School Record Caste Correction Proposals- 2026: ಸರ್ಕಾರಕ್ಕೆ ಸಲ್ಲಿಸಿರುವ ಮಹತ್ವದ ಪ್ರಸ್ತಾವನೆಗಳ ಸಂಪೂರ್ಣ ಮಾಹಿತಿ
School Record Caste Correction Proposals– 2026: ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ (5) ಮತ್ತು ಉಲ್ಲೇಖ (6) ರ ಪತ್ರಗಳಲ್ಲಿ ಶಾಲಾ
ದಾಖಲಾತಿಯಲ್ಲಿ ಜಾತಿಯನ್ನು ತಿದ್ದುಪಡಿ ಮಾಡುವ ಬಗ್ಗೆ “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಾತಿಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯು ಆಡಳಿತ ಇಲಾಖೆಯಾಗಿದ್ದು ಮತ್ತು ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಹಾಗೂ ಇತರೆ ಹಿಂದುಳಿದ ವರ್ಗಗಳ ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ 1990 ಕಾಯ್ದೆಯಂತೆ ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿರುವುದರಿಂದ ಈ ಬಗ್ಗೆ ಸ್ಪಷ್ಟಿಕರಣ. ನೀಡಲು ಸಮಾಜ ಕಲ್ಯಾಣ ಇಲಾಖೆ ಸೂಕ್ತ ಪ್ರಾಧಿಕಾರವಾಗಿರುತ್ತದೆ ಎಂದು ತಿಳಿಸಿ ಮಾರ್ಗದರ್ಶನ ಹಾಗೂ ಸ್ಪಷ್ಟಿಕರಣ ನೀಡುವಂತೆ ಕೋರಲಾಗಿರುತ್ತದೆ ಎಂದು ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ರವರು ತಿಳಿಸಿರುತ್ತಾರೆ.
ಮುಂದುವರೆದಂತೆ, ಈ ಕೆಳಕಂಡ ಆದೇಶ ಮತ್ತು ಸುತ್ತೋಲೆಗಳಲ್ಲಿ ಜಾತಿ ತಿದ್ದುಪಡಿ ಕುರಿತು ಮಾರ್ಗದರ್ಶನ ನೀಡಿರುವ ಕುರಿತು ತಿಳಿಸಿರುತ್ತಾರೆ.
i. ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ: ಇಡಿ 16 ಡಿಟಿಬಿ 2017 ದಿನಾಂಕ:-17.02.2018 ರಲ್ಲಿ ವಿದ್ಯಾರ್ಥಿಗಳ ಶಾಲಾ ದಾಖಲಾತಿಗಳಲ್ಲಿ ಜಾತಿ ತಿದ್ದುಪಡಿ ಮಾಡುವ ಬಗ್ಗೆ ನಿರ್ದೇಶನವನ್ನು ನೀಡಲಾಗಿರುತ್ತದೆ.
ii. ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ:- ಸಕಇ 41 ಎಸ್ಎಡಿ 2022 ದಿನಾಂಕ:- 02.07.2022 ರಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯ ಮತ್ತು ಮಾನ್ಯ ಉಚ್ಚ ನ್ಯಾಯಾಲಯಗಳು “ಜಾತಿ” ಮತ್ತು “ಜಾತಿ ಪ್ರಮಾಣ ಪತ್ರ’ ಗಳ ಬಗ್ಗೆ ಕಾಲಕಾಲಕ್ಕೆ ಹೊರಡಿಸಿರುವ ಆದೇಶಗಳನುಸಾರ ಕ್ರಮ ಜರುಗಿಸುವ ಬಗ್ಗೆ ಸ್ಪಷ್ಟಿಕರಣ ನೀಡಿಲಾಗಿರುತ್ತದೆ.
iii. ಆಯುಕ್ತ ಕಛೇರಿ ಸುತ್ತೋಲೆ ಸಂ:-4(4)ತಾ.ದಾ.ವಿ. ಜಾ.ತಿ.ಪ-08:2019-20 ದಿನಾಂಕ: 20.04.2020 ರಲ್ಲಿ ಸಹ ‘ಶಾಲಾ ದಾಖಲೆಗಳಲ್ಲಿ ತಪ್ಪು ಜಾತಿ ನಮೂದಾಗಿದ್ದರೆ ಶಿಕ್ಷಣ ಇಲಾಖೆಯು ಅದನ್ನು ಸರಿಪಡಿಸಬೇಕಾದಲ್ಲಿ ಸಂಬಂಧಪಟ್ಟ ಅರ್ಜಿದಾರರು ಮೊದಲು ಜಾತಿ ಪ್ರಮಾಣ ಪತ್ರ ಪಡೆಯಬೇಕಾಗಿದೆ ಮತ್ತು ಅದರ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸಬಹುದಾಗಿರುತ್ತದೆ” ಎಂದು ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ರವರಿಗೆ ತಿಳಿಸಲಾಗಿರುತ್ತದೆ.
ಮೇಲಿನ ಆದೇಶ/ ಸುತ್ತೋಲೆಗಳನ್ನು ಹೊರಡಿಸಲಾಗಿದ್ದರೂ, ಸಹ ಶಾಲಾ ದಾಖಲಾತಿಗಳಲ್ಲಿ ಜಾತಿಯನ್ನು ತಿದ್ದುಪಡಿ ಮಾಡುವ ಬಗ್ಗೆ ಸ್ಪಷ್ಟಿಕರಣ ಕೋರಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯ ಅಧೀನಕ್ಕೆ ಒಳಪಡುವ ಜಿಲ್ಲಾ ಕಛೇರಿಗಳಿಂದ ಆಗಿಂದಾಗ್ಗೆ ಪತ್ರಗಳು ಸ್ವೀಕೃತಿಯಾಗಿರುತ್ತವೆ, ಆದ್ದರಿಂದ ಸರ್ಕಾರದಿಂದ ಈಗಾಗಲೇ ದಿ: 17-02-2018 & ದಿ:-02-07-2022ರ ಸರ್ಕಾರದ ಸುತ್ತೋಲೆಗಳಲ್ಲಿ ಸ್ಪಷ್ಟಿಕರಣ / ನಿರ್ದೇಶನವನ್ನು ನೀಡಲಾಗಿರುವುದರಿಂದ ಅದರಂತೆ ಅಗತ್ಯ ಕ್ರಮವಹಿಸುವಂತೆ ತಿಳಿಸಿ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಲು ಕೋರಿರುತ್ತಾರೆ.
ಶಾಲಾ ದಾಖಲಾತಿಯಲ್ಲಿ ಜಾತಿ ತಿದ್ದುಪಡಿ ಸಂಬಂಧ ಈಗಾಗಲೇ ಈ ಮೇಲಿನ ಸರಕಾರದ ಆದೇಶ/ ಸುತ್ತೋಲೆಗಳನ್ನು ಜಾರಿ ಮಾಡಿದ್ದಾಗ್ಯೂ ಸಮಾಜ ಕಲ್ಯಾಣ ಇಲಾಖೆ ಹಾಗೂ ಈ ಕಚೇರಿಗೆ ಪದೇ ಪದೇ ಮಾರ್ಗದರ್ಶನ ಕೋರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ.
ಆದ್ದರಿಂದ, ರಾಜ್ಯದ ಎಲ್ಲ ಉಪನಿರ್ದೇಶಕರು (ಆ), ಶಾಲಾ ಶಿಕ್ಷಣ ಇಲಾಖೆ ರವರಿಗೆ ಮೇಲಿನ ಅಂಶಗಳನ್ನು ತಿಳಿಸುತ್ತಾ, ವಿದ್ಯಾರ್ಥಿಗಳ ಶಾಲಾ ದಾಖಲಾತಿಗಳಲ್ಲಿ ಜಾತಿ ತಿದ್ದುಪಡಿ ಸಂಬಂಧ ಪದೇ ಪದೇ ಅನಾವಶ್ಯಕವಾಗಿ ಪತ್ರ ವ್ಯವಹಾರ ಮಾಡದೇ, ಶಾಲಾ ದಾಖಲಾತಿಯಲ್ಲಿ ಜಾತಿ ತಿದ್ದುಪಡಿ ಸಂಬಂಧ ಈ ಮೇಲಿನ ಸರಕಾರದ ಆದೇಶ/ ಸುತ್ತೋಲೆಗಳಲ್ಲಿ ನೀಡಿರುವ ಸ್ಪಷ್ಟಿಕರಣ /ನಿರ್ದೇಶನಗಳಂತೆ ಪರಿಶೀಲಿಸಿ ತಮ್ಮ ಹಂತದಲ್ಲಿಯೇ ನಿಯಮಾನುಸಾರ ಕ್ರಮವಹಿಸಲು ತಿಳಿಸಿದೆ.

CLICK HERE TO DOWNLOAD CIRCULAR