Surrender Value & Death Arrears Register Management-2026 ವಿಮಾತ್ಯಾಗ ಮೌಲ್ಯ ಮತ್ತು ಮರಣಜನ್ಯ ಅರೈಸನ್ ರಿಜಿಸ್ಟರ್‌ಗಳ ಸಮರ್ಪಕ ನಿರ್ವಹಣೆ: ಸರ್ಕಾರಿ ಕಚೇರಿಗಳಿಗೆ ಮಾರ್ಗದರ್ಶಿ
Surrender Value & Death Arrears Register Management-2026 ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದು ಜಿಲ್ಲಾ ವಿಮಾ ಕಚೇರಿಗಳಲ್ಲಿ ವಿಮಾತ್ಯಾಗಮೌಲ್ಯ ಆರೈಸನ್ ರಿಜಿಸ್ಟರ್ ಹಾಗೂ ಮರಣಜನ್ಮ ಆರೈಸನ್ ರಿಜಿಸ್ಟರ್ಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು ಗಮನಕ್ಕೆ ಬಂದಿರುತ್ತದೆ.
ಈ ಕುರಿತು ಈಗಾಗಲೇ ಗೂಗಲ್ ಮೀಟ್ ಮೂಲಕವೂ ಸ್ಪಷ್ಟವಾಗಿ ಸೂಚನೆಗಳನ್ನು ನೀಡಲಾಗಿದ್ದು ಇನ್ನುಮುಂದೆ ಇಂತಹ ಪ್ರಕರಣಗಳನ್ನು ಆನ್ ಲೈನ್ ಅಥವಾ ಆಫ್ ಲೈನ್ ಯಾವುದೇ ವಿಧಾನದಲ್ಲಿ ಇತ್ಯರ್ಥಪಡಿಸಿದ್ದರೂ ಸಹ, ಸಂಬಂಧಪಟ್ಟ ಎಲ್ಲಾ ಅಗತ್ಯ ವಿವರಗಳನ್ನು ಆಯಾ ಜಿಲ್ಲಾ ವಿಮಾ ಕಛೇರಿಗಳಲ್ಲಿ ನಿರ್ವಹಿಸಲ್ಪಡುತ್ತಿರುವ ಸಂಬಂಧಿತ ರಿಜಿಸ್ಟರ್ ಗಳಲ್ಲಿ ಮಾಹಿತಿಯನ್ನು ಸಂಪೂರ್ಣವಾಗಿ ಹಾಗೂ ನಿಖರವಾಗಿ ತಪ್ಪದೇ ದಾಖಲಿಸಿಕೊಳ್ಳುವುದು.
ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದೂ ಹಾಗೂ ಈ ಹಿಂದಿನಂತೆ ನಿರ್ವಹಿಸಲಾಗುತ್ತಿದ್ದ ಎಲ್ಲಾ ಅಗತ್ಯ ರಿಜಿಸ್ಟರ್ ಗಳನ್ನು ಆಗಿಂದರೆ ಅಪ್ಲೋಟ್ ಮಾಡಿ ರಿಜಿಸ್ಟ್ರರ್ ಗಳನ್ನು ಜೋಪಾನವಾಗಿ ಸಂರಕ್ಷಿಸಿಡಬೇಕೆಂದು ಈ ಮೂಲಕ ತಿಳಿಸಲಾಗಿದೆ
ಮುಂದುವರಿದು ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯ ಜಿಲ್ಲೆಗಳಿಗೆ ಪರಿಶೀಲನಾ ಕರ್ತವ್ಯದ ಅಂಗವಾಗಿ ಭೇಟಿ ನೀಡುವ ಸಂದರ್ಭದಲ್ಲಿ ಮೇಲ್ಕಂಡ ಎಲ್ಲಾ ರಿಜಿಸ್ಟರ್ ಗಳನ್ನು ತಪ್ಪದೇ ಪರಿಶೀಲಿಸಿ ಅವುಗಳನ್ನು ಸರಿಯಾಗಿ ಹಾಗೂ ನಿಯಮಾನುಸಾರ ನಿರ್ವಹಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಯಾವುದೇ ಜಿಲ್ಲೆಯಲ್ಲಿ ರಿಜಿಸ್ಟರ್ ಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿಲ್ಲವೆಂದು ಕಂಡುಬಂದಲ್ಲಿ ಈ ಕುರಿತು ತಕ್ಷಣವೇ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಈ ಮೂಲಕ ತಿಳಿಸಲಾಗಿದೆ

