SSC RECURITMENT- SSC ಮೂಲಕ 2423 ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ.

SSC RECURITMENT- SSC ಮೂಲಕ 2423 ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ

SSC RECURITMENT- ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗವು (SSC) 13ನೇ ಆವೃತ್ತಿಯ ಸೆಲೆಕ್ಷನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 2,423 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಎಸ್‌ಎಸ್‌ಎಲ್‌ಸಿ ಹಾಗೂ ಮೇಲ್ಪಟ್ಟ ವಿದ್ಯಾರ್ಹತೆಯುಳ್ಳವರು ಅರ್ಜಿ ಸಲ್ಲಿಸಬಹುದಾದ ಹುದ್ದೆಗಳಿವೆ.

ಯಾವ ಹುದ್ದೆಗಳು?

▪️ಕ್ಯಾಂಟೀನ್ ಅಟೆಂಡೆಂಟ್

▪️ಪ್ಯುಮಿಗೇಷನ್‌ ಅಸಿಸ್ಟೆಂಟ್

▪️ಸೈಂಟಿಫಿಕ್ ಅಸಿಸ್ಟೆಂಟ್

▪️ಸಿವಿಲ್ ಇಂಜಿನಿಯರ್

▪️ಟೆಕ್ನಿಕಲ್ ಸೂಪರಿಂಟೆಂಡೆಂಟ್

▪️ಮ್ಯಾನೇಜರ್ ಕಂ- ಅಕೌಂಟೆಂಟ್

▪️ಲೈಬ್ರರಿ ಅಸಿಸ್ಟೆಂಟ್

▪️ಫೈರ್‌ಮೆನ್‌

▪️ಮೋಟಾರ್ ಡ್ರೈವರ್

▪️ಟೆಕ್ನಿಕಲ್ ಆಫೀಸರ್

▪️ಸ್ಟೋರ್ ಕೀಪರ್

▪️ಚಾರ್ಜ್‌ಮನ್

▪️ಫರ್ಟಿಲೈಜರ್

▪️ಇನ್‌ಸ್ಪೆಕ್ಟರ್

▪️ಟೆಕ್ನಿಷಿಯನ್

▪️ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್

▪️ಕ್ಲರ್ಕ್ ರಿಸರ್ಚ್ ಅಸೋಸಿಯೇಟ್

▪️ಲೈಬ್ರರಿಯನ್ ಇತ್ಯಾದಿ…

ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದಲ್ಲಿ ಆಯಾ ವಿಭಾಗದ ಹುದ್ದೆಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ವಯೋಮಿತಿ:

ಆಯಾ ಹುದ್ದೆಗಳಿಗೆ ಅನುಗುಣವಾಗಿ ಪ್ರತ್ಯೇಕ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಕನಿಷ್ಠ 18ರಿಂದ ಗರಿಷ್ಠ 37 ವರ್ಷ ವಯೋಮಿತಿಯಿದೆ. ಕೆಲ ಹುದ್ದೆಗಳಿಗೆ 20-25 ಹಾಗೂ 21-30 ವರ್ಷಗಳ ವರೆಗೆ ವಯೋಮಾನವಿದೆ. ಇದಲ್ಲದೆ, ಮೀಸಲಾತಿಯನ್ವಯ ವಯೋಸಡಿಲಿಕೆ ಅನ್ವಯವಾಗಲಿದೆ.

ವಿದ್ಯಾರ್ಹತೆ:

ಆಯಾ ಹುದ್ದೆಗಳಿಗೆ ತಕ್ಕಂತೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

ಆಧಾ‌ರ್ ದೃಢೀಕರಣ ಬಳಸಿ:

ಅಭ್ಯರ್ಥಿಗಳು ಮಂಡಳಿಯ ಹೊಸ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದ್ದು, ಅರ್ಜಿ ಸಲ್ಲಿಸುವ ವೇಳೆ ಆಧಾ‌ರ್ ಆಧಾರಿತ ದೃಢೀಕರಣ ವಿಧಾನವನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. 100 ರೂ. ಅರ್ಜಿ ಶುಲ್ಕ ಪಾವತಿಸಬೇಕಿದೆ. ಎಸ್‌ಸಿ, ಎಸ್‌ಟಿ, ಅಂಗವಿಕಲರು ಹಾಗೂ ಮಾಜಿ ಸೈನಿಕರಿಗೆ ವಿನಾಯ್ತಿಯಿದೆ. ಆಯಾ ವಿಭಾಗದ ಹುದ್ದೆಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಿದ್ದು, ಪ್ರತಿ ಅರ್ಜಿಗೂ ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ.

ಪರೀಕ್ಷೆ ಸ್ವರೂಪ:

ಕಂಪ್ಯೂಟ‌ರ್ ಆಧಾರಿತ ಪರೀಕ್ಷೆ ಇದಾಗಿದ್ದು, ಒಟ್ಟು 100 ಅಂಕದ ಪ್ರಶ್ನೆಗಳಿಗೆ 60 ನಿಮಿಷಗಳಲ್ಲಿ ಉತ್ತರಿಸಬೇಕಿದೆ. ಸಾಮಾನ್ಯ ಬುದ್ಧಿಮತ್ತೆ, ಸಾಮಾನ್ಯ ಜ್ಞಾನ, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಹಾಗೂ ಜನರಲ್ ಇಂಗ್ಲಿಷ್ ವಿಷಯದ ತಲಾ 25 ಪ್ರಶ್ನೆಗಳಿರುತ್ತವೆ. ಹಿಂದಿ ಅಥವಾ ಇಂಗ್ಲಿಷ್‌ನಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಆಯಾ ವಿದ್ಯಾರ್ಹತೆಗೆ ಅನುಗುಣವಾದ ಪಠ್ಯಕ್ರಮ ಇರಲಿದೆ.

ಗಮನಿಸಬೇಕಾದ ಮುಖ್ಯ ಅಂಶಗಳು:

ಶುಲ್ಕ ವಿನಾಯ್ತಿ, ವಯೋಮಿತಿ ಸಡಿಲಿಕೆ ಹಾಗೂ ಮೀಸಲಾತಿ ಬಯಸುವವರು ಆಯೋಗ ನಿಗದಿ ಮಾಡಿರುವ ಅರ್ಜಿ ನಮೂನೆಗಳಲ್ಲಿ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣಪತ್ರಗಳನ್ನು ಸಲ್ಲಿಸತಕ್ಕದ್ದು.

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿರುವ ಜನ್ಮದಿನದ ಆಧಾರದಲ್ಲಿ ವಯಸ್ಸು ಲೆಕ್ಕ ಹಾಕಲಾಗುತ್ತದೆ.

ವಯಸ್ಸು, ಶೈಕ್ಷಣಿಕ ಹಾಗೂ ಇತರ ಅರ್ಹತೆಗಳನ್ನು 2025ರ ಆಗಸ್ಟ್ 1ರ ದಿನಕ್ಕೆ ಅನ್ವಯವಾಗುವಂತೆ ಪರಿಗಣಿಸಲಾಗುತ್ತದೆ.

ಪರೀಕ್ಷಾ ಕೇಂದ್ರಗಳು:

ಬೆಂಗಳೂರು, ಬೆಳಗಾವಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಉಡುಪಿ.

ಪ್ರಮುಖ ದಿನಗಳು:

ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಜೂನ್ 23

ಶುಲ್ಕ ಪಾವತಿಗೆ ಕೊನೆಯ ದಿನ: ಜೂನ್ 24

ಅರ್ಜಿ ತಿದ್ದುಪಡಿ ಅವಕಾಶ: ಜೂನ್ 28 ರಿಂದ 30

ಪರೀಕ್ಷಾ ದಿನಾಂಕ (ಸಂಭಾವ್ಯ): ಜು.24ರಿಂದ ಆ.4

ಸಹಾಯವಾಣಿ: 1800 309 3063

 

CLICK HERE TO DOWNLOAD NOTIFICATION

CLICK HERE TO OFFICIAL WEBSITE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!