Training: Vocational training/apprenticeship opportunity for qualified ITI candidates at Drydocks World, Dubai.
ಡ್ರೈಡಾಕ್ಸ್ ವರ್ಲ್ಡ್, ದುಬೈನಲ್ಲಿ ಅರ್ಹ ಐಟಿಐ ಅಭ್ಯರ್ಥಿಗಳಿಗೆ ವೃತ್ತಿಪರ ತರಬೇತಿ/ಅಪ್ರೆಂಟಿಸ್ ಅವಕಾಶ
ಪ್ರಾಯೋಗಿಕ ಕೌಶಲ್ಯಾಭಿವೃದ್ಧಿ ಮತ್ತು ಬಹು-ವಿಭಾಗೀಯ ಔದ್ಯೋಗಿಕ ತರಬೇತಿ ಒಳಗೊಂಡ ವೃತ್ತಿ ಜೀವನ ನಿರ್ಮಾಣದ ವಿಶಿಷ್ಟ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮ.
ಅರ್ಹತೆ ಏನು?
ವಿದ್ಯಾರ್ಹತೆ : ಐಟಿಐ (ಯಾವುದೇ ವಿಷಯಗಳು: ಫಿಟ್ಟರ್, ಫ್ಯಾಬ್ರಿಕೇಟರ್, ವೆಲ್ಡರ್, ಇತ್ಯಾದಿ) 2020-21ರಲ್ಲಿ ಅಥವಾ ನಂತರ ಉತ್ತೀರ್ಣರಾಗಿರಬೇಕು.
ತಾಂತ್ರಿಕ ಕೌಶಲ್ಯ : ತಮ್ಮ ವೃತ್ತಿ ಕಲಿಕೆಗೆ ಸಂಬಂಧಿಸಿದ ಯಾವುದಾದರೂ ತಾಂತ್ರಿಕ ಕೌಶಲ್ಯದ ಕೋರ್ಸ್‌ನಲ್ಲಿ ಪ್ರಮಾಣಪತ್ರ.
ವಯೋಮಿತಿ : 18 ರಿಂದ 23 ವರ್ಷಗಳ ಒಳಗಿರಬೇಕು.
ಭಾಷಾ ನೈಪುಣ್ಯತೆ : ಸರಳ ಇಂಗ್ಲೀಷ್ ಭಾಷಾ ಜ್ಞಾನ ಹೊಂದಿರಬೇಕು.
ಒಪ್ಪಂದ : 2 ವರ್ಷಗಳ ವೃತ್ತಿ ತರಬೇತಿ ಮತ್ತು 3 ವರ್ಷಗಳ ನಂತರ ವೃತ್ತಿಪರರಾಗಿ / ತಂತ್ರಜ್ಞರಾಗಿ ಕೆಲಸ.
ವೇತನ ಮತ್ತು ಮತ್ತಿತರ ಸೌಲಭ್ಯಗಳು:
ವೇತನ/ ಸ್ಟೈಪೆಂಡ್ : ಮಾಸಿಕ 1200 AED (ಮೊದಲನೇ ವರ್ಷ) ನಂತರ ವಾರ್ಷಿಕವಾಗಿ ಏರಿಕೆ ಮಾಡಲಾಗುವುದು.
ಇತರೆ : ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ, ಉಚಿತ ವಿಮಾನ ಟಿಕೆಟ್, ತರಬೇತಿ ಸ್ಥಳದಲ್ಲೇ ಉಚಿತ ವಸತಿ, ಉಚಿತ ಆಹಾರ, ತರಬೇತಿ ಸ್ಥಳದೊಳಗೆ ಉಚಿತ ಪ್ರಯಾಣ, ಉಚಿತ ಆರೋಗ್ಯ ವಿಮೆ, ವಾರ್ಷಿಕ ರಜೆಗಳು, ಹಾಗೂ ಹಿಂದಿರುಗುವ ಪ್ರಯಾಣದ ವಿಮಾನ ಟಿಕೆಟ್ ಸೌಲಭ್ಯಗಳಿರುತ್ತವೆ.
ಉಚಿತ ತರಬೇತಿ / ಉಚಿತ ನೇಮಕಾತಿ ಅವಕಾಶ:
ಅಗತ್ಯವಿರುವ ತಾಂತ್ರಿಕ ಸಾಮರ್ಥ್ಯಗಳು / ಅರ್ಹತೆಗಳು :
- ಬ್ಲೂ ಪ್ರಿಂಟ್, ಡ್ರಾಯಿಂಗ್‌ಗಳು, ಟೆಕ್ನಿಕಲ್ ಸ್ಪೆಸಿಫಿಕೇಷನ್ ಗಳನ್ನು ಓದಿ ಅರ್ಥಮಾಡಿಕೊಳ್ಳುವ ಹಾಗೂ ವ್ಯಾಖ್ಯಾನಿಸುವ ಮುಖಾಂತರ ನೀಡಿರುವ ಕೆಲಸಗಳನ್ನು ಸೂಚನೆ ಹಾಗೂ ಯೋಜನೆಯಂತೆ ಪೂರ್ಣಗೊಳಿಸುವ ಸಾಮರ್ಥ್ಯವಿರಬೇಕು. ಕೆಲಸದ ಮಾಹಿತಿ ಸಲ್ಲಿಕೆ, ಉಪಕರಣಗಳ ನಿರ್ವಹಣಾ ಜ್ಞಾನ, ಸಾಮಗ್ರಿಗಳ ಕ್ರಮ ಬದ್ಧತೆ, ಸುರಕ್ಷತಾ ಪರಿಶೀಲನೆಗಳು, ಕೆಲಸದ ದಿನಚರಿ ಕುರಿತಾದ ಜ್ಞಾನವಿರಬೇಕು.
- ಕೆಲಸದ ವಾತಾವರಣ ಹಾಗೂ ಅವಶ್ಯಕತೆಗೆ ತಕ್ಕಂತೆ ಹೊಂದಿಕೊಳ್ಳುವಿಕೆ, ಸಮಸ್ಯೆ ಬಗೆಹರಿಸುವ ಸಾಮರ್ಥ್ಯ, ಕೆಲಸದಲ್ಲಿ ಅಗತ್ಯವಿರುವ ಎಲ್ಲಾ ನೆರವು ನೀಡುವುದು ಹಾಗೂ ಕಲಿಯುವ ಪ್ರವೃತ್ತಿ ಮತ್ತು ಕೆಲಸದಲ್ಲಿ ಬದ್ಧತೆ ಹೊಂದಿರಬೇಕು.
- ಕಷ್ಟಕರ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಂಡು ಕೆಲಸ ಮಾಡುವ ಸಾಮರ್ಥ್ಯ, ಉತ್ತಮ ದೈಹಿಕ ಸಾಮರ್ಥ್ಯ, ಕಣ್ಣು – ಕೈಗಳ ನಡುವೆ ಸಮನ್ವಯತೆ, ಹೊಸ ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯವಿರಬೇಕು.
ಮಹತ್ವದ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26 ಸೆಪ್ಟೆಂಬರ್ 2024
ಆನ್‌ಲೈನ್ ಸಂದರ್ಶನದ ದಿನಾಂಕವನ್ನು ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ತಿಳಿಸಲಾಗುವುದು.
ಅರ್ಜಿ ಸಲ್ಲಿಕೆ ಮಾಡಲು http://imck.kaushalkar.com/ ಭೇಟಿ ನೀಡಬಹುದು.
ಮತ್ತಷ್ಟು ಹೆಚ್ಚಿನ ಮಾಹಿತಿಗಾಗಿ :ಅಂತರರಾಷ್ಟ್ರೀಯ ವಲಸೆ ಕೇಂದ್ರ – ಕರ್ನಾಟಕ (IMC-K) ಕಲ್ಯಾಣ ಸುರಕ್ಷಾ ಭವನ, 4ನೇ ಮಹಡಿ, ಡೈರಿ ವೃತ್ತ, ಬನ್ನೇರುಘಟ್ಟ ರಸ್ತೆ, ಬೆಂಗಳೂರು.560029
Weekly one day leave