RBI Assistant Jobs 2026: ಭಾರತೀಯ ರಿಸರ್ವ್ ಬ್ಯಾಂಕ್ ಸಹಾಯಕ ಹುದ್ದೆಗಳ ನೇಮಕಾತಿ ಪ್ರಕಟಣೆ
RBI Assistant Jobs 2026: ಭಾರತೀಯ ರಿಸರ್ವ್ ಬ್ಯಾಂಕ್ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ ಮತ್ತು ಆನ್ಲೈನ್ ಅರ್ಜಿ ವಿವರಗಳನ್ನು ಇಲ್ಲಿ ತಿಳಿಯಿರಿ.
▪️ಬೆಂಗಳೂರಿನಲ್ಲಿ 24 ಹುದ್ದೆ
▪️ಕನ್ನಡ ಮಾಧ್ಯಮದಲ್ಲೂ ಆನ್ಲೈನ್ ಪರೀಕ್ಷೆ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ದೇಶದ ವಿವಿಧಡೆಗಳಲ್ಲಿ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಒಟ್ಟು 650 ಸ್ಥಾನಗಳಿದ್ದು, ಬೆಂಗಳೂರು ಕಚೇರಿಯಲ್ಲಿ 24 ಹುದ್ದೆಗಳಿಗೆ ಎಂದು ತಿಳಿಸಲಾಗಿದೆ. ಈ ಹುದ್ದೆಗಳು ಕನ್ನಡ ಬಲ್ಲವರಿಗೆ ಮೀಸಲಾಗಿವೆ. ಯಾವುದೇ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಮಾ.8 ಕೊನೆಯ ದಿನವಾಗಿದೆ.
ಹುದ್ದೆಯ ವಿವರಗಳು:
▪️ಸಂಸ್ಥೆಯ ಹೆಸರು: ಭಾರತೀಯ ರಿಸರ್ವ್ ಬ್ಯಾಂಕ್ (RBI)
▪️ಒಟ್ಟು ಹುದ್ದೆಗಳು: 650
▪️ಹುದ್ದೆಯ ಹೆಸರು: ಸಹಾಯಕ (Assistant)
▪️ಉದ್ಯೋಗ ಸ್ಥಳ: ಅಖಿಲ ಭಾರತ
ಶೈಕ್ಷಣಿಕ ಅರ್ಹತೆ:
ಯಾವುದೇ ವಿಷಯದಲ್ಲಿ ಪದವೀಧರರಾಗಿರಬೇಕು. ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸಾಗಿರಬೇಕು. ಪರಿಶಿಷ್ಟರು ಹಾಗೂ ಅಂಗವಿಲಕರು ಉತ್ತೀರ್ಣರಾಗಿದ್ದಲ್ಲಿ ಸಾಕು.
ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ ತುಂಬಿರಬೇಕು. ಅಂದರೆ 20/02/1998 ಹಾಗೂ 01/02/20060 ನಡುವೆ ಜನಿಸಿರಬೇಕು.
▪️ಪರಿಶಿಷ್ಟ ವರ್ಗದವರಿಗೆ ಗರಿಷ್ಠ ವರ್ಷ ಅಂದರೆ 33 ವರ್ಷದವರೆಗೆ,
▪️ಹಿಂದುಳಿದ ವರ್ಗದವರಿಗೆ 3 ವರ್ಷ (ಗರಿಷ್ಠ 31 ವರ್ಷ),
▪️ಅಂಗವಿಕಲರಿಗೆ ಗರಿಷ್ಠ 10 ವರ್ಷಗಳ ವಿನಾಯ್ತಿಯನ್ನು ನೀಡಲಾಗುತ್ತದೆ.
▪️ವಿಧವೆ ಅಥವಾ ಪರಿತ್ಯಕ್ತಿಯರಿಗೆ ಗರಿಷ್ಠ 35 ವರ್ಷ ನಿಗದಿ ಮಾಡಲಾಗಿದೆ.
▪️ಮಾಜಿ ಸೈನಿಕರಾಗಿದ್ದಲ್ಲಿ ಸೇವಾವಧಿಯನ್ನು ಪರಿಗಣಿಸಿ ಗರಿಷ್ಠ 50 ವರ್ಷದವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಮಾಸಿಕ ಸಂಬಳ:
ಮಾಸಿಕ : ₹29,000- ₹78,640 ವರೆಗೆ ವೇತನ ದೊರೆಯಲಿದೆ.
ಅರ್ಜಿ ಶುಲ್ಕ:
▪️ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: 450 + 18% GST
▪️ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: 50 +18% GST
▪️ ಆರ್ಬಿಐ ಸಿಬ್ಬಂದಿ: ಯಾವುದೇ ಶುಲ್ಕವಿಲ್ಲ.
ಆಯ್ಕೆ ಪ್ರಕ್ರಿಯೆ:
▪️ಪೂರ್ವಭಾವಿ ಲಿಖಿತ ಪರೀಕ್ಷೆ
▪️ಮುಖ್ಯ ಲಿಖಿತ ಪರೀಕ್ಷೆ
▪️ಭಾಷಾ ಪ್ರಾವೀಣ್ಯತೆಯ ಪರೀಕ್ಷೆ
▪️ದಾಖಲೆಗಳ ಪರಿಶೀಲನೆ
▪️ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವುದು ಹೇಗೆ?
▪️ಆಸಕ್ತರು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
▪️ಆರ್ಬಿಐ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ rbi.org.in
▪️ಅಲ್ಲಿ “Opportunities@RBI’ ವಿಭಾಗದಲ್ಲಿ ಸಹಾಯಕ ಹುದ್ದೆಯ ಲಿಂಕ್ ಕ್ಲಿಕ್ ಮಾಡಿ.
▪️ನಿಮ್ಮ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಶುಲ್ಕ ಪಾವತಿಸಿ.
ಆನ್ಲೈನ್ ತರಬೇತಿ:
ಹಿಂದುಳಿದ ವರ್ಗದವರು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಬ್ಯಾಂಕ್ನಿಂದ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲಾಗುತ್ತದೆ. ಆಸಕ್ತರು ಇದಕ್ಕಾಗಿ ಆಯಾ ಆರ್ಬಿಐನ ಪ್ರಾದೇಶಿಕ ಕಚೇರಿಗೆ ಇಮೇಲ್ ಮೂಲಕ ಮಾಹಿತಿ ನೀಡತಕ್ಕದ್ದು.
ಪ್ರಮುಖ ದಿನಾಂಕಗಳು:
▪️ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ: 16-02-2026.
▪️ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-03-2026

▪️ಅಧಿಸೂಚನೆ – CLICK HERE
▪️ಆನ್ಲೈನ್ ಅರ್ಜಿ – CLICK HERE