TBFSWF: 2025-26ನೇ ಸಾಲಿಗೆ ಶಿಕ್ಷಕರ/ಉಪನ್ಯಾಸಕರ ಮಕ್ಕಳ ಉನ್ನತ ವ್ಯಾಸಂಗ ಧನಸಹಾಯ ಮಂಜೂರು ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

TBFSWF: 2025-26ನೇ ಸಾಲಿಗೆ ಶಿಕ್ಷಕರ/ಉಪನ್ಯಾಸಕರ ಮಕ್ಕಳ ಉನ್ನತ ವ್ಯಾಸಂಗ ಧನಸಹಾಯ ಮಂಜೂರು ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

TBFSWF: 2025-26ನೇ ಸಾಲಿಗೆ ಶಿಕ್ಷಕರ/ಉಪನ್ಯಾಸಕರ ಮಕ್ಕಳ ಉನ್ನತ ವ್ಯಾಸಂಗ ಧನಸಹಾಯ ಮಂಜೂರು ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

2025-26ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ / ಅನುದಾನಿತ ಶಿಕ್ಷಕರ/ಉಪನ್ಯಾಸಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ ಮಂಜೂರು ಮಾಡುವ ಸಲುವಾಗಿ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ:01-12-2025 ರಿಂದ 31-12-2025ರವರೆಗೆ ಆಹ್ವಾನಿಸಲಾಗಿದೆ. ಶಿಕ್ಷಣ ಇಲಾಖೆಯ ಅರ್ಹ ಶಿಕ್ಷಕರು/ನಿವೃತ್ತ ಶಿಕ್ಷಕರು/ಉಪನ್ಯಾಸಕರು/ನಿವೃತ್ತ ಉಪನ್ಯಾಸಕರು/ಪ್ರಾಂಶುಪಾಲರು Online ಮೂಲಕವೇ ಕಡ್ಡಾಯವಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು.

ಉನ್ನತ ವ್ಯಾಸಂಗದ ಧನಸಹಾಯಕ್ಕಾಗಿ ಬರುವ ಭೌತಿಕ ಅರ್ಜಿಗಳನ್ನು ಈ ಕಛೇರಿಯಲ್ಲಿ ಪರಿಗಣಿಸಲಾಗುವುದಿಲ್ಲ. kstbfonline.karnataka.gov.in URL ಅಥವಾ TBF/SWF ONLINE SERVICES ಲಿಂಕ್‌ ಮೂಲಕ ಅರ್ಜಿವ ಸದಸ್ಯತ್ವದ ಹೊಸ ಕಾರ್ಡ್ ಸಂಖ್ಯೆ ಪಡೆದವರು / ಹಳೆಯ ಅಜೀವ ಸದಸ್ಯತ್ವದ ಕಾರ್ಡನ್ನು ಆನ್‌ಲೈನ್ ಮೂಲಕ ನವೀಕರಿಸಿಕೊಂಡಿರುವ ಶಿಕ್ಷಕರು ಮಾತ್ರ ಉನ್ನತ ವ್ಯಾಸಂಗ ಧನಸಹಾಯಕ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ಕುಟುಂಬಕ್ಕೆ ಒಬ್ಬ ವಿದ್ಯಾರ್ಥಿಗೆ ಮಾತ್ರ ಧನಸಹಾಯ ನೀಡಲಾಗುವುದು. ವಿದ್ಯಾರ್ಥಿಯ ತಂದೆ/ತಾಯಿ ಇಬ್ಬರೂ ಶಿಕ್ಷಕರು/ಉಪನ್ಯಾಸಕರಾಗಿದ್ದಲ್ಲಿ ಕುಟುಂಬಕ್ಕೆ ಒಬ್ಬರು ಮಾತ್ರ ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ.

 

ಈ ಕೆಳಕಂಡ ವಿವರದಂತೆ ಅರ್ಜಿಗಳನ್ನು ಸಲ್ಲಿಸುವುದು.

1. ಸೇವೆಯಲ್ಲಿರುವ ಶಿಕ್ಷಕರು ವೇತನ ಬಟವಾಡೆ ಅಧಿಕಾರಿಗಳು (ಡಿಡಿಒ) / ನಿಯಂತ್ರಣಾಧಿಕಾರಿಗಳ ಸಹಿ ಪಡೆದು ಅರ್ಜಿಗಳನ್ನು ಸಲ್ಲಿಸುವುದು. [ನಿವೃತ್ತ ಶಿಕ್ಷಕರು ಪತ್ರಾಂಕಿತ [ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸುವುದು]

2. ಅರ್ಜಿಯಲ್ಲಿ ನಮೂದಾಗಿರುವ ಕೋರ್ಸುಗಳಿಗೆ ಮಾತ್ರ ಅರ್ಜಿ ಸಲ್ಲಿಸುವುದು.

3. CA, PHD ಕೋರ್ಸುಗಳಿಗೆ ಧನಸಹಾಯ ನೀಡಲಾಗುವುದಿಲ್ಲ.

1. ಶಿಕ್ಷಕರು ಕಡ್ಡಾಯವಾಗಿ ಸಹಿ ಮಾಡಿರಬೇಕು.

5. ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಉನ್ನತ ವ್ಯಾಸಂಗ ಧನಸಹಾಯಕ್ಕೆ ಅವಕಾಶ ಇರುವುದಿಲ್ಲ.

6. ನಿವೃತ್ತ ಶಿಕ್ಷಕರಿಗೆ ದೃಢೀಕೃತ ಪಿಂಚಣಿ ಮಂಜೂರಾತಿ ಆದೇಶದ [ಮಹಾಲೇಖಾಪಾಲರಿಂದ) ಪ್ರತಿ ಕಡ್ಡಾಯವಾಗಿರುತ್ತದೆ.

7. ಪತಿ/ಪತ್ನಿ ಇಬ್ಬರೂ ಅರ್ಜಿ ಸಲ್ಲಿಸಿದ್ದಲ್ಲಿ ಒಂದು ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು.

8. ಶಿಕ್ಷಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತರಬೇಕು.

9. ಅನುತ್ತೀರ್ಣ / ಸಂಜೆ ಕಾಲೇಜು ವ್ಯಾಸಂಗದ / ಖಾಸಗಿ ( ಬಾಹ್ಯ / ಮುಕ್ತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

TBFSWF

 

CLICK HERE TO DOWNLOAD ORDER

CLICK HERE ONLINE APPLICATION

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!