SA-2 Marks Entry in SATS: SATS ನಲ್ಲಿ SA-2 ಅಂಕಗಳನ್ನು ನಮೂದಿಸುವ ಬಗ್ಗೆ
SA-2 Marks Entry in SATS: SATS ನಲ್ಲಿ SA-2 ಅಂಕಗಳನ್ನು ನಮೂದಿಸುವ ಬಗ್ಗೆ ಆದೇಶ ಪ್ರಕಟವಾಗಿದೆ.6ರಿಂದ 9ನೇ ತರಗತಿಯ SA-2 ಅಂಕಗಳನ್ನು SATS ಪೋರ್ಟಲ್ನಲ್ಲಿ ಸರಳವಾಗಿ ನಮೂದಿಸುವ ವಿಧಾನ, ಹಂತ ಹಂತದ ಮಾರ್ಗದರ್ಶಿ ಮತ್ತು ಪ್ರಮುಖ ಸೂಚನೆಗಳು ಇಲ್ಲಿ ತಿಳಿದುಕೊಳ್ಳಿ.
2025-26ನೇ ಸಾಲಿನ ರಾಜ್ಯ ಪಠ್ಯಕ್ರಮದ 6 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕನವು (SA-2) ಈಗಾಗಲೇ ದಿನಾಂಕ 05.03.2026 ರ ಸುತ್ತೋಲೆಯನ್ವಯ ರಾಜ್ಯಾದ್ಯಂತ ಪ್ರಗತಿಯಲ್ಲಿರುತ್ತದೆ.
ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲು ಮತ್ತು ಫಲಿತಾಂಶವನ್ನು ಸಮುದಾಯ ದತ್ತ ಶಾಲೆ ಕಾರ್ಯಕ್ರಮದಲ್ಲಿ ಪೋಷಕರೊಂದಿಗೆ ಹಂಚಿಕೊಳ್ಳಲು, SA2 ಮೌಲ್ಯಾಂಕನದ ಅಂಕಗಳನ್ನು ಕಾಲಮಿತಿಯಲ್ಲಿ SATS (Student Achievement Tracking System) ತಂತ್ರಾಂಶದಲ್ಲಿ
ದಾಖಲಿಸುವುದು ಅತ್ಯಗತ್ಯವಾಗಿರುತ್ತದೆ. ಪ್ರಸ್ತುತ 6 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಗ್ರೇಡ್ ಗಳನ್ನು ನಮೂದಿಸಲು ಮಾತ್ರ ಅವಕಾಶವಿದ್ದು ಉಲ್ಲೇಖ 384 ರಂತೆ ಶೈಕ್ಷಣಿಕ ಗುಣಮಟ್ಟದ ಸಮಗ್ರ ವಿಶ್ಲೇಷಣೆಗಾಗಿ SATS ತಂತ್ರಾಂಶದಲ್ಲಿ ಅಂಕಗಳನ್ನು ನಮೂದಿಸಲು ಅನುಕೂಲವಾಗವಂತೆ ಪ್ರತಿ ವಿಷಯದ ಲಿಖಿತ, ಮೌಖಿಕ ಮತ್ತು ಆಂತರಿಕ ಮೌಲ್ಯಾಂಕನದ ಅಂಕಗಳನ್ನು ಇಂದೀಕರಿಸಲು ಹಾಗೂ Grade Auto Generate ಆಗುವಂತೆ ಅವಕಾಶ ಕಲ್ಪಿಸಲಾಗಿದೆ.
ಅದರಂತೆ, SATS ತಂತ್ರಾಂಶದಲ್ಲಿ 1 ರಿಂದ 5ನೇ ತರಗತಿಗೆ ಈ ಹಿಂದೆ ಇರುವಂತೆ Old Menu ನಲ್ಲಿ ಗ್ರೇಡ್ ಗಳನ್ನು ನಮೂದಿಸುವುದು ಹಾಗೂ 6 ರಿಂದ 9ನೇ ತರಗತಿಗೆ SA-2 Student Result Entry ಎಂಬ New Menu ಅಡಿಯಲ್ಲಿ ಅಂಕಗಳನ್ನು ನಮೂದಿಸುವುದು ಮತ್ತು ಸದರಿ ಫಲಿತಾಂಶವನ್ನು ಆಧರಿಸಿ ವಿಶ್ಲೇಷಣೆ ಮಾಡಿ, ವಿಶ್ಲೇಷಣಾ ವರದಿಗನುಣವಾಗಿ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಕ್ರಿಯಾ ಯೋಜನೆಯನ್ನು ರೂಪಿಸಿ ಗುಣಮಟ್ಟದ ಕಲಿಕೆಗೆ ಅಗತ್ಯ ಕ್ರಮವಹಿಸಲು ತಿಳಿಸಿದೆ.
