SSLC Passing Marks 2026:ಎಸ್ಸೆಸ್ಸೆಲ್ಸಿಯಲ್ಲಿ ಎಷ್ಟು ಅಂಕ ಪಡೆದರೆ ಪಾಸ್?ಹೊಸ ನಿಯಮದ ಮಾಹಿತಿ ಇಲ್ಲಿದೆ
SSLC Passing Marks 2026: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸ್ ಆಗಲು ಕನಿಷ್ಠ ಎಷ್ಟು ಅಂಕ ಬೇಕು? ವಿಷಯವಾರು ಪಾಸ್ ಮಾರ್ಕ್ಸ್, ನಿಯಮಗಳು ಮತ್ತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
ಹಾಗಾದರೆ ಎಸ್ಸೆಸ್ಸೆಲ್ಸಿಯಲ್ಲಿ ಎಷ್ಟು ಅಂಕ ಪಡೆದರೆ ಪಾಸ್?
ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪ ಬಂದಾಗ ಆತಂಕ/ ಟೆನ್ಶನ್ ಆಗುವುದು ಸಾಮಾನ್ಯ. ಆದರೆ ಸರಿಯಾದ ತಯಾರಿ, ಯೋಜನೆ, ನಿದ್ರೆ, ಉಸಿರಾಟ ನಿಯಂತ್ರಣ ಮತ್ತು ಧೈರ್ಯದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯಬಹುದು. ವೇಳಾಪಟ್ಟಿ ಪ್ರಕಾರ ಎಸ್ಸೆಸ್ಸೆಲ್ಸಿ-1ರ ಪರೀಕ್ಷೆಗಳು ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿವೆ. 2025-26ನೇ ಶೈಕ್ಷಣಿಕ ಸಾಲಿನಿಂದ ಸರ್ಕಾರ ಪಾಸಿಂಗ್ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಹಲವು ಬದಲಾವಣೆಗಳನ್ನು ತಂದಿದೆ.
ಹೊಸ ನಿಯಮದ ಪ್ರಕಾರ ವಿವರಗಳು ಇಲ್ಲಿವೆ:
ಒಟ್ಟು ಪಾಸಿಂಗ್ ಶೇಕಡವಾರು:
ಒಟ್ಟು ಅಂಕಗಳಲ್ಲಿ ಕನಿಷ್ಠ 33% ಅಂಕಗಳನ್ನು ಪಡೆಯಬೇಕು.
ಒಟ್ಟು ಅಂಕಗಳು:
ಒಟ್ಟು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸುವುದು ಕಡ್ಡಾಯ.
ವಿಷಯವಾರು ಕನಿಷ್ಠ ಅಂಕಗಳು:
ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 30% ಅಂಕಗಳನ್ನು ಪಡೆಯಲೇಬೇಕು.
ಥಿಯರಿ ಮತ್ತು ಇಂಟರ್ನಲ್ಸ್:
ಪಾಸಿಂಗ್ ಮಾರ್ಕ್ಸ್ ಅನ್ನು ಆಂತರಿಕ ಮೌಲ್ಯಮಾಪನ (Internal Assessment) ಮತ್ತು ಲಿಖಿತ ಪರೀಕ್ಷೆ (Theory) ಎರಡನ್ನೂ ಸೇರಿಸಿ ಲೆಕ್ಕ ಹಾಕಲಾಗುತ್ತದೆ.
ಪ್ರಮುಖ ಬದಲಾವಣೆ:
ಈ ಹಿಂದೆ ಪಾಸಿಂಗ್ ಮಾರ್ಕ್ಸ್ 35% ಇತ್ತು. ಆದರೆ ಈಗ ಇದನ್ನು 33% ಕ್ಕೆ ಇಳಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಾಧಾನಕರ ವಿಷಯವಾಗಿದೆ.
ಒಟ್ಟಾರೆ, 2025-26ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸ್ ಆಗಲು ಈಗ ಒಟ್ಟಿನಲ್ಲಿ 33% ಅಂಕಗಳು ಮತ್ತು ಪ್ರತಿಯೊಂದು ವಿಷಯದಲ್ಲೂ 30% ಅಂಕಗಳು ಪಡೆಯಬೇಕಿದ್ದು, ಇಂಟರ್ನಲ್ ಆಸೇಸ್ಸ್ಮೆಂಟ್ ಅಂಕಗಳನ್ನು ಎಕ್ಸ್ಟರ್ನಲ್ ಅಂಕಗಳ ಜೊತೆಗೆ ಸೇರಿಸಲಾಗುತ್ತದೆ.
