SSLC Exam-2026 Update News: ತೃತೀಯ ಭಾಷಾ ಪರೀಕ್ಷೆಯ ದಿನಾಂಕ ಬದಲಾವಣೆ ಇಲ್ಲಿದೆ ಮಾಹಿತಿ
SSLC Exam-2026 Update News: 2026ರ ಎಸ್ಎಸ್ಎಲ್ಸಿ ಪರೀಕ್ಷೆ-1ನ್ನು ದಿನಾಂಕ:18.03.2026 ರಿಂದ 02.04.2026ರವರೆಗೆ ನಡೆಸಲು ದಿನಾಂಕ:04.11.2025ರಂದು ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಅದರಂತೆ ಈಗಾಗಲೇ ಪರೀಕ್ಷೆಯು ಪ್ರಾರಂಭವಾಗಿರುತ್ತದೆ. ಸದರಿ ವೇಳಾಪಟ್ಟಿಯನ್ವಯ ತೃತೀಯ ಭಾಷೆ ಪರೀಕ್ಷೆಯನ್ನು ದಿನಾಂಕ:30.03.2026ರಂದು ನಿಗಧಿಪಡಿಸಲಾಗಿತ್ತು. ಆದರೆ ಉಲ್ಲೇಖಿತ-1ರ ಸರ್ಕಾರದ ಆದೇಶದಲ್ಲಿ ಮಹಾವೀರ ಜಯಂತಿ ಪ್ರಯುಕ್ತ ಘೋಷಿಸಲಾಗಿರುವ ಸಾರ್ವತ್ರಿಕ ರಜಾ ದಿನವನ್ನು ದಿನಾಂಕ:31.03.2026ರ ಮಂಗಳವಾರ ಬದಲಾಗಿ ದಿನಾಂಕ:30.03.2026ರ ಸೋಮವಾರ ಎಂದು ಮಾರ್ಪಡಿಸಿ ಆದೇಶಿಸಲಾಗಿದೆ.
ಈ ಸಂಬಂಧ ದಿನಾಂಕ:30.03.2026ರಂದು ನಿಗಧಿಪಡಿಸಲಾಗಿದ್ದ ತೃತೀಯ ಭಾಷೆ ವಿಷಯದ ಪರೀಕ್ಷೆಯನ್ನು ದಿನಾಂಕ:31.03.2026ರ ಮಂಗಳವಾರ ಈಗಾಗಲೇ ನಿಗಧಿಪಡಿಸಿರುವ ಅವಧಿಯಲ್ಲಿ ನಡೆಸಲಾಗುವುದು. ಉಳಿದ ವಿಷಯದ ಪರೀಕ್ಷೆಗಳು ವೇಳಾಪಟ್ಟಿಯಂತೆ ಯಥಾವತ್ತಾಗಿ ನಡೆಯುವುದು.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ)ರವರು ತಮ್ಮ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಜಿಲ್ಲೆ ಮತ್ತು ತಾಲ್ಲೂಕು ಖಜಾನಾಧಿಕಾರಿಗಳಿಗೆ ಸದರಿ ಮಾಹಿತಿಯನ್ನು ನೀಡಿ, ತೃತೀಯ ಭಾಷೆ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ದಿನಾಂಕ:31.03.2026ರಂದು ಪಡೆಯಲು ಕ್ರಮವಹಿಸತಕ್ಕದ್ದು. ಪ್ರಶ್ನೆಪತ್ರಿಕೆಯ ಪ್ಯಾಕೇಟ್ ಮೇಲ್ಬಾಗದಲ್ಲಿ ಮತ್ತು ಪ್ರಶ್ನೆಪತ್ರಿಕೆಯಲ್ಲಿ ತೃತೀಯ ಭಾಷಾ ವಿಷಯದ ಪರೀಕ್ಷೆ ದಿನಾಂಕ:30.03.2026ರಂದು ಎಂದು ನಮೂದಾಗಿದ್ದು, ಸದರಿ ಪ್ರಶ್ನೆಪತ್ರಿಕೆಗಳನ್ನು ವಿತರಿಸುವ ಸಂದರ್ಭದಲ್ಲಿ ಈ ಕುರಿತು ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಒಳಗೊಂಡಂತೆ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು /ಸಿಬ್ಬಂದಿಗಳು / ಶಿಕ್ಷಕರುಗಳಿಗೆ ಮಾಹಿತಿ ನೀಡುವುದು. ತೃತೀಯ ಭಾಷೆ ವಿಷಯದ ಪರೀಕ್ಷೆ ದಿನಾಂಕವು ಬದಲಾಗಿರುವ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರ ಗಮನಕ್ಕೆ ತರುವುದು.
ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೂಡಲೇ ಮನವಿ ಸಲ್ಲಿಸಿ ಪರೀಕ್ಷೆ ದಿನಾಂಕ ಬದಲಾವಣೆ ಮತ್ತು ಸದರಿ ಪರೀಕ್ಷಾ ದಿನದಂದು ಸೂಕ್ತ ಭದ್ರತೆ ನೀಡುವ ಕುರಿತು ಕ್ರಮಕೈಗೊಳ್ಳಲು ತಿಳಿಸಿದೆ.

CLICK HERE TO DOWNLOAD CIRCULAR