Teacher Recruitment-2025 14,967 ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನ.

Teacher Recruitment-2025 14,967 ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನ.

Teacher Recruitment-2025 14,967 ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನ.ನವೋದಯ, ಕೇಂದ್ರೀಯ ವಿದ್ಯಾಲಯಗಳಲ್ಲಿ ನೇಮಕ ಸಿಬಿಎಸ್‌ಇಯಿಂದ ಅಧಿಸೂಚನೆ ಪ್ರಕಟ.

ರಾಜ್ಯ ಸರ್ಕಾರ ಒಟ್ಟಾರೆ 18 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಸಿದ್ಧತೆ ನಡೆಸಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರವು ಕೂಡ ಎಂಟು ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಜೊತೆಗೆ ಶಿಕ್ಷಕೇತರ ಸಿಬ್ಬಂದಿ ಸೇರಿ 14,967 ಹುದ್ದೆಗಳಿವೆ.

ದೇಶದಲ್ಲಿರುವ 1,288 ಕೇಂದ್ರೀಯ ವಿದ್ಯಾಲಯಗಳು (ಕೆವಿಎಸ್) ಹಾಗೂ 653 ನವೋದಯ ವಿದ್ಯಾಲಯ ಗಳಲ್ಲಿ (ಎನ್‌ವಿಎಸ್) ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ನೇಮಕಾತಿಗಾಗಿ ಕೇಂದ್ರೀಯ ಪ್ರೌಢ

ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಶಿಕ್ಷಕೇತರ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ, ಪಿಯು ಪಾಸಾದವರೂ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿ ಗಳನ್ನು ದೇಶದ ಯಾವುದೇ ಭಾಗದಲ್ಲಿರುವ ಶಾಲೆ ಹಾಗೂ ಕಚೇರಿಗಳಿಗೆ ನಿಯೋಜಿಸಬಹುದು.

ನವೋದಯ ವಿದ್ಯಾಲಯಗಳಿಗೆ ಆಯ್ಕೆಯಾ ದವರು ಶಾಲಾ ಕ್ಯಾಂಪಸ್ ನಲ್ಲಿಯೇ ವಾಸ್ತವ್ಯ ಹೂಡಬೇಕಿದೆ. ಅದರಲ್ಲೂ ಮುಖ್ಯವಾಗಿ ನವೋದಯ ವಿದ್ಯಾಲಯಗಳಲ್ಲಿ ಶಿಕ್ಷಕರನ್ನು ಆಯಾ ರಾಜ್ಯಗಳಿಂದ ಹೊರಗೆ ನಿಯೋಜಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ವಿಶೇಷವೆಂದರೆ, ಶಿಕ್ಷಕರ ಹುದ್ದೆಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆಯ ಉತ್ತೀರ್ಣತೆಯನ್ನು ಕಡ್ಡಾಯಗೊಳಿಸಿಲ್ಲ.

▪️ಶಿಕ್ಷಕರಿಗೆ 13,025 ಹುದ್ದೆಗಳು

▪️ಶಿಕ್ಷಕೇತರರ 1,942 ಹುದ್ದೆಗಳು

ವಿದ್ಯಾರ್ಹತೆ ವಿವರ:

ಅಸಿಸ್ಟೆಂಟ್ ಕಮಿಷನರ್, ಪ್ರಾಂಶುಪಾಲ, ಉಪ ಪ್ರಾಂಶುಪಾಲ ಹುದ್ದೆಗಳಿಗೆ ಸ್ನಾತಕೋತ್ತರ ಪದವಿಯನ್ನು ಕನಿಷ್ಠ ಶೇ.50 ಅಂಕಗಳೊಂದಿಗೆ ಪಡೆದಿರಬೇಕು. ಜತೆಗೆ ಬಿ.ಇಡಿ ಪದವಿ ಹೊಂದಿರಬೇಕು.

ಸ್ನಾತಕೋತ್ತರ ಪದವೀಧರ ಶಿಕ್ಷಕರು ಸಂಬಂಧಿಸಿದ ವಿಷಯಗಳಲ್ಲಿ ಪಿಜಿ ಪೂರ್ಣಗೊಳಿಸಿರಬೇಕು. ಬಿ.ಇಡಿ ಹಾಗೂ ಪದವಿಗಳಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇನ್ನು, ಪದವೀಧರ ಶಿಕ್ಷಕರ ಹುದ್ದೆಗಳಿಗೆ ಆಯಾ ವಿಷಯಗಳಲ್ಲಿ ಪದವಿ ಹೊಂದಿರಬೇಕು. ಬಿ.ಇಡಿಯನ್ನು ಶೇ.50 ‘ಅಂಕಗಳೊಂದಿಗೆ ಪಡೆದಿರಬೇಕು.

ವಯೋಮಿತಿ:

ಆಯಾ ಹುದ್ದೆಗಳಿಗೆ ಅನುಗುಣವಾಗಿ ಪ್ರತ್ಯೇಕ ವಯೋಮಿತಿ ನಿಗದಿ ಮಾಡಲಾಗಿದೆ. ಕನಿಷ್ಠ 18 ವರ್ಷ ಹಾಗೂ ಉನ್ನತ ಹುದ್ದೆಗಳಿಗೆ ಗರಿಷ್ಠ 50 ವರ್ಷದ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ:

ಆಯಾ ಹುದ್ದೆಗೆ ಸಂಬಂಧಿಸಿದಂತೆ 2,800 ರೂ. ಗಳಿಂದ 500 ರೂ.ವರೆಗೆ ಶುಲ್ಕ ನಿಗದಿ ಮಾಡಲಾಗಿದೆ.

ಆನ್ಲೈನ್ ಪರೀಕ್ಷೆ:

ಜನರಲ್ ರೀಸನಿಂಗ್,ನ್ಯೂಮರಿಕ್ ಎಬಿಲಿಟಿ, ಬೇಸಿಕ್ ಕಂಪ್ಯೂಟರ್ ಲಿಟರಸಿ, ಜನರಲ್ ನಾಲೆಜ್, ಭಾಷಾ ಪ್ರಾವೀಣ್ಯತೆ(ಇಂಗ್ಲಿಷ್‌) ಸೇರಿ ಒಟ್ಟು 100 ಪ್ರಶ್ನೆಗಳಿಗೆ 300 ಅಂಕಗಳು ಇರಲಿವೆ. ಮೊದಲ ಹಂತದ ಪರೀಕ್ಷೆಗೆ ಇಂಗ್ಲಿಷ್ ಹಾಗೂ ಕನ್ನಡ ಸೇರಿ ಇತರ ಪ್ರಾದೇಶಿಕ ಭಾಷೆಗಳಲ್ಲಿ ಪ್ರಶ್ನೆಗಳನ್ನು ನೀಡಲಾಗುತ್ತದೆ. ಎರಡನೇ ಹಂತದ ಪರೀಕ್ಷೆಗೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ಪ್ರಶ್ನೆಗಳನ್ನು ನೀಡಲಾಗುತ್ತದೆ.

ಶಿಕ್ಷಕೇತರ ಹುದ್ದೆಗಳ ವಿವರ ಕೇಂದ್ರೀಯ ವಿದ್ಯಾಲಯಗಳಲ್ಲಿ ಹೀಗಿದೆ.

▪️ಅಡ್ಮಿನಿಸ್ಟ್ರೇಟಿವ್ ಆಫೀಸರ್- 12. ▪️ಫೈನಾನ್ಸ್
ಆಫೀಸರ್- 05
▪️ಅಸಿಸ್ಟೆಂಟ್ ಇಂಜಿನಿಯರ್-2, ▪️ಅಸಿಸ್ಟೆಂಟ್ ಸೆಕ್ಷನ್ ಆಫೀಸರ್-74. ▪️ಜೂನಿಯರ್ ಟ್ರಾನ್ಸ್‌ಲೇಟರ್-8, ▪️ಸೀನಿಯರ್ ಸಕ್ರೇಟರಿಯೇಟ್ ▪️ಅಸಿಸ್ಟೆಂಟ್-280,
▪️ಜೂನಿಯರ್ ಸೆಕ್ರೇಟರಿಯೇಟ್ ಅಸಿಸ್ಟೆಂಟ್-714,
▪️ಸ್ಟೆನೋ (ಗ್ರೇಡ್-1)- 3,
▪️ಸ್ಟೆನೋ (ಗ್ರೇಡ್-2)- 57 ಸೇರಿ ಒಟ್ಟಾರೆ 1155 ಹುದ್ದೆಗಳಿವೆ.

ನವೋದಯ ವಿದ್ಯಾಲಯಗಳಲ್ಲಿ ಹುದ್ದೆಗಳ ವಿವರ ಹೀಗಿದೆ.

▪️ಜೂನಿಯರ್ ಸಕ್ರೇಟರಿಯೇಟ್ ಅಸಿಸ್ಟೆಂಟ್-42,
▪️ಜೂನಿಯರ್ ಸಕ್ರೇಟರಿಯೇಟ್ ಅಸಿಸ್ಟೆಂಟ್ (ಜೆಎನ್‌ವಿ ಕೇಡರ್)-552 ▪️ಲ್ಯಾಬ್ ಅಟಿಂಡೆಂಟ್-165
▪️ಮಲ್ಟಿ ಟಾಸ್ಕಿಂಗ್ ಸ್ಟಾಫ್- 24 ಸೇರಿ ಒಟ್ಟು 787 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ವಿದ್ಯಾರ್ಹತೆ:

ಆಯಾ ವಿಭಾಗಗಳಲ್ಲಿ ಪದವಿ ಪಡೆದಿರಬೇಕು. ಫೈನಾನ್ಸ್ ಆಫೀಸರ್ ಹುದ್ದೆಗಳಿಗೆ ಬಿ.ಕಾಂ/ಎಂ.ಕಾಂ/ಸಿಎ ಪದವಿ ಜತೆಗೆ ನಾಲ್ಕು ವರ್ಷಗಳ ಅನುಭವ ಅಪೇಕ್ಷಣೀಯವಾಗಿದೆ. ಜೂನಿಯರ್ ಸಕ್ರೇಟರಿ ಅಸಿಸ್ಟೆಂಟ್‌ಗಳಿಗೆ 12ನೇ ತರಗತಿ ಪಾಸಾಗಿರುವ ಹಾಗೂ ಟೈಪಿಂಗ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜತೆಗೆ, ಕಂಪ್ಯೂಟರ್ ಜ್ಞಾನ ಅತ್ಯಗತ್ಯವಾಗಿದೆ.

ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹಾಗೂ ಲ್ಯಾಬ್ ಅಟೆಂಡೆಂಟ್ ಹುದ್ದೆಗಳಿಗೆ 10ನೇ ತರಗತಿ ಪಾಸಾಗಿರುವ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ವೇತನ ಶ್ರೇಣಿ:

▪️ಸ್ನಾತಕೋತ್ತರ ಶಿಕ್ಷಕ: ₹47,600- ₹1,51,100
▪️ಪದವೀಧರ ಶಿಕ್ಷಕ- ₹44,900-₹1,42,400,
▪️ಪ್ರಾಥಮಿಕ ಶಾಲಾ ಶಿಕ್ಷಕ- ₹35,400- ₹1,12,400,
▪️ಸಿ.ಸಕ್ರೇಟರಿಯೇಟ್ ಅಸಿಸ್ಟೆಂಟ್ – ₹25500 – ₹81100.
▪️ಜೂ.ಸಕ್ರೇಟರಿಯೇಟ್ ಅಸಿಸ್ಟೆಂಟ್- ₹19,900- ₹63,200,
▪️ಲ್ಯಾಬ್ ಅಸಿಸ್ಟೆಂಟ್-₹18,000- ₹56,900,
▪️ಮಲ್ಟಿ ಟಾಸ್ಕಿಂಗ್ ಸ್ಟಾಫ್- ₹18,000- ₹56,900

ಆಯ್ಕೆ ಪ್ರಕ್ರಿಯೆ:

ಅಸಿಸ್ಟೆಂಟ್ ಕಮಿಷನ‌ರ್, ಪ್ರಾಂಶುಪಾಲ,ಉಪ ಪ್ರಾಂಶುಪಾಲ, ಸ್ನಾತಕೋತ್ತರ ಪದವೀಧರ ಶಿಕ್ಷಕ, ಪದವೀಧರ ಶಿಕ್ಷಕ ಹುದ್ದೆಗಳಿಗೆ ಎರಡು ಹಂತದ ಪರೀಕ್ಷೆ ಇರಲಿದೆ. ಬಳಿಕ ಸಂದರ್ಶನ ನಡೆಸಲಾಗುತ್ತದೆ. ಎರಡನೇ ಹಂತದ ಪರೀಕ್ಷೆಗೇ ಶೇ.85 ಅಂಕ ಹಾಗೂ ಸಂದರ್ಶನಕ್ಕೆ ಶೇ.15 ಅಂಕಗಳ ಅನುಪಾತದಲ್ಲಿ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ದಪಡಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಶಿಕ್ಷಕೇತರ ಸಿಬ್ಬಂದಿಗೆ ಟೈಪಿಂಗ್ ಹಾಗೂ ಇತರ ಕೌಶಲ ಪರೀಕ್ಷೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:04-12-2025 

▪️ ಅಧಿಸೂಚನೆ ಡೌನ್ಲೋಡ್ ಮಾಡಲು –CLICK HERE

▪️ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು- CLICK HERE 

ಇದನ್ನೂ ನೋಡಿ…..Government Holiday list-2026

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!