SSLC EXAM-01-2024-25:ಮೌಲ್ಯಮಾಪನ ಕಾರ್ಯಕ್ಕಾಗಿ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನೋಂದಣಿ/ಅಪ್‌ಡೇಟ್ ಮಾಡುವ ಬಗ್ಗೆ.

SSLC Exam-01 ವಾರ್ಷಿಕ ಪರೀಕ್ಷೆ ಮೌಲ್ಯಮಾಪನ ಕಾರ್ಯಕ್ಕೆ ಸಂಬಂಧಿಸಿದಂತೆ ಪ್ರೌಢಶಾಲಾ ಶಿಕ್ಷಕರಿಗೆ ಮಾಹಿತಿ.

2025ರ SSLC ವಾರ್ಷಿಕ ಪರೀಕ್ಷೆ-1ರ ಮೌಲ್ಯಮಾಪನ ಕಾರ್ಯಕ್ಕಾಗಿ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನೋಂದಣಿ/ಅಪ್‌ಡೇಟ್ ಮಾಡುವ ಬಗ್ಗೆ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ವತಿಯಿಂದ ನಡೆಯಲಿರುವ 2025ರ SSLC ವಾರ್ಷಿಕ ಪರೀಕ್ಷೆ-1ರ ಮೌಲ್ಯಮಾಪನ ಕಾರ್ಯಕ್ಕಾಗಿ ರಾಜ್ಯದ ಎಲ್ಲಾ ಸರ್ಕಾರಿ, ಮಾನ್ಯತೆ ನಡೆದಿರುವ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಷಯ ಶಿಕ್ಷಕರ ವಿವರಗಳನ್ನು ಶಾಲಾ ಲಾಗಿನ್‌ನಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸಲು ದಿನಾಂಕ: 03-12-2024 ರಿಂದ ಅವಕಾಶ ಕಲ್ಪಿಸಲಾಗಿದೆ. ಶಾಲೆಯ ಮುಖ್ಯ ಶಿಕ್ಷಕರು ತಮ್ಮನ್ನೂ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರನ್ನು ಮೌಲ್ಯಮಾಪನ ಕಾರ್ಯಕ್ಕೆ ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ ಮತ್ತು ಹಿಂದಿನ ವರ್ಷಗಳಲ್ಲಿ ಈಗಾಗಲೇ ನೋಂದಾಯಿಸಿರುವ ಶಿಕ್ಷಕರ ವಿವರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲದಿದ್ದರೂ ಸಹ ಮತ್ತೊಮ್ಮೆ ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ.

2024-25ನೇ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ನೇಮಕಗೊಂಡ, ಬಡ್ತಿ ಮತ್ತು ವರ್ಗಾವಣೆಯಿಂದ ಕರ್ತವ್ಯಕ್ಕೆ ಹಾಜರಾದ ಶಿಕ್ಷಕರ ವಿವರಗಳನ್ನು ಶಾಲಾ ಲಾಗಿನ್‌ Evaluators Registration 2025 ಮೆನುವಿನಲ್ಲಿ ನೀಡಿರುವ Evaluators New Registration ಸಬ್ ಮೆನುವಿನಲ್ಲಿ ನೋಂದಾಯಿಸುವುದು ಹಾಗೂ ಈಗಾಗಲೇ ನೋಂದಾಯಿಸಿರುವ ಮೌಲ್ಯಮಾಪಕರ ವಿವರಗಳನ್ನು Update Delete Evaluators Details ಸಬ್ ಮೆನುವಿನಲ್ಲಿ ಅಪ್‌ಡೇಟ್ ಮಾಡುವುದು. Freeze ಮಾಡುವ ಮುನ್ನ ಎಲ್ಲಾ ವಿವರಗಳನ್ನು ಪರಿಶೀಲಿಸಿಕೊಂಡು, ಏನಾದರೂ ತಿದ್ದುಪಡಿಗಳಿದ್ದಲ್ಲಿ ಅಪ್‌ಡೇಟ್ ಮಾಡಿ ನಂತರ Freeze ಮಾಡುವುದು. ಒಮ್ಮೆ Freeze ಮಾಡಿದ ನಂತರ ಯಾವುದೇ ತಿದ್ದುಪಡಿ/ಸೇರ್ಪಡೆಗೆ ಅವಕಾಶವಿರುವುದಿಲ್ಲ.

2024-25ನೇ ಶೈಕ್ಷಣಿಕ ವರ್ಷದಲ್ಲಿ ತಮ್ಮ ಶಾಲೆಯಿಂದ ವರ್ಗಾವಣೆ, ನಿವೃತ್ತಿ, ರಾಜೀನಾಮೆ ಮತ್ತು ಇತರೆ ಕಾರಣಗಳಿಂದ ಶಿಕ್ಷಕರು ಕಾರ್ಯನಿರ್ವಹಿಸುತ್ತಿಲ್ಲವಾದರೆ ಅಂತಹ ಶಿಕ್ಷಕರ ವಿವರಗಳನ್ನು Update/Delete Evaluators Details ಸಬ್ ಮೆನುವಿನಲ್ಲಿ Delete ಬಟನ್ ಮೇಲೆ ಕ್ಲಿಕ್ ಮಾಡಿ, ಸೂಕ್ತ ಕಾರಣವನ್ನು ಆಯ್ಕೆ ಮಾಡಿ Delete ಮಾಡುವುದು.

ಶಿಕ್ಷಕರನ್ನು ಮೌಲ್ಯಮಾಪನ ಕಾರ್ಯಕ್ಕಾಗಿ ನೋಂದಾಯಿಸುವಾಗ ಅಥವಾ ಈಗಾಗಲೇ ಇರುವ ಶಿಕ್ಷಕರ ಮಾಹಿತಿಯನ್ನು update ಮಾಡುವಾಗ ಅವರ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಹೊಸದಾಗಿ ನಮೂದಿಸುವುದು ಕಡ್ಡಾಯವಾಗಿದ್ದು, ಆ ಮೊಬೈಲ್ ಸಂಖ್ಯೆಗೆ ಸ್ವೀಕೃತವಾಗುವ OTP ಯನ್ನು ನಮೂದಿಸುವುದು ಸಹ ಕಡ್ಡಾಯವಾಗಿರುತ್ತದೆ. ಈ ಪ್ರಕ್ರಿಯೆಯಿಂದ ಆನ್‌ಲೈನ್‌ನಲ್ಲಿ ನಮೂದಿಸಲಾದ ವಿವರಗಳನ್ನು ಪ್ರತಿಯೊಬ್ಬ ಶಿಕ್ಷಕರು ಪರಿಶೀಲಿಸಿ ದೃಢೀಕರಿಸಿರುತ್ತಾರೆ ಎಂದು ಪರಿಗಣಿಸಲಾಗುವುದು.

ಶಿಕ್ಷಕರನ್ನು ಮೌಲ್ಯಮಾಪನ ಕಾರ್ಯಕ್ಕೆ ನೋಂದಣಿ ಮಾಡುವ, ಇಲ್ಲವೇ ಅಪ್‌ಡೇಟ್ ಮಾಡುವ ಮುನ್ನ ಈ ಕೆಳಗಿನ ವಿವರಗಳನ್ನು ಸಿದ್ಧಪಡಿಸಿಕೊಂಡು ನೋಂದಾಯಿಸುವುದು.
1.ಶಿಕ್ಷಕರ ಹೆಸರು & ಪದನಾಮ
2.ಜನ್ಮ ದಿನಾಂಕ
3.ಪ್ರೌಢ ಶಾಲಾ ಸೇವೆಗೆ ಸೇರಿದ ದಿನಾಂಕ
4.ವಿದ್ಯಾರ್ಹತೆ, ಬೋಧನಾ ವಿಷಯ ಮತ್ತು ಮಾಧ್ಯಮ
5.ಪ್ರಥಮ ಕೆ.ಜಿ.ಐ.ಡಿ ಸಂಖ್ಯೆ (ಸರ್ಕಾರಿ ಶಾಲಾ ಶಿಕ್ಷಕರಿಗಾಗಿ) ಉದ್ಯೋಗಿ ಸಂಖ್ಯೆ/ ವಿಮೆ ಪಾಲಿಸಿ ಸಂಖ್ಯೆ (ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲಾ ಶಿಕ್ಷಕರಿಗಾಗಿ)
6.ಬ್ಯಾಂಕ್ ಖಾತೆಯ ವಿವರಗಳು (ಬ್ಯಾಂಕ್ ಹೆಸರು, ಖಾತೆ ಸಂಖ್ಯೆ ಮತ್ತು IFSC ಕೋಡ್)
7.ಶಿಕ್ಷಕರ ಫೋಟೋ ಮತ್ತು ಸಹಿ (ನಿಗದಿತ ಅಳತೆಯಲ್ಲಿ ಸ್ಕ್ಯಾನ್ ಮಾಡಿ ಸೇವ್ ಮಾಡಿ ಇಟ್ಟುಕೊಳ್ಳುವುದು.) Photo- (20-80kb) Signature (20-50kb) in jpeg format

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಹೊಂದಿರುವ ಶಿಕ್ಷಕರ ಸೇವೆಗೆ ಸೇರಿದ ದಿನಾಂಕವನ್ನು ನಮೂದಿಸುವಾಗ ಅತ್ಯಂತ ಎಚ್ಚರಿಕೆಯಿಂದ ನಮೂದಿಸತಕ್ಕದ್ದು. ಅಂತಹ ಶಿಕ್ಷಕರಿಗೆ ಪ್ರೌಢಶಾಲೆಗೆ ಬಡ್ತಿ ಹೊಂದಿದ ದಿನಾಂಕವನ್ನೇ ನಮೂದಿಸುವುದು ಕಡ್ಡಾಯವಾಗಿರುತ್ತದೆ. ಅಂತಹ ಶಿಕ್ಷಕರಿಗೆ ಪ್ರಾಥಮಿಕ ಶಾಲೆಗೆ ಸೇವೆಗೆ ಸೇರಿದ ದಿನಾಂಕವನ್ನು ನಮೂದಿಸಿ ತಪ್ಪಾಗಿ ನೋಂದಾಯಿಸಿರುವುದು ಮಂಡಲಿಯ ಗಮನಕ್ಕೆ ಬಂದಿರುತ್ತದೆ. ಇದರಿಂದ ಸೇವಾ ಜೇಷ್ಠತೆಯ ಆಧಾರದ ಮೇಲೆ ಮೌಲ್ಯಮಾಪನ ಕಾಯಕ್ಕೆ ಇಂತಹ ಶಿಕ್ಷಕರು ಸಹಾಯಕ ಮೌಲ್ಯಮಾಪಕರಾಗಿ (AE) ನೇಮಕಗೊಳ್ಳುವ ಬದಲು ಉಪಮುಖ್ಯ ಮೌಲ್ಯಮಾಪಕರಾಗಿ (DC) ನೇಮಕಗೊಳ್ಳುತ್ತಾರೆ. 2024-25ನೇ ಸಾಲಿನಲ್ಲಿ ಈ ರೀತಿ ನೋಂದಣಿ ಮಾಡಿದಲ್ಲಿ ಸಂಬಂಧಿಸಿದ ಮುಖ್ಯ ಶಿಕ್ಷಕರ ಮೇಲೆ ಕಠಿಣವಾದ ಶಿಸ್ತುಕ್ರಮ ಜರುಗಿಸಲಾಗುವುದು.

ಸೇವೆಗೆ ಸೇರಿದ ದಿನಾಂಕವನ್ನು ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ. ಒಂದು ವೇಳೆ ತಪ್ಪಾದ ಸೇವೆಗೆ ಸೇರಿದ ದಿನಾಂಕವನ್ನು ನಮೂದಿಸಿ ಈಗಾಗಲೇ ನೋಂದಾಯಿಸಿದ್ದಲ್ಲಿ ಆ ಶಿಕ್ಷಕರ ನೋಂದಣಿಯನ್ನು Update/Delete Evaluators Details ಸಬ್ ಮೆನುವಿನಲ್ಲಿ , Date of entry into service entered wrong option ಅನ್ನು ಆಯ್ಕೆ ಮಾಡಿ Delete ಮಾಡುವುದು ಮತ್ತು ಸರಿಯಾದ ಸೇವೆಗೆ ಸೇರಿದ ದಿನಾಂಕವನ್ನು ನಮೂದಿಸಿ ಹೊಸದಾಗಿ ನೋಂದಣಿ ಮಾಡುವುದು.

ಯಾವುದೇ ಶಾಲೆಯಲ್ಲಿ 14-ಪ್ರಥಮ ಭಾಷೆ ಆಂಗ್ಲ, ಆದರ್ಶ ಶಾಲೆಗಳಲ್ಲಿ 15-ಪ್ರಥಮ ಭಾಷೆ ಆಂಗ್ಲ (NCERT) ಹಾಗೂ 60-ತೃತೀಯ ಭಾಷೆ ಹಿಂದಿ (NCERT) ವಿಷಯಗಳಿಗೆ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿದ್ದಲ್ಲಿ ಆ ಶಾಲೆಯ ಶಿಕ್ಷಕರು ಈ ವಿಷಯಗಳಿಗೆ ಮೌಲ್ಯಮಾಪಕರನ್ನಾಗಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಆದರ್ಶ ವಿದ್ಯಾಲಯ ಶಾಲೆಗಳವರು ಮಾತ್ರ ಶಿಕ್ಷಕರನ್ನು ನೋಂದಾಯಿಸುವಾಗ ಅಥವಾ Update ಮಾಡುವಾಗ ಭಾಷಾ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ 15-ಪ್ರಥಮ ಭಾಷೆ ಇಂಗ್ಲೀಷ್ (NCERT) ಹಾಗೂ 60-ತೃತೀಯ ಭಾಷೆ ಹಿಂದಿ (NCERT) ಭಾಷಾ ಸಂಕೇತವನ್ನು ಆಯ್ಕೆ ಮಾಡಿಕೊಳ್ಳುವುದು.

ಶಿಕ್ಷಕರನ್ನು ನೋಂದಾಯಿಸುವಾಗ ಮೌಲ್ಯಮಾಪನದ ವಿಷಯ ಮತ್ತು ಅವುಗಳ ವಿಷಯ ಸಂಕೇತಗಳನ್ನು ಸರಿಯಾಗಿ ಗಮನಿಸಿಕೊಂಡು ನೋಂದಾಯಿಸುವುದು. ಅಂದರೆ ತಮ್ಮ ಶಾಲೆಯಲ್ಲಿ ಶಿಕ್ಷಕರು ಬೋಧಿಸುತ್ತಿರುವ ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆಗಳನ್ನು ಹಾಗೂ ಕೋರ್ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದ ಬೋಧನಾ ಮಾಧ್ಯಮವನ್ನು ದೃಢೀಕರಿಸಿಕೊಂಡು ನೋಂದಾಯಿಸುವುದು. ಕಳೆದ ವರ್ಷಗಳಲ್ಲಿ ಪ್ರಥಮ ಭಾಷೆ ಕನ್ನಡ(011) ಶಿಕ್ಷಕರನ್ನು ತೃತೀಯ ಭಾಷೆ (62K) ಕನ್ನಡ ವಿಷಯಕ್ಕೆ, ದ್ವಿತೀಯ ಭಾಷೆ ಇಂಗ್ಲೀಷ್ (318) ಶಿಕ್ಷಕರನ್ನು ಪ್ರಥಮ ಭಾಷೆ ಇಂಗ್ಲೀಷ್ (14E) ವಿಷಯಕ್ಕೆ, ಆದರ್ಶ ಶಾಲೆಗಳಲ್ಲದ ಶಾಲೆಯವರೂ ಸಹ 15E ಪ್ರಥಮ ಭಾಷೆ ಆಂಗ್ಲ (NCERT), ತೃತೀಯ ಭಾಷೆ ಹಿಂದಿ-60Hಗೆ (NCERT) ತಪ್ಪಾಗಿ ನೋಂದಾಯಿಸಿರುವುದು ಮಂಡಲಿಯ ಗಮನಕ್ಕೆ ಬಂದಿರುತ್ತದೆ. ಹಾಗಾಗಿ ಮೌಲ್ಯಮಾಪನಕ್ಕೆ ವಿಷಯಗಳನ್ನು ನೋಂದಾಯಿಸುವಾಗ ಬೋಧನಾ ವಿಷಯ ಮತ್ತು ಮಾಧ್ಯಮಗಳನ್ನು ಪರಿಶೀಲಿಸಿಕೊಂಡು ನೋಂದಾಯಿಸುವುದು.

ತಮ್ಮ ಶಾಲೆಯಲ್ಲಿ NSQF, ITS ಮತ್ತು Alternative ವಿಷಯಗಳನ್ನು ಬೋಧಿಸುತ್ತಿರುವ ಶಿಕ್ಷಕರಿದ್ದಲ್ಲಿ ಅವರನ್ನೂ ಸಹ 2025ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ-1ರ ಮೌಲ್ಯಮಾಪನ ಕಾರ್ಯಕ್ಕೆ ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ.

ನೋಂದಣಿ / update ಮಾಡಿದ ನಂತರ ಜನರೇಟ್ ಆಗುವ Evaluator’s Individual Registration Report ಹಾಗೂ Consolidated Report of Registered Evaluators ನಲ್ಲಿ ಅವರ ವೈಯಕ್ತಿಕ ವಿವರಗಳು ಮತ್ತು ಬೋಧನಾ ವಿಷಯವನ್ನು ಪರಿಶೀಲಿಸಿ, ಏನಾದರೂ ತಪ್ಪುಗಳಿದ್ದಲ್ಲಿ Update Evaluators Details ಸಬ್ ಮೆನು ಬಳಸಿ Update ಮಾಡುವುದು ಹಾಗೂ Consolidated Report of Registered Evaluators ಮೆನುವಿನಲ್ಲಿ ವಿವರಗಳು ಸರಿಯಾಗಿರುವುದನ್ನು ದೃಢೀಕರಿಸಿಕೊಂಡ ನಂತರವಷ್ಟೇ Freeze ಮಾಡುವುದು.

2025ರ SSLC ವಾರ್ಷಿಕ ಪರೀಕ್ಷೆ-1ರ ಮೌಲ್ಯಮಾಪನ ಕಾರ್ಯಕ್ಕೆ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲಾ ಶಿಕ್ಷಕರನ್ನು ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ. ಮೌಲ್ಯಮಾಪಕರ ವಿವರಗಳನ್ನು Update ಮಾಡಿ Freeze ಮಾಡಲು 31-12-2024 ಅಂತಿಮ ದಿನಾಂಕವಾಗಿರುತ್ತದೆ. ಮೌಲ್ಯಮಾಪನ ಕಾರ್ಯಕ್ಕೆ ನೋಂದಾಯಿಸದ ಶಾಲೆಗಳ ಕರಡು ಪ್ರವೇಶ ಪತ್ರಗಳನ್ನು ತಡೆಹಿಡಿಯಲಾಗುವುದು. ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸಂಪೂರ್ಣ ಮಾಹಿತಿಗಾಗಿ ಆದೇಶ- CLICK HERE

Leave a Comment