Master Mitra

SSLC RESULT-2025: ಹಾಜರಾತಿಗೆ ತಕ್ಕಂತೆ ಎಬಿಸಿಡಿ ವಿದ್ಯಾರ್ಥಿ ಗುಂಪು ರಚನೆ, SSLC ಫಲಿತಾಂಶ ಸುಧಾರಣೆಗೆ ಕೊಪ್ಪಳದಲ್ಲಿ ಹೊಸ ಪ್ರಯೋಗ.

SSLC ಫಲಿತಾಂಶ ಸುಧಾರಣೆಗೆ ಕೊಪ್ಪಳದಲ್ಲಿ ಹೊಸ ಪ್ರಯೋಗ.

SSLC RESULT: ಪ್ರತಿವರ್ಷವೂ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಪಟ್ಟಿಯಲ್ಲಿ ಒಂದಂಕಿ ಸ್ಥಾನಕ್ಕೆ ಬರುತ್ತಿಲ್ಲ. ಇದಕ್ಕಾಗಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತವು ಹೊಸ ಹೊಸ ಪ್ರಯೋಗ ಮಾಡುತ್ತಿದ್ದು, ಈ ಪೈಕಿ ವಿದ್ಯಾರ್ಥಿಗಳ ಹಾಜರಾತಿಗೆ ತಕ್ಕಂತೆ ‘ಎಬಿಸಿಡಿ’ ಎನ್ನುವ ವಿದ್ಯಾರ್ಥಿಗಳ ಗುಂಪು ರಚನೆ ಮಾಡಿರುವುದು ವಿಶೇಷ.

ಜಿಲ್ಲೆಯ SSLC ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಶಿಕ್ಷಣ ಇಲಾಖೆಯು ಹರಸಾಹಸ ಪಡುತ್ತಿದ್ದು, ಶಾಲೆಗಳಲ್ಲಿ ಪ್ರತಿವಾರ ಕಿರುಪರೀಕ್ಷೆಗಳು, ಬೆಳಿಗ್ಗೆ ವಿಶೇಷ ತರಗತಿಗಳು ನಡೆಸಲಾಗುತ್ತಿದೆ. ಎಲ್ಲ ಗುಂಪಿನವರನ್ನು ಸೇರಿ ಸಂಜೆ ಗುಂಪು ಅಧ್ಯಯನ, ಶಿಕ್ಷಕರು ಬೆಳಿಗ್ಗೆ 5ಕ್ಕೆ ವಿದ್ಯಾರ್ಥಿಗಳಿಗೆ ಕರೆ ಮಾಡಿ, ಎದ್ದೇಳಿಸುವ ಕಾರ್ಯವೂ ನಡೆದಿದೆ. ಇವುಗಳ ಜತೆಗೆ ವಿದ್ಯಾರ್ಥಿಗಳ ಹಾಜರಾತಿಗೆ ಅನುಗುಣವಾಗಿ ಎ, ಬಿ, ಸಿ ಮತ್ತು ಡಿ ವಿದ್ಯಾರ್ಥಿಗಳ ಗುಂಪುಗಳನ್ನಾಗಿ ರಚಿಸಲಾಗಿದೆ. ಇದರ ಮೇಲ್ವಿಚಾರಣೆಗೆ ನೋಡಲ್ ಆಫೀಸರ್‌ಗಳನ್ನು ನೇಮಿಸಲಾಗಿದ್ದು, ಇವರು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ತೆರಳಿ, ಮಾರ್ಗದರ್ಶನ ಮಾಡಬೇಕು. ಇವರಿಗೆ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಂಯತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಾಹುಲ್ ರತ್ನಂ ಪಾಂಡೇಯ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.

ಜೂನ್‌ನಿಂದ ಆಗಸ್ಟ್ ವರೆಗೆ ಮೊದಲ ಸಮೀಕ್ಷೆ ಮಾಡಲಾಗಿದೆ. ಸೆಪ್ಟೆಂಬರ್‌ನಿಂದ ಅಕ್ಟೋಬರ್ ವರೆಗೆ ಎರಡನೇ ಸಮೀಕ್ಷೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ 21,835 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಇದರಲ್ಲಿ 4,582 ವಿದ್ಯಾರ್ಥಿಗಳು ಅನುತ್ತೀರ್ಣ ಗೊಂಡಿದ್ದಾರೆ. ಇವರಲ್ಲಿ ಬಹುತೇಕರು ಪರೀಕ್ಷೆ, ಶಾಲೆಗೆ ಹಾಜರಾಗದ ಅಂದರೆ ಡಿ ಮತ್ತು ಸಿ ಗುಂಪಿನ ವಿದ್ಯಾರ್ಥಿಗಳು ಎನ್ನುವುದು ಗಮನಾರ್ಹ. ನವೆಂಬರ್‌ನಿಂದ ಡಿಸೆಂಬರ್‌ವರೆಗೆ ಮೂರನೇ ಸಮೀಕ್ಷೆ ನಡೆಯುತ್ತಿದ್ದು, ಡಿಸೆಂಬರ್ ಕೊನೆಯ ವಾರ ಮತ್ತೊಂದು ಪರೀಕ್ಷೆ ನಿಗದಿ ಮಾಡಲಾಗುತ್ತದೆ. ಇದರಲ್ಲಿಯೂ ಯಾವ ಗುಂಪಿನ ಮಕ್ಕಳು ಎಷ್ಟು ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ ಎಂಬುದನ್ನು ದಾಖಲು ಮಾಡಲಾಗುತ್ತದೆ.

 

ಜಿಲ್ಲೆಯಲ್ಲಿ ತಿಂಗಳಲ್ಲಿ ದಿನನಿತ್ಯ ಶಾಲೆಗೆ ತಪ್ಪದೆ ಹಾಜರಾಗುವ ವಿದ್ಯಾರ್ಥಿಗಳು ‘ಎ’ ಗುಂಪಿನಲ್ಲಿ ಬರುತ್ತಾರೆ. ತಿಂಗಳಲ್ಲಿ 20 ದಿನ ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ‘ಬಿ’ ಗುಂಪಿನಲ್ಲಿ ಬರುತ್ತಾರೆ. ತಿಂಗಳಲ್ಲಿ 15 ದಿನ ಮಾತ್ರ ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ‘ಸಿ’ ಗುಂಪುನಲ್ಲಿ ಬರುತ್ತಾರೆ. ಇನ್ನೂ ತಿಂಗಳಲ್ಲಿ 5ರಿಂದ ಏಳು ದಿನ ಮಾತ್ರ ಶಾಲೆಗೆ ಬರುವ ಹಾಜರಾಗುವ ವಿದ್ಯಾರ್ಥಿಗಳು ಡಿ’ ಗುಂಪಿನಲ್ಲಿ ಬರುತ್ತಾರೆ. ಈ ಪ್ರಕಾರವಾಗಿ ಎ, ಬಿ, ಸಿ, ಡಿ ಗುಂಪು ರಚಿಸಲಾಗಿದೆ.

‘ ‘ಎ’ ಗುಂಪಿನಲ್ಲಿ 16,222 ವಿದ್ಯಾರ್ಥಿಗಳಿದ್ದು, ‘ಬಿ’ ಗುಂಪಿನಲ್ಲಿ 5,128 ವಿದ್ಯಾರ್ಥಿಗಳಿದ್ದಾರೆ. ‘ಸಿ’ ಗುಂಪಿನಲ್ಲಿ 1,967 ವಿದ್ಯಾರ್ಥಿಗಳು ಮತ್ತು ‘ಡಿ’ ಗುಂಪಿನಲ್ಲಿ 1,615 ವಿದ್ಯಾರ್ಥಿಗಳಿದ್ದಾರೆ.

ಅನುತ್ತೀರ್ಣಗೊಳ್ಳುವ ಸಿ ಮತ್ತು ಡಿ ಗುಂಪಿನ ವಿದ್ಯಾರ್ಥಿಗಳಿಗೆ ಒಂದು, ಎರಡು, ಮೂರು ಮತ್ತು ನಾಲ್ಕು ಅಂಕದ ಪ್ರಶ್ನೆಗಳನ್ನು ಒಂದೊಂದು ದಿನ ನೀಡಲಾಗುತ್ತದೆ.

ಸಿ ಮತ್ತು ಡಿ ಗುಂಪಿನ ವಿದ್ಯಾರ್ಥಿಗಳಿಗೆ ಪ್ರತಿ ಆರು ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿದಿನವೂ ಒಂದೊಂದು ಅಂದರೆ ಆರು ಪ್ರಶ್ನೆಗಳನ್ನು ನೀಡಲಾಗುತ್ತದೆ. ವಾರದಲ್ಲಿ ನೀಡಿದ 30 ಪ್ರಶೋತ್ತರಗಳ ಮೇಲೆ ವಾರದ ಕೊನೆಯ ದಿನ ಕಿರುಪರೀಕ್ಷೆ ನಡೆಸಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಕಾಳಜಿ ವಹಿಸಲಾಗುತ್ತಿದೆ.

“SSLC ಫಲಿತಾಂಶ ಸುಧಾರಣೆಗೆ ಶಾಲೆಯ ಹಾಜರಾತಿಗೆ ತಕ್ಕಂತೆ ವಿದ್ಯಾರ್ಥಿಗಳ ಎ,ಬಿ,ಸಿ,ಡಿ ಗುಂಪು ರಚಿಸಲಾಗಿದೆ. ಸಿ ಮತ್ತು ಡಿ ಗುಂಪಿನ ವಿದ್ಯಾರ್ಥಿಗಳಿಗೆ ಹೆಚ್ಚು ಕಾಳಜಿ ವಹಿಸಲಾಗುತ್ತಿದೆ. ಯೋಜನೆಯ ಮೇಲ್ವಿಚಾರಣೆಗೆ 34 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಇವರನ್ನು ಒಳಗೊಂಡಂತೆ 15 ದಿನಕ್ಕೊಮ್ಮೆ ಸಭೆ ನಡೆಸಲಾಗುತ್ತದೆ.”

“ಡಿಸಿ ನಲಿನ್ ಅತುಲ್, ಜಿ.ಪಂ.ಸಿಇಓ ರಾಹುಲ್ ರತ್ನಂ ಪಾಂಡೇಯರವರು ಎಬಿಸಿಡಿ ವಿದ್ಯಾರ್ಥಿಗಳ ಗುಂಪು ರಚನೆ ಮಾಡಿ, ಸಿ ಮತ್ತು ಡಿ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಸೂಚಿಸಿದ್ದಾರೆ. ಶಾಲೆಯ ಫಲಿತಾಂಶ ಕಡಿಮೆ ಬಂದರೆ ನೋಡಲ್‌ ಅಧಿಕಾರಿ, ಮುಖ್ಯಶಿಕ್ಷಕ ಮತ್ತು ವಿಷಯ ಶಿಕ್ಷಕರೇ ಹೊಣೆಯಾಗುತ್ತಾರೆ.”

 

ಈ ನಿಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಪಟ್ಟಿಯಲ್ಲಿ ಉತ್ತಮ ಸ್ಥಾನ ಗಳಿಸಲಿ ಎಂಬುದು ಎಲ್ಲರ ಬಯಕೆ.

ಮಾಹಿತಿ ಕೃಪೆ : sk

Exit mobile version