಧಿಸೂಚನೆಯನ್ವಯ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು ಗ್ರೇಡ್-2 ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಂಬಂಧ ಪ್ರೌಢ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿಯನ್ನು ತಂದು ಸೂಕ್ತ ನಿರ್ದೇಶನ ಮತ್ತು ಮಾರ್ಗಸೂಚಿಯನ್ನು ನೀಡಿರುತ್ತದೆ. ಅದರಂತೆ, ಉಲ್ಲೇಖ (2) ರನ್ವಯ ವಿಭಾಗದ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರು(ಆಡಳಿತ) ರವರಿಗೆ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು ಗ್ರೇಡ್-2 ಹುದ್ದೆಗಳಿಗೆ ಮುಂಬಡ್ತಿ ನೀಡಲು ನಿರ್ದೇಶನ ನೀಡಲಾಗಿದೆ.

ಇದಲ್ಲದೆ, ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಸರ್ಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳೊಂದಿಗೆ ದಿನಾಂಕ: 18.03.2025 ರಂದು ಹಾಗೂ ದಿನಾಂಕ: 07.04.2025 ರಂದು ಸುದೀರ್ಘವಾಗಿ ಚರ್ಚಿಸಲಾಗಿ, ಎರಡೂ ಸಂಘಗಳ ಪ್ರತಿನಿಧಿಗಳು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ನಾವು ಕೈಗೊಳ್ಳಲಿರುವವ ಮುಂಬಡ್ತಿ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಸಹಕರಿಸುವುದಾಗಿ ಒಪ್ಪಿಗೆಯನ್ನು ಸೂಚಿಸಿರುತ್ತಾರೆ.

ಅದರಂತೆ, ನಮ್ಮ ವಿಭಾಗದಲ್ಲಿ ಖಾಲಿ ಇರುವ 2878 ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರು ಗ್ರೇಡ್ -2 ಹುದ್ದೆಗಳನ್ನು ಮುಂಬಡ್ತಿ ಮೂಲಕ ಭರ್ತಿ ಮಾಡಲು ಪ್ರಕ್ರಿಯೆಯನ್ನು ಪ್ರಾರಂಭಿಸಿ, ಮಾರ್ಗಸೂಚಿ ಹಾಗೂ ವೇಳಾ ಪಟ್ಟಿಯನ್ನು ಜಾರಿಗೊಳಿಸಲಾಗಿದೆ. ವೇಳಾಪಟ್ಟಿ ಈ ಕೆಳಗಿನಂತೆ ಇರುತ್ತದೆ.

ಮೇಲ್ಕಂಡಂತೆ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು ಗ್ರೇಡ್-2 ಹುದ್ದೆಗೆ ಮುಂಬಡ್ತಿ ನೀಡಲಿದ್ದೇವೆ. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು (PST), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ(GPT) ಹುದ್ದೆಗೆ ಮುಂಬಡ್ತಿ ನೀಡಲು/ವಿಲೀನಗೊಳಿಸುವ ಪ್ರಕ್ರಿಯೆಯನ್ನು ನಮ್ಮ ಹಂತದಲ್ಲಿ ಜರುಗಿಸಲು ಸರ್ಕಾರದಿಂದ ಇದುವರೆಗೆ ಸೂಕ್ತ ಅಧಿಸೂಚನೆ ಅಥವಾ ನಿರ್ದೇಶನ ಬಂದಿರುವುದಿಲ್ಲ. ಇದರಿಂದಾಗಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (GPT) ಒಟ್ಟು 4083 (ಸ್ಥಳೀಯ ವೃಂದದ 3300 ಹಾಗೂ ಉಳಿದ ಮೂಲ ವೃಂದದ 783) ಮುಂಬಡ್ತಿಯಿಂದ ಭರ್ತಿ ಮಾಡಬೇಕಾದ ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿರುತ್ತವೆ.

ಪ್ರಸ್ತುತ ವಿಭಾಗದಲ್ಲಿ ಕಾರ್ಯ ನಿರತ 18498 ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಬಹುತೇಕ ಶಿಕ್ಷಕರು ಪದವೀಧರರಾಗಿದ್ದು, ವೃತ್ತಿಪರ (ಡಿ.ಇಡಿ ಮತ್ತು ಬಿ.ಇಡಿ) ವಿದ್ಯಾರ್ಹತೆಯನ್ನು ಹೊಂದಿರುವುದರಿಂದ ಇವರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ(GPT) ಹುದ್ದೆಗೆ ಸುಲಭವಾಗಿ ಮುಂಬಡ್ತಿ ನೀಡಲು /ವಿಲೀನಗೊಳಿಸಬಹುದಾಗಿದೆ. 2016 ರಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳನ್ನು ಸೃಜಿಸಿ ಅವುಗಳನ್ನು ಭರ್ತಿ ಮಾಡಲು ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಿ ಜಾರಿಗೆ ತರಲಾಗಿದೆ.

 

ಸದರಿ ಹುದ್ದೆಗಳನ್ನು ಮುಂಬಡ್ತಿ ಮೂಲಕ ಭರ್ತಿ ಮಾಡಲು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅಧಿಸೂಚನೆ ಹೊರಡಿಸಿರುವುದಿಲ್ಲ. ಅದಲ್ಲದೆ, ಸದರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ (PST) ನಮ್ಮಲ್ಲಿ ಖಾಲಿ ಇರುವಂತಹ ಮುಂಬಡ್ತಿ ಮೂಲಕ ಭರ್ತಿ ಮಾಡಬಹುದಾದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ 1301 ಹುದ್ದೆಗಳಿಗೆ ಮುಂಬಡ್ತಿ ನೀಡಿ ಭರ್ತಿ ಮಾಡಬಹುದಾಗಿದೆ. ಇವುಗಳಲ್ಲಿ ಸ್ಥಳೀಯ ವೃಂದದ 1047 ಹಾಗೂ ಉಳಿದ ಮೂಲ ವೃಂದದ 254 ಹುದ್ದೆಗಳಿರುತ್ತವೆ.

ಮೇಲ್ಕಂಡ ವೇಳಾಪಟ್ಟಿಯಂತೆ, ದಿನಾಂಕ: 27.05.2025 ರಂದು ಸರ್ಕಾರದಿಂದ ಸೂಕ್ತ ನಿರ್ದೇಶನ ಬಂದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು (PST) ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ (GPT) ಮುಂಬಡ್ತಿ ಅಥವಾ ವಿಲೀನ ಮಾಡಿ ಕೌನ್ಸಿಲಿಂಗ ಮೂಲಕ ಭರ್ತಿ ಮಾಡಲು ಇಚ್ಛಿಸಿದ್ದೇವೆ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮುಂಬಡ್ತಿ ನೀಡಿ, ಅದೇ ದಿನದಂದು ಕೌನ್ಸಿಲಿಂಗ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಿದೆ. ಆದರೆ, ಇದ್ದಕ್ಕೆ ಸರ್ಕಾರದಿಂದ ಸೂಕ್ತ ನಿರ್ದೇಶನ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ.

ಸದರಿ ಪ್ರಕ್ರಿಯೆಗಳ ಕುರಿತು ಮಾರ್ಗದರ್ಶನ ಅಥವಾ ನಿರ್ದೇಶನ ಸರ್ಕಾರದಿಂದ ಆದಷ್ಟು ಬೇಗನೆ ದೊರೆತಲ್ಲಿ, ಕಲಬುರಗಿ ವಿಭಾಗದಲ್ಲಿ ಮುಂಬಡ್ತಿ ಕೋಟಾದಲ್ಲಿ ಖಾಲಿ ಇರುವ ಒಟ್ಟು 4083 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ(GPT) ಹುದ್ದೆಗಳನ್ನು ಹಾಗೂ 1301 ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ(PS_HM) ಹುದ್ದೆಗಳನ್ನು ಕೌನ್ಸಿಲಿಂಗ ಮೂಲ ಭರ್ತಿ ಮಾಡಲು ಅವಕಾಶವಿರುತ್ತದೆ. ಇದರಿಂದಾಗಿ ನಮ್ಮ ವಿಭಾಗದ ಒಟ್ಟು 5384 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅನುಕೂಲವಾಗುತ್ತದೆ.

 

ಉಲ್ಲೇಖ (1)ರನ್ವಯ ಜಾರಿಗೊಳಿಸಿದ ತಿದ್ದುಪಡಿ ವೃಂದ ಮತ್ತು ನೇಮಕಾತಿ ನಿಯಮಗಳನವ್ಯ ಪ್ರೌಢ ಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದದ 2878 ಹುದ್ದೆಗಳ ಜೊತೆಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (GPT) ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದಲ್ಲಿ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಒಟ್ಟು 8262 ಖಾಲಿ ಹುದ್ದೆಗಳು 2 ತಿಂಗಳ ಅವಧಿಯಲ್ಲಿ ಮುಂಬಡ್ತಿ ಮೂಲಕ ಭರ್ತಿ ಮಾಡಿದಂತಾಗುತ್ತದೆ.

ಆದ್ದರಿಂದ, ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ(PST) ಹುದ್ದೆಯಿಂದ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ(GPT) ಹುದ್ದೆಗೆ ಮುಂಬಡ್ತಿ ನೀಡಲು /ವಿಲೀನಗೊಳಿಸಲು ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್‌ಷಕರ ಹುದ್ದೆಗಳಿಗೆ ಮುಂಬಡ್ತಿ ನೀಡುವ ಕುರಿತು ಸರ್ಕಾರದಿಂದ ಸೂಕ್ತ ನಿರ್ದೇಶನ ನೀಡಲು ಕೋರಿದೆ.

 

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

1 thought on “PST Teacher Promotion: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು (PST), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ(GPT) ಹುದ್ದೆಗೆ ಮುಂಬಡ್ತಿ ನೀಡುವ/ವಿಲೀನಗೊಳಿಸುವ ಕುರಿತು-2025”

Leave a Comment

error: Content is protected !!