SSLC 3rd Preparatory Examination 2026: 28 ಫೆಬ್ರವರಿ 2026ರ ಸಮಾಜ ವಿಜ್ಞಾನ ಪೂರ್ವಸಿದ್ಧತಾ ಪರೀಕ್ಷೆಯ ಸಮಯ ಬದಲಾವಣೆ

SSLC 3rd Preparatory Examination 2026: 28 ಫೆಬ್ರವರಿ 2026ರ ಸಮಾಜ ವಿಜ್ಞಾನ ಪೂರ್ವಸಿದ್ಧತಾ ಪರೀಕ್ಷೆಯ ಸಮಯ ಬದಲಾವಣೆ

SSLC 3rd Preparatory Examination 2026: ದಿನಾಂಕ:28-02-2026 ರಂದು ನಡೆಯುವ ಎಸ್‌ಎಸ್‌ಎಲ್‌ಸಿ 3ನೇ ಪೂರ್ವಸಿದ್ಧತಾ ಪರೀಕ್ಷೆಯ ಸಮಾಜ ವಿಜ್ಞಾನ ವಿಷಯದ ಪರೀಕ್ಷಾ ಸಮಯದಲ್ಲಿ ಮಾಡಿರುವ ಬದಲಾವಣೆ ಕುರಿತು ಅಧಿಕೃತ ಮಾಹಿತಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಮನಿಸಬೇಕಾದ ಮಹತ್ವದ ಸೂಚನೆ.

2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ 3ನೇ ಪೂರ್ವಸಿದ್ಧತಾ ಪರೀಕ್ಷೆಯನ್ನು ದಿನಾಂಕ:23-02-2026 ರಿಂದ ನಡೆಸಲು ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಆದರೆ, ದಿನಾಂಕ:28-02-2026 ರಂದು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದರಿಂದ, ಸದರಿ ದಿನದಂದು ನಡೆಯುವ ಎಸ್.ಎಸ್.ಎಲ್.ಸಿ ಸಮಾಜ ವಿಜ್ಞಾನ ವಿಷಯದ ಪರೀಕ್ಷೆಯ ಸಮಯವನ್ನು ಬೆಳಗ್ಗೆ 10.00 ರ ಬದಲಾಗಿ ಅಪರಾಹ್ನ 2.00 ಗಂಟೆಯಿಂದ ನಡೆಸುವಂತೆ ಈ ಮೂಲಕ ಸೂಚಿಸಿದೆ. ಸದರಿ ವಿಷಯದ ಪ್ರಶ್ನೆ ಪತ್ರಿಕೆಯನ್ನು ಅದೇ ದಿನ ಮಧ್ಯಾಹ್ನ 12.30ಕ್ಕೆ ಮಂಡಲಿಯಿಂದ ಶಾಲಾ ಲಾಗಿನ್‌ಗೆ ಅಪ್ಲೋಡ್ ಮಾಡಲಾಗುವುದು.

ಶಾಲಾ ಲಾಗಿನ್‌ನಲ್ಲಿ ಡೌನೋಡ್ ಮಾಡಿ ಮುದ್ರಿಸಿಕೊಂಡು ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವುದು. ಉಳಿದಂತೆ ಇನ್ನುಳಿದ ವಿಷಯಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಈ ವಿಷಯವನ್ನು ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸಲು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕುರಿತು ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರು ಕ್ರಮವಹಿಸಲು ತಿಳಿಸಿದೆ.

SSLC

 

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!