ರೈಲ್ವೆ ಇಲಾಖೆಯಲ್ಲಿ ಶಿಕ್ಷಕರ ನೇಮಕ: ನಾಳೆಯಿಂದ ಅರ್ಜಿ ಸಲ್ಲಿಸಲು ಅವಕಾಶ | ಪದವಿ, ಸ್ನಾತಕೋತ್ತರ ಪದವೀಧರರಿಗೆ ಹುದ್ದೆಗಳು.
ಬೆಂಗಳೂರು ಸೇರಿ ದೇಶದ ವಿವಿಧ ರೈಲ್ವೆ ನೇಮಕಾತಿ ವಿಭಾಗಗಳಲ್ಲಿ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಕರು ಸೇರಿ ಇತರ 1036 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಜ.7ರಿಂದ ಫೆ.6ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಾಗಿದ್ದು, ಶಿಕ್ಷಕ ಹುದ್ದೆಗಳಿಗೆ 35,400 ರೂ.ಗಳಿಂದ 47,600 ರೂ.ವರೆಗಿನ ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿದೆ.
ಆಯಾ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿಯೊಂದಿಗೆ ಬಿ.ಇಡಿ ಪೂರೈಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಹರಾಗಿದ್ದಾರೆ. ಆದರೆ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ಹುದ್ದೆಗೆ ಎಂಎಸ್‌ಸಿ, ಎಂಸಿಎ, ಬಿಎಸ್‌ಸಿ, ಬಿಇ, ಬಿ.ಟೆಕ್ ಪದವಿ ಪಡೆದಿದ್ದರೆ ಸಾಕು.
ಬಡ್ತಿ ಹಂತದಲ್ಲಿ ಮಾತ್ರ ಬಿ.ಇಡಿ ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಇನ್ನುಳಿದ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮಾ ಪೂರ್ಣಗೊಳಿಸಿರುವವರನ್ನು ಪರಿಗಣಿಸಲಾಗುತ್ತದೆ ಎಂದು ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.
ಯಾವ ಹುದ್ದೆಗಳು?
- ಪೋಸ್ಟ್ ಗ್ರಾಜುಯೇಟ್ ಟೀಚರ್:187
- ಟ್ರೈನಡ್ ಗ್ರಾಜುಯೇಟ್ ಟೀಚರ್:338
- ಪ್ರೈಮರಿ ರೈಲ್ವೆ ಟೀಚರ್:188
- ಅಸಿಸ್ಟೆಂಟ್ ಟೀಚರ್: 02
- ಮ್ಯೂಸಿಕ್ ಟೀಚರ್: 03
- ಜೂನಿಯರ್ ಟ್ರಾನ್ಸ್‌ಲೇಟರ್:130
- ಫಿಸಿಕಲ್ ಟ್ರೇನಿಂಗ್ ಇನ್‌ಸ್ಟ್ರಕ್ಟರ್:18
- ಲೈಬ್ರರಿಯನ್:10
- ಲ್ಯಾಬೋರೇಟರಿ ಅಸಿಸ್ಟೆಂಟ್:07
- ಲ್ಯಾಬ್ ಅಸಿಸ್ಟಂಟ್:12
ಇತರೆ ಹುದ್ದೆಗಳು:
- ಸೈಂಟಿಫಿಕ್ ಸೂಪರ್ ವೈಸರ್ 3,
- ಚೀಫ್ ಲಾ ಅಸಿಸ್ಟೆಂಟ್ 54,
- ಪಬ್ಲಿಕ್ ಪ್ರಾಸಿಕ್ಯೂಟರ್ 20,
- ಸೈನ್ಟಿಪಿಕ್ ಅಸಿಸ್ಟೆಂಟ್/ ಟ್ರೈನಿಂಗ್ 2,
- సినిಯರ್ ಪಬ್ಲಿಸಿಟಿ ಇನ್ ಸ್ಪೆಕ್ಟರ್ 3,
- ಸ್ಟಾಫ್ ಆ್ಯಂಡ್ ವೇಲ್‌ಫೇರ್ ಇನ್‌ಸ್ಪೆಕ್ಟರ್ 59,
ವಯೋಮಿತಿ, ವೇತನ:
2025ರ ಜ.1ಕ್ಕೆ ಅನ್ವಯವಾಗುವಂತೆ ಕನಿಷ್ಠ 18- ಗರಿಷ್ಠ 48 ವರ್ಷದೊಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಂಸ್ಥೆಯ ನಿಯಮಾನುಸಾರ ಮೀಸಲಾತಿಯನ್ವಯ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಅನ್ವಯವಾಗಲಿದೆ. ಉಳಿದ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 19,900- 44,900 ರೂ. ಆರಂಭಿಕ ವೇತನ ಇರಲಿದೆ.
ಎರಡು ಹಂತದ ಪರೀಕ್ಷೆ:
ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಎರಡು ಹಂತಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಇದಲ್ಲದೆ ಕೌಶಲ ಪರೀಕ್ಷೆ, ದಾಗು ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಇರಲಿದೆ.
ಅರ್ಜಿ ಸಲ್ಲಿಕೆ:
ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಬೇಕು. ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಭಾವಚಿತ್ರ, ಇತ್ಯಾದಿ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ ಲೋಡ್ ಮಾಡಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06.02.2025
ನೇಮಕಾತಿ ಅಧಿಸೂಚನೆ: CLICK HERE
ಹೆಚ್ಚಿನ ಮಾಹಿತಿಗಾಗಿ- CLICK HERE
I’m Post graduate in english language