UGCET-2025 OMR Sheets ವೆಬ್ಸೈಟ್ ನಲ್ಲಿ ಲಭ್ಯ

UGCET-2025 OMR Sheets ವೆಬ್ಸೈಟ್ ನಲ್ಲಿ ಇದೀಗ ಲಭ್ಯ

UGCET-2025 OMR SHEETS : ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತೊಂದು ದಿಟ್ಟ ತೀರ್ಮಾನ ತೆಗೆದುಕೊಂಡಿದೆ. ಈ ಬಾರಿಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಎಲ್ಲ ವಿಷಯಗಳ ಓಎಂಆರ್ ಶೀಟ್‌ಗಳನ್ನು ವೆಬ್‌ಸೈಟ್‌ನಲ್ಲಿ ಪರೀಕ್ಷಾ ಕೇಂದ್ರವಾರು ಅಪ್‌ಲೋಡ್ ಮಾಡುತ್ತಿದ್ದು, ಮುಕ್ತವಾಗಿ ನೋಡಬಹುದಾಗಿದೆ.

 

ಪರೀಕ್ಷೆ ಮುಗಿದ ಎರಡು ದಿನಗಳಲ್ಲಿ 155ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳ ಸುಮಾರು ಮೂರು ಲಕ್ಷ ಓಎಂಆರ್ ಶೀಟ್‌ಗಳನ್ನು ಅಪ್‌ಲೋಡ್ ಮಾಡಿದೆ. ಇನ್ನೂ 8.5 ಲಕ್ಷ OMR ಶೀಟ್ ಗಳ ಸ್ಕ್ಯಾನಿಂಗ್ ನಿರಂತರವಾಗಿ ನಡೆಯುತ್ತಿದ್ದು, ಮುಗಿದಂತೆ ಅವುಗಳನ್ನೂ ಅಪ್‌ಲೋಡ್ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

 

ಪರೀಕ್ಷಾ ವ್ಯವಸ್ಥೆ ಮೇಲೆ ಯಾರಿಗೂ ಅಪನಂಬಿಕೆ ಇರಬಾರದು, ಯಾರೋ ಒಎಂಆರ್ ತಿದ್ದುತ್ತಾರೆ ಎನ್ನುವ ಎಲ್ಲ ರೀತಿಯ ಅನುಮಾನಗಳಿಗೆ ಇತಿಶ್ರೀ ಹಾಡಲು ಈ ತೀರ್ಮಾನ ಮಾಡಲಾಗಿದೆ.

 

ಹೀಗಾಗಿ ಯಾರದ್ದೇ ಓಎಂಆ‌ರ್ ಶೀಟ್ ಅನ್ನು ಯಾರು ಬೇಕಾದರೂ ನೋಡಿಕೊಂಡು ತಮ್ಮ ಫಲಿತಾಂಶ ತಿಳಿಯಬಹುದು ಎಂದು ವಿವರಿಸಿದರು.

 

CLICK HERE TO DOWNLOAD OMR SHEETS 
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!