Scholorship-2024-25: ಮೆಟ್ರಿಕ್ ಪೂರ್ವ “ವಿದ್ಯಾರ್ಥಿವೇತನ ಅಭಿಯಾನ” 2024-25

Scholorship-2025: ಮೆಟ್ರಿಕ್ ಪೂರ್ವ “ವಿದ್ಯಾರ್ಥಿವೇತನ ಅಭಿಯಾನ” 2024-25

Scholorship: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು “2024-25ನೇ ಸಾಲಿಗೆ ಮಟ್ರಿಕ್ ಪೂರ್ವ ನವೀನ ವಿದ್ಯಾರ್ಥಿಗಳು ಮಾತ್ರ” ಈ ಕೆಳಕಂಡ ವೆಬ್ ವಿಳಾಸ ಯು.ಆರ್.ಎಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

 

ಈ ಮೇಲ್ಕಂಡ ವೆಬ್ ವಿಳಾಸ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶವು ವಿದ್ಯಾರ್ಥಿವೇತನವನ್ನು ಆಧಾರ ಜೋಡನೆಯಾಗಿರುವ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡುತ್ತದೆ.

 

ಹೊಸದಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ (Scholorship) ಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ವಿದ್ಯಾರ್ಥಿಯ ಆಧಾರ ಕಾರ್ಡ್.
  • ತಂದೆ, ತಾಯಿ / ಪಾಲಕರ / ಪೋಷಕರ ಆಧಾರ ಕಾರ್ಡ್
  • ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವಿದ್ಯಾರ್ಥಿಯ ಎಸ್.ಎ.ಟಿ.ಎಸ್ ಸಂಖ್ಯೆ.
  • ಮೊಬೈಲ್ ಸಂಖ್ಯೆ

 

ಈಗಾಗಲೇ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು Auto reject ಆಗಿ ಶಿಷ್ಯವೇತನ ಜಮೆ ಶಿಷ್ಯವೇತನ ಆಗದೇ ಇದ್ದಲ್ಲಿ https://ssp.postmatric.karnataka.gov.in/ssppre ಲಿಂಕ್‌ನ್ನು ಬಳಸಿ ಮತ್ತೊಮ್ಮೆ ಅರ್ಜಿ ಸಲ್ಲಿಸುವುದು.

1 ರಿಂದ 8ನೇ ತರಗತಿಯವರೆಗೆ ವಿದ್ಯಾರ್ಥಿಗಳ ಕುಟುಂಬದ ಆದಾಯ ರೂ 6.00 ಲಕ್ಷ ಮೀರಿಬಾರದು.

9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಕುಟುಂಬದ ಆದಾಯ ರೂ 2.50 ಲಕ್ಷ ಮೀರಿಬಾರದು.

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕಾಗಿ ಹಿಂದಿನ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

1ನೇ ತರಗತಿಯಲಿ ಅಥವಾ ಒಟ್ಟಾರೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು ಹೊಸದಾಗಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು.

ಕಳೆದ ಸಾಲಿನಲ್ಲಿ ವಿವಿಧ ಕಾರಣಗಳಿಂದ ವಿದ್ಯಾರ್ಥಿವೇತನ ಮಂಜೂರಾಗದ ವಿದ್ಯಾರ್ಥಿಗಳು ಪ್ರಸಕ್ತ ಸಾಲಿಗೆ ಅರ್ಜಿ ಸಲ್ಲಿಸುವುದು,

ವಿದ್ಯಾರ್ಥಿಯ ಹೆಸರು SATS ಬ್ಯಾಂಕ್ ಖಾತೆಯಲ್ಲಿ ಹಾಗೂ ಆಧಾರ ಕಾರ್ಡನಲ್ಲಿ ಒಂದೇ ರೀತಿಯಾಗಿ ಇರಬೇಕು ಮತ್ತು ಆಧಾರ ಕಾರ್ಡ ಬ್ಯಾಂಕ್ ಖಾತೆಯಲ್ಲಿ ಎನ್.ಪಿ.ಸಿ.ಆಯ್ ನಲ್ಲಿ ಕಡ್ಡಾಯವಾಗಿ ಮ್ಯಾಪಿಂಗ್ ಆಗಿರಬೇಕು.

ವಿದ್ಯಾರ್ಥಿ ವೇತನ ಮೊತ್ತದ ವಿವರ:

ವಿಶೇಷ ಸೂಚನೆ : ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಸರ್ಕಾರದ ಮಾರ್ಗಸೂಚಿಗಳನ್ನು ಮತ್ತು ಷರತ್ತುಗಳನ್ನು ಚನ್ನಾಗಿ ಓದಿಕೊಂಡು ಅರ್ಥೈಸಿಕೊಂಡು ಜಾಗರೂಕತೆಯಿಂದ ಅರ್ಜಿ ಸಲ್ಲಿಸುವುದು,

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: https://ssp.postmatric.karnataka.gov.in/ssppre

ಮೆಟ್ರಿಕ್ ಪೂರ್ವ ಶಿಷ್ಯವೇತನಕ್ಕಾಗಿ ವೆಬ್ ವಿಳಾಸ

https://ssp.postmatric.karnataka.gov.in/CA/

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!