Story: ಬುದ್ಧಿವಂತರು- ಸುಂದರವಾದ ಕಥೆ
Story: ಹಿಂದೆ ಉಜೈಕಿ ಸ್ಥಾನದಲ್ಲಿ ಒಬ್ಬ ಬಡವನಿದ್ದನು. ಅವನಿಗಿರುವ ಮೂವರು ಗಂಡು ಮಕ್ಕಳು ಬಾಲ್ಯ ವನ್ನು ಕಳೆದು ದೊಡ್ಡವರಾದರು. ತಂದೆ ಒಂದು ದಿನ ತನ್ನ ಮೂವರು ಮಕ್ಕಳೊಂದಿಗೆ, “ಮಕ್ಕಳೇ, ನಮಗೆ ದನಗಳ ಮಂದೆ ಇಲ್ಲ. ಚಿನ್ನ ಬೆಳ್ಳಿಗಳೂ ಇಲ್ಲ. ಆದುದರಿಂದ ನೀವು ಜ್ಞಾನಧನವನ್ನೇ ಸಂಪಾ ದಿಸಿಕೊಂಡು ಬುದ್ಧಿವಂತಿಕೆಯನ್ನೇ ಆಸ್ತಿಯಾಗಿ ಭಾವಿಸಿ ಬದುಕ ಬೇಕಾಗಿದೆ” ಎಂದು ಬೋಧಿಸಿದನು.
ಮಗಂದಿರು ತಂದೆಯ ಬುದ್ದಿವಾದದಂತೆಯೇ ನಡೆದು,ವಯಸ್ಸಿಗೆ ಬರುತ್ತಿದ್ದರು. ತಂದೆ ತೀರಿಹೋದ ಮೇಲೆ ಅವರು ಆ ಊರನ್ನು ಬಿಟ್ಟು ಬದುಕುವ ದಾರಿ ಹುಡುಕುತ್ತ ಎಲ್ಲಿಗೋ ಹೊರಟರು.
ಕೆಲವು ದಿನ ನಡೆದ ಮೇಲೆ. ಒಂದು ನಗರವು ಕಾಣ ತೊಡಗಿತು. ಆ ನಗರದಲ್ಲಿ ತಮಗೆ ಕೆಲಸ ಸಿಗಬಹುದೆಂದುಕೊಂಡು ಅಲ್ಲಿಗೇ ಹೋಗುತ್ತಿದ್ದರು.
ತಲೆ ತಗ್ಗಿಸಿ ದಾರಿಯನ್ನೇ ನೋಡಿಕೊಂಡು ನಡೆಯುತ್ತಿದ್ದ ಹಿರಿಯಣ್ಣನು ತಟ್ಟನೆ ನಿಂತು.” ಸ್ವಲ್ಪ ಹೊತ್ತಿನ ಕೆಳಗೆ ಈ ದಾರಿಯಲ್ಲಿ ದೊಡ್ಡದೊಂದು ಒಂಟೆ ಹೋಗಿದೆ” ಎಂದನು.
ಮತ್ತೆ ಸ್ವಲ್ಪ ಮುಂದೆ ಹೋಗುತ್ತಿರಲು, ಎರಡನೆಯವನು “ಹೌದು ಹೌದು. ಅದಕ್ಕೆ ಒಂದು ಕಣ್ಣು ಕುರುಡು ” ಎಂದನು.
ಇನ್ನಿಷ್ಟು ಮುಂದೆ ಹೋದ ಮೇಲೆ ಮೂರ
ನೆಯವನು, “ಒಂಟೆಯ ಮೇಲೆ ಒಬ್ಬಳು ಹೆಂಗುಸು,
ಒಂದು ಮಗುವಿನೊಂದಿಗೆ ಕುಳಿತಿದ್ದಾಳೆ” ಎಂದನು. ಅವರು ಮೂವರೂ ಇನ್ನಿಷ್ಟು ಮುಂದೆ ಹೋಗುವಾಗ, ಹಿಂದಿನಿಂದ ಒಬ್ಬ ಮನುಷ್ಯನು ಕುದುರೆಯ ಮೇಲೆ ಕುಳಿತುಕೊಂಡು ಬಂದು, ಮೂವರು ಸಹೋದರರನ್ನು ನೋಡಿ, ಕುದುರೆ ನಿಲ್ಲಿಸಿದನು.
ಅವನು ಆಚೆಗೂ ಈಚೆಗೂ ನೋಡಿಕೊಂಡೇ ಬಂದಿದ್ದನು. ಈಗಲೂ ಹಾಗೆಯೇ ವಿನನ್ನೋ ಹುಡುಕುವಂತೆ ಕಂಡನು.
ಅದನ್ನು ನೋಡಿ ದೊಡ್ಡಣ್ಣನು, “ಅಯ್ಯಾ, ಏನನ್ನೋ ಹುಡುಕುವ ಹಾಗೆ ಕಾಣುವಿರಿ- ಒಂಟಿ ಗಿಂಟೆ ಅಲ್ಲವಷ್ಟೆ ?” ಎಂದನು.
“ಹೌದು, ಒಂಟೆಯನ್ನೇ ಹುಡುಕುವುದು. ಅದು ಎತ್ತಕಡೆಗೆ ಹೋಯಿತೋ ?” ಎಂದನು ಕುದುರೆಯ ಮೇಲೆ ಬಂದವನು. “ದೊಡ್ಡ ಒಂಟೆ ಹೌದೇ ?” ಎಂದು ದೊಡ್ಡವನು ಪುನಃ ಕೇಳಿದನು. “ಹೌದು. ನೀವು ನೋಡಿದಿರೇನು ಅದನ್ನು ?” ಎಂದು ಕುದುರೆಯವನು ಕೇಳಿದನು.
” ಅದರ ಎಡದ ಕಣ್ಣು ಕುರುಡು ತಾನೆ ?” ಎಂದು ಎರಡನೇಯವನು ಪ್ರಶ್ನಿಸಿದನು.
” ಅದರ ಮೇಲೆ ಒಬ್ಬಳು ಹೆಂಗುಸು, ಮಗುವನ್ನು ಎತ್ತಿಕೊಂಡು ಕೂತಿದ್ದಳಲ್ಲವೆ ?” ಎಂದು ಮೂರನೆಯವನು ಕೇಳಿದನು.
“ನಿಜ ನಿಜ. ನಿಮ್ಮ ಮೂವರ ಮಾತೂ ನಿಜ. ನೀವು ಅದನ್ನು ನೋಡಿದ್ದೀರೆಂದಾಯಿತು. ಆ ಒಂಟೆ ಎಲ್ಲಿಗೆ ಹೋಯಿತೋ ಹೇಳಿರಿ ” ಎಂದನು ಕುದುರೆ ಯಲ್ಲಿ ಬಂದವನು.
“ನಾವು ನಿಮ್ಮ ಒಂಟೆಯನ್ನು ನೋಡಲೇ ಇಲ್ಲ” ಎಂದು ಮೂವರೂ ಹೇಳಿದ್ದು ಕೇಳಿ, ಕುದುರೆಯ ವನಿಗೆ ಬೆರಗು ಬಡೆದಂತಾಯಿತು.
ಒಂಟೆಯನ್ನು ಕಳೆದುಕೊಂಡ ಅವನಿಗೆ ಆ ಮೂವರೂ ಸ ಹೋದ ರ ರ ಮೇಲೆ ಏನೋ ಅನುಮಾನ ಬಂತು. “ಆಟ ತೋರಿಸುವಿರೇನು ? ನನ್ನ ಒಂಟೆಯನ್ನೂ, ಅದರ ಮೇಲಿರುವ ನನ್ನ ಹೆಂಡತಿಯನ್ನೂ, ಮಗನನ್ನೂ ಏನು ಮಾಡಿದರೆಂದು ಹೇಳದೆ ಹೋದರೆ, ನಿಮ್ಮನ್ನು ಬಾದಶಹರ ಬಳಿಗೆ ಎಳೆದುಕೊಂಡು ಹೋಗುತ್ತೇನೆ” ಎಂದನು ಕುದುರೆಯವನು.
” ಸತ್ಯವಾಗಿಯೂ ನಾವು ನಿಮ್ಮ ಒಂಟೆಯ ನಾಗಲಿ, ಹೆಂಡತಿಯನ್ನಾಗಲಿ, ಮಗನನ್ನಾಗಲಿ ನೋಡಲೇ ಇಲ್ಲ. ನೀವು ಈ ದಿಕ್ಕಿನಲ್ಲಿ ಹೋದರೆ ನಿಮಗೆ ಒಂಟಿ ಸಿಗಬಹುದು” ಎಂದರು ಅಣ್ಣ ತಮ್ಮಂದಿರು.
” ನೀವು ಕಣ್ಣಿನಿಂದ ನೋಡದ ಒಂಟೆಯನ್ನೂ * ಅದರ ಮೇಲಿದ್ದವರನ್ನೂ ಸರಿಯಾಗಿ ಹೇಗೆ ವರ್ಣಿ ಸಿದಿರಿ? ನಡೆಯಿರಿ ಬಾದಶಹರ ಬಳಿಗೆ.” ಎಂದು ಕುದುರೆಯ ಸವಾರನು ಜೋರು ಮಾಡಿದನು.
“ನಾವು ಹೇಗೆ ಹೇಳಿದೆವೆಂಬುನ್ನು ಹೇಳಿದರೂ ನೀವು ನಂಬಲಾರಿರಿ. ಬಾದಶಹರು ನಂಬಿದರೆ ನಮ್ಮ ಪುಣ್ಯ” ಎಂದು ಸಹೋದರರು ಕುದುರೆ ಸವಾರನೊಂದಿಗೆ ಬಾದಶಹನಲ್ಲಿಗೆ ಹೊರಟರು. ಕುದುರೆಯವನು ಬಾದಶಹನೊಂದಿಗೆ, ಅವರು ತನ್ನ ಒಂಟೆಯನ್ನು ಹೆಂಡತಿ ಮಗನೊಂದಿಗೆ ತಸ್ಕರಿಸಿದ ರೆಂದು ಫಿರ್ಯಾದಿ ಮಾಡಿದನು.
” ಅವರು ತಸ್ಕರಿಸಿದರೆನ್ನಲು ಆಧಾರವೇನಿದೆ ?” ಎಂದು ಬಾದಶಹನು ಕೇಳಿದನು. ” ನನ್ನ ಒಂಟಿ ದೊಡ್ಡದೆಂದೂ, ಅದರ ಒಂದು ಕಣ್ಣು ಕುರುಡು ಎಂದೂ, ಅದರ ಮೇಲೆ ಒಬ್ಬಳು ಹೆಂಗುಸೂ, ಮಗುವೂ ಇರುವರೆಂದೂ ಸರಿಯಾಗಿಯೇ ಹೇಳಿದ್ದಾರೆ. ಆಮೇಲೆ ನೋಡಲೇ ಇಲ್ಲವೆಂದು ಸಾಧಿಸುತ್ತಾರೆ. ಏನೂ ನೋಡದವರು ಆ ವಿವರ
ಗಳನ್ನೆಲ್ಲ ಹೇಗೆ ಹೇಳಿದರು ?” ಎಂದನು ಒಂಟಿ ಯನ್ನು ಕಳೆದುಕೊಂಡವನು.
“ನಿಜ. ಈ ಪ್ರಶ್ನೆಗೆ ಏನು ಹೇಳುವಿರಿ ?” ಎಂದು ಬಾದಶಹನ್ನು ಅಣ್ಣ ತಮ್ಮಂದಿರನ್ನು ಕೇಳಿದನು.
“ನಾವು ನಮ್ಮ ಕಣ್ಣುಗಳನ್ನು ಉಪಯೋಗಿಸಿ, ಪ್ರತಿಯೊಂದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅನೇಕ ವಿಷಯಗಳನ್ನು ಹೇಳಬಲ್ಲೆವು ಪ್ರಭೂ ” ಎಂದರು ಅಣ್ಣ ತಮ್ಮಂದಿರು.
ನಿಮ್ಮ ವಿದ್ಯೆಯನ್ನು ನಾನು ಈಗಲೇ ಪರೀಕ್ಷಿಸಿ ಬಿಡುತ್ತೇನೆ” ಎಂದು ಹೇಳಿ ಬಾದಶಹನು ವಜೀರನ ಕಿವಿಯಲ್ಲಿ ರಹಸ್ಯವಾಗಿ ಏನೋ ಹೇಳಿದನು. ವಜೀರನು ಇಬ್ಬರು ನೌಕರರಿಂದ ಒಂದು ಪೆಟ್ಟಿಗೆ ಯನ್ನು ಹೊರಿಸಿ ತಂದು, ಬಾದಶಹನ ಇದಿರಿನಲ್ಲಿ ಇಡಿಸಿದನು.
ಈ ಪೆಟ್ಟಿಗೆಯಲ್ಲಿ ಏನಿರುವುದೆಂದು ಹೇಳಿರಿ ” ಎಂದು ಬಾದಶಹನು ಅಣ್ಣ ತಮ್ಮಂದಿರಿಗೆ ಆಜ್ಞೆ ಮಾಡಿದನು.
“ಅದು ಖಾಲೀ ಪೆಟ್ಟಿಗೆ. ಒಂದು ಗುಂಡಗಿನ ವಸ್ತು ಆ ಪೆಟ್ಟಿಗೆ ಯೊಳಗಿದೆ” ಎಂದನು ದೊಡ್ಡಣ್ಣ.
“ಆ ಗುಂಡಗಿನ ವಸ್ತು ದಾಳಿಂಬೇಕಾಯಿ ” ಎಂದನು ಎರಡನೆಯವನು.
“ಕಾಯಿಯೇ ಹೌದು, ಇನ್ನೂ ಹಣ್ಣಾಗಲಿಲ್ಲ” ಎಂದನು ಮೂರನೆಯವನು.
ಬಾದಶಹನು ಆಸನದಿಂದ ಇಳಿದು ಬಂದು ಆ ಪೆಟ್ಟಿಗೆಯ ಮುಚ್ಚಳವನ್ನು ಎತ್ತಿ, ಅದರೊಳಗಿನಿಂದ ಒಂದು ದಾಳಿಂಬೆ ಕಾಯಿಯನ್ನು ಎತ್ತಿಕೊಂಡನು. ಸಭೆಯವರೆಲ್ಲಾ ನಿಬ್ಬೆರಗಾಗಿ ನೋಡುತ್ತಿದ್ದರು.
” ಇವರು ಕಳ್ಳರೂ ಅಲ್ಲ. ವಂಚಕರೂ ಅಲ್ಲ. ಮಹಾ ಮೇಧಾವಿಗಳೆನ್ನಲು ಏನೂ ಸಂದೇಹವಿಲ್ಲ. ನಿನ್ನ ಒಂಟೆ ವಿನಾಯಿತೆಂಬುದನ್ನು ನೀನೇ ಹೋಗಿ
ಹುಡುಕಿಕೊ ” ಎಂದು ಬಾದಶಹನು ಫಿರ್ಯಾದಿ ಯೊಂದಿಗೆ ಹೇಳಿ, ಅಣ್ಣ ತಮ್ಮಂದಿರನ್ನು ಆದರ ದಿಂದ ಮಾತಾಡಿಸಿದನು. ಅವರನ್ನು ತನ್ನ ಜತೆಯಲ್ಲೇ ಭೋಜನಕ್ಕೆ ಕರೆದೊಯ್ದು, ಅವರಿಗೆ ದಿವ್ಯವಾದ ಭೋಜನ ಪಾನೀಯಗಳನ್ನು ಕೊಡಿಸಿದನು.
“ ನಿಮ್ಮ ಬುದ್ದಿ ಸೂಕ್ಷ್ಮತೆ ಬಹಳ ಅದ್ಭುತ 66 ವಾಗಿದೆ. ನೀವು ನೋಡದೇ ಇದ್ದ ಒಂಟೆಯನ್ನೂ, ಅದರ ಮೇಲೆ ಕುಳಿತವರನ್ನೂ ಹೇಗೆ ವರ್ಣಿಸಲು ಸಾಧ್ಯವಾಯಿತು ? ನನಗೆ ಹೇಳುವಿರಾ ?” ಎಂದು ಕೇಳಿದನು ಬಾದಶಹ.
“ದಾರಿಯಲ್ಲಿ ಒಂಟೆಯ ಪಾದದ ಗುರುತು ಗಳಿದ್ದುವು. ಅವು ಸಣ್ಣ ಒಂಟೆಗಳಿಗಿಂತ ದೊಡ್ಡ ದಾಗಿದ್ದುವು. ಅದರಿಂದ ಒಂಟೆ ಬಹಳ ದೊಡ್ಡ ದೆಂದು ತಿಳಿಯಿತು” ಎಂದನು ದೊಡ್ಡವನು. 66 ಅದು ದಾರಿಯಲ್ಲಿ ಹೋಗುತ್ತ ಬಲಬದಿ ಯಲ್ಲಿದ್ದ ಹುಲ್ಲು ಸೊಪ್ಪುಗಳನ್ನು ಮಾತ್ರ ಕಡಿದಿದೆ.
ಎಡ ಪಕ್ಕದಲ್ಲಿರುವುದಕ್ಕೆ ಬಾಯಿ ಹಾಕಲೇ ಇಲ್ಲ. ಆದ್ದರಿಂದ ಅದಕ್ಕೆ ಎಡದ ಕಣ್ಣು ಕುರುಡೆಂದು ಗೊತ್ತಾಯಿತು” ಎಂದನು ಎರಡನೆಯವನು. ಒಂದು ಕಡೆಯಲ್ಲಿ ಆ ಒಂಟೆ ಮಲಗಿದೆ. ಅದರ ಮೇಲಿದ್ದವರು ಇಳಿದಿದ್ದಾರೆ. ಅಲ್ಲಿ ಹೊಯಿಗೆಯಲ್ಲಿ ಸ್ತ್ರೀಯ ಪಾದಗಳ ಗುರುತುಗಳೂ, ಮಗುವಿನ ಪಾದಗಳ ಗುರುತುಗಳೂ ಇದ್ದುವು. ಅದರಿಂದ ಹೆಂಗಸೂ, ಮಗುವೂ ಇದ್ದಾರೆಂದು ತಿಳಿದೆನು ” ಎಂದನು ಮೂರನೇಯವನು.
“ನೀವು ಹೇಳಿದುದೆಲ್ಲಾ ಸರಿಯಾಗಿಯೇ ಇದೆ. ನಿಮ್ಮ ಪರಿಶೀಲನೆಯ ಶಕ್ತಿ ದೊಡ್ಡದೇ. ಆದರೆ ಪೆಟ್ಟಿಗೆಯಲ್ಲಿ ದಾಳಿಂಬೇಕಾಯಿ ಇರುವ ಸಂಗತಿ ಹೇಗೆ ಹೇಳಲು ಸಾಧ್ಯವಾಯಿತು ? ಅದು ಮೊದಲಿ ನದರಷ್ಟು ಸುಲಭ ಅಲ್ಲವಷ್ಟೆ ?” ಬಾದಶಹ. ಎಂದನು
“ಕೇಳಬೇಕು- ತಮ್ಮ ಸೇವಕರು ಪೆಟ್ಟಿಗೆಯನ್ನು ತರುವ ರೀತಿ ನೋಡಿದರೇನೇ ಅದು ಭಾರವಿಲ್ಲ ದ್ದೆಂದು ಗೊತ್ತಾಯಿತು. ಅವರು ಕೆಳಗೆ ಪೆಟ್ಟಿಗೆ ಇಡುವಾಗ ಒಂದು ಬದಿ ಮೊದಲು ನೆಲಕ್ಕೆ ಸೋಕಿ, ಆನಂತರ ಎರಡನೇ ಬದಿ ಸೋಕಿತು. ಆಗ ಆ ಪೆಟ್ಟಿಗೆಯೊಳಗೆ ಏನೋ ಒಂದು ವಸ್ತು ಉರುಳಿ ದಂತೆ ಶಬ್ದವಾಯಿತು. ಅದ್ದರಿಂದ ಖಾಲಿ
ಪೆಟ್ಟಿಗೆಯಲ್ಲಿರುವ ಗುಂಡಗಿನ ವಸ್ತುವೇ ವಿಧವಾಗಿ ಉರುಳಿತೆಂದು ತಿಳಿದೆನು” ಎಂದನು ದೊಡ್ಡವನು.
“ಆ ಪೆಟ್ಟಿಗೆಯನ್ನು ನಿಮ್ಮ ದಾಳಿಂಬೆ ತೋಟದ ಕಡೆಯಿಂದಲೇ ತಂದರು. ಮನೆಯೊಳಗಿದ್ದ ಪೆಟ್ಟಿಗೆ ಯನ್ನು ದಾಳಿಂಬೆ ತೋಟಕ್ಕೆ ತೆಗೆದುಕೊಂಡು ಹೋದರೆಂದರೆ ದಾಳಿಂಬೇ ಕಾಯಯ ಹೊರತು ಬೇರೆ ಯಾವ ಗುಂಡಗಿನ ವಸ್ತು ಇದ್ದೀತು ?” ಎಂದನು ಎರಡನೆಯವನು.
46 * ಇಲ್ಲಿಯವರೆಗೆ ಸರಿಯೇ. ಅದು ಹಸೀ ಕಾಯಿ ಎಂಬ ಸಂಗತಿ ಹೇಗೆ ಗೊತ್ತಾಯತು ? ಹಣ್ಣೂ ಆಗಿರಬಾರದೇಕೆ ?” ಎಂದು ಬಾದಶಹನು ಕೇಳಿದನು.
“ಅದನ್ನು ಹೇಳುವುದು. ಬಹಳ ಸುಲಭ. ದಾಳಿಂಬೆ ಹಣ್ಣಾಗುವ ಕಾಲ ಇನ್ನೂ ಬರಲಿಲ್ಲ. ಹಣ್ಣಾದರೆ ಸಾಧಾರಣವಾಗಿ ಕೊಯ್ದು ಒಳಗಿಡು ತ್ತಾರೆ. ತಾವು ಒಮ್ಮೆ ತೋಟದ ಕಡೆಗೆ ಕಗ್ಗೋಡಿ ಸಿದರೂ ಸಾಕು. ಎಲ್ಲವೂ ಕಾಯಿಗಳೇ ” ಎಂದನು ಮೂರನೇಯವನು.
ಬಾದಶಹನು ಆ ಮೂವರು ಅಣ್ಣ ತಮ್ಮಂದಿರ ಬುದ್ದಿ ಸೂಕ್ಷ್ಮತೆಗೆ ಸಂತೋಷಪಟ್ಟು, ಅವರನ್ನು ಒಳ್ಳೆಯ ಸಂಬಳದ ಮೇಲೆ ತನ್ನ ಆಸ್ಥಾನದಲ್ಲಿ ಇರಿಸಿಕೊಂಡನು.