Syllabus for Entrance Examination-P U Lecturer Posts (Promotion to PU Colleges from High Schools)-2025

Syllabus for Entrance Examination-P U Lecturer Posts (Promotion to PU Colleges from High Schools)

Syllabus for Entrance Examination-P U Lecturer Posts (Promotion to PU Colleges from High Schools)

1. ಸಾಮಾನ್ಯ ಜ್ಞಾನ ಮತ್ತು ಪ್ರಸ್ತುತ ವಿದ್ಯಮಾನ : ರಾಜ್ಯದ ಮತ್ತು ದೇಶದ ಪ್ರಸ್ತುತ ವಿದ್ಯಮಾನಗಳು.

2. ಬೋಧನಾಶಾಸ್ತ್ರ, ಪಠ್ಯಕ್ರಮ, ಮೌಲ್ಯಮಾಪನ :

ಬೋಧನಾಶಾಸ್ತ್ರ-

ಪರಿಕಲ್ಪನೆ ಮತ್ತು ಹಂತಗಳು, ಐದು ಪ್ರಮುಖ ಬೋಧನಾ ಮಾರ್ಗಗಳು: – ಸಂರಚನಾ ಮಾರ್ಗ, ಸಹಯೋಗ ಮಾರ್ಗ, ಸಮನ್ವಯ ಮಾರ್ಗ, ಪ್ರತಿಫಲಿತ ಮತ್ತು ಶೋಧನಾ ಅಧಾರಿತ ಕಲಿಕೆ,

ಬೋಧನಾ ಮಾರ್ಗಗಳು:

ಬೋಧನಾ ವಿಧಾನದ ವಿಧಗಳು: ಶಿಕ್ಷಕ ಕೇಂದ್ರಿತ. ಕಲಿಕಾರ್ಥಿ ಕೇಂದ್ರಿತ, ವಿಷಯ ಕೇಂದ್ರಿತ, ಸಂವಹನ ಕೇಂದ್ರಿತ, ಬೋಧನಾ ಪದ್ಧತಿಗಳು- ಅನುಗಮನ – ನಿಗಮನ ಪದ್ಧತಿ, ಉಪನ್ಯಾಸ ಪದ್ಧತಿ, ಉಪನ್ಯಾಸ ಮತ್ತು ಪ್ರಾತ್ಯಕ್ಷಿಕ ಪದ್ಧತಿ, ಮಾರ್ಗದರ್ಶಿತ ಅನ್ವೇಷಣಾ ಪದ್ಧತಿ, ಸಮಸ್ಯಾ ಪರಿಹಾರ ಪದ್ಧತಿ, ಯೋಜನಾ ಪದ್ದತಿ, ಕಥನ ಪದ್ಧತಿ, ಸಾರಾಂಶ ಪದ್ಧತಿ, ಚರ್ಚಾ ಪದ್ಧತಿ, ನಾಟಕೀಕರಣ ಪದ್ಧತಿ, ಯೋಜನಾಕಾರ್ಯ ಪದ್ಧತಿ, ಪ್ರಯೋಗಾಲಯ ಪದ್ಧತಿ, ಜೀವನ ಚರಿತ್ರಾ ಪದ್ಧತಿ, ಕ್ರಿಯಾತ್ಮಕ ಕಲಿಕಾ ಪದ್ಧತಿ, ಪರಿಕಲ್ಪನಾತ್ಮಕ ಕಲಿಕಾ ಪದ್ಧತಿ.

ಬೋಧನಾ ಕೌಶಲ್ಯಗಳು:

ಪ್ರಶ್ನಿಸುವ ಕೌಶಲ, ಶೋಧನಾ ಕೌಶಲ, ಉದ್ದೀಪನಾ ಕೌಶಲ, ಪುಷ್ಪಕರಣ ಕೌಶಲ, ನಿದರ್ಶನ ಕೌಶಲ, ಪಾಠಯೋಜನೆ, ಸಂರಚನಾ ಹಿಮ್ಮಾಹಿತಿ, ಮೌಲ್ಯಮಾಪನ ಮಾದರಿ ಸಮಯ ನಿರ್ವಹಣೆ, ಪ್ರತಿಫಲಿತ ಅಭ್ಯಾಸ, ಗುಂಪುಕಾರ್ಯ, ಬಹುಕಾರ್ಯಾತ್ಮಕ, ಸಂವಹನ ಕೌಶಲ, ಅವಧಾನ, ಒತ್ತಡ ನಿರ್ವಹಣೆ.

ಪಠ್ಯಕ್ರಮದ ಪರಿಕಲ್ಪನೆ ಮತ್ತು ತತ್ವಗಳು:

ಪಠ್ಯಕ್ರಮ ರಚನೆಯ ತಂತ್ರಗಳು, ಪಠ್ಯಕ್ರಮ ರಚನೆಯ ಹಂತಗಳು, ಪಠ್ಯಕ್ರಮ ಯೋಜನೆಯ ಆಧಾರಗಳು-ತತ್ವಶಾಸ್ತ್ರೀಯ ಆಧಾರ, ಸಮಾಜಶಾಸ್ತ್ರೀಯ ಆಧಾರ, ಮನಶಾಸ್ತ್ರೀಯ ಆಧಾರ.

ಪಠ್ಯಕ್ರಮ ರಚನೆಯ ಮಾರ್ಗಗಳು:

ಸಾಂಪ್ರದಾಯಕ ಮತ್ತು ಸಮಕಾಲೀನ ಮಾರ್ಗ, ವಿಷಯಾಧರಿತ ಮಾರ್ಗ, ಸಾಮಾರ್ಥ್ಯಾಧಾರಿತ ಮಾರ್ಗ, ಸಾಮಾಜಿಕ ಕಾರ್ಯ/ಚಟುವಟಿಕೆ ಮಾರ್ಗ, ವೈಯಕ್ತಿಕ ಅಗತ್ಯತೆ ಮತ್ತು ಆಸಕ್ತಿ ಮಾರ್ಗ, ಪ್ರತಿಫಲ ಆಧಾರಿತ, ಸಮಗ್ರತಾ ಮಾರ್ಗ, ಮಧ್ಯಸ್ಥಿಕೆ ಮಾರ್ಗ, CIPP ಮಾರ್ಗ

ಮೌಲ್ಯಾಂಕನ (ಮೌಲ್ಯಮಾಪನ):

ಅರ್ಥ, ಸ್ವರೂಪ, ದೃಷ್ಟಿಕೋನಗಳು, ಕಲಿಕೆಯ ಮೌಲ್ಯಾಂಕನ – ಮೌಲ್ಯಾಂಕನದ ವಿಧಗಳು (ರೂಪಣಾತ್ಮಕ, ಸಂಕಲನಾತ್ಮಕ, ನೈದಾನಿಕ) ಕಲಿಕಾ ಉದ್ದೇಶ ಮತ್ತು ಕಲಿಕಾ ಫಲಗಳ ನಡುವಿನ ಸಂಬಂಧ ಜ್ಞಾನಾತ್ಮಕ ಮೌಲ್ಯಾಂಕನ (ಅಂಡರ್‌ಸನ್ ಮತ್ತು ಕ್ರಾಥ್‌ ವೊಲ್) ಭಾವನಾತ್ಮಕ ಮೌಲ್ಯಾಂಕನ(ಕ್ರಾಥ್‌ವೊಲ್)

ಮೌಲ್ಯಾಮಾಪನದ ಸಾಧನ ಮತ್ತು ತಂತ್ರಗಳು: ಪರೀಕ್ಷೆಗಳು:

ಮೌಖಿಕ, ಲಿಖಿತ, ಕಾರ್ಯನಿರ್ವಹಣಾ, ಸಾಧನಾ ಮತ್ತು ನೈದಾನಿಕ, ಶಿಕ್ಷಕ ನಿರ್ಮಿತ ಮತ್ತು ಪ್ರಮಾಣೀಕರಿಸಿದ ಪರೀಕ್ಷೆಗಳು (ಅರ್ಥ, ವಿಧಾನ ಮತ್ತು ರಚನೆ) ಉತ್ತಮ ಪರೀಕ್ಷೆಯ ಗುಣಲಕ್ಷಣಗಳು, ಸಮಂಜಸತೆ, ವಿಶ್ವಸನೀಯತೆ, ವಸ್ತುನಿಷ್ಠತೆ, ಪ್ರಾಯೋಗಿಕತೆ, ಪ್ರಶ್ನೆಯ ವಿಧಗಳು- ಪ್ರಬಂಧ. ಲಘುಉತ್ತರ, ವಸ್ತುನಿಷ್ಠ ಪ್ರಶ್ನೆಗಳು ಮತ್ತು ಅದರ ವಿಧಗಳು- ಬಹುಆಯ್ಕೆ, ಬಿಟ್ಟಸ್ಥಳ ತುಂಬಿರಿ, ಹೊಂದಿಸಿ ಬರೆಯಿರಿ, ಹೋಲಿಕೆ, ಕ್ರಮಬದ್ಧ ಜೋಡಣೆ. ಶೈಕ್ಷಣಿಕ ಗುರಿಗಳು- ಬೆಂಜಮಿನ ಎಸ್. ಬ್ಲೂಮ್‌ರವರ ಕೊಡುಗೆಗಳು, ಬ್ಲೂಮ್‌ರವರ ಪರಿಷ್ಕೃತ ಬೋಧನಾ ಉದ್ದೇಶಗಳು, ಪ್ರಶ್ನೆ ಪತ್ರಿಕೆಯ ರಚನೆ, ಪರೀಕ್ಷಾಂಶಗಳ ವಿಶ್ಲೇಷಣೆ, ನೀಲನಕ್ಷೆಯ ಅರ್ಥೈಸುವಿಕೆ.

3. ಶೈಕ್ಷಣಿಕ ಮನೋವಿಜ್ಞಾನ:

ಶೈಕ್ಷಣಿಕ ಮನೋವಿಜ್ಞಾನ ಸ್ವರೂಪ ಮತ್ತು ಪ್ರಾಮುಖ್ಯತೆ, ಶೈಕ್ಷಣಿಕ ಮನೋವಿಜ್ಞಾನದ ವಿಧಾನಗಳು – ವೀಕ್ಷಣೆ, ಪ್ರಾಯೋಗಿಕ ವಿಧಾನ, ವ್ಯಕ್ತಿ ಅಧ್ಯಯನ

▪️ತಾರುಣ್ಯ ಮನೋವಿಜ್ಞಾನ – ಮಹತ್ವ, ವಿಶೇಷ ಲಕ್ಷಣಗಳು, ತಾರುಣ್ಯದ ಅಗತ್ಯತೆಗಳು ಮತ್ತು ಸಮಸ್ಯೆಗಳು, ತಾರುಣ್ಯಾವಸ್ಥೆಯ ವಿಕಾಸಾತ್ಮಕ ಕಾರ್ಯಗಳು

▪️ವೈಯಕ್ತಿಕ ಭಿನ್ನತೆಗಳು – ಅರ್ಥ, ಸ್ವರೂಪ ಮತ್ತು ವೈಯಕ್ತಿಕ ಭಿನ್ನತೆಗಳ ಕ್ಷೇತ್ರಗಳು – ಶೈಕ್ಷಣಿಕ ನಿಹಿತಾರ್ಥಗಳು; ವೈಯಕ್ತಿಕ ಭಿನ್ನತೆಗಳಿಗೆ ಕಾರಣಗಳು (ಅನುವಂಶೀಯತೆ ಮತ್ತು ಪರಿಸರದ ಸಾಪೇಕ್ಷ ಪಾತ್ರ),

▪️ಬುದ್ದಿಶಕ್ತಿ-ಅರ್ಥ ಹಾಗೂ ಬುದ್ದಿಶಕ್ತಿಯ ವಿತರಣೆಯ ಸ್ವರೂಪ, ಮಾನಸಿಕ ವಯಸ್ಸು ಹಾಗೂ ಬುದ್ದಿಶಕ್ತಿ ಸೂಚ್ಯಾಂಕದ ಪರಿಕಲ್ಪನೆ, ಬುದ್ದಿಶಕ್ತಿ ಪರೀಕ್ಷಣಗಳ ವಿಧಗಳು: ಸಂವೇಗಾತ್ಮಕ ಬುದ್ದಿಶಕ್ತಿ – ಪರಿಕಲ್ಪನೆ, ಘಟಕಾಂಶಗಳು, ಪ್ರಾಮುಖ್ಯತೆ, ಸಂವೇಗಾತ್ಮಕ ಬುದ್ಧಿಶಕ್ತಿಯನ್ನು ಸಂವರ್ಧಿಸುವ ವಿಧಾನಗಳು: ಅಭಿಕ್ರಮತೆ, ಆಸಕ್ತಿ, ಮನೋಧೋರಣೆ ಇವುಗಳ ಅರ್ಥ ಮತ್ತು ಸ್ವರೂಪ, ಅಳೆಯುವಿಕೆ;

▪️ಸೃಜನಶೀಲತೆ ಪರಿಕಲ್ಪನೆ, ಪ್ರಭಾವಿಸುವ ಅಂಶಗಳು, ಸೃಜನಶೀಲತೆಯ ಸಂವರ್ಧನೆ

▪️ಕಲಿಕೆ – ಅರ್ಥ, ಕಲಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳು ಪರಿಪಕ್ವತೆ, ಅವಧಾನ, ಅಸಕ್ತಿ, ಗ್ರಹಿಕೆ, ಅಭಿಪ್ರೇರಣೆ, ಸ್ಮೃತಿ, ಒತ್ತಡ ಮತ್ತು ಅದರ ನಿಭಾಯಿಸುವಿಕೆ

▪️ಕಲಿಕೆಯ ತತ್ವಗಳು ಮತ್ತು ಸಿದ್ಧಾಂತಗಳು ವರ್ತನಾತ್ಮಕ, ಜ್ಞಾನಾತ್ಮಕ, ಸಂರಚನಾತ್ಮಕ ಹಾಗೂ ಸಾಮಾಜಿಕ ಕಲಿಕೆಯ ಸಿದ್ಧಾಂತ, ಅನುಭವಾತ್ಮಕ ಕಲಿಕೆ (ಥಾರ್ನಡೈಕ್, ಪಾವೊವ್, ಬಿ. ಎಫ್. ಸ್ಕಿನ್ನರ್, ಜೆ. ಬಿ. ವ್ಯಾಟ್ಸನ್, ಕೊಕ್ಸರ್, ಜೀನ್ ಪಿಯಾಜೆ, ಜೆ. ಎಸ್. ಬ್ರೂನರ್, ಬಿ. ಎಸ್. ಬ್ಲೂಮ್, ಅಲ್ಬರ್ಟ್ ಬಂಡೂರ) ರಾಬರ್ಟ್ ಗ್ಯಾನೆಯವರ ಶ್ರೇಣೀಕೃತ ಕಲಿಕೆ.

▪️ವ್ಯಕ್ತಿತ್ವ – ಪರಿಕಲ್ಪನೆ, ವ್ಯಕ್ತಿತ್ವದ ನಿರ್ಧಾರಕಗಳು (ಜೈವಿಕ ಹಾಗೂ ಪರಿಸರಾತ್ಮಕ). ವ್ಯಕ್ತಿತ್ವದ ಮಾವನ (ವಸ್ತುನಿಷ್ಪ, ವ್ಯಕ್ತಿನಿಷ್ಠ ಹಾಗೂ ಪ್ರಕ್ಷೇಪಣ ತಂತ್ರಗಳು), ಸಮಾಯೋಜಿತ ವ್ಯಕ್ತಿತ್ವದ ಪರಿಕಲ್ಪನೆ, ಸಮಾಯೋಜನೆಗೆ ಅಡೆತಡೆಗಳು (ಒತ್ತಡ, ಉದ್ವೇಗ, ಮಾನಸಿಕ ಘರ್ಷಣೆ, ಮನೋವೈಫಲ್ಯ), ರಕ್ಷಣಾ ತಂತ್ರಗಳು (ಆಕ್ರಮಣಕಾರಿ. ಪಲಾಯನ ಮತ್ತು ಹೊಂದಾಣಿಕೆ) ಮತ್ತು ಅವುಗಳ ಶೈಕ್ಷಣಿಕ ನಿಹಿತಾರ್ಥಗಳು, ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯ ಆರೋಗ್ಯದ ಸಂವರ್ಧನೆಯಲ್ಲಿ ಶಾಲೆ ಹಾಗೂ ಶಿಕ್ಷಕರ ಪಾತ್ರ. ಮಾನಸಿಕ

▪️ಸಮನ್ವಯ ಶಿಕ್ಷಣ: ಪರಿಕಲ್ಪನೆ, ಉದ್ದೇಶಗಳು, ತತ್ವಗಳು, ಸಮನ್ವಯ ಶಿಕ್ಷಣದ ವಿಕಾಸ, ಶಾಸನಾತ್ಮಕ ನಿಬಂಧನೆಗಳು:

▪️ವಿಶೇಷ ಅಗತ್ಯತೆಯುಳ್ಳ ಮಕ್ಕಳು ಅರ್ಥ, ವಿಧಗಳು ಪ್ರತಿಭಾವಂತರು, ನಿಧಾನವಾಗಿ ಕಲಿಯುವವರು, ಅಪೂರ್ಣ ಸಾಧಕರು, ಮಾನಸಿಕ ಸವಾಲುಳ್ಳವರು, ಮೂಳೆ-ಕೀಲು ನವಾಲುಳ್ಳವರು, ದೃಷ್ಟಿ ಸವಾಲುಳ್ಳವರು. ಶ್ರವಣ ಸವಾಲುಳ್ಳವರು, ಭಾವನಾತ್ಮಕವಾಗಿ ವಿಚಲಿತರಾದವರು, ಕಲಿಕೆಯ ಸವಾಲುಳ್ಳವರು ವಿಧಗಳು ಮತ್ತು ಇವರುಗಳ ಗುಣಲಕ್ಷಣಗಳು ಹಾಗೂ ಇವರಿಗೆ ಒದಗಿಸಲಾಗುವ ವಿಶೇಷ ಶೈಕ್ಷಣಿಕ ಉಪಕ್ರಮಗಳು.

▪️ಮಾರ್ಗದರ್ಶನ : ಪರಿಕಲ್ಪನೆ, ಮಹತ್ವ, ವಿಧಗಳು(ಶೈಕ್ಷಣಿಕ, ವೃತ್ತಿ, ವೈಯಕ್ತಿಕ) ಮಾರ್ಗದರ್ಶನ ಸೇವೆಗಳು: ಆಪ್ತ ಸಮಾಲೋಚನೆ: ಪರಿಕಲ್ಪನೆ ಹಾಗೂ ತಂತ್ರಗಳು

4. ಶೈಕ್ಷಣಿಕ ತಂತ್ರಜ್ಞಾನ :

ಶೈಕ್ಷಣಿಕ ತಂತ್ರಜ್ಞಾನ- ಪರಿಕಲ್ಪನೆ, ಮಾಹಿತಿ ತಂತ್ರಜ್ಞಾನ, ಸಂವಹನ ತಂತ್ರಜ್ಞಾನ ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಬೋಧನಾ ತಂತ್ರಜ್ಞಾನ. ಔಪಚಾರಿಕ, ಅನೌಪಚಾರಿಕ, ಅಸಾಂಪ್ರದಾಯಕ ಮತ್ತು ಸಂಯೋಜನಾ ಶಿಕ್ಷಣದಲ್ಲಿ ಶೈಕ್ಷಣಿಕ ತಂತ್ರಜ್ಞಾನದ ಅನ್ವಯ.

ಶೈಕ್ಷಣಿಕ ತಂತ್ರಜ್ಞಾನದ ಮಾರ್ಗಗಳು-

ಯಂತ್ರಾಂಶ, ತಂತ್ರಾಂಶ ಮತ್ತು ವ್ಯವಸ್ಥಾ ಮಾರ್ಗ. ಶಿಕ್ಷಣದಲ್ಲಿ ಮಾಧ್ಯಮಗಳು-ಮುದ್ರಣ, ವಿದ್ಯುನ್ಮಾನ ದೃಶ್ಯ ಶ್ರವಣೋಪಕರಣಗಳು ಮತ್ತು ಬುಹು ಮಾಧ್ಯಮಗಳು. ಶೈಕ್ಷಣಿಕ ತಂತ್ರಜ್ಞಾನದ ವ್ಯವಸ್ಥೆಗಳು-ಸಹಕಾರ ಕಲಿಕೆ. ಮೊಬೈಲ್ ಕಲಿಕೆ, e-ಕಲಿಕೆ. ಶಿಕ್ಷಣದಲ್ಲಿ ತಂತ್ರಜ್ಞಾನ-ದೂರವಾಣಿ ಸಮ್ಮೇಳನ, ವಿಡಿಯೋ ಸಮ್ಮೇಳನ, ಅಂತರ್‌ಕ್ರಿಯಾ ಫಲಕಗಳು ಮತ್ತು ಸ್ಮಾರ್ಟ್‌ ಕ್ಲಾಸ್.

ಬೋಧನಾ ವಿಧಾನಗಳು, ಮಾದರಿಗಳು-

ಚರ್ಚೆಗಳು, Buzz, ತಂಡ ಬೋಧನೆ, ಬುದ್ಧಿಮಂಥನ, ಪ್ರಾತ್ಯಕ್ಷಿಕೆ. ಬೋಧನಾ ಮಾದರಿಗಳ ವಿಧಗಳು-ಐತಿಹಾಸಿಕ ಬೋಧನಾ ಮಾದರಿ(ಸಾಕ್ರೆಟಿಕ್ ಬೋಧನಾ ಮಾದರಿ, ಶಾಸ್ತ್ರೀಯ ಮಾನವತಾ ಮಾದರಿ, ವೈಯಕ್ತಿಕ ವಿಕಾಸದ ಮಾದರಿ), ಮನೋವೈಜ್ಞಾನಿಕ ಬೋಧನಾ ಮಾದರಿ(ಮೂಲ ಬೋಧನಾ ಮಾದರಿ), ಅಂತರ್‌ಕ್ರಿಯಾ ಬೋಧನಾ ಮಾದರಿ, ಗಣಕಯಂತ್ರ ಆಧಾರಿತ ಬೋಧನಾ ಮಾದರಿ), ಆಧುನಿಕ ಬೋಧನಾ ಮಾದರಿ, ಮಾಹಿತಿ ಸಂಸ್ಕರಣಾ ಬೋಧನಾ ಮಾದರಿ, ವೈಯಕ್ತಿಕ ಬೋಧನಾ ಮಾದರಿ, ಸಾಮಾಜಿಕ ಅಂತರ್ ಕ್ರಿಯಾ ಬೋಧನಾ ಮಾದರಿ, ವರ್ತನಾ ಪರಿವರ್ತನೆಯ ಬೋಧನಾ ಮಾದರಿ,

ಸಂವಹನ:-

ಪರಿಕಲ್ಪನೆ, ಗುಣಲಕ್ಷಣಗಳು, ವಿಧಗಳು (ಶಾಬ್ಲಿಕ, ಅಶಾಬ್ಲಿಕ, ಅಂತರ್ ಸಾಂಸ್ಕೃತಿಕ ಮತ್ತು ಸಮೂಹ ಸಂವಹನ). ವರ್ಗಕೋಣೆ ಸಂವಹನ, ಪರಿಣಾಮಕಾರಿ ಸಂವಹನದ ಅಡೆತಡೆಗಳು, ಸಮೂಹ ಮಾಧ್ಯಮ ಮತ್ತು ಸಮಾಜ.

ಶಿಕ್ಷಣದಲ್ಲಿ ಗಣಕಯಂತ್ರದ ಅನ್ವಯ:

CAI, CAL, CBT, CML, E- ಕಲಿಕೆ, M- ಕಲಿಕೆ, ಸ್ಮಾರ್ಟ್ ಕ್ಲಾಸ್, ಬೋಧನಾ ವಿನ್ಯಾಸ ಮತ್ತು ಕ್ರಮಾಗತ ಬೋಧನೆ.

5. ಶಿಕ್ಷಣದಲ್ಲಿ ಉದಯೋನ್ಮುಖ ಪ್ರವೃತ್ತಿಗಳು :

▪️ಆಯೋಗಗಳು ಮತ್ತು ಸಮಿತಿಗಳ ಕೊಡುಗೆಗಳು ಮಾಧ್ಯಮಿಕ ಶಿಕ್ಷಣ ಆಯೋಗ (1953), ಕೋಠಾರಿ ಶಿಕ್ಷಣ ಆಯೋಗ (1964-66), ರಾಷ್ಟ್ರೀಯ ಶಿಕ್ಷಣ ನೀತಿ  (1986, 1992), ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (2005), ರಾಷ್ಟ್ರೀಯ ಜ್ಞಾನ ಆಯೋಗ (2007),ಹೊಸ ಶಿಕ್ಷಣ ನೀತಿ (2020)

▪️ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಂವಿಧಾನಾತ್ಮಕ ಅವಕಾಶಗಳು-ಸಮಾನತೆಯ ಹಕ್ಕು (ಪರಿಚ್ಛೇದಗಳು- 16, 17, 19, 24, 25, 26, 28) ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು (ಪರಿಚ್ಛೇದಗಳು 21A, 30, 45)ಮತ್ತು 42, 86ನೇ ತಿದ್ದುಪಡಿಗಳು.

▪️ಶಿಕ್ಷಣ ಹಕ್ಕು ಕಾಯ್ದೆ 2009 – ವ್ಯಾಪ್ತಿ, ಪ್ರಮುಖ ಲಕ್ಷಣಗಳು ಮತ್ತು ಶಿಫಾರಸ್ಸುಗಳು:

▪️ಕರ್ನಾಟಕ ಶಿಕ್ಷಣ ಕಾಯ್ದೆ-1983 -ಶಿಕ್ಷಣ ಪ್ರಾಧಿಕಾರಗಳು, ಪರೀಕ್ಷೆಗಳು ಮತ್ತು ದುರಾಚಾರಗಳನ್ನು ತಡೆಯುವುದು. ಸಹಾಯಾನುದಾನಗಳು, ರಾಜ್ಯ ಶಿಕ್ಷಣ ಸಲಹಾ ಪರಿಷತ್ತು, ದಂಡನೆಗಳು
▪️ಶಿಕ್ಷಣ ವಂಚಿತ ವರ್ಗದವರು (ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಮಹಿಳೆಯರು, ಗ್ರಾಮೀಣ), ಸಾಮಾಜಿಕ ರಚನಾತ್ಮಕತೆಯಲ್ಲಿ ಲಿಂಗ ಪಾತ್ರ, ದಾಖಲೀಕರಣದಲ್ಲಿ ಲಿಂಗ ಅಸಮಾನತೆಗಳು. ಮಹಿಳಾ ಸಬಲೀಕರಣದ ಕಾರ್ಯತಂತ್ರಗಳು, ಮಾನವ ಹಕ್ಕುಗಳು, ಮಕ್ಕಳ ಹಕ್ಕುಗಳು.

▪️ಮೌಲ್ಯ ಶಿಕ್ಷಣ ಪರಿಕಲ್ಪನೆ ಮತ್ತು ವಿಧಗಳು. ಮೌಲ್ಯ ಶಿಕ್ಷಣದ ಅಗತ್ಯತೆ, ಮೌಲ್ಯ ಶಿಕ್ಷಣಕ್ಕೆ ಸಂಬಂಧಿಸಿದ ವಿಭಿನ್ನ ದೃಷ್ಟಿಕೋನಗಳು: ರಾಷ್ಟ್ರೀಯ ಮತ್ತು ಭಾವನಾತ್ಮಕ ಸಮಗ್ರತೆ, ಅಂತರರಾಷ್ಟ್ರೀಯ ತಿಳುವಳಿಕೆ, ಭಾರತೀಯ ಸಂವಿಧಾನದ ಮೂಲಕ ಪ್ರದತ್ತವಾದ ರಾಷ್ಟ್ರೀಯ ಮೌಲ್ಯಗಳು – ಸಮಾಜವಾದ, ಧರ್ಮನಿರಪೇಕ್ಷತೆ, ನ್ಯಾಯ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾನತೆ-ಶಿಕ್ಷಣಕ್ಕೆ ವಿಶೇಷವಾಗಿ ಸಂಬಂಧಿಸಿದಂತೆ.

▪️ ಶೈಕ್ಷಣಿಕ ನಿಯೋಗಗಳು: NCERT, DSERT, NCTE, UGC, NTA, AICTE, MCI, NUEPA), ជ ಕಾರ್ಯಕ್ರಮಗಳು -OBB, DEEP, SSA, RMSA, RUSA, ಶಿಕ್ಷಣದ ನೂತನ ಉಪಕ್ರಮಗಳು- ಸ್ವಯಂ (SWAYAM), (SWAYAMPRABHA), ದೀಕ್ಷಾ  (DIKSHA), (Nishtha), ಆಯ್ಕೆ ಆಧರಿತಕ್ರೆಡಿಟ್ ವ್ಯವಸ್ಥೆ, ಡಿಜಿಟಲ್ ಕಲಿಕೆ ವೇದಿಕೆ, ಶಿಕ್ಷಣದ ಮುಕ್ತ ಸಂಪನ್ಮೂಲಗಳು (ಕ್ರಿಯೇಟೀವ್ ಕಾಮನ್ಸ್, ಮುಕ್ತ ಆನ್‌ಲೈನ್ ಕೋರ್ಸುಗಳು, ಪರ್ಯಾಯ ಶಾಲಾ ವ್ಯವಸ್ಥೆ, ವೆಬ್ ಆಧಾರಿತ ಕಲಿಕೆ.

6. ಕಂಪ್ಯೂಟರ್ ಸಾಕ್ಷರತೆ (Computer Literacy) :

▪️ಕಂಪ್ಯೂಟರ್ ಇತಿಹಾಸ ಮತ್ತು ಪೀಳಿಗೆಗಳು, ಕಂಪ್ಯೂಟರ್‌ಗಳ ವರ್ಗಿಕರಣ(ಮೈಕ್ರೋ, ಮಿನಿ. ಮೇನ್‌ಪ್ರೇಮ್ ಮತ್ತು ಸೂಪರ್ ಕಂಪ್ಯೂಟರ್),

▪️ಕಂಪ್ಯೂಟರ್‌ನ ಭಾಗಗಳು ಯಂತ್ರಾಂಶ-ಕೇಂದ್ರ ಸಂಸ್ಕರಣ ಘಟಕ, ಅಗಮನಾಂಗ-ನಿರ್ಗಮನಾಂಗ ಸಾಧನಗಳು, ಸಂಗ್ರಹಣ ಸಾಧನಗಳು, ಕಂಪ್ಯೂಟರ್ ಸ್ಮೃತಿ : ತಂತ್ರಾಂಶ – ಕಂಪ್ಯೂಟರ್ ನಿರ್ವಹಣೆ ವ್ಯವಸ್ಥೆ (DOS, Windows, Linux, Ubuntu), ವಿಂಡೋಸ್ ಮತ್ತು ಲಿನಕ್ಸ್‌ನಲ್ಲಿ ಬಳಸುವ ಬೇಸಿಕ್ ಕಮಾಂಡ್, ಉಚಿತ ಮತ್ತು ಹಕ್ಕುಸ್ವಾಮ್ಯದ ಸಾಫ್ಟ್ ವೇರ್‌ಗಳು, ನಿರ್ವಹಣ ವ್ಯವಸ್ಥೆಯಲ್ಲಿ ವರ್ಚುವಲ್ ಸಹಾಯಕರು, ಸಾಫ್ಟ್‌ವೇರ್ ಅನುಸ್ಥಾಪನೆ, ಕಂಪ್ಯೂಟರ್ ಭದ್ರತೆ ಮತ್ತು ಅಂಟಿವೈರಸ್, ಧ್ವನಿ ಮತ್ತು ಪಠ್ಯ ಇಂಟರ್ಪೆಸ್, ಆಡಿಯೋ ಮತ್ತು ವಿಡಿಯೋ ಸಂಕಲನ ತಂತ್ರಾಂಶಗಳು

▪️ಪ್ರೋಗ್ರಾಮಿಂಗ್ ಭಾಷೆಗಳು ಮತ್ತು ಅವುಗಳ ಅನ್ವಯ a) ಪ್ರಮುಖ ಪ್ರೋಗ್ರಾಮಿಂಗ್ ಭಾಷೆಗಳು,

b) ಪ್ರೋಗ್ರಾಮಿಂಗ್ ಭಾಷೆಗಳ ವಿಧಗಳು,

c) ಅನ್ವಯಿಕ ಕ್ಷೇತ್ರ

▪️ಡೇಟಾ ಬೇಸ್ ತಂತ್ರಾಂಶಗಳು –

a) DBMS ಸಾಫ್ಟ್‌ವೇರ್‌ನ ಹೆಸರುಗಳು,

b) DBMS ಸಾಫ್ಟ್‌ವೇರ್‌ನ ಪ್ರಕಾರಗಳು ಮತ್ತು ಅವುಗಳನ್ನು ಅನ್ವಯಿಕ ಕ್ಷೇತ್ರಗಳು

▪️ಕಂಪ್ಯೂಟರ್ ಜಾಲ ನಿರ್ಮಾಣ ಮತ್ತು ಪರಿಕರಗಳು –

a) ಸ್ಥಳೀಯ ಪ್ರದೇಶ ಜಾಲ ನಿರ್ಮಾಣದಲ್ಲಿ ಬಳಸುವ ಪರಿಕರಗಳು,
b) ವೈಡ್ ಏರಿಯಾ ಜಾಲ ನಿರ್ಮಾಣದಲ್ಲಿ ಬಳಸುವ ಪರಿಕರಗಳು,
c) ವಿವಿಧ ಸಂವಹನ ಗ್ಯಾಜೆಟ್‌ಗಳು

▪️ಉದಯೋನ್ಮುಖ ಪ್ರವೃತ್ತಿಗಳು (AI ಮತ್ತು ಸಂಬಂಧಿತ ಪರಿಕರಗಳು)

▪️ಅಂತರ್ಜಾಲ ಮತ್ತು ವರ್ಲ್ಡ್ ವೈಡ್ ವೆಬ್ – a) ಇತಿಹಾಸ, b) ವೆಬ್ ಪೇಜ್, ವೆಬ್ ಸೈಟ್, ಸರ್ಚ್ ಇಂಜಿನ್, ವೆಬ್ ಬ್ರೌಸರ್, URL, HTTP. HTTPS, c) ಜಾಲ ತಾಣ ನಿರ್ಮಾಣದ ಭಾಷೆಗಳು, d) ಸರ್ವರ್ ಮತ್ತು ಕ್ಸೆಂಟ್ಸ್ (ಅರ್ಥ, ಪ್ರಕಾರಗಳು)

▪️ಮೈಕ್ರೋಸಾಫ್ಟ್ ಆಫೀಸ್- ವರ್ಡ್, ಎಕ್ಸೆಲ್, ಪವರ್ ಪಾಯಿಂಟ್, ಓಪನ್ ಆಫೀಸ್ ಸಾಫ್ಟ್‌ವೇರ್‌ಗಳು

▪️ರಾಜ್ಯ ಮತ್ತು ಕೇಂದ್ರ ಅನುದಾನಿತ/ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್ ಯೋಜನೆಗಳು (ಅವುಗಳ ಹೆಸರುಗಳು ಮತ್ತು ಅನ್ವಯಿಕ ಪ್ರದೇಶ-ಕಂದಾಯ, ಆಹಾರ ಮತ್ತು ಸರಬರಾಜು, ವಿದ್ಯಾರ್ಥಿ ನಿರ್ವಹಣೆ ಇತ್ಯಾದಿ)

▪️ನುಡಿ ಸಾಫ್ಟ್‌ವೇರ್ – a) ಶಾರ್ಟ್ ಕಟ್ ಕೀಗಳು, b) ವಿವಿಧ ಕನ್ನಡ ಅಕ್ಷರಗಳನ್ನು ಮೂಡಿಸುವ ಕೀಲಿಮಣೆ ಸಂಯೋಜನೆಗಳು c) ಫಾಂಟ್‌ಗಳ ಪಟ್ಟಿ

▪️ವಿಜ್ಞಾನ, ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಂಪ್ಯೂಟರ್‌ಗಳ ಪಾತ್ರ

7. ಸಾಮಾನ್ಯ ಮಾನಸಿಕ ಸಾಮರ್ಥ್ಯ (General Mental Ability) :

▪️ಗಣಿತದ ತಾರ್ಕಿಕತೆ ಮತ್ತು ಅಭಿಕ್ಷಮತೆ – ವಿವೇಚನೆಯ ವಿಧಗಳು, ಸಂಖ್ಯಾ ಸರಣಿ, ಅಕ್ಷರ ಸರಣಿ, ಸಂಕೇತಗಳು ಮತ್ತು ಸಂಬಂಧಗಳು. ಗಣಿತದ ಅಭಿಕ್ರಮತೆ (ಭಿನ್ನರಾಶಿ, ಸಮಯ ಮತ್ತು ಅಂತರ, ಅನುಪಾತ ಮತ್ತು ಶೇಕಡವಾರು, ಲಾಭಮತ್ತು ನಷ್ಟ, ಬಡ್ಡಿ ಮತ್ತು ರಿಯಾಯಿತಿ, ಸರಾಸರಿಗಳು ಇತ್ಯಾದಿ

▪️ತಾರ್ಕಿಕ ವಿವೇಚನೆ – ವಾದಗಳ ರಚನೆಯನ್ನು ಅರ್ಥಮಾಡಿಕೊಳ್ಳುವುದು, ವಾದ ರೂಪಗಳು ವರ್ಗಿಯ ಪ್ರತಿಪಾದನೆಗಳ ರಚನೆ, ಮೂಡ್ ಮತ್ತು ಫಿಗರ್, ಔವಚಾರಿಕ ಮತ್ತು ಅನೌಪಚಾರಿಕ ತಾರ್ಕಿಕ ತಪ್ಪುಗಳು, ಭಾಷೆಯ ಉಪಯೋಗಗಳು,

▪️ಪದಗಳು ಪರ್ಯಾಯಾರ್ಥ ಮತ್ತು ಅರ್ಥಾನುಭವ ಮತ್ತು ವಿರೋಧಾಭಾಸದ ಚೌಕ, ನಿಗಮನ ಮತ್ತು ಅನುಗಮನ ವಿವೇಚನೆಯನ್ನು ಮೌಲ್ಯಮಾಪನ ಮಾಡುವುದು, ಸಾದೃಶ್ಯಗಳು ವೆನ್ ನಕ್ಷೆ ವಾದಗಳ ಸಿಂಧುತ್ವವನ್ನು ಸ್ಥಾಪಿಸಲು ಸರಳ ಮತ್ತು ಬಹು ಬಳಕೆ. ಭಾರತೀಯ ತರ್ಕಶಾಸ್ತ್ರ: ಜ್ಞಾನದ ಮೂಲಗಳು/ಮಾರ್ಗಗಳು, ಪ್ರಮಾಣಗಳು: ಪ್ರತ್ಯಕ್ಷ (ಗ್ರಹಿಕೆ) ಅನುಮಾನ (ತೀರ್ಮಾನ) ಉಪಮಾನ(ಹೋಲಿಕೆ), ಶಬ್ದ (ಮೌಖಿಕ ಸಾಕ್ಷಿ) ಅರ್ಥ ಪಟ್ಟಿ(ಸೂಚನೆ) ಮತ್ತು ಅನುಪಲಬ್ಧ (ಗ್ರಹಿಕೆ ಇಲ್ಲದಿರುವುದು), ವ್ಯಾಪ್ತಿ ಅಸ್ಥಿರ ಸಂಬಂಧ ಹೇತ್ವ ಭಾಷೆಗಳು (ತಾರ್ಕಿಕ ತಪ್ಪುಗಳು ) ರಚನೆ ಮತ್ತು ವಿಧಗಳು.

▪️ದತ್ತಾಂಶ ವ್ಯಾಖ್ಯಾನದ ಮೂಲಗಳು ಮತ್ತು ದತ್ತಾಂಶ ಸ್ವಾಧೀನ ವರ್ಗೀಕರಣ, ಪರಿಮಾಣಾತ್ಮಕ ಮತ್ತು ಗುಣಾತ್ಮಕ ದತ್ತಾಂಶ, ದತ್ತಾಂಶಗಳ ಆಲೇಖ ನಿರೂಪಣೆ [ಹಿಸ್ಟೋಗ್ರಾಮ್ ಗಳು ಪೈ ಚಾರ್ಟ್, ಟೇಬಲ್ ಚಾರ್ಟ್ ಮತ್ತು ಲೈನ್ ಚಾರ್ಟ್] ಮತ್ತು ದತ್ತಾಂಶದ ಮ್ಯಾಪಿಂಗ್ ದತ್ತಾಂಶ ಅರ್ಥ ವಿವರಣೆ.

ಮತ್ತಷ್ಟು ಮಾಹಿತಿಗಾಗಿ – CLICK HERE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!