Reductions in subsistence allowance-01

Reductions in subsistence allowance

Reductions in subsistence allowance

Reduction: ನೌಕರನನ್ನು ಅಮಾನತ್ತು ಮಾಡಿದ ಅವಧಿಯಲ್ಲಿ ನೌಕರನಿಗೆ ಜೀವನಾಧಾರ ಭತ್ಯೆಯನ್ನು KCSR – 98 ರನ್ವಯ ನೀಡಲಾಗುತ್ತದೆ.

ಅಮಾನತ್ತಿನಲ್ಲಿದ್ದ ನೌಕರನಿಗೆ ನೀಡಲಾಗುವ ಜೀವನಾದರ ಭತ್ಯೆ ಯಲ್ಲಿ ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಚೇದ – 94-ಎರ ಅನ್ವಯ ಯಾವುದೆಲ್ಲ ಕಡಿತ ಮಾಡಬೇಕು ಎಂಬಹುದು ತಿಳಿಸಿಕೊಡಲಾಗಿದೆ.

ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಚೆದ – 94-ಎ :-

94-ಎ:- (1) ಅಮಾನತ್ತಿನಲ್ಲಿರುವ ಸರ್ಕಾರಿ ನೌಕರನಿಗೆ ಮಂಜೂರು ಮಾಡಲಾದ ಜೀವನಾಧಾರ ಭತ್ಯದಿಂದ

(ಎ) ಕಡ್ಡಾಯ ಕಡಿತಗಳು

(ಬಿ) ಐಚ್ಚಿಕ ಕಡಿತಗಳು

(ಎ) ವರ್ಗದಲ್ಲಿ ಬರುವ ಈ ಮುಂದಿನ ಕಡಿತಗಳಲ್ಲಿ ಜೀವನಾಧಾರ ಭತ್ಯದಿಂದ ಕಡ್ಡಾಯವಾಗಿ ಕಡಿತ ಮಾಡಬೇಕು.

(i) (ಜೀವನಾಧಾರ ಭತ್ಯದ ಮೇಲೆ ಲೆಕ್ಕ ಮಾಡಲಾದ ನೌಕರನ ವಾರ್ಷಿಕ ಆದಾಯವು ತೆರಿಗೆಗೆ ಅರ್ಹವಾಗಿದ್ದರೆ) ವರಮಾನ ತೆರಿಗೆ ಮತ್ತು ಅಧಿಕ ತೆರಿಗೆ

(ii) ಮನೆ ಬಾಡಿಗೆ ಮತ್ತು ಸಂಬಂಧಪಟ್ಟ ವೆಚ್ಚ ಅಂದರೆ ವಿದ್ಯುಚ್ಛಕ್ತಿ, ನೀರು, ಪೀಠೋಪಕರಣ ಇತ್ಯಾದಿ

(ii) ಇಲಾಖಾ ಮುಖ್ಯಸ್ಥರು ನಿಗದಿ ಮಾಡಲು ಯೋಗ್ಯವೆಂದು ಭಾವಿಸಬಹುದಾದಂತಹ ದರಗಳ ಮೇರೆಗೆ ಸರ್ಕಾರದಿಂದ ಪಡೆದ ಸಾಲಗಳ ಮತ್ತು ಮುಂಗಡಗಳ ಮರುಸಂದಾಯ

(ಬಿ) ಬಿ ವರ್ಗದಲ್ಲಿ ಬರುವ ಮುಂದಿನ ಕಡಿತಗಳನ್ನು ಸರ್ಕಾರಿ ನೌಕರನ ಲಿಖಿತ ಒಪ್ಪಿಗೆ ಇಲ್ಲದೆ ಮಾಡಬಾರದು.

(ಎ) ಜೀವವಿಮಾ ಪತ್ರಗಳಿಗೆ ಸಲ್ಲಬೇಕಾದ ವಿಮಾ ಕಂತು

(ಬಿ) ಸಹಕಾರಿ ಬ್ಯಾಂಕುಗಳಿಗೆ ಮತ್ತು ಸಾಲ ನೀಡಿಕೆ ಸಹಕಾರಿ ಸಂಘಗಳಿಗೆ ಸಲ್ಲಬೇಕಾದ ಮೊಬಲಗು

(ಸಿ) ಸಾಮಾನ್ಯ ಭವಿಷ್ಯ ನಿಧಿಯಿಂದ ಪಡೆದ ಮುಂಗಡದ ಮರುಹಾವತಿ

94-ಎ (4) ಈ ಮುಂದೆ ಹೇಳಿದ ಈ ಸ್ವರೂಪದ ಕಡಿತಗಳನ್ನು ಜೀವನಾಧಾರ ಭತ್ಯದಿಂದ ಮಾಡಬಾರದು.

(i) ಸಾಮಾನ್ಯ ಭವಿಷ್ಯನಿಧಿ ವಂತಿಗೆ

(ii) ನ್ಯಾಯಾಲಯ ಜಪ್ತಿಗಳಿಗಾಗಿ ಸಲ್ಲಬೇಕಾದ ಮೊಬಲಗು

(i) ಸರ್ಕಾರದ ಯಾವ ನಷ್ಟಕ್ಕಾಗಿ ಸರ್ಕಾರಿ ನೌಕರನು ಜವಾಬ್ದಾರನಾಗಿರುತ್ತಾನೋ ಆ ನಷ್ಟದ ಕಡಿತ

ಟಿಪ್ಪಣಿ : ಜೀವನಾಧಾರ ಭತ್ಯೆಯಿಂದ ಅಧಿಕ ಸಂದಾಯಗಳ ಕಡಿತಗಳನ್ನು ಮಾಡಲು ಪ್ರತಿಬಂಧವಿಲ್ಲ ಇಂತಹ ಸಂದರ್ಭಗಳಲ್ಲಿ ಈ ಹಿಂದೆ ಅವನಿಗೆ ಅಧಿಕ ಸಂದಾಯವಾದ ಬಗೆಗಿನ ಕಡಿತದ ಆದೇಶವನ್ನು ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿಡಲು ಅಧಿಕಾರ ಪಡೆದ ಅಧಿ ಕಾರಿಯೊಡನ ಸಮಾಲೋಚನೆಯನ್ನು ನಡೆಸಿ ಮಹಾಲೇಖಪಾಲರು ಮಾಡಬೇಕು.

ಅಮಾನತ್ತು ಮಾಡುವ ಅಧಿಕಾರಿಯು ಆ ಕಡಿತವನ್ನು ಅಮಾನತ್ತಿನ ಅವಧಿಯಲ್ಲಿ ಸಂಪೂರ್ಣವಾಗಿ ತಡೆಹಿಡಿಯಬೇಕು. ಇಲ್ಲವೇ ಅದನ್ನು ಮಾಡಬೇಕೇ ಎಂಬುದನ್ನು ವಿವೇಚನಾನುಸಾರ ತೀರ್ಮಾರ್ಗುಬೇಕು.

ಕಡಿತವನ್ನು ಮಾಡಬೇಕೆಂದು ತೀರ್ಮಾನಿಸಿದರೆ ಕಡಿತದ ದರವು ಯಾವುದೇ ಸಂದರ್ಭದಲ್ಲಿ ಅವನಿಗೆ ದೊರೆಯುವ ಜೀವನಾಧಾರ ಮತ್ತು ಇತರ ಭತ್ಯೆಗಳ ಒಟ್ಟು ಮೊಬಲಗಿನ ಮೂರನೇ ಒಂದರಷ್ಟು ಮೀರಬಾರದು.

Leave a Comment

You cannot copy content of this page