RTE ಶುಲ್ಕ ಮರುಪಾವತಿ ಪ್ರಸ್ತಾವನೆಗಳನ್ನು ತುರ್ತಾಗಿ ಇತ್ಯರ್ಥಪಡಿಸುವ ಬಗ್ಗೆ -2024

RTE  ಶುಲ್ಕ ಮರುಪಾವತಿ ಪ್ರಸ್ತಾವನೆಗಳನ್ನು ತುರ್ತಾಗಿ ಇತ್ಯರ್ಥಪಡಿಸುವ ಕುರಿತು.

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 2024-25ನೇ ಸಾಲಿನ RTE ಶುಲ್ಕ, ಮರುಪಾವತಿಗೆ ಸಂಬಂಧಿಸಿದ ಶಾಲೆಗಳು ಆನ್‌ಲೈನ್ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ದಿನಾಂಕ : 30.10.2024 ರಿಂದ ತಂತ್ರಾಂಶ ಬಿಡುಗಡೆ ಮಾಡಲಾಗಿದೆ.

ಈ ಸಂಬಂಧ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು ( ಆಡಳಿತ) ಇವರು ತಮ್ಮ ವ್ಯಾಪ್ತಿಯಲ್ಲಿನ 2024-25ನೇ ಸಾಲಿನ RTE ಶುಲ್ಕ ಮರುಪಾವತಿಗೆ ಅರ್ಹವಿರುವ ಶಾಲೆಗಳ ಮುಖ್ಯ ಶಿಕ್ಷಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದಿನಾಂಕ : 06.11.2024 ರಂದು ಪೂವಾಹ್ನ 11.00 ಗಂಟೆಯೊಳಗೆ ಆನ್‌ಲೈನ್ ಸಭೆ ಆಯೋಜಿಸಿ ಶಾಲಾ ಮುಖ್ಯಸ್ಮರಿಗೆ ಮಧ್ಯಾಹ್ನದೊಳಗೆ ನಿಯಮಾನುಸಾರ ಬೇಡಿಕೆ ಸಲ್ಲಿಸುವಂತೆ ಮತ್ತು ಈ ಬೇಡಿಕೆಗಳನ್ನು ಅದೇ ದಿನದ ಸಂಜೆಯೊಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ನಿಯಮಾನುಸಾರ ಇತ್ಯರ್ಥಪಡಿಸುವಂತೆ ಸಂಬಂಧಿಸಿದವರಿಗೆ ಸೂಚಿಸುವುದು.

ಈ ರೀತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್ ಇಂದ ಉಪನಿರ್ದೇಶಕರ ಲಾಗಿನ್‌ಗೆ ಬಂದ ಪ್ರಸ್ತಾನೆಗಳನ್ನು ಸದರಿ ದಿನದಂದೇ ನಿಯಮಾನುಸಾರ ಇತ್ಯರ್ಥಪಡಿಸಿ ಮುಂದಿನ ಹಂತವಾದ ಆಯುಕ್ತರು/ಅಪರ ಆಯುಕ್ತರ ಲಾಗಿನ್‌ಗೆ ಸಲ್ಲಿಸುವುದು. ಹಾಗೂ ಎಲ್ಲಾ ಹಂತಗಳಲ್ಲಿ ಅನುಮೋದನೆಯಾದ ಪ್ರಸ್ತಾವನೆಗಳಿಗೆ ಕೂಡಲೇ ಮಂಜೂರಾತಿ ಆದೇಶ ಮುದ್ರಿಸುವುದು.

ಮುಂದುವರೆದು ವಿವಿಧ ಹಂತಗಳಲ್ಲಿ ಬಾಕಿಯಿರುವ 2023-24 ಹಾಗೂ 2022-23ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಸ್ತಾವನೆಗಳನ್ನು ದಿನಾಂಕ : 06.11.2024 ರಂದು ಕಡ್ಡಾಯವಾಗಿ ಇತ್ಯರ್ಥಪಡಿಸಿ, ಎಲ್ಲಾ ಹಂತಗಳಲ್ಲಿ ಅನುಮೋದನೆಯಾದ ಪ್ರಸ್ತಾವನೆಗಳಿಗೆ ಅಂದೇ ಮಂಜೂರಾತಿ ಆದೇಶ ಮುದ್ರಿಸಲು ಸೂಚಿಸಿದೆ.

ಮಂಜೂರಾತಿ ಆದೇಶ ಮುದ್ರಿಸಲಾದ RTE ಶುಲ್ಕ ಮರುಪಾವತಿ ಪ್ರಸ್ತಾವನೆಗಳಿಗೆ ಅದೇ ದಿನದಂದೇ ಮಾನ್ಯ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಕಛೇರಿ, ಬೆಂಗಳೂರು ರವರು 2024-25ನೇ ಸಾಲಿಗೆ PFMS ಮೂಲಕ ಜಿಲ್ಲೆಗಳಿಗೆ ಬಿಡುಗಡೆ ಮಾಡಿರುವ ಕೇಂದ್ರ ಪುರಸ್ಕೃತ ಯೋಜನೆಯ ಅನುದಾನದಿಂದಲೇ ವೆಚ್ಚ ಭರಿಸಿ ಶಾಲೆಗಳ ಬ್ಯಾಂಕ್ ಖಾತೆಗೆ ಹಣ ಜಮ ಮಾಡುವುದು. PFMS ಅಡಿ ಬಿಡುಗಡೆ ಆದ ಅನುದಾನ ಸಂಪೂರ್ಣ ವೆಚ್ಚದ ನಂತರ ಆರ್.ಟಿ.ಇ. ಶುಲ್ಕ ಮರುಪಾವತಿಗೆ ಕೆ2/ನೆಫ್ಟ್ ಮೂಲಕ ಬಿಡುಗಡೆ ಮಾಡಲಾಗಿರುವ ಅನುದಾನವನ್ನು ಬಳಕೆ ಮಾಡಲು ತಿಳಿಸಿದೆ.

ಮೇಲ್ಕಂಡ ಅಂಶಗಳಂತೆ ಪ್ರಥಮಾದ್ಯತೆ ಎಂದು ಪರಿಗಣಿಸಿ ತುರ್ತು ಕ್ರಮವಹಿಸಲು ಸೂಚಿಸಿದೆ.

 

CLICK HERE TO DOWNLOAD

Leave a Comment