School Electricity bill: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯುತ್ ಬಿಲ್ಲನ್ನು ನೇರವಾಗಿ ರಾಜ್ಯ ಇಲಾಖೆಯಿಂದ ಭರ್ತಿ ಮಾಡುತ್ತಿದ್ದು ರಾಜ್ಯದ ಯಾವುದೇ ಸರ್ಕಾರಿ ಶಾಲೆಯ ಮುಖ್ಯ ಗುರುಗಳು ವಿದ್ಯುತ್ ಬಿಲ್ಲನ್ನು ಪಾವತಿಸದಂತೆ ನಿರ್ದೇಶನ ನೀಡಿರುವ ಕುರಿತು.
School Electricity bill:
ರಾಜ್ಯದ ಎಲ್ಲಾ ಅರ್ಹ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲು ತ್ರೈಮಾಸಿಕವಾರು ವಿದ್ಯುತ್ ಬಿಲ್‌ನ್ನು ನೇರವಾಗಿ ಸಂಬಂಧಿಸಿದ ಎಸ್ಕಾಂನ ಮುಖ್ಯ ಕಛೇರಿಗಳಿಗೆ ರಾಜ್ಯ ಕಛೇರಿ ಹಂತದಲ್ಲೇ ಪಾವತಿಸುತ್ತಿರುವ ಬಗ್ಗೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2024-25ನೇ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲು ಉಲ್ಲೇಖಿತ ಪತ್ರದಲ್ಲಿ ಸರ್ಕಾರವು ಆದೇಶಿಸಿರುತ್ತದೆ ಹಾಗೂ ಸಂಬಂಧಪಟ್ಟ ವಿದ್ಯುತ್ ನಿಗಮಗಳು ತಮ್ಮ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಶಾಲಾ-ಕಾಲೇಜುಗಳ ಮಾಸಿಕ ಬಿಲ್ಲುಗಳಲ್ಲಿ ಬಳಕೆ ಮೊತ್ತವನ್ನು ನಮೂದಿಸಿ, ಶೂನ್ಯ ಬಿಲ್ಲುಗಳನ್ನು ನೀಡುವಂತೆ ಹಾಗೂ ಬಿಲ್ಲುಗಳ ಮೊತ್ತವನ್ನು ತ್ರೈಮಾಸಿಕವಾರು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರಿಗೆ ಸಲ್ಲಿಸಿ, ಮರುಪಾವತಿ ಪಡೆದುಕೊಳ್ಳಲು ಆದೇಶಿಸಿರುತ್ತದೆ.
ಪ್ರಸ್ತುತ ಬೆಂಗಳೂರು, ಗುಲ್ಬರ್ಗಾ, ಹುಬ್ಬಳ್ಳಿ, ಮಂಗಳೂರು ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತಗಳಿಂದ ಸರ್ಕಾರಿ ಶಾಲೆಗಳ ವಿದ್ಯುತ್ ಬಿಲ್ ಪಾವತಿಗೆ ಈ ಕಛೇರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಪೈಕಿ ಅನುದಾನದ ಲಭ್ಯತೆಯನ್ನಾಧರಿಸಿ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ ಮತ್ತು ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ರವರಿಗೆ 2024-25ನೇ ಸಾಲಿನ ಏಪ್ರಿಲ್ – 2024ರ ಮಾಹೆಯಿಂದ ಡಿಸೆಂಬರ್ – 2024 ರವರೆಗೆ ಒಟ್ಟು 03 ತ್ರೈಮಾಸಿಕದ ಅನುದಾನವನ್ನು ಈ ಕಛೇರಿ ಹಂತದಲ್ಲೇ ಸರ್ಕಾರದ ಆದೇಶದಂತೆ ನೇರವಾಗಿ ಎಸ್ಕಾಂ ಮುಖ್ಯ ಕಛೇರಿಗೆ ಅನುದಾನ ಪಾವತಿಸಲಾಗಿದೆ.
ಉಳಿದ ವಿದ್ಯುತ್ ಸರಬರಾಜು ನಿಗಮಗಳಿಗೂ ಸಹ ಈ ಕಛೇರಿ ಹಂತದಲ್ಲೇ ವಿದ್ಯುತ್ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ.
ಮುಂದುವರೆದು 2024-25ನೇ ಸಾಲಿನ ಏಪ್ರಿಲ್ – 2024 ರ ಮಾಹೆಯಿಂದ ಅನ್ವಯವಾಗುವಂತೆ ಸರ್ಕಾರಿ ಶಾಲೆಗಳ ವಿದ್ಯುತ್ ಬಿಲ್ ಗಳನ್ನು ಈ ಕಛೇರಿ ಹಂತದಲ್ಲೇ ಪಾವತಿಸಲಾಗುತ್ತಿದ್ದು, ಜಿಲ್ಲಾ ಹಂತದಲ್ಲಿ ಈ ಬಗ್ಗೆ ತಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ವಿದ್ಯುತ್ ಬಿಲ್ ಪಾವತಿಸದಂತೆ ನಿರ್ದೇಶನ ನೀಡುವಂತೆ ತಿಳಿಸಿದೆ.
