Quiz: Flood Aware Be Prepared Quiz: Participate in the contest and win prizes

Participate in the contest and win prizes

 

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ [NDMA] MyGov ಸಹಯೋಗದೊಂದಿಗೆ,
ಸಿದ್ಧಪಡಿಸಲಾದ ಪ್ರವಾಹ ಜಾಗೃತಿ ಕುರಿತಾಗಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಆನ್‌ಲೈನ್ ಮೂಲಕ ನೋಂದಣಿ ಆರಂಭಿಸಲಾಗಿದೆ.

ಸಾಮಾನ್ಯವಾಗಿ ಭಾರಿ ಮಳೆ ಬೀಳುವಿಕೆಯ ಪರಿಣಾಮದಿಂದಾಗಿ ಉಂಟಾಗುವ ಸಾಧ್ಯತೆ ಇದೆ.ನದಿ ಅಥವಾ ಸಾಗರದ ನೀರಿನ ಉಕ್ಕಿ ಹರಿಯುವಿಕೆ, ಅಣೆಕಟ್ಟುಗಳ ಒಡೆಯುವಿಕೆ ಮತ್ತು ಹಿಮ ಕರಗುವಿಕೆಯಿಂದಾಗಿ ಅನೇಕ ಪ್ರದೇಶಗಳು ಪ್ರವಾಹವನ್ನು ಎದುರಿಸುತ್ತಿವೆ. ಕರಾವಳಿ ಪ್ರದೇಶಗಳಲ್ಲಿ, ಚಂಡಮಾರುತಗಳು ಮತ್ತು ಸುನಾಮಿಗಳು ಈ ಸ್ಥಿತಿಯನ್ನು ತರುತ್ತವೆ ಎಂದು ತಿಳಿದುಬಂದಿದೆ.

ಪ್ರವಾಹಗಳಿಂದ ಉಂಟಾಗುವ ದುಷ್ಪರಿಣಾಮ, ಪ್ರವಾಹ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಸ್ಥಾಪಿಸುವುದು ಬಹುಮುಖ್ಯವಾಗಿದೆ,

ಭಾರತ ಸರ್ಕಾರವು ಸಾರ್ವಜನಿಕರಲ್ಲಿ ಪ್ರವಾಹದ ಬಗ್ಗೆ ಜಾಗೃತಿಯನ್ನು ಮೂಡಿಸಲು ಮತ್ತು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ಉತ್ತೇಜಿಸುವಲ್ಲಿ NDMA, MyGov ಸಹಯೋಗದೊಂದಿಗೆ, ಆನ್‌ಲೈನ್ ಮೂಲಕ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಈ ಉಪಕ್ರಮವು ಪ್ರವಾಹ ಪೀಡಿತ ಪ್ರದೇಶಗಳು, ತಡೆಗಟ್ಟುವ ಕಾರ್ಯತಂತ್ರಗಳ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡುವುದು ಮತ್ತು ಪ್ರವಾಹ-ಸಂಬಂಧಿತ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಸನ್ನದ್ಧತೆಯನ್ನು ಉತ್ತೇಜಿಸುವುದು ಮತ್ತು ಪ್ರವಾಹದ ಕಾರಣಗಳು ಮತ್ತು ಪರಿಣಾಮಗಳ ಬಗ್ಗೆ ತಿಳಿಸುವುದಾಗಿದೆ.

ರಸಪ್ರಶ್ನೆಯು ಎಲ್ಲಾ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ, ಇದು 20 ಪ್ರಶ್ನೆಗಳನ್ನು 300 ಸೆಕೆಂಡುಗಳಲ್ಲಿ ಉತ್ತರಿಸಲು ಸಮಯೋಚಿತ ರಸಪ್ರಶ್ನೆ ಸ್ಪರ್ಧೆಯಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವವರಲ್ಲರಿಗೂ ಇ-ಪ್ರಮಾಣಪತ್ರ ಪಡೆಯಲು ಅವಕಾಶ ನೀಡಲಾಗಿದೆ.

ಪ್ರಥಮ ಸ್ಥಾನ ವಿಜೇತರಿಗೆ- ₹ 5000 ಜೊತೆಗೆ ಪ್ರಮಾಣಪತ್ರ

ದ್ವೀತಿಯ ಸ್ಥಾನ ವಿಜೇತರಿಗೆ– ₹ 3000 ಜೊತೆಗೆ ಪ್ರಮಾಣಪತ್ರ.

ತೃತೀಯ ಸ್ಥಾನ ವಿಜೇತರಿಗೆ– ₹ 2000 ಜೊತಗೆ ಪ್ರಮಾಣಪತ್ರ.

ಸಮಾಧಾನಕರ ಬಹುಮಾನ: 5 ಬಹುಮಾನ ತಲಾ ₹1000 ಜೊತಗೆ ಪ್ರಮಾಣಪತ್ರ ನೀಡಲಾಗುವುದು.

ಅಧಿಸೂಚನೆಗಾಗಿ- CLICK HERE


ನೋಂದಣಿಗಾಗಿ- CLICK HERE


ಅಧಿಕೃತ ಪೋರ್ಟಲ್ ಗಾಗಿ- CLICK HERE

14 thoughts on “Quiz: Flood Aware Be Prepared Quiz: Participate in the contest and win prizes”

Leave a Comment