SSLC 3rd Preparatory Examination 2026: 28 ಫೆಬ್ರವರಿ 2026ರ ಸಮಾಜ ವಿಜ್ಞಾನ ಪೂರ್ವಸಿದ್ಧತಾ ಪರೀಕ್ಷೆಯ ಸಮಯ ಬದಲಾವಣೆ
SSLC 3rd Preparatory Examination 2026: ದಿನಾಂಕ:28-02-2026 ರಂದು ನಡೆಯುವ ಎಸ್ಎಸ್ಎಲ್ಸಿ 3ನೇ ಪೂರ್ವಸಿದ್ಧತಾ ಪರೀಕ್ಷೆಯ ಸಮಾಜ ವಿಜ್ಞಾನ ವಿಷಯದ ಪರೀಕ್ಷಾ ಸಮಯದಲ್ಲಿ ಮಾಡಿರುವ ಬದಲಾವಣೆ ಕುರಿತು ಅಧಿಕೃತ ಮಾಹಿತಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಮನಿಸಬೇಕಾದ ಮಹತ್ವದ ಸೂಚನೆ.
2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ 3ನೇ ಪೂರ್ವಸಿದ್ಧತಾ ಪರೀಕ್ಷೆಯನ್ನು ದಿನಾಂಕ:23-02-2026 ರಿಂದ ನಡೆಸಲು ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಆದರೆ, ದಿನಾಂಕ:28-02-2026 ರಂದು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದರಿಂದ, ಸದರಿ ದಿನದಂದು ನಡೆಯುವ ಎಸ್.ಎಸ್.ಎಲ್.ಸಿ ಸಮಾಜ ವಿಜ್ಞಾನ ವಿಷಯದ ಪರೀಕ್ಷೆಯ ಸಮಯವನ್ನು ಬೆಳಗ್ಗೆ 10.00 ರ ಬದಲಾಗಿ ಅಪರಾಹ್ನ 2.00 ಗಂಟೆಯಿಂದ ನಡೆಸುವಂತೆ ಈ ಮೂಲಕ ಸೂಚಿಸಿದೆ. ಸದರಿ ವಿಷಯದ ಪ್ರಶ್ನೆ ಪತ್ರಿಕೆಯನ್ನು ಅದೇ ದಿನ ಮಧ್ಯಾಹ್ನ 12.30ಕ್ಕೆ ಮಂಡಲಿಯಿಂದ ಶಾಲಾ ಲಾಗಿನ್ಗೆ ಅಪ್ಲೋಡ್ ಮಾಡಲಾಗುವುದು.
ಶಾಲಾ ಲಾಗಿನ್ನಲ್ಲಿ ಡೌನೋಡ್ ಮಾಡಿ ಮುದ್ರಿಸಿಕೊಂಡು ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವುದು. ಉಳಿದಂತೆ ಇನ್ನುಳಿದ ವಿಷಯಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಈ ವಿಷಯವನ್ನು ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸಲು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕುರಿತು ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರು ಕ್ರಮವಹಿಸಲು ತಿಳಿಸಿದೆ.
