ಪದವಿ, ಡಿಪ್ಲೊಮಾ, ಐಟಿಐ ಟ್ರೇಡ್ ಅಫ್ರೆಂಟೀಸ್ ಸ್ಥಾನಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಏರ್ಪೋಟ್ಸ್ ಆಥಾರಿಟಿ ಆಫ್ ಇಂಡಿಯಾ ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದ್ದು, ಭಾರತದಲ್ಲಿ ನಾಗರಿಕ ವಿಮಾನಯಾನ ಮೂಲಸೌಕರ್ಯವನ್ನು ರಚಿಸುವುದು, ನವೀಕರಿಸುವುದು ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಪ್ರಸ್ತುತ ಈ ಸಂಸ್ಥೆಯು ಒಂದು ವರ್ಷದ ಅವಧಿಗೆ ಪದವಿ, ಡಿಪ್ಲೊಮಾ, ಐಟಿಐ ಟ್ರೇಡ್ ಅಫ್ರೆಂಟೀಸ್ ಸ್ಥಾನಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಅ.31ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ಮಾಹಿತಿ:
1.ಗ್ರ್ಯಾಜುಯೆಟ್- 45
2. ಡಿಪ್ಲೊಮಾ- 50
3. ಐಟಿಐ ಟ್ರೇಡ್- 40
ಒಟ್ಟು ಹುದ್ದೆಗಳ ಸಂಖ್ಯೆ:135
ವಿದ್ಯಾರ್ಹತೆ ಏನು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಜಿನಿಯರಿಂಗ್‌ನಲ್ಲಿ ಪದವಿ, ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ, ಐಟಿಐ/ಎನ್‌ಸಿವಿಟಿ ಪ್ರಮಾಣ ಪತ್ರವನ್ನು ಹೊಂದಿರಬೇಕು.
ವಯೋಮಿತಿ, ಸ್ಟೈಪೆಂಡ್:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 31-7-2024ಕ್ಕೆ ಅನ್ವಯವಾಗುವಂತೆ ಗರಿಷ್ಠ 26 ವರ್ಷದೊಳಗಿರಬೇಕು. ಎಸ್ಸಿ/ಎಸ್ಟಿ/ಒಬಿಸಿ/ ಅಂಗವಿಕಲ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಅನ್ವಯವಾಗಲಿದೆ. ಗ್ರಾಜುಯೇಟ್ ಸ್ಥಾನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ 15,000ರೂ., ಡಿಪ್ಲೊಮಾ ಸ್ಥಾನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ₹ ₹12,000, ITI ಟ್ರೇಡ್ ಅಪ್ರೆಂಟಿಸ್ ಸ್ಥಾನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ 9000ರೂ. ಸ್ಟೈಪೆಂಡ್ ನಿಗದಿಪಡಿಸಲಾಗಿರುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಆಯ್ಕೆ ಪ್ರಕ್ರಿಯೆ ಅಭ್ಯರ್ಥಿಗಳನ್ನು ಸಂದರ್ಶನ, ದಾಖಲೆ ಪರಿಶೀಲನೆ, ಮೆರಿಟ್ ಪಟ್ಟಿ ಆಧರಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
ಅಭ್ಯರ್ಥಿಗಳು aai.aero ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು. ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಛಾಯಾಚಿತ್ರ, ರೆಡ್ಯೂಮ್ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ. ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಕೆ ಮಾಡಬಹುದು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ:31-10-2024
ಹೆಚ್ಚಿನ ಮಾಹಿತಿಗಾಗಿ: aai.aero
ಅಧಿಸೂಚನೆ : CLICK HERE
Hi sir nimna compini