Remuneration for Booth Level Officers: ಬೂತ್ ಮಟ್ಟದ ಅಧಿಕಾರಿಗಳ ಗೌರವಧನ ಹೆಚ್ಚಳ-2025
Remuneration for Booth Level Officers: ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಬೂತ್ ಮಟ್ಟದ ಅಧಿಕಾರಿಗಳ ವಾರ್ಷಿಕ ಗೌರವಧನವನ್ನು 6 ರಿಂದ 12 ಸಾವಿರ ರೂ.ಗಳಿಗೆ ಹೆಚ್ಚಿಸಲು ಭಾರತೀಯ ಚುನಾವಣಾ ಆಯೋಗ ನಿರ್ಧರಿಸಿದೆ.
ಬೂತ್ ಮಟ್ಟದ ಅಧಿಕಾರಿಗಳ ಗೌರವಧನವನ್ನು 2015ರಲ್ಲಿ ಪರಿಷ್ಕರಿಸಲಾಗಿತ್ತು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿರುವ ಬೂತ್‌ಮಟ್ಟದ ಅಧಿ ಕಾರಿ, ಸೂಪರ್ ವೈಸರ್‌ಗಳ ಗೌರವಧನವನ್ನು ಸಹ ಹೆಚ್ಚಿಸಲಾಗಿದೆ. ಈ ಮೊದಲು 12 ಸಾವಿರ ರೂ. ಇದ್ದ ಗೌರವಧನವನ್ನು ಈಗ 18 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಇದೇ ಮೊದಲ ಬಾರಿಗೆ, ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್‌ಒ) ಮತ್ತು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳಿಗೆ (ಎಇಆರ್‌ಒ) ಸಹ ಗೌರವಧನ ನೀಡಲು ಆಯೋಗ ನಿರ್ಧರಿಸಿದೆ. ಇಆರ್‌ಒಗಳಿಗೆ 30 ಸಾವಿರ ರೂ. ಮತ್ತು ಎಇಆರ್‌ಒ 25 ಸಾವಿರ ರೂ. ಗೌರವಧನ ನೀಡಲಾಗುವುದು ಎಂದು ಅಯೋಗ ಹೇಳಿಕೊಂಡಿದೆ.



ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.