Recruitment Application for 1,153 Posts of Deputy Manager, Assistant Managers in SBI. Direct link for application submission is provided.

ಎಸ್‌ಬಿಐನಲ್ಲಿ ಡೆಪ್ಯುಟಿ ಮ್ಯಾನೇಜ‌ರ್, ಅಸಿಸ್ಟೆಂಟ್  ಮ್ಯಾನೇಜರ್‌ಗಳ 1,153 ಹುದ್ದೆಗಳ ನೇಮಕಾತಿ ಅರ್ಜಿ.

ಡಿಜಿಟಲ್ ಮಾಹಿತಿ ಯುಗದಲ್ಲಿ
ತಂತ್ರಜ್ಞಾನಾಧಾರಿತ ಕೋರ್ಸ್ ಪೂರೈಸಿದವರಿಗೆ ಎಲ್ಲ ಕ್ಷೇತ್ರಗಳಲ್ಲೂ ಬೇಡಿಕೆಯಿದೆ. ಸದ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೊಡ್ಡಮಟ್ಟದಲ್ಲಿ ತಾಂತ್ರಿಕ ಪದವೀಧರರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಬಿಇ, ಬಿಟೆಕ್, ಎಂ,ಟೆಕ್, ಎಂ.ಸಿಎ, ಎಂ, ಎಸ್ಸಿ ವಿದ್ಯಾರ್ಹತೆಯುಳ್ಳವರು ಬ್ಯಾಂಕಿನ ಡೆಪ್ಯುಟಿ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಗಳಾಗಿ ಐಟಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಬಹುದು. ಡೆಪ್ಯುಟಿ ಮ್ಯಾನೇಜರ್ ನೇಮಕಕ್ಕೆ ಅನುಭವ ಮುಖ್ಯವಾಗಿದ್ದರೆ, ಅಸಿಸ್ಟೆಂಟ್ ಮ್ಯಾನೇಜರ್‌ಗಳನ್ನು ಆನ್‌ಲೈನ್ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?

ಡೆಪ್ಯುಟಿ ಮ್ಯಾನೇಜ‌ರ್ ಹುದ್ದೆಗೆ ಅನುಭವ, ವಿದ್ಯಾರ್ಹತೆ ಹಾಗೂ ವಿಶೇಷತೆಗಳ ಆಧಾರದಲ್ಲಿ ಆಯ್ದ ಅಭ್ಯರ್ಥಿಗಳನ್ನು ವಿವಿಧ ಹಂತಗಳ ಸಂದರ್ಶನ ಹಾಗೂ ಸಂವಾದಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಸಿಸ್ಟೆಂಟ್ ಮ್ಯಾನೇಜರ್‌ಗಳಿಗೆ ಸಾಮಾನ್ಯ ಜ್ಞಾನ ಹಾಗೂ ವೃತ್ತಿಪರ ತಿಳಿವಳಿಕೆಯ ಮಟ್ಟ ಅಳೆಯಲು ಆನ್‌ಲೈನ್ ಪರೀಕ್ಷೆ, ಸಂದರ್ಶನ ಇರಲಿದೆ. ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕವಿದೆ. ಉಳಿದವರಿಗೆ ಶುಲ್ಕವಿಲ್ಲ.

ಹುದ್ದೆಗಳ ಸಂಖ್ಯೆ & ವಿವರ

▪️ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್)

➖ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಮತ್ತು ಡೆಲಿವರಿ-187
➖ಇನ್‌ಫ್ರಾ ಸಪೋರ್ಟ್ ಆ್ಯಂಡ್ ಕ್ಲೌಡ್ ಆಪರೇಷನ್ಸ್-412
➖ನೆಟ್ವರ್ಕಿಂಗ್ ಆಪರೇಷನ್ಸ್-80
➖ಐಟಿ ಆರ್ಕಿಟೆಕ್ಟ್-27
➖ಇನ್‌ಫಾರ್ಮೇಷನ್‌ ಸೆಕ್ಯುರಿಟಿ-07

▪️ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್ಸ್‌)-784

➖ಬ್ಯಾಕ್‌ಲಾಗ್ ಹುದ್ದೆಗಳು ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್ಸ್)-14

ವಯೋಮಿತಿ: ಡೆಪ್ಯುಟಿ ಮ್ಯಾನೇಜರ್‌ಗಳಿಗೆ ಕನಿಷ್ಠ 25 ಹಾಗೂ ಗರಿಷ್ಠ 35 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಕನಿಷ್ಠ 21 ಗರಿಷ್ಠ 30 – ವರ್ಷದೊಳಗಿರಬೇಕು. ಒಟ್ಟು 64 ಹುದ್ದೆಗಳನ್ನು ವಿವಿಧ ರೀತಿಯ ಅಂಗವೈಕಲ್ಯ ಹೊಂದಿದ ಅಭ್ಯರ್ಥಿಗಳಿಗಾಗಿ ಮೀಸಲಿಡಲಾಗಿದೆ.

 

ವಿದ್ಯಾರ್ಹತೆ ಏನು?

ಆಯಾ ಹುದ್ದೆಗೆ ತಕ್ಕಂತೆ ಬಿಇ, ಬಿ.ಟೆಕ್, ಎಂ.ಟೆಕ್, ಎಂಸಿಎ, ಎಂ.ಎಸ್‌ಸಿ ಹಾಗೂ ತತ್ಸಮಾನ ವಿದ್ಯಾರ್ಹತೆಯನ್ನು ಕೇಳಲಾಗಿದೆ. ಮಾಹಿತಿ ತಂತ್ರಜ್ಞಾನಾಧಾರಿತ ಹುದ್ದೆಗಳು ಇವಾಗಿರುವುದರಿಂದ ವಿದ್ಯಾರ್ಹತೆ ಜತೆಗೆ, ಆಯಾ ಕ್ಷೇತ್ರದಲ್ಲಿ ಪರಿಣತಿ ಕೋರಲಾಗಿದೆ. ವಿದ್ಯಾರ್ಹತೆಯ ನಂತರದ ಅನುಭವವೂ ಅಪೇಕ್ಷಣಿಯವಾಗಿದೆ.

ವೇತನಶ್ರೇಣಿ ಹೇಗಿದೆ?

ಡೆಪ್ಯುಟಿ ಮ್ಯಾನೇಜರ್‌ಗಳಿಗೆ 64,820-93,960 ರೂ.ವರೆಗಿನ ವೇತನಶ್ರೇಣಿಯಿದೆ. ಅಸಿಸ್ಟೆಂಟ್ ಮ್ಯಾನೇಜರ್‌ಗಳಿಗೆ 48,480- 85920 ರೂ.ವರೆಗೆ ಸಂಬಳ ಇರಲಿದೆ. ಇದರ ಜತೆಗೆ, ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ಪಿಎಫ್, ಆರೋಗ್ಯ ವಿಮೆ ಸೌಲಭ್ಯ ಮೊದಲಾದವುಗಳನ್ನು ಒದಗಿಸಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳು ಒಂದು ವರ್ಷದ ಪ್ರೊಬೇಷನ್ ಅವಧಿಯನ್ನು ಪೂರೈಸಬೇಕಿರುತ್ತದೆ.

ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದವರು ಐದು ವರ್ಷಗಳ ಅವಧಿಯ ಸೇವಾ ಖಾತ್ರಿಗೆ 2 ಲಕ್ಷ ರೂ.ಗಳ ಬಾಂಡ್ ಸಲ್ಲಿಸಬೇಕಿರುತ್ತದೆ.

ಸಿಬಿಲ್ ಸ್ಕೋರ್ ಮುಖ್ಯ:

ಬ್ಯಾಂಕಿಂಗ್‌ ಹುದ್ದೆಗಳಿಗೆ ಸಿಬಿಲ್ ಸ್ಕೋರ್ ಮುಖ್ಯವಾಗುತ್ತದೆ. ಅರ್ಜಿದಾರರು ಬ್ಯಾಂಕ್ ಹಾಗೂ
ಇತರ ಹಣಕಾಸು ಸಂಸ್ಥೆಗಳಿಗೆ ಸುಸ್ತಿದಾರರಾಗಿದ್ದಲ್ಲಿ ಅಥವಾ ಕ್ರೆಡಿಟ್ ಸ್ಕೋರ್ ಉತ್ತಮವಾಗಿರದಿದ್ದಲ್ಲಿ ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ. ನೇಮಕಾತಿ ದಿನಾಂಕಕ್ಕೂ ಮುನ್ನ ಸಾಲ ಮರುಪಾವತಿಯನ್ನು ಮಾಡಿದ ಅಥವಾ ಹಾಗೂ ಕ್ರೆಡಿಟ್ ಸಂಸ್ಥೆಯಿಂದ ಆ ಬಗ್ಗೆ ಪಡೆದ ಪ್ರಮಾಣಪತ್ರವನ್ನು ಸಲ್ಲಿಸುವುದು ಅಗತ್ಯವಾಗಿದೆ.

ಅಭ್ಯರ್ಥಿಗಳು ಗಮನಿಸಬೇಕಾದ ಮುಖ್ಯಾಂಶ:

ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ.ಒಂದೇ ಹುದ್ದೆಗೆ ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದಲ್ಲಿ, ಪೂರ್ಣಪ್ರಮಾಣದ
ಕೊನೆಯದಾಗಿ ಸಲ್ಲಿಕೆಯಾದ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಅರ್ಜಿ ಸಲ್ಲಿಕೆ, ಶುಲ್ಕ ಪಾವತಿಗೆ ಕೊನೆಯ ದಿನಾಂಕ 04-10-2024

ಅಧಿಸೂಚನೆ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.- CLICK HERE

ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಇಲ್ಲಿ ಕ್ಲಿಕ್ ಮಾಡಿ- CLICK HERE

2 thoughts on “Recruitment Application for 1,153 Posts of Deputy Manager, Assistant Managers in SBI. Direct link for application submission is provided.”

Leave a Comment