Quiz on National Flag: ಕೇಂದ್ರ ಸರ್ಕಾರದ ವತಿಯಿಂದ ರಾಷ್ಟ್ರಧ್ವಜದ ಬಗ್ಗೆ ರಸಪ್ರಶ್ನೆ, ಭಾಗವಹಿಸಿ, ನೋಂದಣಿಗೆ ಕೊನೆಯ ದಿನಾಂಕ:15-08-2025

Quiz on National Flag: ಕೇಂದ್ರ ಸರ್ಕಾರದ ವತಿಯಿಂದ ರಾಷ್ಟ್ರಧ್ವಜದ ಬಗ್ಗೆ ರಸಪ್ರಶ್ನೆ, ಭಾಗವಹಿಸಿ, ನೋಂದಣಿಗೆ ಕೊನೆಯ ದಿನಾಂಕ:15-08-2025

Quiz on National Flag: ಕೇಂದ್ರ ಸರಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ(MYAS) ರಾಷ್ಟ್ರ ಧ್ವಜದ ಕುರಿತು ಆನ್‌ಲೈನ್ ಮೂಲಕ ರಸಪ್ರಶ್ನೆ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಲು  21 ರಿಂದ 29 ವರ್ಷ ವಯೋಮಿತಿ ಉಳ್ಳವರು ಭಾಗವಹಿಸಲು ಅನುವು ಮಾಡಿಕೊಡಲಾಗಿದೆ. ಈ ರಸಪ್ರಶ್ನೆ ಸ್ಪರ್ಧೆಯಲ್ಲಿ  25ಕ್ಕಿಂತ ಹೆಚ್ಚು ಅಂಕವನ್ನು ಪಡೆದ  ಸ್ಪರ್ಧಾರ್ಥಿಗಳು , ಕ್ರೀಡಾ ಸಚಿವರಾದ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಸಿಯಾಚಿನ್‌ಗೆ ಭೇಟಿ ನೀಡುವ ಸುವರ್ಣ ಅವಕಾಶ  ಪಡೆಯಲಿದ್ದಾರೆ.

ಕೇಂದ್ರ ಸಚಿವಾಲಯದ ಪ್ರಕಾರ, ಈ ರಸಪ್ರಶ್ನೆ ಸ್ಪರ್ಧೆಯು  “ದೇಶಭಕ್ತಿಯನ್ನು ಬೆಳೆಸುತ್ತದೆ ಮತ್ತು ಭಾರತದ ರಾಷ್ಟ್ರ ಧ್ವಜದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತದೆ”.

ಅಧಿಕೃತ “MYBharat ಪೋರ್ಟಲ್ (mybharat.gov.in) ನಲ್ಲಿ ಆಯೋಜನೆ ಮಾಡಲಾದ  ಈ ಆನ್‌ಲೈನ್ ಕ್ವಿಜ್ ನಲ್ಲಿ 21 ರಿಂದ 29 ವರ್ಷದ ಎಲ್ಲಾ ನಾಗರಿಕರು ಭಾಗವಹಿಸುವಿಕೆ ಮತ್ತು ತ್ರಿವರ್ಣ ಧ್ವಜದ ಬಗ್ಗೆ ತಮ್ಮ ಜ್ಞಾನ ಪರೀಕ್ಷೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗುತ್ತದೆ” ಎಂದು ಸಚಿವಾಲಯ ಮಹತ್ವದ ಮಾಹಿತಿ ತಿಳಿಸಿದೆ.


ಈ ಸ್ಪರ್ಧೆಯು ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಹಾಗೂ ಈ ಸ್ಪರ್ಧೆಯಲ್ಲಿ  ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಇ-ಪ್ರಮಾಣಪತ್ರವನ್ನು ಒದಗಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಸಿದ್ಧ “ಸಿಯಾಚಿನ್ ಭೇಟಿಗೆ ಸ್ಪರ್ಧೆಯಲ್ಲಿ  ವಿಜೇತರಾದವರ ಅಂದರೆ 21 ರಿಂದ 29 ವರ್ಷದೊಳಗಿನ ವಯೋಮಿತಿ ಉಳ್ಳ  ಯುವಕರಿಗೆ ಸೀಮಿತವಾಗಿರುತ್ತದೆ. ಟಾಪ್ ಸ್ಕೋರರ್‌ಗಳಲ್ಲಿ ಅಂತಿಮವಾಗಿ 25 ವಿಜೇತರನ್ನು ಕಂಪ್ಯೂಟರ್ ಆಧಾರಿತ ಲಾಟರಿ ವ್ಯವಸ್ಥೆಯ ಮೂಲಕ ಆಯ್ಕೆ ಮಾಡಲಾಗುತ್ತದೆ” ಎಂದು ಸಚಿವಾಲಯ ತಿಳಿಸಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ – CLICK HERE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!