Railway Recruitment-2025 Various Posts:ರೈಲ್ವೆಯಿಂದ ಬೃಹತ್ ನೇಮಕಾತಿ ಪ್ರಕಟಣೆ,30,307 ಹುದ್ದೆಗಳಿಗೆ ಶೀಘ್ರವೇ ಅಧಿಕೃತ ಅಧಿಸೂಚನೆ.
Railway Recruitment-2025 Various Posts: RRBಯು ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಆಧಾರ್ ಆಧರಿತ ಇ-ಕೆವೈಸಿ, ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಅಳವಡಿಕೆ ಸೇರಿದಂತೆ ಅನೇಕ ಕ್ರಮಗಳಿಗೆ ಮುಂದಾಗಿರುವ ಭಾರತೀಯ ರೈಲ್ವೆ ಇಲಾಖೆಯು ಈ ವರ್ಷ 50,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಚಾಲನೆ ನೀಡುವುದಾಗಿ ಜುಲೈ ಎರಡನೇ ವಾರದಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿತ್ತು . ಆದರೆ ಅದರ ಮೊದಲ ಭಾಗವಾಗಿ ಜುಲೈ ಆರಂಭದಲ್ಲಿಯೇ ಆರು ಸಾವಿರಕ್ಕೂ ಹೆಚ್ಚು ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೂ ಅಧಿಸೂಚನೆ ಹೊರಡಿಸಿತ್ತು.
ಇದೀಗ ರೈಲ್ವೆ ನೇಮಕ ಪರ್ವ ಮುಂದುವರಿದಿದ್ದು, ತಾಂತ್ರಿಕೇತರ ವಿಭಾಗದಲ್ಲಿ 30,307 ಹುದ್ದೆಗಳಿಗೆ ನೇಮಕಾತಿ ನಡೆಸುವುದಾಗಿ ಸರಕಾರದ ಅಧಿಕೃತ ಉದ್ಯೋಗ ಪತ್ರಿಕೆ ‘ಎಂಪ್ಲಾಯ್‌ಮೆಂಟ್ ನ್ಯೂಸ್’ನಲ್ಲಿ ಪ್ರಕಟಣೆ ಹೊರಡಿಸಿದೆ. ವಿವಿಧ ವಿಷಯಗಳಲ್ಲಿ ಪದವಿ ಪೂರ್ಣಗೊಳಿಸಿರುವ ಅರ್ಹ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಯಲ್ಲಿ ಕಳೆದ ವರ್ಷ 8,113 ಹುದ್ದೆಗಳನ್ನು ಪದವೀಧರರಿಗೂ ಹಾಗೂ 3,445 ಹುದ್ದೆಗಳನ್ನು ಪದವಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೂ ಮೀಸಲಿಡಲಾಗಿತ್ತು. ಆದರೆ, ಈ ವರ್ಷ ಬರೀ ಪದವೀಧರ ಕೆಟಗರಿಯಲ್ಲಿಯೇ ಬರೋಬ್ಬರಿ 30,307 ಹುದ್ದೆಗಳಿಗೆ ನೇಮಕಾತಿ ನಡೆಸುವುದಾಗಿ ರೈಲ್ವೆ ತಿಳಿಸಿದೆ. ಇದು ಈ ವರ್ಷದ ಬೃಹತ್ ನೇಮಕಾತಿಯೂ ಆಗಿರಲಿದೆ. ‘ಎಂಪ್ಲಾಯ್‌ಮೆಂಟ್ ನ್ಯೂಸ್’ ಪತ್ರಿಕೆಯಲ್ಲಿ ಪ್ರಕಟಿಸಿರುವಂತೆ ಆನ್‌ಲೈನ್ ಅರ್ಜಿ ಸಲ್ಲಿಕೆ ಆಗಸ್ಟ್ ಕೊನೆಯಲ್ಲಿ ಅಂದರೆ ಆ.30ರಿಂದ ಆರಂಭವಾಗಿ ಸೆಪ್ಟೆಂಬರ್ 29ಕ್ಕೆ ಕೊನೆಗೊಳ್ಳಲಿದೆ.
▪️ನೇಮಕ ನಡೆಯಲಿರುವ ಹುದ್ದೆಗಳ ವಿವರ:
▪️ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್ ವೈಸರ್- 6,235
▪️ಸ್ಟೇಷನ್ ಮಾಸ್ಟರ್- 5,623
▪️ಗೂಡ್ಸ್ ಟ್ರೇನ್ ಮ್ಯಾನೇಜರ್- 3,562
▪️ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್-7,520
▪️ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್-7,367
▪️ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಸಾಧ್ಯತೆ.
▪️ಆಗಸ್ಟ್ 30ರಿಂದ ಸೆಪ್ಟೆಂಬರ್ 29ರ ತನಕ ಅರ್ಜಿ ಸಲ್ಲಿಕೆ
▪️ಪದವೀಧರ ಅಭ್ಯರ್ಥಿಗಳಿಗೆ ಮಾತ್ರ ಉದ್ಯೋಗಾವಕಾಶ
▪️ಬೆಂಗಳೂರು ಆರ್‌ಆರ್‌ಬಿಯಿಂದಲೂ ನೇಮಕ ಪ್ರಕ್ರಿಯೆ
▪️ಎಂಪ್ಲಾಯ್‌ಮೆಂಟ್ ನ್ಯೂಸ್‌ನಲ್ಲಿ ಕಿರು ಪ್ರಕಟಣೆ
▪️18ರಿಂದ 36 ವರ್ಷದೊಳಗಿನವರಿಗೆ ಆಹ್ವಾನ
▪️ಹುದ್ದೆ ಮತ್ತು ಅರ್ಹತೆ ವಿವರ.
ಟಿಕೆಟ್ ಸೂಪರ್ ವೈಸರ್, ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೇನ್ ಮ್ಯಾನೇಜರ್, ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಹಾಗೂ ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವೀಧರರಾಗಿರಬೇಕು. ಕಲೆ, ವಾಣಿಜ್ಯ, ವಿಜ್ಞಾನ,ಎಂಜಿನಿಯರಿಂಗ್ ಸೇರಿದಂತೆ ಯಾವುದೇ ವಿಷಯದಲ್ಲಿ ಪದವಿ ಪಡೆದಿದ್ದರೂ ಅರ್ಜಿ ಸಲ್ಲಿಸುವ ಅವಕಾಶವಿದೆ. ಟೈಪಿಸ್ಟ್ ಕೆಟಗರಿಯ ಹುದ್ದೆಗಳಿಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಕಂಪ್ಯೂಟರ್ ಟೈಪಿಂಗ್ ಜ್ಞಾನ ಹೊಂದಿರುವುದು ಕಡ್ಡಾಯವಾಗಿರುತ್ತದೆ.
▪️ವಯೋಮಿತಿ:
18ರಿಂದ 36 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಎಲ್ಲಾ ಹುದ್ದೆಗಳಲ್ಲಿ ಇರುವಂತೆಯೇ ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
▪️ಪರೀಕ್ಷೆ ಹೇಗಿರುತ್ತದೆ?
ಕಳೆದ ವರ್ಷ ಈ ಹುದ್ದೆಗಳಿಗೆ ಕಂಪ್ಯೂಟರ್ ಆಧರಿತ ಪರೀಕ್ಷೆ (ಸಿಬಿಟಿ), ಕಂಪ್ಯೂಟರ್ ಆಪ್ಟಿಟ್ಯೂಡ್ ಟೆಸ್ಟ್ /ಟೈಪಿಂಗ್ ಸ್ಕಿಲ್ ಟೆಸ್ಟ್‌ಗಳ ಮೂಲಕ ಆಯ್ಕೆ ನಡೆದಿತ್ತು . ಇಲ್ಲಿ ಸಿಬಿಟಿ ಜತೆಗೆ ಸ್ಟೇಷನ್ ಮಾಸ್ಟರ್ ಹುದ್ದೆಗೆ ಕಂಪ್ಯೂಟರ್ ಆಪ್ಟಿಟ್ಯೂಡ್ ಟೆಸ್ಟ್ ಮತ್ತು ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗೆ ಟೈಪಿಂಗ್ ಸ್ಕಿಲ್ ಟೆಸ್ಟ್ ನಡೆಸಲಾಗಿತ್ತು. ಉಳಿದ ಎಲ್ಲಾ ಹುದ್ದೆಗಳಿಗೂ ಎರಡು ಹಂತದ ಸಿಬಿಟಿ ನಡೆಸಿ ಆಯ್ಕೆ ಮಾಡಲಾಗಿತ್ತು. ಸಿಬಿಟಿಯಲ್ಲಿ ತಪ್ಪು ಉತ್ತರಗಳಿಗೆ 1/3 ನೆಗೆಟಿವ್ ಅಂಕಗಳಿರುತ್ತವೆ. ನೇಮಕಾತಿ ವಿಧಾನದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆ. ಆದರೆ, ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಗಟ್ಟಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಕುರಿತು ರೈಲ್ವೆ ನೇಮಕ ಮಂಡಳಿ ಈಗಾಗಲೇ ಸೂಚನೆ ನೀಡಿದೆ.