Scholarship-2024
ಶಿಷ್ಯವೇತನ ಅರ್ಜಿ ಅವಧಿ ವಿಸ್ತರಣೆ,ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಯೋಜನೆವಿವಿಧ ಸ್ಕಾಲರ್‌ಶಿಪ್ ಪಡೆಯಲು ಡಿ.31ರವರೆಗೂ ಇದೆ ಅವಕಾಶ.
Scholarship-2024-25 ಕಾಲೇಜು ಶಿಕ್ಷಣ ಇಲಾಖೆಯು 2024-25 ನೇ ಸಾಲಿನ ಸರ್ಕಾರಿ ಹಾಗೂ ಅನುದಾನಿತ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನೀಡುವ ವಿವಿಧ ವಿದ್ಯಾರ್ಥಿವೇತನಗಳಿಗೆ ಎಸ್‌ಎಸ್‌ಪಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕವನ್ನು ಡಿ.31ರವರೆಗೆ ವಿಸ್ತರಣೆ ಮಾಡಿದೆ. ಒಟ್ಟು 6 ಶಿಷ್ಯವೇತನಗಳ ಅರ್ಜಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಒಂದೇ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಅರ್ಹರು ssp.postmatric.karnataka. gov.in ಮೂಲಕ ಅರ್ಜಿ ಸಲ್ಲಿಸಬಹುದು.
ಕಲಾ ಮತ್ತು ವಾಣಿಜ್ಯ ಪದವಿ ವಿದ್ಯಾರ್ಥಿನಿಯರಿಗೆ ಸಂಚಿ ಹೊನ್ನಮ್ಮ ಪ್ರತಿಭಾ ವಿದ್ಯಾರ್ಥಿವೇತನ, ವಿಜ್ಞಾನ ಪದವಿ ವಿದ್ಯಾರ್ಥಿನಿಯರಿಗೆ ಸರ್.ಸಿ.ವಿ. ರಾಮನ್ ಪ್ರತಿಭಾ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಸರ್ಕಾರಿ, ಅನುದಾನಿತ/ಅನುದಾನರಹಿತ ಪದವಿ/ಸ್ನಾತಕೋತ್ತರ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ವಿಶೇಷ ಪಾಲನಾ ಮತ್ತು ವಿಶೇಷ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಅಥವಾ ಪಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಪದವಿ ಓದುತ್ತಿರುವ ಸೈನಿಕ ಸಿಬ್ಬಂದಿ
ಮಕ್ಕಳ ಕಾಲೇಜು ಶುಲ್ಕ ಮರುಪಾವತಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪದವಿ ವಿದ್ಯಾರ್ಥಿಗಳ ಬೋಧನಾ ಶುಲ್ಕ ಮರುಪಾವತಿ ಮತ್ತು ಸರ್ಕಾರಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲ ವರ್ಗದವರಿಗೆ ಹೆಣ್ಣುಮಕ್ಕಳ ಶುಲ್ಕ ಮರುಪಾವತಿ ಮಾಡಲಾಗುತ್ತದೆ. ಈ ಎಲ್ಲ ಶಿಷ್ಯವೇತನಗಳ ಅರ್ಜಿ ಸಲ್ಲಿಕೆಗೂ ದಿನಾಂಕ ವಿಸ್ತರಣೆ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.