UGC EXAM Clarification: ಯಾವುದೇ ಪರೀಕ್ಷೆ ರದ್ದಾಗಿಲ್ಲ, ನಕಲಿ ಪ್ರಕಟಣೆಗೆ UGC ಸ್ಪಷ್ಟನೆ
UGC EXAM Clarification: ಭಾರತದಲ್ಲಿ ಯುದ್ಧದ ವಾತಾವರಣ ಇದೆ. ಹಾಗಾಗಿ, ಎಲ್ಲ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯ ಧನ ಸಹಾಯ [UGC] ಆಯೋಗದ ಹೆಸರಲ್ಲಿ ಹರಿದಾಡುತ್ತಿರುವ ಸಾರ್ವ ಜನಿಕ ಪ್ರಕಟಣೆ ನಕಲಿ ಎಂದು ಯುಜಿಸಿ ಸ್ಪಷ್ಟಪಡಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸ್ಪಷ್ಟನೆ ನೀಡಿರುವ ಯುಜಿಸಿ, “ಯುದ್ಧದ ಪರಿಸ್ಥಿತಿಯಿಂದಾಗಿ ಎಲ್ಲ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಮನೆಗೆ ಹಿಂದಿರುಗಿ ಎಂದು ಸೂಚಿಸುವ ನಕಲಿ. ಸಾರ್ವಜನಿಕ ಪ್ರಕಟಣೆಯು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೊಂದು ನಕಲಿ ಪ್ರಕಟಣೆಯಾಗಿದ್ದು ಯುಜಿಸಿ ಇಂತಹ ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ” ಎಂದು ತಿಳಿಸಿದೆ.
ಎಲ್ಲ ಅಧಿಕೃತ ನೋಟಿಸ್‌ಗಳು, ನವೀಕ ರಣಗಳು ಯುಜಿಸಿ ವೆಬ್ ಸೈಟ್ ಮತ್ತು ಅಧಿಕೃತ ಸಾಮಾಜಿಕ ಮಾಧ್ಯಮ ಗಳಲ್ಲಿ ಮಾತ್ರ ಲಭ್ಯವಿರಲಿವೆ.
ಯಾವುದೇ ನಕಲಿ ಪ್ರಕಟಣೆ ಹೊರಡಿಸುವುದು, ಯುಜಿಸಿ ಹೆಸರಲ್ಲಿ ವದಂತಿ ಹಬ್ಬಿಸುವುದು ಶಿಕ್ಷಾರ್ಹ ಅಪರಾಧ. ಇಂಥ ನಕಲಿ ಮಾಹಿತಿಗೆ ಆಕಾಂಕ್ಷಿಗಳು ಬಲಿಯಾಗಬೇಡಿ ಜಾಗರೂಕರಾಗಿರಿ. ಯುಜಿಸಿಯ ಅಧಿಕೃತ ಮೂಲಗಳಿಂದ ಮಾತ್ರ ಮಾಹಿತಿ ಪಡೆಯಿರಿ” ಎಂದು ಯುಜಿಸಿ ಸಲಹೆ ನೀಡಿದೆ.