RTE Karnataka Admission Process:2025-26 ನೇ ಸಾಲಿಗೆ ಪ್ರವೇಶ ಪ್ರಕ್ರಿಯೆ ಆರಂಭ
RTE Karnataka Admission Process -2025-26: 2025-26 ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ-2009 ರ ಸೆಕ್ಷನ್ 12(1)(ಬಿ) ಮತ್ತು ಸೆಕ್ಷನ್ 12(1) (ಸಿ)ಅಡಿ ಪ್ರವೇಶ ಪ್ರಕ್ರಿಯೆಯ ಬಗ್ಗೆ.
2025-26ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 12(1)(ಬಿ) ಮತ್ತು 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆ ನಡೆಸಲು ಉಲ್ಲೇಖ (5) ಮತ್ತು (7) ರ ಸರ್ಕಾರದ ಆದೇಶದಂತೆ ನೆರೆಹೊರೆಯನ್ನು ಈ ಕೆಳಕಾಣಿಸಿದಂತೆ ವ್ಯಾಖ್ಯಾನಿಸಲಾಗಿದೆ.
ನೆರೆಹೊರೆ
1. ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಿಸಿದ ಕಂದಾಯ ಗ್ರಾಮದ ಭೌಗೋಳಿಕ ಗಡಿ;
II. ಶಾಲೆ ಇರುವ ನಗರ ಸಭೆ, ಟೌನ್ ಮುನಿಸಿಪಲ್ ಕೌನ್ಸಿಲ್ ಮತ್ತು ಪಟ್ಟಣ ಪಂಚಾಯಿತಿಯ ಭೌಗೋಳಿಕ ಗಡಿ;
il. ಮಹಾನಗರ ಪಾಲಿಕೆಗಳು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿ ವಾರ್ಡ್ ಭೌಗೋಳಿಕ ಗಡಿ.
ಈಗಾಗಲೇ ಉಲ್ಲೇಖ(9)ರಂತೆ 2025-26ನೇ ಸಾಲಿನ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶಾಲೆಗಳ ಮ್ಯಾಪಿಂಗ್ ಮಾಡುವ ಕುರಿತು ಕಳುಹಿಸಿರುವ ಸುತ್ತೋಲೆಯನ್ನು ಮುಂದುವರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು (ಆಡಳಿತ) ಈ ಕೆಳಕಾಣಿಸಿದ ಕ್ರಮ ತೆಗೆದುಕೊಳ್ಳಲು ತಿಳಿಸಿದೆ.
1. ನೆರೆಹೊರೆಯಲ್ಲಿರುವ ಯಾವುದೇ ಶಾಲೆಯನ್ನು ಕೈಬಿಡದಂತೆ ಎಲ್ಲಾ ಸರ್ಕಾರಿ, ಬಿ.ಬಿ.ಎಂ.ಪಿ. ಶಾಲೆಗಳು ಅನುದಾನಿತ ಮತ್ತು ಅನುದಾನರಹಿತ, ಶಾಲೆಗಳನ್ನು ಮ್ಯಾಪ್ ಮಾಡುವುದು.
2. ಅಲ್ಪಸಂಖ್ಯಾತ ಶಾಲೆಗಳೆಂದು ಘೋಷಣಾ ಪತ್ರ ಪಡೆದಿರುವ, ಈಗಾಗಲೇ ಮುಚ್ಚಿರುವ ಮತ್ತುನ್ಯಾಯಾಲಯದ ತಡೆಯಾಜ್ಞೆ ಪಡೆದಿರುವ ಶಾಲೆಗಳನ್ನು ಪಟ್ಟಿಯಿಂದ ಕೈಬಿಡುವುದು.
3. ಎಲ್.ಕೆ.ಜಿ. ಮತ್ತು ಯು.ಕೆ.ಜಿ ತರಗತಿಗಳನ್ನು ಮಾತ್ರ ನಡೆಸುವ ಶಾಲೆಗಳನ್ನು ಪಟ್ಟಿಯಲ್ಲಿ ಸೇರಿಸಬಾರದು.
ಅಲ್ಪಸಂಖ್ಯಾತವಲ್ಲದ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ದಿನಾಂಕ: 31.12.2024 ರಲ್ಲಿದ್ದಂತೆ ಎಲ್.ಕೆ.ಜಿ. ಮತ್ತು 1 ನೇ ತರಗತಿಯ ಮಾನ್ಯತೆ ಪಡೆದ ವಿಭಾಗಗಳಿಗೆ ಅನುಗುಣವಾಗಿ ದಾಖಲಾತಿ ಸಂಖ್ಯೆಯನ್ನು ಎಸ್.ಎ.ಟಿ.ಎಸ್. ತಂತ್ರಾಂಶದ ಆಧಾರದ ಮೇಲೆ ಶೇ.25% ಸೀಟು ಹಂಚಿಕೆಗೆ ಪರಿಗಣಿಸಲಾಗುವುದು.
2025-26ನೇ ಸಾಲಿನಲ್ಲಿ ಕಾಯ್ದೆಯ ಸೆಕ್ಷನ್ 12(1) (ಬಿ) ಮತ್ತು 12(1)(ಸಿ) ಅನ್ವಯ ಪ್ರವೇಶ ಪ್ರಕ್ರಿಯೆಗೆ ನಿಗಧಿಪಡಿಸಿದ ವೇಳಾಪಟ್ಟಿಯನ್ನು ಈ ಸುತ್ತೋಲೆಗೆ ಲಗತ್ತಿಸಿದೆ. ವೇಳಾಪಟ್ಟಿ ಪ್ರಕಾರ ಸಂಬಂಧಿಸಿದ ಪ್ರಾಧಿಕಾರ ಸಕಾಲಿಕ ಕ್ರಮ ತೆಗೆದುಕೊಳ್ಳುವುದು. ಆನ್‌ಲೈನ್ ತಂತ್ರಾಂಶದಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಅನುಕೂಲವಾಗುವಂತೆ ಪ್ರತಿ ವರ್ಷದಂತೆ ಅಗತ್ಯ ಗಣಕಯಂತ್ರ ವ್ಯವಸ್ಥೆ ಮತ್ತು ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು.
ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವ ಮೊದಲು ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಇಲ್ಲದಿರುವುದನ್ನು ಖಾತರಿ ಪಡಿಸಿಕೊಂಡು ನೆರೆಹೊರೆಯಲ್ಲಿರುವ ಅಲ್ಪಸಂಖ್ಯಾತವಲ್ಲದ ಅಧಿಕೃತ ಅನುದಾನ ರಹಿತ ಶಾಲೆಗಳ ಅಂತಿಮ ಪಟ್ಟಿ ಹಾಗೂ ಸದರಿ ಶಾಲೆಗಳಲ್ಲಿ ಮಾನ್ಯತೆ ಪಡೆದ ವಿಭಾಗಗಳಿಗೆ ಅನುಗುಣವಾಗಿ ಶಾಲಾವಾರು ಶೇಕಡಾ 25ರ ಪ್ರಮಾಣದಲ್ಲಿ ಲಭ್ಯವಿರುವ ಸೀಟುಗಳ ಸಂಖ್ಯೆಯನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಅದರಂತೆ ಉಪನಿರ್ದೇಶಕರು(ಆಡಳಿತ)ರವರ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯ ಸೂಚನಾ ಫಲಕಗಳಲ್ಲಿ ಪ್ರಕಟಿಸಲು ಕ್ರಮವಹಿಸುವುದು.
ಅನುದಾನಿತ ಶಾಲೆಗಳಲ್ಲಿ ಅನುದಾನದ ಅನುಪಾತಕ್ಕೆ ಅನುಗುಣವಾಗಿ ಸೆಕ್ಷನ್ 12(1)(ಬಿ) ಅಡಿ 1ನೇ ತರಗತಿಗೆ ಶಾಲಾವಾರು ಮಾನ್ಯತೆ ಪಡೆದ ವಿಭಾಗಗಳಿಗೆ ಅನುಗುಣವಾಗಿ ಶೇಕಡಾ 25ರ ಪ್ರಮಾಣದಲ್ಲಿ ಲಭ್ಯವಿರುವ ಸೀಟುಗಳ ಮಾಹಿತಿಯನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಅದರಂತೆ ತಮ್ಮ ಕಛೇರಿಯ ಸೂಚನಾ ಫಲಕಗಳಲ್ಲಿ ಪ್ರಕಟಿಸಲು ಕ್ರಮವಹಿಸುವುದು.
ನೆರೆಹೊರೆ ಶಾಲೆಗಳಿಗೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ಆಕ್ಷೇಪಣೆಗಳನ್ನು ಸ್ವೀಕರಿಸಿ, ದತ್ತಾಂಶ ಪರಿಶೀಲಿಸಿ, ನೈಜತೆಯನ್ನು ಖಾತರಿ ಪಡಿಸಿಕೊಂಡು ತಂತ್ರಾಂಶದಲ್ಲಿ ಅಪ್ ಲೋಡ್ ಮಾಡುವುದು ಕ್ಷೇತ್ರಶಿಕ್ಷಣಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಉಪನಿರ್ದೇಶಕರ ಕಛೇರಿಯಿಂದ ಈ ಕುರಿತು ಅನುಪಾಲನೆ ಮಾಡಲು ತಿಳಿಸಿದೆ.
ಅರ್ಜಿ ಸಲ್ಲಿಸುವ ಕ್ರಮ ಹಾಗೂ ಪರಿಶೀಲನೆ:
ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟಿಗಾಗಿ ಪ್ರವೇಶ ಕೋರುವ ಮಗು ಮತ್ತು ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಕಡ್ಡಾಯ. ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ ಸೀಟು ಬಯಸುವ ಪಾಲಕರು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗಳಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಉಚಿತವಾಗಿ ಅಥವಾ ಸರ್ಕಾರದ ಪಾವತಿ ಕೇಂದ್ರಗಳಾದ ಬೆಂಗಳೂರು ನಗರದಲ್ಲಿ, ಬೆಂಗಳೂರು-ಒನ್, ಇತರೆ ನಗರ ಪ್ರದೇಶಗಳಲ್ಲಿ ಕರ್ನಾಟಕ-ಒನ್, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಆಟಲ್‌ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಶಾಲೆಗಳ ಆದ್ಯತೆ ನಮೂದಿಸಿ ಅರ್ಜಿಯನ್ನು ಸಲ್ಲಿಸಬಹುದು. ತಂದೆ/ತಾಯಿ/ಪಾಲಕರ ಬಳಿ ಸ್ವಂತ ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್ ಸೌಲಭ್ಯ ಲಭ್ಯವಿದ್ದಲ್ಲಿ ಆನ್‌ಲೈನ್ ಮುಖಾಂತರ ನೇರವಾಗಿ ಅರ್ಜಿ ಸಲ್ಲಿಸಬಹುದು.
ಜಾತಿ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಆರ್.ಡಿ. ಸಂಖ್ಯೆಯನ್ನು ನಿಗದಿತ ಕಾಲಂನಲ್ಲಿ ಸರಿಯಾಗಿ ನಮೂದಿಸುವುದು. ಈ ದಾಖಲೆಗಳನ್ನು ಆಪ್ ಲೋಡ್ ಮಾಡುವ ಅವಶ್ಯಕತೆ ಇಲ್ಲ. ಅರ್ಜಿ ಸಲ್ಲಿಸುವಾಗಲೇ ತಂತ್ರಾಂಶದ ಮೂಲಕ ನಿಜಕಾಲಿಕ ಪರಿಶೀಲನೆ ನಡೆಸಿ, ಸದರಿ ದಾಖಲೆಗಳ ನೈಜತೆಯನ್ನು ಖಾತರಿ ಪಡಿಸಿಕೊಳ್ಳಲಾಗುವುದು.
ವಿಶೇಷ ಪ್ರವರ್ಗದಡಿ ಮೀಸಲಾತಿ ಕೋರುವ ಪೋಷಕರು ಸೂಕ್ತ ಕಾಲಂನಲ್ಲಿ ನಿರ್ದಿಷ್ಟವಾಗಿ ಮೀಸಲಾತಿ ಕೋರಿರುವ ಪ್ರವರ್ಗವನ್ನು ನಮೂದಿಸುವುದು ಹಾಗೂ ಸದರಿ ಪ್ರವರ್ಗಕ್ಕೆ ಸಂಬಂಧಿಸಿದ ದಾಖಲೆಯನ್ನು ತಂತ್ರಾಂಶದಲ್ಲಿ ಆಪ್‌ಲೋಡ್ ಮಾಡುವುದು.
ಅನಾಥ ಮಗು, ವಿಶೇಷ ಅಗತ್ಯತೆಯುಳ್ಳ ಮಗು (ಸಿ.ಡಬ್ಲ್ಯೂ.ಎಸ್.ಎನ್), ಹೆಚ್.ಐ.ವಿ. ಸೋಂಕಿತ /ಭಾದಿತ ಮಗು, ವಲಸೆ ಮತ್ತು ಬೀದಿ ಮಗು, ಬರಗಾಲದ ಕಾರಣ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಮಗು, ಮಂಗಳಮುಖಿ ಇತ್ಯಾದಿ ವಿಶೇಷ ಪ್ರವರ್ಗದಡಿ ಮೀಸಲಾತಿ ಕೋರಿ ಸಲ್ಲಿಸಿರುವ ಅರ್ಜಿಗಳ ಮತ್ತು ದಾಖಲೆಗಳ ನೈಜತೆಯನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಖುದ್ದಾಗಿ ಮೂಲ ದಾಖಲೆಗಳೊಂದಿಗೆ ತಾಳೆ ನೋಡಿ, ಪರಿಶೀಲಿಸಿ ಸರಿಯಿದಲ್ಲಿ ಮಾತ್ರ ದಾಖಲೆಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವುದು.
ಅನಾನುಕೂಲ ಪರಿಸ್ಥಿತಿಯಲ್ಲಿರುವ ಮತ್ತು ದುರ್ಬಲ ವರ್ಗದ ಮಕ್ಕಳ ಧೃಢೀಕರಣ ಮತ್ತು ಪರಿಶೀಲನೆ:
1. ಶಿಕ್ಷಣ ಹಕ್ಕು ಕಾಯಿದೆ ಅಡಿ ಪ್ರವೇಶದ ಉದ್ದೇಶಕ್ಕಾಗಿ ಬರಗಾಲದ ಕಾರಣ ದಿನಾಂಕ; 01.04.2015ರಂದು ಅಥವಾ ತದನಂತರ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಮಕ್ಕಳನ್ನು ಅನಾನುಕೂಲ ಪರಿಸ್ಥಿತಿಯಲ್ಲಿರುವ ಗುಂಪಿಗೆ ಸೇರಿದ ಮಕ್ಕಳು ಎಂದು ಪರಿಗಣಿಸಲಾಗುವುದು.
2. సిటు ಹಂಚಿಕೆಯಾದಂತಹ ಅನಾಥ ಮಗು, ವಿಶೇಷ ಅಗತ್ಯತೆಯುಳ್ಳ ಮಗು(ಸಿ.ಡಬ್ಲ್ಯು.ಎಸ್.ಎನ್), ಹೆಚ್.ಐ.ವಿ ಭಾಧಿತ/ಸೋಂಕಿತ ಮಗು, ವಲಸೆ ಮತ್ತು ಬೀದಿ ಮಗು, ಬರಗಾಲದ ಕಾರಣ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಮಗು, ಮಂಗಳಮುಖಿ ಇತ್ಯಾದಿ ವಿಶೇಷ ಪ್ರವರ್ಗದಡಿ ಪ್ರವೇಶ ಪಡೆಯುವ ಮೊದಲು ಸೂಕ್ತ ಪ್ರಮಾಣ ಪತ್ರವನ್ನು ಪರಿಶೀಲನೆಗಾಗಿ ಒದಗಿಸತಕ್ಕದ್ದು.
3. ವಿಶೇಷ ವರ್ಗ ಮತ್ತು ದುರ್ಬಲ ವರ್ಗವೂ ಸೇರಿದಂತೆ ಅನಾನುಕೂಲ ಪ್ರವರ್ಗದ ಮೀಸಲಾತಿ ಕೋರುವ ಪ್ರಮಾಣ ಪತ್ರಗಳು ಮತ್ತು ಪ್ರಮಾಣ ಪತ್ರ ವಿತರಿಸುವ ಹಾಗೂ ಅಂತಹ ಮೀಸಲಾತಿಯನ್ನು ಪರಿಶೀಲಿಸುವ ಸಕ್ಷಮ ಪ್ರಾಧಿಕಾರಗಳನ್ನು ಈ ಕೆಳಕಾಣಿಸಿದ ಪಟ್ಟಿಯಲ್ಲಿ ವಿವರಿಸಲಾಗಿದೆ.


ಕ್ರಮಸಂಖ್ಯೆ (6)ರಿಂದ (9)ರ ವರೆಗಿನ ಅರ್ಜಿದಾರರು ಅರ್ಜಿ ಸಲ್ಲಿಸುವಾಗ ಪ್ರಮಾಣ ಪತ್ರಗಳ ನೈಜತೆ ಮತ್ತು ವಿವರಗಳ ದೃಢೀಕರಣಕ್ಕಾಗಿ ಅಟಲ್‌ಜಿ ಜನಸ್ನೇಹಿ ಕೇಂದ್ರ ವಿತರಿಸಿರುವ ಪ್ರಮಾಣ ಪತ್ರದ ಸರಿಯಾದ ಆರ್.ಡಿ. (R.D) ಸಂಖ್ಯೆಯನ್ನು ನಮೂದಿಸತಕ್ಕದ್ದು. ತಂತ್ರಾಂಶದ ಮೂಲಕ ಅಟಲ್‌ಜಿ ಜನಸ್ನೇಹಿ ಕೇಂದ್ರದೊಂದಿಗೆ ನಡೆಸುವ ಪರಿಶೀಲನ ನಿಜಕಾಲಿಕ(Realtime)ವಾಗಿರುತ್ತದೆ.
ವಾಸಸ್ಥಳ ದೃಢೀಕರಣ ಆಯ್ಕೆ ವಿಧಾನ ಮುಂತಾದ ಪ್ರಕ್ರಿಯೆಗಳನ್ನು ಉಲ್ಲೇಖ(6)ರ ಆದೇಶದಂತೆ ಕ್ರಮ ವಹಿಸಲಾಗುವುದು.
ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 1-8 ನೇ ತರಗತಿವರೆಗೆ ಕಾಯಿದೆಯ ಸೆಕ್ಷನ್ 12(1)(ಬಿ) ಪಕಾರ ಸದರಿ ಶಾಲೆ ಸರ್ಕಾರದಿಂದ ಪಡೆಯುವ ಅನುದಾನದ ಅನುಪಾತಕ್ಕೆ ಅನುಗುಣವಾಗಿ ಉಚಿತ ಸೀಟುಗಳ ಶೇಕಡ ಪ್ರಮಾಣ ನಿರ್ಧಾರವಾಗುತ್ತದೆ. 2025-26ನೇ ಸಾಲಿನಲ್ಲಿ ಪ್ರಾರಂಭಿಕ ತರಗತಿಯಾದ 1ನೇ ತರಗತಿಗೆ ನಿಗದಿತ ಶೇಕಡ 25 ಪ್ರಮಾಣದ ಸೀಟುಗಳಿಗೆ ಅನಾನುಕೂಲ ಪರಿಸ್ಥಿತಿಯಲ್ಲಿರುವ ಹಾಗೂ ದುರ್ಬಲ ವರ್ಗದ ಮಕ್ಕಳಿಗೆ ಸೀಟು ಹಂಚಿಕೆ ಮಾಡಲಾಗುವುದು.
ಪೋಷಕರಿಗೆ ಎಸ್.ಎಂ.ಎಸ್ ಸಂದೇಶ: ತಂತ್ರಾಂಶದ ಮೂಲಕ ನೈಜತೆ ತಾಳೆ ಆಗದ ಅಪೂರ್ಣ ಅಥವಾ ಕ್ರಮಬದ್ಧವಲ್ಲದ ಅರ್ಜಿಗಳ ಬಗ್ಗೆ ತಂದೆ/ತಾಯಿ ಪೋಷಕರ ಮೊಬೈಲಿಗೆ ದೋಷಗಳನ್ನು ಓ ಸರಿಪಡಿಸಲು ಎಸ್.ಎಂ.ಎಸ್. ಕಳುಹಿಸಲಾಗುವುದು. ಸಂಬಂಧಿಸಿದ ಪೋಷಕರು ಸಕಾಲಕ್ಕೆ ಪ್ರತಿಕ್ರಿಯಿಸುವುದು.
ಉಲ್ಲೇಖ-8ರ ಸರ್ಕಾರದ ಆದೇಶ ಸಂಖ್ಯೆ: ಇಪಿ 100 ಪಿಜಿಸಿ 2024 ದಿನಾಂಕ:26.06.2024 ರನ್ವಯ ಎಲ್.ಕೆ.ಜಿ ತರಗತಿಗೆ ಕನಿಷ್ಟ ವಯೋಮಿತಿ 04 ವರ್ಷ ಮತ್ತು ಗರಿಷ್ಠ ವಯೋಮಿತಿ 06 ವರ್ಷಗಳಾಗಿದ್ದು ಮತ್ತು 01ನೇ ತರಗತಿಗೆ ಕನಿಷ್ಠ 06 ವರ್ಷ ಮತ್ತು ಗರಿಷ್ಠ 08 ವರ್ಷವೆಂದು ಆದೇಶವಾಗಿರುವಂತೆ ಮಕ್ಕಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಆರ್.ಟಿ.ಇ ಅಡಿ ದಾಖಲಾತಿ ಬಯಸುವ ಪೋಷಕರು ನಕಲಿ ಆಧಾರ್ ಮತ್ತು ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹ ಪೋಷಕರ ವಿರುದ್ಧ ಕಾನೂನು ರೀತ್ಯ ಶಿಸ್ತು ಕ್ರಮ ಜರುಗಿಸಲು ಕ್ರಮವಹಿಸಲಾಗುವುದು. ಹಾಗೂ ಆರ್.ಟಿ.ಇ ಸೀಟು ಹಂಚಿಕೆಯಾದಲ್ಲಿ ಸೀಟನ್ನು ರದ್ದುಪಡಿಸಲಾಗುವುದು.
ಕುಂದುಕೊರತೆಗಳ ವಿಲೇವಾರಿ:
1. ಶಿಕ್ಷಣ ಹಕ್ಕು ಕಾಯಿದೆಯಡಿ ಪ್ರವೇಶ ಕೋರಿ ಅರ್ಜಿ ಸಲ್ಲಿಸುವಾಗ ಸಮಸ್ಯೆಗಳು ಉಂಟಾದರೆ ನ್ಯೂನತೆ ಸರಿಪಡಿಸಲು ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ.
2. ಸದರಿ ತಂತ್ರಾಂಶದಲ್ಲಿ ನಿರ್ದಿಷ್ಟ ದೂರುಗಳನ್ನು ಅಗತ್ಯ ದಾಖಲೆಗಳೊಂದಿಗೆ ದಾಖಲಿಸಿ ನ್ಯೂನತೆ ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪೋಷಕರು ಸದರಿ ತಂತ್ರಾಂಶವನ್ನು ಸದುಪಯೋಗ ಮಾಡಿಕೊಳ್ಳಬಹುದು.
ಉಪನಿರ್ದೇಶಕರು(ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆರ್.ಟಿ.ಇ. ನೋಡಲ್ ಅಧಿಕಾರಿಗಳು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸುವುದು ಎಂದು ತಿಳಿಸಲಾಗಿದೆ.


RTE-2025 APPLICATION SUBMISSION PROCCESS-TRIAL
ಅಧಿಕೃತ ಸುತ್ತೋಲೆ ಡೌನ್ಲೋಡ್ ಮಾಡಲು -CLICK HERE
ಘಟಕವಾರು ಅಂತಿಮ ತಾತ್ಕಾಲಿಕ ನೆರೆಹೊರೆ ಶಾಲಾ ಪಟ್ಟಿ: 2025- CLICK HERE
ಇದನ್ನೂ ನೋಡಿ…..
𝗖𝗛𝗘𝗖𝗞 𝗬𝗢𝗨𝗥 𝗣𝗨𝗖 𝗘𝗫𝗔𝗠-01 𝗥𝗘𝗦𝗨𝗟𝗧𝗦 2025
ದ್ವಿತೀಯ ಪಿಯುಸಿ 2 ಮತ್ತು 3ನೇ ಪರೀಕ್ಷೆ ಬರೆಯಲು ಸಂಪೂರ್ಣ ಶುಲ್ಕ ವಿನಾಯಿತಿ