Bank Recuritment-2025 Application invitation for Lokal bank officer recruitment, here is the direct link to apply.
Notification published by Punjab-Sind Bank
ರ್ವಜನಿಕ ವಲಯದ ಪಂಜಾಬ್- ಸಿಂಧ್ ಬ್ಯಾಂಕ್ ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಆಹ್ವಾನಿಸಿದೆ.
ಒಟ್ಟು 110 ಹುದ್ದೆಗಳು ಖಾಲಿ ಇದ್ದು, ಇವುಗಳಲ್ಲಿ 10 ಹುದ್ದೆಗಳನ್ನು ಕರ್ನಾಟಕಕ್ಕೆ ಮೀಸಲಿಡಲಾಗಿದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ. ಸಧ್ಯ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಭ್ಯರ್ಥಿಗಳು ಫೆ.28ರೊಳಗೆ ಅರ್ಜಿಸಲ್ಲಿಸಬಹುದಾಗಿದೆ. ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲಿ ಪರಿಣತಿ ಹೊಂದಿದವರಿಗೆ ಮಾತ್ರ ಈ ಉದ್ಯೋಗ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಲೆ, ವಿಜ್ಞಾನ, ವಾಣಿಜ್ಯ, ಎಂಜಿನಿಯರಿಂಗ್ ಅಥವಾ ಯಾವುದೇ ವಿಭಾಗದಲ್ಲಿ ಪದವಿ ಪಡೆದಿದ್ದರೂ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆದರೆ, ಭಾರತ ಸರಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ನಿಗದಿತ ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯ.
ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ಮತ್ತು ಗರಿಷ್ಠ 30 ವರ್ಷ. ನಿಗದಿಪಡಿಸಿದ ಗರಿಷ್ಠ ವಯೋಮಿತಿಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಎಸ್ಸಿ/ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕದ ವಿವರ:
ಎಸ್ಸಿ, ಎಸ್ಟಿ, ವಿಶೇಷ ಚೇತನ ಅಭ್ಯರ್ಥಿಗಳಿಗೆ ಇಂಟಿಮೇಷನ್ ಫೀ ಮತ್ತು ಜಿಎಸ್ಟಿ ಸೇರಿ 100 ರೂ. ಉಳಿದೆಲ್ಲಾ ವರ್ಗದ ಅಭ್ಯರ್ಥಿಗಳು 850 ರೂ. ಶುಲ್ಕ ಪಾವತಿಸಲು ಸೂಚಿಸಲಾಗಿದೆ.
ಆಯ್ಕೆ ವಿಧಾನ ಹೇಗಿರುತ್ತದೆ?:
ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಗೆ 120 ಅಂಕ ನಿಗದಿಯಾಗಿದೆ. ಪರೀಕ್ಷೆಯಲ್ಲಿ ಇಂಗ್ಲಿಷ್ ಲಾಂಗ್ರೇಜ್, ಬ್ಯಾಂಕಿಂಗ್ ನಾಲೆಜ್, ಜನರಲ್ ಅವೇರ್ನೆಸ್, ಎಕಾನಮಿ ಮತ್ತು ಕಂಪ್ಯೂಟರ್ ಅಪ್ಟಿಟ್ಯೂಡ್ಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಕರ್ನಾಟಕದ ಎರಡು ಕೇಂದ್ರಗಳು ಸೇರಿದಂತೆ ದೇಶದಾದ್ಯಂತ ಪರೀಕ್ಷೆಗಳು ನಡೆಯಲಿವೆ.
ಗಮನಿಸಬೇಕಾದ ಮುಖ್ಯ ಅಂಶಗಳು:
▪️ಪರೀಕ್ಷೆಗೆ ಸಂಬಂಧಿಸಿದ ಪ್ರವೇಶಪತ್ರ ವನ್ನು ಬ್ಯಾಂಕ್ ವೆಬ್ಸೈಟ್ನಲ್ಲಿ ಮಾತ್ರವಲ್ಲ, ಇಮೇಲ್ ಮೂಲಕವೂ ಅಭ್ಯರ್ಥಿಗಳಿಗೆ ಕಳಿಸಲಾಗುತ್ತದೆ.
▪️ಒಮ್ಮೆ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿದ ಬಳಿಕ ಬದಲಾಯಿಸಲು ಅಗತ್ಯವಿಲ್ಲ.
▪️ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ವರ್ಷ ಪ್ರೊಬೆಷನರಿ ಅವಧಿ ಇರುತ್ತದೆ.
▪️ನೇಮಕಾತಿ ಹೊಂದಿದವರು
SMGS-IV ಗೆ ಬಡ್ತಿ ಪಡೆಯಬೇಕಾದರೆ ಆಯಾ ರಾಜ್ಯದಲ್ಲಿ ಕನಿಷ್ಠ 12 ವರ್ಷ ಸೇವೆ ಸಲ್ಲಿಸಿರಬೇಕು.
ಅರ್ಜಿ ಸಲ್ಲಿಸಲು ಕೊನೆ ದಿನ: ಫೆ.28
ತಿಂಗಳ ವೇತನ:
₹ 48, 480-85,920 ರೂ.
ಪರೀಕ್ಷಾ ಕೇಂದ್ರಗಳ ಮಾಹಿತಿ:
ಬೆಂಗಳೂರು ಮತ್ತು ಮೈಸೂರು
ಹೆಚ್ಚಿನ ವಿವರಗಳಿಗೆ: www.punjabandsindbank.co.in ಗೆ ಭೇಟಿ ನೀಡಿ.