UGNEET-2025: ಮೊದಲನೇ ಸುತ್ತಿನಲ್ಲಿ ಯಾವುದೇ ಸೀಟು ಹಂಚಿಕೆಯಾಗದಿರುವ ಅಭ್ಯರ್ಥಿಗಳಿಗೆ ಸೂಚನೆಗಳು
UGNEET-2025: ಈಗಾಗಲೇ OPTIONS ಗಳನ್ನು ನಮೂದಿಸಿ ಆದರೆ ಯಾವುದೇ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳು CHOICE ಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಮುಂದಿನ ಸುತ್ತಿನ ಸೀಟು ಹಂಚಿಕೆಗೆ ಭಾಗವಹಿಸಬಹುದು. ಆದರೆ ಎರಡನೇ ಸುತ್ತಿನಲ್ಲಿ ಇಚ್ಛೆ/ ಆಯ್ಕೆಗಳನ್ನು ದಾಖಲಿಸುವ ಪ್ರಕ್ರಿಯೆ ಪ್ರಾರಂಭಿಸಿದ ನಂತರ option entry portal ನಲ್ಲಿ ಕಡ್ಡಾಯವಾಗಿ ಲಾಗಿನ್ ಮಾಡಿ ಒಪ್ಪಿಗೆ ನೀಡಿದ ನಂತರ ಮೊದಲನೇ ಸುತ್ತಿನಲ್ಲಿ ಅಭ್ಯರ್ಥಿಗಳು ದಾಖಲಿಸಿದ ಎಲ್ಲಾ options ಗಳನ್ನು ತೋರಿಸಲಾಗುವುದು
ಒಂದು ವೇಳೆ ಅಭ್ಯರ್ಥಿಯು ವೈದ್ಯಕೀಯ ಕೋರ್ಸಿಗೆ ಈಗಾಗಲೇ ದಾಖಲಿಸಿರುವ options ಗಳೊಂದಿಗೆ ಎರಡನೇ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸಿದಲ್ಲಿ CAUTION DEPOSIT ಅನ್ನು ಪಾವತಿಸಬೇಕು. (CAUTION DEPOSIT ಅನ್ನು ಪಾವತಿಸಲು ವೇಳಾಪಟ್ಟಿಯನ್ನು ನೀಡಲಾಗುವುದು)
ದಂತವೈದ್ಯಕೀಯ ಮತ್ತು ಹೋಮಿಯೋಪತಿ ಸೀಟುಗಳಿಗೆ ಎರಡನೇ ಸುತ್ತಿನಲ್ಲಿ ಭಾಗವಹಿಸುವುದಕ್ಕೆ CAUTION DEPOSIT ಅನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.