SSLC Exam Question Bank 2025-26: 8,450 ಪ್ರಶ್ನೆಗಳ ಪ್ರಶ್ನೆ ಬ್ಯಾಂಕ್ ಸಿದ್ಧ
SSLC Exam Updates 2025-26: 8,450 ಪ್ರಶ್ನೆಗಳ ಪ್ರಶ್ನೆ ಬ್ಯಾಂಕ್ ಸಿದ್ಧ: SSLC ವಾರ್ಷಿಕ ಪರೀಕ್ಷೆಯಲ್ಲಿ ವರ್ಷ ವರ್ಷ ಹೊಸ ಪ್ರಯೋಗ ಮಾಡುತ್ತಿರುವ ರಾಜ್ಯ ಶಿಕ್ಷಣ ಇಲಾಖೆ ಇದೇ ಮೊದಲ ಬಾರಿಗೆ 8,450 ಪ್ರಶ್ನೆಗಳನ್ನೊಳಗೊಂಡ ಕ್ವಶ್ಚನ್ ಬ್ಯಾಂಕ್ ಸಿದ್ಧಪಡಿಸಿದೆ.
ಈ ಪ್ರಶ್ನೆಗಳ ಹೊರತಾಗಿ ವಾರ್ಷಿಕ ಪರೀಕ್ಷೆಯಲ್ಲಿ ಬೇರೆ ಯಾವುದೇ ಪ್ರಶ್ನೆಗಳು ಬರುವುದಿಲ್ಲ ಎಂಬುದು ಈ ವರ್ಷದ ವಿಶೇಷ. ಕಳೆದ ಬಾರಿ ವೆಬ್‌ಕಾಸ್ಟಿಂಗ್ ಪ್ರಯೋಗದ ಮೂಲಕ ಯಶಸ್ಸು ಕಂಡಿದ್ದ ಶಿಕ್ಷಣ ಇಲಾಖೆ ಪ್ರಥಮ ಬಾರಿಗೆ ಕ್ವಶ್ಚನ್ ಬ್ಯಾಂಕ್‌ನಲ್ಲಿರುವ ಆಯ್ದ ಪ್ರಶ್ನೆಗಳನ್ನಷ್ಟೇ ವಾರ್ಷಿಕ ಪರೀಕ್ಷೆಗೆ ನೀಡುವ ಮೂಲಕ ಗುಣಮಟ್ಟದ ಫಲಿತಾಂಶ ನಿರೀಕ್ಷಿಸಿದೆ.
75 ದಿನ ಬಾಕಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 75 ದಿನ ಬಾಕಿ ಉಳಿದಿದೆ. ಕ್ವಶ್ಚನ್ ಬ್ಯಾಂಕನ್ನು ಇಲಾಖೆ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ್ದು, ಲಿಂಕ್ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಪ್ರತಿದಿನ ಕ್ವಶ್ಚನ್ ಬ್ಯಾಂಕ್‌ನಲ್ಲಿನ ಪ್ರಶ್ನೆಗಳ ಕಲಿಕೆಗೆ ಪೂರಕವಾಗುವಂತೆ ವಿಶೇಷ ತರಗತಿ ನಡೆಸಬೇಕಿದ್ದು, ವೆಬ್ ಸೈಟ್‌ನಲ್ಲಿನ “ಸ್ಟೂಡೆಂಟ್ ಲರ್ನಿಂಗ್ ಕಾರ್ನರ್’ ಕ್ಲಿಕ್ ಮಾಡಿದರೆ 4 ಮಾಡೆಲ್ ಪ್ರಶ್ನೆಪತ್ರಿಕೆಗಳು ಸಿಗುತ್ತವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಸಿದ್ಧಪಡಿಸಿರುವ ಕ್ವಶ್ಚನ್ ಬ್ಯಾಂಕ್‌ನಲ್ಲಿರುವ ಪ್ರಶ್ನೆಗಳ ಹೊರತಾಗಿ ಬೇರೆ
ಪ್ರಶ್ನೆ ನೀಡುವುದಿಲ್ಲ. ಕ್ವಶ್ಚನ್ ಬ್ಯಾಂಕ್ ವಿದ್ಯಾರ್ಥಿಸ್ನೇಹಿಯಾಗಿದ್ದು, ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಮಕ್ಕಳನ್ನು ತಯಾರು ಮಾಡುತ್ತಿದ್ದೇವೆ.
| ಬೈಲಾಂಜನಪ್ಪ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಬೆಂ.ಗ್ರಾಮಾಂತರ)
ಮೂರು ಪೂರ್ವಸಿದ್ಧತಾ ಪರೀಕ್ಷೆ:
ಮುಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 3 ಪ್ರಿಪರೇಟರಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಅದರಂತೆ ಜನವರಿ ಮೊದಲ ವಾರ ಹಾಗೂ 4ನೇ ವಾರ, ಫೆಬ್ರವರಿ 4ನೇ ವಾರ ರಾಜ್ಯದಲ್ಲಿ ಏಕಕಾಲದಲ್ಲಿ ಪರೀಕ್ಷೆ ನಡೆಯಲಿದೆ.
ಮಿಷನ್ 45:
ಈ ಬಾರಿ ಪ್ರತಿ ವಿದ್ಯಾರ್ಥಿ ಕನಿಷ್ಠ ಶೇ.45 ಅಂಕಗಳೊಂದಿಗೆ ತೇರ್ಗಡೆಯಾಗಲೇಬೇಕು ಎಂಬುದು ಇಲಾಖೆಯ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಮಿಷನ್ 45 ಎಂಬ ಕಾರ್ಯಕ್ರಮ ರೂಪಿಸಿದೆ.
ಪ್ರತಿ ಪಾಠದಿಂದ 150 ಪ್ರಶ್ನೆ:
ಪಠ್ಯದಲ್ಲಿನ ಪ್ರತಿ ಪಾಠದಿಂದ 150 ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ 1 ಅಂಕದ ಪ್ರಶ್ನೆ, 2 ಅಂಕದ ಪ್ರಶ್ನೆ, 4 ಅಂಕದ ಪ್ರಶ್ನೆ ಸೇರಿ ಎಲ್ಲ ಮಾದರಿಯ ಪ್ರಶ್ನೆಗಳಿರುತ್ತವೆ. ಒಟ್ಟಾರೆ 8450 ಪ್ರಶ್ನೆಗಳುಳ್ಳ ಕ್ವಶ್ಚನ್ ಬ್ಯಾಂಕ್ ಸಿದ್ಧವಾಗಿದ್ದು, ಈಗಾಗಲೇ ಬಿಡುಗಡೆ ಕೂಡ ಆಗಿದೆ.
ಮುಖ್ಯಶಿಕ್ಷಕರಿಗೆ ಹೊಣೆ:
ಶಿಕ್ಷಣ ಇಲಾಖೆ ಸಿದ್ಧಪಡಿಸಿರುವ ಕ್ವಶ್ಚನ್ ಬ್ಯಾಂಕ್‌ನ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಜವಾಬ್ದಾರಿಯನ್ನು ಶಾಲೆ ಮುಖ್ಯಶಿಕ್ಷಕರಿಗೆ ವಹಿಸಲಾಗಿದೆ. ಮುಖ್ಯ ಶಿಕ್ಷಕರು ಕ್ವಶ್ಚನ್‌ಬ್ಯಾಂಕ್ ಮಾದರಿಯನ್ನು ಶಾಲೆಯ ವಿಷಯವಾರು ಶಿಕ್ಷಕರಿಗೆ ಮಾರ್ಗದರ್ಶನ ನೀಡಿ ತರಬೇತಿ ನೀಡುತ್ತಿದ್ದಾರೆ.

CLICK HERE TO DOWNLOAD QUESTION BANK
Sslc model paper pDF
Ya
Hi
2nd launguage kannada question bank not available
ನಮ್ಮಗೆ ಪ್ರಶ್ನೆ ಪತ್ರಿಕೆ ಬೇಕು
All sslc questions 2025 2026
10 th imp questions 8450
I should read this only
I want to get questions from every lesson
Iam studying in class 10 state syllabus english medium
Good work
Good website
Good link
Hi
Hi
..
SSLC question bank 8450
Hi
Hi
8450 ಕ್ವೆಶ್ಚನ್ ಬೇಕು
8450 ಕ್ವೆಶ್ಚನ್ ಬೇಕು
Hi
Prjg
8450,ssl